ಎಎಪಿ-ಕಾಂಗ್ರೆಸ್ ಮೈತ್ರಿ ಮಾಡಿಕೊಂಡರೆ 3-4 ದಿನಗಳಲ್ಲಿ ಕೇಜ್ರಿವಾಲ್ ಅರೆಸ್ಟ್! – ಸ್ಪೋಟಕ ಹೇಳಿಕೆ ನೀಡಿದ ದೆಹಲಿ ಸಚಿವೆ
ಲೋಕಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ದೇಶದ ರಾಜಕೀಯದಲ್ಲಿ ಭಾರಿ ಬೆಳವಣಿಗೆಗಳಾಗುತ್ತವೆ. ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಎಎಪಿ ಮೈತ್ರಿ ಮಾಡಿಕೊಳ್ಳಲು ಮುಂದಾಗಿದೆ. ಇದೀಗ ಮೈತ್ರಿ ಕುರಿತು ದೆಹಲಿ ಸಚಿವೆ ಅತಿಶಿ ಅಚ್ಚರಿ ಸ್ಪೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ. ಕಾಂಗ್ರೆಸ್ ಹಾಗೂ ಎಎಪಿ ಮೈತ್ರಿ ಮಾಡಿಕೊಂಡರೆ ಮುಂದಿನ ಮೂರ್ನಾಲ್ಕು ದಿನಗಳಲ್ಲಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ರನ್ನ ಬಂಧಿಸುವ ಸಾಧ್ಯತೆ ಇದೆ ಅಂತಾ ಹೇಳಿದ್ದಾರೆ.
ಇದನ್ನೂ ಓದಿ: ಬೆಳ್ಳಂಬೆಳಗ್ಗೆ ಭೀಕರ ಅಪಘಾತ – BRS ಶಾಸಕಿ ಲಾಸ್ಯ ನಂದಿತಾ ದುರ್ಮರಣ
ಎಎಪಿ ಮತ್ತು ಕಾಂಗ್ರೆಸ್ ನಡುವಿನ ಮೈತ್ರಿ ಅಂತಿಮ ಹಂತಕ್ಕೆ ತಲುಪಿದೆ ಎಂಬ ಸುದ್ದಿಗಳು ಪ್ರಸಾರವಾಗುತ್ತಿದೆ. ಈ ಹಿನ್ನಲೆ ಕಾಂಗ್ರೆಸ್ನೊಂದಿಗೆ ಎಎಪಿ ಸೀಟು ಹಂಚಿಕೆ ಒಪ್ಪಂದ ಮಾಡಿಕೊಂಡರೆ ಕೇಜ್ರಿವಾಲ್ ಅವರನ್ನು ಬಂಧಿಸಲಾಗುವುದು ಎಂಬ ಸಂದೇಶಗಳು ಆಪ್ ನಾಯಕರಿಗೆ ಬರುತ್ತಿವೆ ಅಂತ ಸಚಿವೆ ಹೇಳಿಕೆ ನೀಡಿದ್ದು, ದೇಶದಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಶನಿವಾರ ಅಥವಾ ಭಾನುವಾರ ಸಿಬಿಐನಿಂದ ಕೇಜ್ರಿವಾಲ್ಗೆ ನೋಟಿಸ್ ಜಾರಿ ಮಾಡಲಾಗುವುದು ಮತ್ತು ನಂತರ ಅವರನ್ನ ಬಂಧಿಸಲಾಗುವುದು ಎಂಬ ಸಂದೇಶಗಳು ಹರಿದಾಡುತ್ತಿವೆ ಎಂದು ಅತಿಶಿ ಕಳವಳ ಸಹ ವ್ಯಕ್ತಪಡಿಸಿದ್ದಾರೆ. ಮತ್ತೊಂದು ವಿಚಾರ ಏನೆಂದರೆ ಇಡಿ ಅಧಿಕಾರಿಗಳು ಗುರುವಾರ ಕೇಜ್ರಿವಾಲ್ಗೆ ಮತ್ತೊಂದು ನೋಟಿಸ್ ಜಾರಿ ಮಾಡಿದ್ದಾರೆ.