ಅಮೆಜಾನ್ ಅರಣ್ಯದಲ್ಲಿ ದೈತ್ಯ ಅನಕೊಂಡ ಹಾವು ಪತ್ತೆ – ವಿಶ್ವದಲ್ಲೇ ದೈತ್ಯ ಗಾತ್ರದ ಹಾವು ಅನ್ನೋ ಹೆಗ್ಗಳಿಕೆ

ಅಮೆಜಾನ್ ಅರಣ್ಯದಲ್ಲಿ ದೈತ್ಯ ಅನಕೊಂಡ ಹಾವು ಪತ್ತೆ – ವಿಶ್ವದಲ್ಲೇ ದೈತ್ಯ ಗಾತ್ರದ ಹಾವು ಅನ್ನೋ ಹೆಗ್ಗಳಿಕೆ

ವಿಶ್ವದ ಅತಿ ದೊಡ್ಡ ಕಾಡು ಅಮೆಜಾನ್ ಅರಣ್ಯದಲ್ಲಿ ದೈತ್ಯ ಅನಕೊಂಡ ಹಾವು ಪತ್ತೆಯಾಗಿದೆ. ಇದು ಜಗತ್ತಿನಲ್ಲೇ ಇದುವರೆಗೂ ಕಂಡ ಹಾವುಗಳ ಎಲ್ಲಾ ದಾಖಲೆಗಳನ್ನು ಮುರಿದು ಹಾಕಿದೆ. ನ್ಯಾಷನಲ್ ಜಿಯಾಗ್ರಫಿಕ್ ಹಾಗೂ ಡಿಸ್ನಿ + ಜನಪ್ರಿಯ ಸೀರಿಸ್‌ನಲ್ಲಿ ಶೂಟ್ ಮಾಡುವಾಗ ಈ ಅನಕೊಂಡ ಹಾವಿನ ವಿಡಿಯೋ ಸೆರೆ ಹಿಡಿಯಲಾಗಿದೆ.

ಇದನ್ನೂ ಓದಿ: ತಾನೇ ಸಾಕಿ ಸಲಹಿದ್ದ ಸಿಂಹಕ್ಕೆ ಆಹಾರವಾದ ಮೃಗಾಲಯ ಸಿಬ್ಬಂದಿ – ಸಿಂಹಕ್ಕೆ ದಯಾಮರಣ ನೀಡಿದ ಝೂ

ಅಮೆಜಾನ್ ಕಾಡಿನಲ್ಲಿ ಅನಕೊಂಡ ಹಾವಿನ ಜಾತಿಗೆ ಸೇರಿದ ವಿಶ್ವದ ಅತೀ ದೈತ್ಯ ಗಾತ್ರದ ಹಾವು ಪತ್ತೆಯಾಗಿದೆ. ಅತೀ ವಿರಳವಾಗಿರುವ ಈ ಹಾವು ಇದೇ ಮೊದಲ ಬಾರಿಗೆ ಪತ್ತೆಯಾಗಿದೆ. ಈಗಾಗಲೇ ಪತ್ತೆಯಾಗಿರುವ ಅನಕೊಂಡ ಹಾವಿಗೆ ಹೋಲಿಸಿದರೆ ಈಗ ಪತ್ತೆಯಾದ ಹಾವು ದುಪ್ಪಟ್ಟು ದೊಡ್ಡದಾಗಿದೆ. ಇದು ಅಪರೂಪದ ಹಾವಿನ ಪ್ರಬೇಧವಾಗಿದ್ದು, ಬಹಳಷ್ಟು ಅಚ್ಚರಿಗೆ ಕಾರಣವಾಗಿದೆ.  ಅತಿ ದೊಡ್ಡ ಅನಕೊಂಡ ಹಾವಿನ ಉದ್ದ ಬರೋಬ್ಬರಿ 7.5 ಮೀಟರ್‌ ಇದ್ದು, ಇದರ ತೂಕ 500 ಕೆಜಿ ಇದೆ ಎನ್ನಲಾಗಿದೆೆ. ಇಷ್ಟು ದೊಡ್ಡದಾದ ಹಾವು ಇದುವರೆಗೂ ಪತ್ತೆಯಾಗಿರಲಿಲ್ಲ. ಅಮೆಜಾನ್ ಕಾಡಿನ ಈ ದೈತ್ಯ ಹಾವಿನ ಬಗ್ಗೆ ಇನ್ನಷ್ಟು ಸಂಶೋಧನೆ ನಡೆಸಲಾಗುತ್ತಿದೆ. ಇದು ವಿಶ್ವದಲ್ಲೇ ಇದುವರೆಗೆ ಪತ್ತೆಯಾಗಿರುವ ದೈತ್ಯ ಗಾತ್ರದ ಹಾವು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ.

ದಕ್ಷಿಣ ಹಸಿರು ಅನಕೊಂಡ ಹಾವಿನ ಮೇಲೆ ಅನಕೊಂಡ ಚಲನಚಿತ್ರ ಕೂಡ ಭಾರಿ ಸಂಚಲನ ಸೃಷ್ಟಿಸಿದೆ. ಇದೀಗ ಪತ್ತೆಯಾಗಿರುವುದು ಗ್ರೀನ್ ಅನಕೊಂಡ. ನ್ಯಾಷನಲ್ ಜಿಯೋಗ್ರಫಿ ವಾಹಿನಿ ಅಮೆಜಾನ್ ಕಾಡಿನಲ್ಲಿ ನಡೆಸುತ್ತಿದ್ದ ವಿಡಿಯೋ ಚಿತ್ರೀಕರಣದ ವೇಳೆ ದೈತ್ಯ ಹಾವು ಪತ್ತೆಯಾಗಿದೆ. ಶೂಟಿಂಗ್ ವೇಳೆ ಅಮೆಜಾನ್ ಕಾಡಿನ ನದಿಯ ತಳಬಾಗದಲ್ಲಿ ಅತೀ ಉದ್ದನೆಯ ಈ ಅನಕೊಂಡ ಗ್ರೀನ್ ಹಾವು ಪತ್ತೆಯಾಗಿದೆ.

ಹಿಂಬಾಗದಿಂದ ಹಾವಿನ ತಲೆವರೆಗಿನ ವಿಡಿಯೋ ಲಭ್ಯವಿದೆ. ಅತೀ ದೊಡ್ಡ ಗಾತ್ರದ ಈ ಹಾವು ನೀರಿನ ಪ್ರದೇಶದಲ್ಲೇ ಹಚ್ಚಾಗಿ ವಾಸವಿರುತ್ತದೆ. ನೀರಿನಲ್ಲಿ ಚಲಿಸುವುದು, ಆಹಾರ ಹುಡುಕುವುದು ಸುಲಭವಾಗಿದೆ. ಬೂ ಪ್ರದೇಶದಲ್ಲಿ ಹಾವಿನ ಮೇಲೆ ಇತರ ದೈತ್ಯ ಪ್ರಾಣಿಗಳಿಂದ ದಾಳಿಯಾಗುವ ಸಾಧ್ಯತೆ ಹೆಚ್ಚು.

ಇದಕ್ಕೂ ಮೊದಲು ಪತ್ತೆಯಾಗಿರುವ ದಕ್ಷಿಣ ಗ್ರೀನ್ ಅನಕೊಂಡ ಹಾವುಗಳು ಅಮೆಜಾನ್ ಮಳೆ ಕಾಡಿನ ಬ್ರೆಜಿಲ್ ಬಾಗ, ಪೆರು, ಬೊಲಿವಿಯಾ, ಫ್ರೆಂಚ್ ಗೈನಾಗಳಲ್ಲಿ ಕಾಣಿಸಿಕೊಂಡಿದೆ. ಇನ್ನು ಉತ್ತರ ಭಾಗಗಳಾದ ಈಕ್ವೆಡಾರ್, ಕೊಲಂಬಿಯಾ ವೆನಿಜುವೆಲಾ, ಗಯಾನ ಭಾಗದಲ್ಲೂ ಕಾಣಿಸಿಕೊಂಡಿದೆ.

Sulekha