ಜೀವನ ಪೂರ್ತಿ ಯೌವ್ವನ.. ಮುಪ್ಪು ಬರೋದಿಲ್ಲ! – ಈ ಚಿಕಿತ್ಸೆ ಎಲ್ಲಿ ಸಿಗುತ್ತೆ? ಏನಿದರ ಲಾಭ?
ವಯಸ್ಸಾಗುವಿಕೆ ಪ್ರಕೃತಿಯ ನಿಯಮ. ವಯಸ್ಸಾದಂತೆ, ಮುಖದ ಮೇಲೆ ಸುಕ್ಕುಗಳು ಕಾಣಿಸಿಕೊಳ್ಳುತ್ತವೆ. ರೋಗಗಳು ದಾಳಿ ಮಾಡಲು ಪ್ರಾರಂಭಿಸುತ್ತವೆ. ಜೀವಕೋಶಗಳು ಒಣಗಲು ಪ್ರಾರಂಭಿಸುತ್ತವೆ. ಆದರೆ ಇನ್ನು ಮುಂದೆ ಅದನ್ನು ತಡೆಯಬಹುದು. ಯಾಕಂದ್ರೆ ವಿಜ್ಞಾನಿಗಳು ‘ಜೀವನದ ಅಮೃತ’ವೊಂದನ್ನು ಕಂಡುಹಿಡಿದಿದ್ದಾರೆ.
ಇದನ್ನೂ ಓದಿ: ಇನ್ನುಮುಂದೆ ಬಾಲರಾಮನಿಗೆ ಪ್ರತಿದಿನ 1 ಗಂಟೆ ವಿಶ್ರಾಂತಿ!
ಈಗ ಒಂದೇ ಚಿಕಿತ್ಸೆಯನ್ನು ಪಡೆದುಕೊಂಡರೆ ದೇಹವು ಎಷ್ಟು ಶಕ್ತಿ ಪಡೆಯುತ್ತವೆ ಎಂದರೆ ಜೀವಕೋಶಗಳು ಎಂದಿಗೂ ಒಣಗುವುದಿಲ್ಲ. ಇದರಿಂದ ದೇಹಕ್ಕೆ ಯಾವ ರೋಗವೂ ಅಂಟಿಕೊಳ್ಳೋದಿಲ್ಲ. ಜೊತೆಗೆ ನೀವು ಯಂಗ್ ಆಗಿಯೇ ಕಾಣ್ತೀರಿ. ಹೌದು, ನ್ಯೂಯಾರ್ಕ್ ನ ಕೋಲ್ಡ್ ಸ್ಪ್ರಿಂಗ್ ಹಾರ್ಬರ್ ಲ್ಯಾಬೊರೇಟರಿಯ ಸಂಶೋಧಕರು ಬಿಳಿ ರಕ್ತ ಕಣವನ್ನು ಮರುಪ್ರೊಗ್ರಾಮ್ ಮಾಡಲು ಒಂದು ಮಾರ್ಗ ಕಂಡುಹಿಡಿದಿದ್ದಾರೆ ಎಂದು ವರದಿಯಾಗಿದೆ. ಅವುಗಳನ್ನು ಟಿ-ಸೆಲ್ (T Cell) ಎಂದು ಹೆಸರಿಸಲಾಗಿದೆ. ಸಾಮಾನ್ಯವಾಗಿ, ನಮ್ಮ ದೇಹದಲ್ಲಿ ಟಿ ಸೆಲ್ಸ್ ಹಾಕಿದರೆ, ಅದರಿಂದ ರೋಗನಿರೋಧಕ ಶಕ್ತಿ ಸುಧಾರಿಸುತ್ತವೆ, ಇದರಿಂದಾಗಿ ನಮ್ಮ ದೇಹವು ರೋಗಗಳೊಂದಿಗೆ ಹೋರಾಡುತ್ತದೆ.
ದೇಹದ ತೂಕವನ್ನು ಕಡಿಮೆ ಮಾಡುವುದು ಅಥವಾ ಜೀರ್ಣಕ್ರಿಯೆಯನ್ನು ಸುಧಾರಿಸುವಲ್ಲಿ, ಈ ಟಿ-ಸೆಲ್ ಯಾವಾಗಲೂ ಉಪಯುಕ್ತ. ವಿಜ್ಞಾನಿಗಳು ಮೊದಲ ಪ್ರಯೋಗವನ್ನು ಇಲಿಗಳ ಮೇಲೆ ಮಾಡಿದ್ರು. ಇದರನಂತರ ಇಲಿಗಳು ಆರೋಗ್ಯಕರ ಜೀವನ ನಡೆಸಿದವು. ಅದರ ದೇಹದ ತೂಕ ಕಡಿಮೆಯಾಯಿತು. ಜೀರ್ಣಕ್ರಿಯೆ ಉತ್ತಮವಾಯಿತು. ದೇಹವು ಸಕ್ಕರೆಯನ್ನು (Sugar) ಚೆನ್ನಾಗಿ ನಿಯಂತ್ರಿಸಲು ಪ್ರಾರಂಭಿಸಿತು. ಅಂದರೆ ಈ ಇಲಿಗಳ ದೇಹ ಮರಿ ಇಲಿಗಳಂತೆ ಕಾರ್ಯನಿರ್ವಹಿಸಲು ಪ್ರಾರಂಭಿಸಿತು ಅಂತಾ ಸಂಶೋಧನಾ ತಂಡದ ಸದಸ್ಯೆ ಕೊರಿನ್ನಾ ಅಮೋರ್ ವೇಗಾಸ್ ಹೇಳಿದ್ದಾರೆ. ಇದು ಅಚ್ಚರಿಯ ಚಿಕಿತ್ಸೆಯಾಗಲಿದೆ ಮತ್ತು ಖಂಡಿತವಾಗಿಯೂ ಕೇವಲ ಒಂದು ಚಿಕಿತ್ಸೆಯಲ್ಲಿ ಯೌವ್ವನ ಮರುಕಳಿಸಿದೆ ಎಂಬ ವಿಶ್ವಾಸವನ್ನು ಸಂಶೋಧಕರು ಹೊಂದಿದ್ದಾರೆ.