HSRP ನಂಬರ್ ಪ್ಲೇಟ್ ನಲ್ಲಿ ವಂಚನೆ! – ನಂಬರ್ ಪ್ಲೇಟ್ ಹಾಕಲು ಹೋಗಿ‌ ದುಡ್ಡು ಖಾಲಿ!

HSRP ನಂಬರ್ ಪ್ಲೇಟ್ ನಲ್ಲಿ ವಂಚನೆ! – ನಂಬರ್ ಪ್ಲೇಟ್ ಹಾಕಲು ಹೋಗಿ‌ ದುಡ್ಡು ಖಾಲಿ!

ವಾಹನಗಳಿಗೆ ಹೆಚ್ಚಿನ ಭದ್ರತೆ ನೀಡುವ ಉದ್ದೇಶ ಹಾಗೂ ಅಪರಾಧ ತಡೆಗಟ್ಟುವ ಯೋಜನೆಯೊಂದಿಗೆ ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್‌ ಹಾಕೋದನ್ನು ಸರ್ಕಾರ ಕಡ್ಡಾಯಗೊಳಿಸಿದೆ. ಈ ನಂಬರ್ ಪ್ಲೇಟ್‌ ಅಳವಡಿಸಲು ಮೇ 31ರವರೆಗೆ ಗಡುವು ವಿಸ್ತರಣೆ ಮಾಡಿ ರಾಜ್ಯ ಸಾರಿಗೆ ಇಲಾಖೆ ಅಧಿಕೃತ ಆದೇಶ ಹೊರಡಿಸಿದೆ. ಅಷ್ಟರೊಳಗೆ ನಂಬರ್ ಪ್ಲೇಟ್ ಅಳವಡಿಕೆ ಕಡ್ಡಾಯವಾಗಿದೆ. ಹೀಗಾಗಿ ಎಲ್ಲ ವಾಹನ ಮಾಲೀಕರು ಹೆಚ್‌ಎಸ್‌ಆರ್‌ಪಿ ರಿಜಿಸ್ಟ್ರೇಷನ್ ಮಾಡಿಸಲು ಮುಂದಾಗಿದ್ದಾರೆ. ಇದನ್ನೇ, ಬಂಡವಾಳ ಮಾಡಿಕೊಂಡ ಕೆಲ ಕಿಡಿಗೇಡಿಗಳು ನಕಲಿ ಕ್ಯೂ ಆರ್ ಕೋಡ್ ಲಿಂಕ್​ಗಳನ್ನು ಆನ್‌ಲೈನ್​ನಲ್ಲಿ ಹಾಕಿ ಜನರಿಗೆ  ಸೈಬರ್ ವಂಚನೆ ಮಾಡಲು ಮುಂದಾಗಿದ್ದಾರೆ.

ಇದನ್ನೂ ಓದಿ: ಹಾಸ್ಟೆಲ್‌ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ವಿದ್ಯಾರ್ಥಿ ಸಾವು – ಏಕೈಕ ಪುತ್ರನನ್ನು ಕಳೆದುಕೊಂಡ ಹೆತ್ತವರ ನೋವಿಗೆ ಕೊನೆ ಎಲ್ಲಿದೆ?

ಕೆಲವು ಸ್ಕ್ಯಾಮರ್‌ಗಳು ನಕಲಿ ವೆಬ್‌ಸೈಟ್‌ ಬಳಸಿ ಹಣ ವಂಚನೆ ಮಾಡುತ್ತಿರುವುದು ಬೆಳಕಿಗೆ ಬರುತ್ತಿದೆ.  ಆನ್‌ಲೈನ್​ನಲ್ಲಿ ನಕಲಿ ಕ್ಯೂಆರ್ ಕೋಡ್ ಲಿಂಕ್​ಗಳ ಹಾವಳಿ ಹೆಚ್ಚಾಗಿದೆ. ನಕಲಿ ಕ್ಯೂಆರ್ ಕೋಡ್ ಮೇಲೆ ಕ್ಲಿಕ್ ಮಾಡಿದರೆ, ನಿಮ್ಮ ಖಾತೆಯಲ್ಲಿರುವ ಎಲ್ಲ ಹಣ ಮಾಯವಾಗುತ್ತದೆ. ಹೀಗಾಗಿ ಹೆಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಹಾಕಿಸಿಕೊಳ್ಳುವ ಮುನ್ನ ಎಚ್ಚರದಿಂದ ಇರಬೇಕಿದೆ..

ಸರ್ಕಾರ ಇದೀಗ ನಂಬರ್ ಪ್ಲೇಟ್ ಅಳವಡಿಸಲು ಗಡುವು ವಿಸ್ತರಣೆ ಮಾಡಿದೆ. ಟೆಕ್ನಿಕಲ್ ಸಮಸ್ಯೆಗಳಿಂದ ನಂಬರ್ ಪ್ಲೇಟ್‌ ಹಾಕಿಸಿಕೊಳ್ಳಲು ಜನರು ಒದ್ದಾಡುತ್ತಿದ್ದಾರೆ. ಶುಲ್ಕ ಪಾವತಿ ಮಾಡಿದ ನಂತರ ಪೋರ್ಟಲ್‌ಗಳು ಕೈಕೊಡುತ್ತಿವೆ. ಹೀಗಾಗಿ ವಾಹನ ಮಾಲೀಕರು ಈ ಪೋರ್ಟಲ್‌ಗಳ ಮೂಲಕ ನೋಂದಣಿಗೆ ಪ್ರಯತ್ನಿಸಿದಾಗ ಹಲವರಿಗೆ ಕಂಪನಿ ಹೆಸರು, ವಾಹನದ ಮಾದರಿ ಇನ್ನಿತರ ವಿವರಗಳು ಹೊಂದಾಣಿಕೆಯಾಗುತ್ತಿಲ್ಲ. ಮತ್ತೆ ಕೆಲವರ ವಾಹನದ ನೋಂದಣಿ ಸಂಖ್ಯೆ, ಎಂಜಿನ್‌ ಸಂಖ್ಯೆ  ವಿವರ ಹಾಕಿದರೆ ಅಂತಹ ವಾಹನವೇ ಇಲ್ಲವೆಂದು ಪೋರ್ಟಲ್‌ಗಳು ತೋರಿಸುತ್ತಿವೆ. ಹಲವು ವಾಹನಗಳ ಮಾಲೀಕರ ಮತ್ತು ಕಂಪನಿಯ ಹೆಸರು ಕೂಡ ಭಿನ್ನವಾಗಿ ಸಿಗುತ್ತಿದೆ. ಇದ್ರಿಂದಾಗಿ ಜನರು ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್‌ ನೋಂದಣಿ ಮಾಡಿಸಿಕೊಳ್ಳಲು ಪರದಾಡುತ್ತಿದ್ದಾರೆ. ಹೀಗಾಗಿ ಆದಷ್ಟು ಆನ್ ಲೈನ್‌ ಬದಲು ನೇರವಾಗಿ ನಂಬರ್ ಪ್ಲೇಟ್ ಬದಲಿಸಿಕೊಡುವ ಮೆಕ್ಯಾನಿಕಲ್ ಶಾಪ್ ಗೆ ಹೋಗೋದು ಉತ್ತಮ. ಆನ್ ಲೈನ್ ನಲ್ಲಿ ಖರೀದಿಸಿ ನೂರೋ‌ ಇನ್ನೂರೋ ರುಪಾಯಿ ಉಳಿಸಲು ಪರದಾಡುವುದು ತಪ್ಪುತ್ತದೆ. ಅಲ್ಲದೆ ವಂಚಕರ ಜಾಲದಿಂದಲೂ ದೂರವಿರಬಹುದು.

Shwetha M