ಕಹಿ ಸುದ್ದಿ ನೀಡಿದ ಅಮೆಜಾನ್- ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿ ಉದ್ಯೋಗಿಗಳು

ಕಹಿ ಸುದ್ದಿ ನೀಡಿದ ಅಮೆಜಾನ್- ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿ ಉದ್ಯೋಗಿಗಳು

ನವದೆಹಲಿ: ಸಾಮಾಜಿಕ ಜಾಲತಾಣ ಕಂಪನಿಗಳಾದ ಮೆಟಾ ಹಾಗೂ ಟ್ವಿಟರ್ ಬೆನ್ನಲ್ಲೇ ಇದೀಗ ಅಮೆರಿಕದ ಟೆಕ್ ಮತ್ತು ಇ-ಕಾಮರ್ಸ್ ಕಂಪನಿ ಅಮೆಜಾನ್ ಉದ್ಯೋಗಿಗಳನ್ನು ವಜಾಗೊಳಿಸಲು ಆರಂಭಿಸಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಟ್ವಿಟರ್ ಉದ್ಯೋಗಿಗಳಿಗೆ ಶಾಕ್ ಮೇಲೆ ಶಾಕ್!: ವರ್ಕ್ ಫ್ರಂ ಹೋಮ್ ರದ್ದು ಮಾಡಿದ ಮಸ್ಕ್

ಆರ್ಥಿಕ ಕುಸಿತದ ಈ ಸಂದರ್ಭದಲ್ಲಿ ಕಂಪನಿಗೆ ಲಾಭದಾಯಕವಾಗಿರದ ಉಪಕ್ರಮಗಳನ್ನು ತಡೆಹಿಡಿಯಬೇಕಾದ ಅನಿವಾರ್ಯತೆ ಇದೆ ಎಂದು ಅಮೆಜಾನ್ ಹೇಳಿದ್ದಲ್ಲದೇ, ನೇಮಕಾತಿ ಪ್ರಕ್ರಿಯೆಯನ್ನು ಸದ್ಯಕ್ಕೆ ತಡೆಹಿಡಿದಿರುವುದಾಗಿ ಕಳೆದ ವಾರ ಅಮೆಜಾನ್ ಘೋಷಿಸಿತ್ತು.

ಅಮೆಜಾನ್ ಉದ್ಯೋಗಿ, ಸಾಫ್ಟ್​ವೇರ್ ಎಂಜಿನಿಯರ್ ಜೇಮಿ ಝಾಂಗ್ ಎಂಬವರು ಲಿಂಕ್ಡ್​ಇನ್​ನಲ್ಲಿ ಪೋಸ್ಟ್ ಮಾಡಿದ್ದು, ತಮ್ಮನ್ನು ಕಂಪನಿ ಕೆಲಸದಿಂದ ವಜಾಗೊಳಿಸಿದೆ. ಅಮೆಜಾನ್ ರೋಬೊಟಿಕ್ಸ್ ಎಐನಲ್ಲಿ ನನ್ನ ಒಂದೂವರೆ ವರ್ಷದ ಉದ್ಯೋಗ ಮುಕ್ತಾಯಗೊಂಡಿದೆ. ಅಚ್ಚರಿಯ ವಜಾದೊಂದಿಗೆ ಉದ್ಯೋಗ ಕೊನೆಗೊಂಡಿದೆ. ನಮ್ಮ ಇಡೀ ರೋಬೊಟಿಕ್ಸ್​ ತಂಡವನ್ನೇ ವಜಾಗೊಳಿಸಲಾಗಿದೆ ಎಂದು ಅವರು ಬರೆದುಕೊಂಡಿದ್ದಾರೆ.

ಲಿಂಕ್ಡ್​ಇನ್ ಮಾಹಿತಿ ಪ್ರಕಾರ ಅಮೆಜಾನ್​ನ ರೋಬೊಟಿಕ್ಸ್​ ತಂಡದಲ್ಲಿ 3,766 ಉದ್ಯೋಗಿಗಳಿದ್ದಾರೆ. ವಾಸ್ತವದಲ್ಲಿ ಎಷ್ಟು ಉದ್ಯೋಗಿಗಳು ಇದ್ದಾರೆ ಎಂಬುದನ್ನು ಇನ್ನಷ್ಟೇ ದೃಢಪಡಿಸಿಕೊಳ್ಳಬೇಕಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ.

suddiyaana