ಮೂರು ವಾರಗಳಲ್ಲಿ ಚೇತರಿಕೆ ಆಗುತ್ತೆ ಅಂದರೂ ಯಾಕೆ ಆಡಲ್ಲ ಶಮಿ – ಸ್ಪೆಷಲ್ ಇಂಜೆಕ್ಷನ್ ತಗೊಂಡಿದ್ದರೂ ಏನಾಯ್ತು?

ಮೂರು ವಾರಗಳಲ್ಲಿ ಚೇತರಿಕೆ ಆಗುತ್ತೆ ಅಂದರೂ ಯಾಕೆ ಆಡಲ್ಲ ಶಮಿ – ಸ್ಪೆಷಲ್ ಇಂಜೆಕ್ಷನ್ ತಗೊಂಡಿದ್ದರೂ ಏನಾಯ್ತು?

ಟೀಮ್ ಇಂಡಿಯಾ ಸ್ಟಾರ್ ಬೌಲರ್ ಮೊಹಮ್ಮದ್ ಶಮಿ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್ ಕೊಟ್ಟಿದ್ದಾರೆ. ಇಡೀ ಐಪಿಎಲ್‌ನಿಂದ ಹೊರಗುಳಿಯಲಿದ್ದಾರೆ ಶಮಿ. ಆದರೆ, ಕೆಲ ದಿನಗಳ ಹಿಂದೆಯೇ ಶಮಿ ಲಂಡನ್​​​ನಲ್ಲಿದ್ರು. ಆ್ಯಂಕಲ್ ಇಂಜ್ಯೂರಿಗಾಗಿ ಸ್ಪೆಷಲ್ ಇಂಜೆಕ್ಷನ್ ತೆಗೆದುಕೊಳ್ಳೋಕೆ ಅಂತಾನೆ ಶಮಿ ಲಂಡನ್​ಗೆ ತೆರಳಿದ್ರು. ಹಾಗಿದ್ದರೂ ಐಪಿಎಲ್ ಟೂರ್ನಿಗೆ ಟೀಮ್ ಸೇರಿಕೊಳ್ಳಲು ಆಗುತ್ತಿಲ್ಲ ಯಾಕೆ?

ಇದನ್ನೂ ಓದಿ: ಗುಜರಾತ್ ಟೈಟಾನ್ಸ್ ತಂಡಕ್ಕೆ ಮತ್ತೊಂದು ಬಿಗ್ ಶಾಕ್ – ಐಪಿಎಲ್‌ನಿಂದಲೂ ಸ್ಟಾರ್ ಬೌಲರ್ ಶಮಿ ಔಟ್?

ಐಪಿಎಲ್​ ಶೆಡ್ಯೂಲ್ ಅನೌನ್ಸ್ ಆಗಿದೆ ಅನ್ನೋ ಗುಡ್​​ನ್ಯೂಸ್ ಒಂದ್ಕಡೆಯಾದ್ರೆ, ಇನ್ನೊಂದು ಬ್ಯಾಡ್​​ನ್ಯೂಸ್ ಕೂಡ ಇದೆ. ಟೀಂ ಇಂಡಿಯಾಗೆ ಮತ್ತು ಗುಜರಾತ್​​ ಟೈಟಾನ್ಸ್​​ಗೆ ಇದು ನಿಜಕ್ಕೂ ಶಾಕಿಂಗ್ ನ್ಯೂಸ್. ಕೀ ಬೌಲರ್ ಮೊಹ್ಮದ್ ಶಮಿ ಇನ್ನೂ ಕೂಡ ಆ್ಯಂಕಲ್ ಇಂಜ್ಯೂರಿಯಿಂದ ರಿಕವರಿ ಆಗಿಲ್ಲ. 2023ರ ವಂಡೇ ವರ್ಲ್ಡ್​ಕಪ್​ನಲ್ಲಿ ಶಮಿಯ ಪರ್ಫಾಮೆನ್ಸ್ ಹೇಗಿತ್ತು ಅನ್ನೋದನ್ನ ನೀವೆಲ್ಲಾ ನೋಡಿದ್ರಿ. 11 ಮ್ಯಾಚ್​ಗಳಲ್ಲಿ 24 ವಿಕೆಟ್ ತೆಗೆದಿದ್ರು. ಆ ವರ್ಲ್ಡ್​​ಕಪ್​​ನ ರೀಯಲ್ ಹೀರೋ ಅಂದ್ರೆ ವನ್ ಆ್ಯಂಡ್ ಓನ್ಲಿ ಮೊಹಮ್ಮದ್ ಶಮಿಯೇ. ಆದ್ರೆ ಎಂಥಾ ಅನ್​ಫಾರ್ಚ್ಯುನೇಟ್ ನೋಡಿ. ವಿಶ್ವಕಪ್​ ಬಳಿಕ ಶಮಿ ಒಂದೇ ಒಂದು ಮ್ಯಾಚ್​ನ್ನ ಕೂಡ ಆಡಿಲ್ಲ. ಸೌತ್​ ಆಫ್ರಿಕಾದಲ್ಲಿ ನಡೆದ ವಂಡೆ, ಟಿ-20 ಮತ್ತು ಟೆಸ್ಟ್​ ಸೀರಿಸ್​​ಗಳಲ್ಲಿ ಶಮಿ ಆಡಿಲ್ಲ. ಅದಾದ್ಮೇಲೆ ಭಾರತದಲ್ಲೇ ನಡೆದ ಅಫ್ಘಾನಿಸ್ತಾನ ವಿರುದ್ಧ ಟಿ20 ಸೀರಿಸ್​​ನಲ್ಲೂ ಆಡಿಲ್ಲ. ಇಂಗ್ಲೆಂಡ್​ ವಿರುದ್ಧದ ಐದು ಮ್ಯಾಚ್​​ಗಳ ಟೆಸ್ಟ್​ ಸೀರಿಸ್​ನಲ್ಲೂ ಆಡ್ತಿಲ್ಲ. ಇಷ್ಟೇ ಅಲ್ಲ, ಇದೇ ಮಾರ್ಚ್​​​ನಲ್ಲಿ ಶುರುವಾಗೋ ಐಪಿಎಲ್​​ನಲ್ಲಿ ಕೂಡ ಮೊಹಮ್ಮದ್ ಶಮಿ ಆಡೋದಿಲ್ಲ. ಶಮಿಯ ಕಾಲಿಗೆ ಈಗ ಸರ್ಜರಿ ಮಾಡಲೇಬೇಕಾದ ಅನಿವಾರ್ಯತೆ ಎದುರಾಗಿದ್ದು,  ಈಗಾಗ್ಲೇ ಬ್ರಿಟನ್​​ಗೆ ಕಳುಹಿಸಲಾಗಿದೆ. ಕೆಲ ದಿನಗಳ ಹಿಂದೆಯೇ ಶಮಿ ಲಂಡನ್​​​ನಲ್ಲಿದ್ರು. ಆ್ಯಂಕಲ್ ಇಂಜ್ಯೂರಿಗಾಗಿ ಸ್ಪೆಷಲ್ ಇಂಜೆಕ್ಷನ್ ತೆಗೆದುಕೊಳ್ಳೋಕೆ ಅಂತಾನೆ ಶಮಿ ಲಂಡನ್​ಗೆ ತೆರಳಿದ್ರು. ಇಂಜೆಕ್ಷನ್ ಪಡೆದ ಬಳಿಕ ಮೂರು ವಾರಗಳ ನಂತರ ಲೈಟ್ ಆಗಿ ರನ್ನಿಂಗ್ ಸ್ಟಾರ್ಟ್ ಮಾಡಬಹುದು ಅಂತಾ ಡಾಕ್ಟರ್ಸ್ ಸಲಹೆ ನೀಡಿದ್ರು. ಬಟ್ ಶಮಿಗೆ ನೀಡಲಾಗಿರೋ ಆ ಸ್ಪೆಷಲ್ ಇಂಜೆಕ್ಷನ್ ವರ್ಕೌಟ್ ಆಗಿಲ್ವಂತೆ. ಈಗ ವೈದ್ಯರ ಬಳಿ ಇರೋ ಏಕೈಕ ಆಪ್ಷನ್ ಅಂದ್ರೆ ಶಮಿಯ ಆ್ಯಂಕಲ್​ಗೆ ಸರ್ಜರಿ ಮಾಡೋದು. ಇನ್ನೇನೂ ಮಾಡೋದಿಕ್ಕೆ ಆಗೋದಿಲ್ಲ. ಹೀಗಾಗಿ ಲಂಡನ್​ನಲ್ಲಿ ಮೊಹಮ್ಮದ್ ಶಮಿ ಆ್ಯಂಕಲ್ ಸರ್ಜರಿಗೆ ಒಳಗಾಗಲಿದ್ದಾರೆ. ಒಂದ್ಸಾರಿ ಸರ್ಜರಿ ಆಯ್ತು ಅಂದ್ರೆ ಶಮಿಗೆ ಕಂಪ್ಲೀಟ್ ರಿಕವರಿ ಆಗೋಕೆ ಕೆಲ ತಿಂಗಳುಗಳೇ ಬೇಕು. ಕೆಲ ಮಾಹಿತಿಗಳ ಪ್ರಕಾರ ಮುಂದಿನ ಅಕ್ಟೋಬರ್ ಮತ್ತು ನವೆಂಬರ್​​ನಲ್ಲಿ ನಡೆಯೋ ಬಾಂಗ್ಲಾದೇಶ ಮತ್ತು ನ್ಯೂಜಿಲ್ಯಾಂಡ್ ವಿರುದ್ಧದ ಟೆಸ್ಟ್​ ಸೀರಿಸ್​​ವರೆಗೂ ಮೊಹಮ್ಮದ್ ಶಮಿ ಟೀಂ ಇಂಡಿಯಾಗೆ ಅವೈಲೇಬಲ್ ಆಗೋದು ಡೌಟ್. ಅಂದ್ರೆ, ಜೂನ್​ನಲ್ಲಿ ವೆಸ್ಟ್​ಇಂಡೀಸ್ ಮತ್ತು ಅಮೆರಿಕದಲ್ಲಿ ನಡೆಯೋ ಟಿ-20 ವರ್ಲ್ಡ್​​ಕಪ್​ನಲ್ಲೂ ಶಮಿ ಆಡೋದು ಅನುಮಾನವೇ. ಸೋ ವರ್ಲ್ಡ್​​ಕಪ್​​ನಲ್ಲೇ ಟೀಂ ಇಂಡಿಯಾ ತನ್ನ ಮೇಜರ್ ಬೌಲರ್​​ನ್ನ ಮಿಸ್ ಮಾಡಿಕೊಳ್ಳೋ ಸಾಧ್ಯತೆ ಇದೆ. ಇದು ರೋಹಿತ್ ಟೀಮ್ ನಿಜಕ್ಕೂ ದೊಡ್ಡ ಹೊಡೆತವೇ.

Sulekha