ಚಿನ್ನದ ಕಾಲುಂಗುರ ಧರಿಸುವುದು ತಪ್ಪಾ? – ಸೊಂಟದ ಕೆಳಗೆ ಚಿನ್ನ ಯಾಕೆ ಧರಿಸಬಾರದು?
ಮದುವೆಯಾದ ಮಹಿಳೆಯರು ಬೆಳ್ಳಿಯ ಕಾಲುಂಗುರ ಧರಿಸುವುದು ಸಾಮಾನ್ಯ. ಬೆಳ್ಳಿಯ ಕಾಲುಂಗುರ ಧರಿಸುವುದು ಭಾರತೀಯ ಸಂಪ್ರದಾಯ. ಆದರೆ ಈಗ ಹಲವರು ಬೆಳ್ಳಿ ಕಾಲುಂಗುರದ ಬದಲು ಚಿನ್ನದ ಕಾಲುಂಗುರ ಧರಿಸುತ್ತಿದ್ದಾರೆ. ಹೀಗೆ ಚಿನ್ನದ ಕಾಲುಂಗುರ ಧರಿಸುವುದು ಒಳ್ಳೆಯದಲ್ಲ ಎಂದು ಪುರಾಣಗಳು ಹೇಳುತ್ತವೆ.
ಇದನ್ನೂ ಓದಿ:ಈ ಹಳ್ಳಿಯಲ್ಲಿದೆ ವಿಚಿತ್ರ ರೂಲ್ಸ್! – ಮದುವೆ ಆಗ್ಬೇಕಂದ್ರೆ ಸಸ್ಯಾಹಾರಿ ಆಗಿರಬೇಕು..!
ಹಿಂದೂಗಳನಂಬಿಕೆಯಂತೆ ಚಿನ್ನ ಗುರು ಗ್ರಹಕ್ಕೆ ಸಂಬಂಧಿಸಿದೆ. ಇದರೊಂದಿಗೆ ವಿಷ್ಣು ದೇವರಿಗೂ ಚಿನ್ನ ಎಂದರೆ ತುಂಬಾ ಇಷ್ಟ. ಇದಲ್ಲದೆ ಚಿನ್ನವನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ತಾಯಿ ಲಕ್ಷ್ಮಿದೇವಿ ಯಾವಾಗಲೂ ತನ್ನ ಕೈಗಳಿಂದ ಚಿನ್ನದ ನಾಣ್ಯಗಳನ್ನು ಸುರಿಸುತ್ತಾಳೆ. ಈ ಕಾರಣಕ್ಕಾಗಿ ಪಾದದಲ್ಲಿ ಚಿನ್ನ ಧರಿಸುವುದು ಅಪಮಾನವಾಗುತ್ತದೆಂದು ಹೇಳಲಾಗಿದೆ. ಹೀಗಾಗಿಯೇ ಸೊಂಟದ ಕೆಳಗೆ ಚಿನ್ನ ಧರಿಸುವುದನ್ನು ನಿಷೇಧಿಸಲಾಗಿದೆ.
ಬೆಳ್ಳಿಯ ಕಾಲುಂಗರ, ಬೆಳ್ಳಿಯ ಕಾಲ್ಗೆಜ್ಜೆಯನ್ನೇ ಧರಿಸಲಾಗುತ್ತದೆ. ಅದೇ ರೀತಿ ಧಾರ್ಮಿಕತೆಯ ಹೊರತಾಗಿ ವೈಜ್ಞಾನಿಕ ದೃಷ್ಟಿಕೋನದಿಂದ ಚಿನ್ನದ ಕಾಲ್ಗೆಜ್ಜೆ ಅಥವಾ ಚಿನ್ನದ ಕಾಲುಂಗುರ ಧರಿಸುವುದು ಸರಿಯಲ್ಲ. ವಿಜ್ಞಾನದ ದೃಷ್ಟಿಯಿಂದ ಚಿನ್ನವು ದೇಹದಲ್ಲಿ ಶಾಖವನ್ನು ಹೆಚ್ಚಿಸಿದರೆ, ಬೆಳ್ಳಿ ದೇಹಕ್ಕೆ ತಂಪು ನೀಡುತ್ತದೆ. ಅದಕ್ಕಾಗಿಯೇ ಸೊಂಟದ ಮೇಲೆ ಚಿನ್ನದ ಆಭರಣಗಳನ್ನು ಮತ್ತು ಸೊಂಟದ ಕೆಳಗೆ ಬೆಳ್ಳಿಯ ಆಭರಣಗಳನ್ನು ಧರಿಸಲಾಗುತ್ತದೆ. ಇದರಿಂದ ದೇಹದಲ್ಲಿನ ತಾಪಮಾನ ಸಮತೋಲನ ಕಾಪಾಡಿಕೊಳ್ಳಲು ಸಹಕಾರಿಯಾಗಿದೆ.