ಸಹಾಯ ಮಾಡಿದ ಪಾಕ್ ವಿರುದ್ಧವೇ ತಿರುಗಿ ಬಿದ್ದ ತಾಲಿಬಾನ್! – ಪಾಕಿಸ್ತಾನವನ್ನ ಮತ್ತೆ ವಿಭಜನೆ ಮಾಡಬೇಕಾಗುತ್ತೆ ಎಂದು ವಾರ್ನಿಂಗ್!
ಅಫ್ಘಾನ್ನಲ್ಲಿ ಪ್ರಜಾಪ್ರಭುತ್ವ ಸರ್ಕಾರ ಇದ್ದಾಗ ತಾಲಿಬಾನಿಗರನ್ನು ತನ್ನ ರಾಜಧಾನಿಯಲ್ಲಿ ಇಟ್ಟುಕೊಂಡು ಪಾಕ್ ವಿಷ ಬೀಜ ಬಿತ್ತಿ ಪ್ರಜಾಪ್ರಭುತ್ವ ಸರ್ಕಾರವನ್ನ ಹೊಡೆದೊಡಿಸಲು ಸಹಾಯ ಮಾಡಿತ್ತು. ಇದೀಗ ತನಗೆ ಸಹಾಯ ಮಾಡಿದ ಪಾಕ್‌ಗೆ ತಾಲಿಬಾನ್ ಗುಮ್ಮಿದೆ.
ಹೌದು, ಕಳೆದ ಕೆಲವು ದಿನಗಳಿಂದ ಅಫ್ಘಾನ್ನ ನಿರಾಶ್ರಿತರನ್ನು ಪಾಕಿಸ್ತಾನ ಗಡಿಪಾರು ಮಾಡುತ್ತಿದೆ. ಪಾಕಿಸ್ತಾನದ ಈ ನಡೆಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ತಾಲಿಬಾನಿಗರು ಪಾಕಿಸ್ತಾನದ ಪ್ರಾದೇಶಿಕ ಸಮಗ್ರತೆಗೆ ಬೆದರಿಕೆ ಹಾಕಿದ್ದಾರೆ. ಪಾಕಿಸ್ತಾನ ಸುಮ್ಮನೇ ಕಾಲು ಕೆರೆದುಕೊಂಡು ಬರುತ್ತಿದ್ದು ಅಫ್ಘಾನ್ ಮೂಲದ ಪಶ್ತೂನ್ ಬುಡಕಟ್ಟು ಜನಾಂಗದವರನ್ನ ಕ್ರೂರವಾಗಿ ಗಡಿಪಾರು ಮಾಡುತ್ತಿದೆ.
ಇದನ್ನೂ ಓದಿ:ರಾಷ್ಟ್ರ ರಾಜಧಾನಿ ಪ್ರವೇಶಿಸಲು ರೈತರು ಸಜ್ಜು! – ಬುಲ್ಡೋಜರ್‌ಗಳ ಸಮೇತ ಶಂಭು ಗಡಿಯತ್ತ ಹೊರಟ ರೈತರು!
ಇದಕ್ಕೆ ಖಡಕ್ ವಾರ್ನಿಂಗ್ ಕೊಟ್ಟಿರುವ ಅಫ್ಘಾನ್ ಉಪ ವಿದೇಶಾಂಗ ಸಚಿವ ಶೇರ್ ಮಹಮ್ಮದ್ ಅಬ್ಬಾಸ್ ಅವರು, ಡ್ಯೂರಾಂಡ್ ಗಡಿರೇಖೆಯನ್ನು ನಾವು ಯಾವಗ್ಲೂ ಗಣನೆಗೆ ತೆಗೆದುಕೊಂಡಿಲ್ಲ. ಅದು ಇಂಗ್ಲಿಷರು ಹಾಕಿದ ಗೆರೆ ಆಗಿದೆ. ಪಶ್ತೂನ್ ಬುಡಕಟ್ಟು ಜನ ಎರಡು ದೇಶದ ಗಡಿಯಲ್ಲಿ ವಾಸಿಸುತ್ತಿದ್ದಾರೆ. ನಮ್ಮ ಜನರನ್ನು ಒತ್ತಾಯ ಮಾಡಿ ಗಡಿಪಾರು ಮಾಡಿದರೆ ಪರಿಣಾಮ ನೆಟ್ಟಗಿರಲ್ಲ ಎಂದು ಎಚ್ಚರಿಸಿದ್ದಾರೆ ಎಂದು ವರದಿಯಾಗಿದೆ.
ಅಫ್ಘಾನ್ನಲ್ಲಿ ಪ್ರಜಾಪ್ರಭುತ್ವ ಸರ್ಕಾರ ಇದ್ದಾಗ ತಾಲಿಬಾನಿಗರನ್ನು ತನ್ನ ರಾಜಧಾನಿಯೊಳಗೆ ಸೇರಿಸಿಕೊಂಡು ಸಹಾಯ ಮಾಡಿತ್ತು. ಅಲ್ಲದೇ ಅಫ್ಘಾನ್ನಲ್ಲಿ ತಾಲಿಬಾನ್ ಸರ್ಕಾರ ರಚನೆಗಾಗಿ ಬಾಂಬ್, ಸೇನಾ ಟ್ರಕ್ಗಳನ್ನ, ಗನ್, ಮದ್ದು-ಗುಂಡುಗಳು ಸೇರಿದಂತೆ ಎಲ್ಲ ಖರ್ಚುವೆಚ್ಚಗಳನ್ನ ಆಗ ನೋಡಿಕೊಂಡಿತ್ತು. ಆದರೆ ಸಹಾಯ ಮಾಡಿದ ಪಾಕ್‌ಗೆ ಇದೀಗ ತಾಲಿಬಾನ್ ಗುಮ್ಮಿದೆ. ಪರಿಣಾಮ ನೆಟ್ಟಗಿರಲ್ಲ, ಹೀಗೆ ಮಾಡುತ್ತಾ ಹೋದರೆ 1971ರಲ್ಲಿ ಪಾಕ್ನಿಂದ ಬಾಂಗ್ಲಾದೇಶ ವಿಭಜನೆಯಾದಂತೆ, ಮತ್ತೆ ಪಾಕಿಸ್ತಾನವನ್ನು ಮರು ವಿಭಜಿಸುವುದಾಗಿ ವಾರ್ನಿಂಗ್ ಮಾಡಿದೆ ಎಂದು ವರದಿಯಾಗಿದೆ.