ರೋಹಿತ್ ಶರ್ಮಾ ಹಾಕಿರೋ ಪೋಸ್ಟ್ ಏನು? – ಕ್ಯಾಪ್ಟನ್ ಹೊಗಳಿರುವ ಆ ಮೂವರು ಆಟಗಾರರು ಯಾರು?

ರೋಹಿತ್ ಶರ್ಮಾ ಹಾಕಿರೋ ಪೋಸ್ಟ್ ಏನು? –  ಕ್ಯಾಪ್ಟನ್ ಹೊಗಳಿರುವ ಆ ಮೂವರು ಆಟಗಾರರು ಯಾರು?

ಯಶಸ್ವಿ ಜೈಸ್ವಾಲ್.. ಸರ್ಫರಾಜ್ ಖಾನ್.. ಧ್ರುವ್​ ಜ್ಯುರೆಲ್.. ಇಂಗ್ಲೆಂಡ್​​ ವಿರುದ್ಧದ ಮೂರನೇ ಟೆಸ್ಟ್​ ಬಳಿಕ ಈ ಮೂವರು ಯಂಗ್​ಸ್ಟರ್ಸ್​​ಗಳು ಭವಿಷ್ಯದಲ್ಲಿ ಟೀಂ ಇಂಡಿಯಾದ ದೊಡ್ಡ ಅಸೆಟ್​​ಗಳಾಗೋದ್ರಲ್ಲಿ ಯಾವುದೇ ಡೌಟ್ ಇಲ್ಲ. ಈ ಬಗ್ಗೆ ಕ್ಯಾಪ್ಟನ್​ ರೋಹಿತ್​ ಶರ್ಮಾ ಕೂಡ ಹಿಂಟ್ ಕೊಟ್ಟಿದ್ದಾರೆ. ಮೂರನೇ ಟೆಸ್ಟ್ ಗೆದ್ದ ಬಳಿಕ ರೋಹಿತ್​​ ಸೋಷಿಯಲ್​​ ಮೀಡಿಯಾದಲ್ಲಿ ಒಂದು ಪೋಸ್ಟ್ ಮಾಡಿದ್ದು ಈಗ ಟಾಕಿಂಗ್​ ಪಾಯಿಂಟ್ ಆಗಿದೆ. ಹೀಗಾಗಿಯೇ ಯಶಸ್ವಿ ಜೈಸ್ವಾಲ್.. ಸರ್ಫರಾಜ್ ಖಾನ್ ಮತ್ತು ಧ್ರುವ್​ ಜ್ಯುರೆಲ್ ಬಗ್ಗೆ ಸೆಂಟರ್​ ಆಫ್ ಅಟ್ರಾಕ್ಷನ್​ ಆಗಿದ್ದಾರೆ.

ಇದನ್ನೂ ಓದಿ:BAZBALLಗೆ ರೋಹಿತ್ ಕೌಂಟರ್! – ಸೋತರೂ ಮೀಸೆ ಮಣ್ಣಾಗಿಲ್ಲ ಅಂತಿದ್ದಾರೆ ಆಂಗ್ಲರು

ಯೇ ಆಜ್​​ಕಲ್​​ ಕೇ ಬಚ್ಚೇ.. ಇವರು ಈಗಿನ ಕಾಲದ ಹುಡುಗರು.. ಮೂರನೇ ಟೆಸ್ಟ್ ಬಳಿಕ ಕ್ಯಾಪ್ಟನ್ ರೋಹಿತ್​ ಶರ್ಮಾ ಸೋಷಿಯಲ್ ಮೀಡಿಯಾದಲ್ಲಿ ಮಾಡಿರೋ ಏಕೈಕ ಪೋಸ್ಟ್ ಇದು. 22 ವರ್ಷದ ಯಶಸ್ವಿ ಜೈಸ್ವಾಲ್, 23 ವರ್ಷದ ಧ್ರುವ್ ಜ್ಯುರೆಲ್, 26 ವರ್ಷದ ಸರ್ಫರಾಜ್ ಖಾನ್ ಈ ಮೂವರ ಫೋಟೋ ಹಾಕ್ಕೊಂಡು ಯೇ ಆಜ್​​ಕಲ್​ ಕೇ ಬಚ್ಚೇ ಅಂತಾ ರೋಹಿತ್ ಶರ್ಮಾ ಮಾಡಿದ ಈ ಒನ್ ಲೈನ್ ಪೋಸ್ಟ್​ ಈಗ ಫುಲ್ ವೈರಲ್ ಆಗಿದೆ. ಈ ಮೂವರೂ ಯಂಗ್​ಸ್ಟರ್ಸ್​ಗಳೂ ಮೂರನೇ ಟೆಸ್ಟ್​ನಲ್ಲಿ ತಮ್ಮ ಸ್ಕಿಲ್ ಏನು ಅನ್ನೋದನ್ನ ಪ್ರೂವ್ ಮಾಡಿದ್ರು. ಇವರ ಪರ್ಫಾಮೆನ್ಸ್​ನಿಂದ​ ರೋಹಿತ್​ ಶರ್ಮಾ ಕೂಡ ಫುಲ್ ಇಂಪ್ರೆಸಿವ್ ಆಗಿದ್ದಾರೆ. ಈ ಪೈಕಿ ಜೈಸ್ವಾಲ್ ಬಗ್ಗೆ ಹೇಳಬೇಕಾದ ಅವಶ್ಯಕತೆಯೇ ಇಲ್ಲ. ಅವರು ಯಾವ ರೀತಿ ಆಡಿದ್ರು, ಡಬಲ್​ ಸೆಂಚೂರಿ ಹೊಡೆದ್ರು ಅನ್ನೋದು ನಿಮಗೆ ಗೊತ್ತೇ ಇದೆ. ರೋಹಿತ್​ ಶರ್ಮಾ ಕೂಡ ಇದೇ ಕಾರಣಕ್ಕೆ ಆಜ್​ ಕಲ್​​ ಕೇ ಬಚ್ಚೇ ಟೈಟಲ್​​ನಲ್ಲಿ ಜೈಸ್ವಾಲ್​ ಫೋಟೋ ಹಾಕ್ಕೊಂಡಿದ್ರು. ಇನ್ನು ಸರ್ಫರಾಜ್ ಖಾನ್.. ಡೆಬ್ಯೂ ಮ್ಯಾಚ್​​ನಲ್ಲೇ ಎರಡು ಹಾಫ್​ಸೆಂಚೂರಿ ಹೊಡೆದ್ರು. ಇದು ಕೂಡ ಗ್ರೇಟ್ ಅಚೀವ್​ಮೆಂಟೇ..ಹೀಗಾಗಿಯೇ ರೋಹಿತ್​ ತಮ್ಮ ಪೋಸ್ಟ್​ನಲ್ಲಿ ಸರ್ಫರಾಜ್​ ಫೋಟೋವನ್ನ ಇನ್​ಕ್ಲೂಡ್ ಮಾಡಿದ್ರು.

ಇನ್ನು ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ಧ್ರುವ್ ಜ್ಯುರೆಲ್​ ಅಂತೂ ಕೀಪಿಂಗ್​ನಲ್ಲಿ​ ಅಲ್ಟಿಮೇಟ್ ಆಗಿದ್ರು. ಅದ್ರಲ್ಲೂ ಸೆಕೆಂಡ್ ಇನ್ನಿಂಗ್ಸ್​​ನಲ್ಲಿ ಬೆನ್ ಡಕೆಟ್​​ರನ್ನ ರನ್ನೌಟ್ ಮಾಡಿದ ರೀತಿ ಇದ್ಯಲ್ಲಾ ಜ್ಯುರೆಲ್ ಕೆರಿಯರ್​​ಗೆ ದೊಡ್ಡ ಟರ್ನಿಂಗ್ ಪಾಯಿಂಟ್ ಆಗಬಹುದು. ಈ ರನ್ನೌಟ್​​ ಫೋಟೋವನ್ನ ಇಟ್ಕೊಂಡೇ ರೋಹಿತ್ ಶರ್ಮಾ ತಮ್ಮ ಆಜ್​ ಕಲ್​​ ಕೇ ಬಚ್ಚೇ ಪೋಸ್ಟ್​​ನಲ್ಲಿ ಧ್ರುವ್​ ಜ್ಯುರೆಲ್​​​ರನ್ನ ಇನ್​​​ಕ್ಲೂಡ್ ಮಾಡಿದ್ದಾರೆ. ಆ ರನ್ನೌಟ್ ಬಗ್ಗೆ ಒಂದಷ್ಟು ಹೇಳಲೇಬೇಕು. ಯಾಕಂದ್ರೆ ಅದು ಒಂಥರಾ ಎಂ.ಎಸ್.ಧೋನಿಯನ್ನ ನೆನಪಿಸುವಂತೆಯೇ ಇತ್ತು. ಬೆನ್​ ಡಕೆಟ್ ಸಿಂಗಲ್​ ತೆಗಿಯೋಕೆ ಮುಂದಾಗ್ತಾರೆ. ಆದ್ರೆ ಮಿಡ್​ ಆಫ್​​ನಲ್ಲೇ ಫೀಲ್ಡಿಂಗ್​ ಮಾಡ್ತಿದ್ದ ಮೊಹಮ್ಮದ್ ಸಿರಾಜ್ ಕೂಡಲೇ ಬಾಲ್ ಕಲೆಕ್ಟ್ ಮಾಡಿ ವಿಕೆಟ್​​ನತ್ತ ಥ್ರೋ ಮಾಡ್ತಾರೆ. ಇತ್ತ ಬೆನ್ ಡಕೆಟ್ ಕ್ರೀಸ್​ ಬಿಟ್ಟಾಗಿತ್ತು. ನಾನ್​​ ಸ್ಟ್ರೈಕರ್​ ಎಂಡ್​​ನಲ್ಲಿದ್ದ ಬ್ಯಾಟ್ಸ್​​​ಮನ್​​ ನೋ ಅನ್ನುತ್ತಲೇ ಬೆನ್ ಡಕೆಟ್ ಯೂ ಟರ್ನ್ ಹೊಡೆದು ಮತ್ತೆ ಕ್ರೀಸ್​​ನತ್ತ ಓಡ್ತಾರೆ. ಅಷ್ಟೊತ್ತಿಗಾಗಲೇ ವಿಕೆಟ್ ಕೀಪರ್ ಧ್ರುವ್​ ಜ್ಯುರೆಲ್ ತಾವು ನಿಂತಿದ್ದ ಜಾಗದಿಂದ ಓಡಿಕೊಂಡು ಬಂದು ವಿಕೆಟ್​​ನಿಂದ ಆಚೆಗೆ ಹೋಗ್ತಿದ್ದ ಸಿರಾಜ್​ ಥ್ರೋ ಮಾಡಿದ ಬಾಲ್​ನ್ನ ಕಲೆಕ್ಟ್ ಮಾಡಿ ​ರನ್​​ಔಟ್ ಮಾಡ್ತಾರೆ. ಆ್ಯಕ್ಚುವಲಿ ಈ ರನ್ನೌಟ್ ಆಗಿರೋದು ಜಸ್ಪ್ರಿತ್ ಬುಮ್ರಾ ಬೌಲಿಂಗ್ ಸಂದರ್ಭದಲ್ಲಿ. ಬುಮ್ರಾ ಬೌಲಿಂಗ್ ಅಂದ್ಮೇಲೆ ಕೀಪರ್ ಜ್ಯುರೆಲ್​​ ವಿಕೆಟ್​ನಿಂದ ತುಂಬಾನೆ ಹಿಂದಕ್ಕೆ ನಿಂತಿದ್ರು. ನಿಮಗೆ ಗೊತ್ತಿರೋ ಹಾಗೆ ಸ್ಪಿನ್ನರ್ಸ್ ಅಥವಾ ಕೆಲವೊಮ್ಮೆ ಮೀಡಿಯಮ್ ಪೇಸರ್ಸ್ ಬೌಲಿಂಗ್ ವೇಳೆ ಕೀಪರ್​​ಗಳು ​ವಿಕೆಟ್​ನ ಬಳಿಯೇ ನಿಂತಿರ್ತಾರೆ. ಫಾಸ್ಟ್ ಬೌಲಿಂಗ್​ ಸಂದರ್ಭದಲ್ಲಿ ವಿಕೆಟ್​ನಿಂದ ತುಂಬಾ ಡಿಸ್ಟೆನ್ಸ್​​ನಲ್ಲಿರ್ತಾರೆ. ಇಲ್ಲಿ ಧ್ರುವ್​ ಜ್ಯುರೆಲ್ ಮಾಡಿದ ರನ್ನೌಟ್ ಹೈಲೈಟ್ ಆಗೋಕೆ ಕಾರಣವೇ ಇದು ನೋಡಿ. ಬುಮ್ರಾ ಬೌಲಿಂಗ್​ ಮಾಡ್ತಿದ್ದ ಕಾರಣ ಧ್ರುವ್​ ಜ್ಯುರೆಲ್ ವಿಕೆಟ್​​ನಿಂದ ಡಿಸ್ಟೆನ್ಸ್​​ನಲ್ಲಿದ್ರು. ಆದ್ರೆ ಯಾವಾಗ ಬೆನ್ ಡಕಟ್ ಹೊಡೆದ ಬಾಲ್​​ನ್ನ ಮೊಹಮ್ಮದ್ ಸಿರಾಜ್ ಕಲೆಕ್ಟ್ ಮಾಡಿ ಥ್ರೋ ಮಾಡಿದ್ರೋ ಇತ್ತ ಧ್ರುವ್​ ಜ್ಯುರೆಲ್ ಮಿಂಚಿನಂತೆ ವಿಕೆಟ್​​ನತ್ತ ಓಡಿ, ಸ್ಟಂಪ್​​ನಿಂದ ಹೊರ ಹೋಗ್ತಿದ್ದ ಬಾಲ್​​ನ್ನ ಕಲೆಕ್ಟ್ ಮಾಡಿ ರನ್ನೌಟ್ ಮಾಡಿದ್ರು. ಬೆನ್ ಡಕೆಟ್​​ಗೆ ಬಚಾವೋಗೋಕೆ ಚಾನ್ಸೇ ಕೊಟ್ಟಿರಲಿಲ್ಲ. ಒಂದು ವೇಳೆ ಧ್ರುವ್​​ ಜ್ಯುರಲ್​ ಓಡಿ ಬಂದು ಬಾಲ್​ ಕೆಲೆಕ್ಟ್ ಮಾಡದೆ ಇರ್ತಿದ್ರೆ ಅಲ್ಲಿ ರನ್ನೌಟೇ ಆಗ್ತಿರಲಿಲ್ಲ. ಯಾಕಂದ್ರೆ ಮೊಹಮ್ಮದ್ ಸಿರಾಜ್ ಎಸೆದ ಥ್ರೋ ವಿಕೆಟ್​​ನಿಂದ ಆಚೆಗೆ ಹೋಗ್ತಾ ಇತ್ತು. ಇದೊಂದೇ ಅಲ್ಲ, ಈ ಮ್ಯಾಚ್​ನುದ್ದಕ್ಕೂ ಜ್ಯುರೆಲ್ ತುಂಬಾನ್ ಸ್ಮಾರ್ಟ್ ಆಗಿ ವಿಕೆಟ್ ಕೀಪಿಂಗ್ ಮಾಡಿದ್ರು. ಹೀಗಾಗಿ ರೋಹಿತ್​ ಶರ್ಮಾ ಆಜ್​​ ಕಲ್​​ ಕೇ ಬಚ್ಚೇ ಅಂತಾ ಜ್ಯುರೆಲ್​​ ಫೋಟೋವನ್ನ ಕೂಡ ಪೋಸ್ಟ್ ಮಾಡಿದ್ರು. ಟೋಟಲಿ ಈ ಮೂವರು ಯಂಗ್​​ಸ್ಟರ್ಸ್​​ಗಳ ಸಕ್ಸಸ್​​ನ್ನ ಕ್ಯಾಪ್ಟನ್ ರೋಹಿತ್​​ ಶರ್ಮಾ ಸೆಲೆಬ್ರೇಟ್ ಮಾಡಿದ್ದಾರೆ.

Sulekha