ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಮಾಲ್ಡೀವ್ಸ್ – ಬೇಲ್ಔಟ್ ಸಾಲಕ್ಕಾಗಿ IMF ಮೊರೆ

ಭಾರತದ ವಿರುದ್ಧ ತಿರುಗಿಬಿದ್ದ ಮಾಲ್ಡೀವ್ಸ್ಗೆ ಮರ್ಮಾಘಾತವಾಗಿದೆ. ತೀರಾ ಅರ್ಥಿಕ ದುಸ್ಥಿತಿಗೆ ಮಾಲ್ಡೀವ್ಸ್ ತಲುಪಿದ್ದು, ದಿವಾಳಿ ಎಂದು ಘೋಷಣೆ ಮಾಡಲಾಗಿದೆ.
ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ 6 ತಿಂಗಳ ಕಾಲ ಪ್ರತಿಭಟನೆ, ಮುಷ್ಕರ ನಿಷೇಧ! – ಕಾರಣವೇನು ಗೊತ್ತಾ?
ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಲಕ್ಷದ್ವೀಪ ಭೇಟಿಯ ಸಂದರ್ಭದಲ್ಲಿ ಮಾಲ್ಡೀವ್ಸ್ನ ಮೂವರು ಸಚಿವರು ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದು ವಿವಾದಕ್ಕೆ ಕಾರಣವಾಗಿತ್ತು. ಭಾರತ ವಿರೋಧಿ ಹೇಳಿಕೆ ನೀಡಿ ಭಾರತೀಯರ ಕೆಂಗಣ್ಣಿಗೆ ಮಾಲ್ಡೀವ್ಸ್ ಗುರಿಯಾಗಿತ್ತು. ಬಾಯ್ಕಾಟ್ ಮಾಲ್ಡೀವ್ಸ್ ಅಭಿಯಾನ ಪ್ರಾರಂಭಿಸಿದ್ದ ಭಾರತೀಯರು. ಮಾಲ್ಡೀವ್ಸ್ಗೆ ಹೋಗುವ ಭಾರತೀಯ ಪ್ರವಾಸಿಗರ ಸಂಖ್ಯೆಯಲ್ಲೂ ಭಾರೀ ಕುಸಿತವಾಗಿದೆ. ಆರ್ಥಿಕ, ರಾಜತಾಂತ್ರಿಕ ಕ್ಷೇತ್ರಗಳೆರಡರಲ್ಲೂ ಮಾಲ್ಡೀವ್ಸ್ಗೆ ಭಾರೀ ಸವಾಲು ಎದುರಾಗಿದೆ. ಆರ್ಥಿಕ ಕುಸಿತವನ್ನು ತಗ್ಗಿಸುವ ಪ್ರಯತ್ನದಲ್ಲಿ, ಮಾಲ್ಡೀವ್ಸ್ ತನ್ನ ಆರ್ಥಿಕ ಬಿಕ್ಕಟ್ಟು ನಿಭಾಯಿಸಲು ಬೇಲ್ಔಟ್ ಸಾಲವನ್ನು ಕೋರಿ IMF ನತ್ತ ಮುಖ ಮಾಡಿದೆ ಎಂದು ವರದಿಯಾಗಿದೆ.
ಈ ಹಿಂದೆ ಮಾಲ್ಡೀವ್ಸ್ಗೆ ಪ್ರವಾಸಿಗರ ಪ್ರಮುಖ ಮೂಲವಾಗಿದ್ದ ಭಾರತವು ಸಂದರ್ಶಕರ ಸಂಖ್ಯೆಯಲ್ಲಿ ತೀವ್ರ ಕುಸಿತವನ್ನು ಕಂಡಿದೆ. ಕಳೆದ ವರ್ಷ ಮಾಲ್ಡೀವ್ಸ್ಗೆ ಪ್ರಯಾಣಿಸುವವರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ ಭಾರತ ಈಗ ಐದನೇ ಸ್ಥಾನಕ್ಕೆ ಕುಸಿದಿದೆ, ಇದರ ಪರಿಣಾಮ ಪ್ರವಾಸೋದ್ಯಮ ಕ್ಷೇತ್ರಕ್ಕೂ ವಿಸ್ತರಿಸಿದೆ. ಆರ್ಥಿಕ ಮತ್ತು ರಾಜತಾಂತ್ರಿಕ ರಂಗಗಳೆರಡರಲ್ಲೂ ಮಾಲ್ಡೀವ್ಸ್ ಈಗ ಸವಾಲುಗಳನ್ನು ಎದುರಿಸುತ್ತಿದೆ.