ಅಂಗೈ ತುರಿಸಿದ್ರೆ ಕೈ ತುಂಬಾ ದುಡ್ಡು ಬರುತ್ತಾ? – ಅಂಗೈ ಹೇಳುತ್ತೆ ನಿಮ್ಮ ಆರೋಗ್ಯದ ಭವಿಷ್ಯ!
ಸಾಮಾನ್ಯವಾಗಿ ಅಂಗೈ ತುರಿಸಿದರೆ ದುಡ್ಡು ಬರುತ್ತೆ, ಜೇಬು ತುಂಬುತ್ತದೆ ಅನ್ನೋ ನಂಬಿಕೆಯಿದೆ.. ಆದ್ರೆ ಇದು ನಿಜವಲ್ಲ. ಒಂದು ವೇಳೆ ಅಂಗೈ ತುರಿಸಿದರೆ ದುಡ್ಡು ಬರೋದಲ್ಲ… ಬದಲಾಗಿ ನಿಮ್ಮ ಜೇಬು ಖಾಲಿಯಾಗುತ್ತದೆ. ಯಾಕಂದ್ರೆ ಸುಖಾಸುಮ್ಮನೇ ಅಂಗೈ ತುರಿಸೋದಿಲ್ಲ. ಪದೇ ಪದೆ ಅಂಗೈ ತುರಿಸಿದರೆ ನಿಮಗೆ ಗಂಭೀರವಾದ ಸಮಸ್ಯೆ ಎದುರಾಗುತ್ತಿದೆ ಎಂದು ಅರ್ಥ.
ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ 6 ತಿಂಗಳ ಕಾಲ ಪ್ರತಿಭಟನೆ, ಮುಷ್ಕರ ನಿಷೇಧ! – ಕಾರಣವೇನು ಗೊತ್ತಾ?
ಅತಿಯಾಗಿ ಅಂಗೈ ತುರಿಸಿದ್ರೆ ಸೋರಿಯಾಸಿಸ್ ನ ಲಕ್ಷಣವಾಗಿದೆ. ಚರ್ಮದ ಮೇಲೆ ಬಿಳಿ ಚಿಪ್ಪುಗಳುಳ್ಳ ನೋವಿನಿಂದ ಕೂಡಿದ ತೇಪೆಗಳು ಕಾಣುತ್ತವೆ. ಇನ್ನು ಒಣ ತ್ವಚೆಯ ಸಮಸ್ಯೆಗಳಿಂದ ಸಹ ಅಂಗೈ ತುರಿಕೆ ಮತ್ತು ಉರಿಯೂತ ಉಂಟುಮಾಡುತ್ತದೆ. ಈ ಒಣ ಚರ್ಮದ ಸಮಸ್ಯೆ ತೀವ್ರವಾದರೆ ತುರಿಕೆ ಮತ್ತು ಉರಿಯುವಿಕೆಗೆ ಕಾರಣವಾಗುತ್ತದೆ. ಇನ್ನು ಯಾವುದಾದರೂ ವಸ್ತುಗಳನ್ನು ಸ್ಪರ್ಶಿಸಿದಾಗ ಅಲರ್ಜಿ ಉಂಟಾಗಿದ್ದರೂ ಕೂಡ ಅಂಗೈಯಲ್ಲಿ ತುರಿಕೆ ಉಂಟಾಗುತ್ತೆ. ಇಂತಹ ತುರಿಕೆ ತಕ್ಷಣವೇ ಹೋಗೋದಿಲ್ಲ. ತುರಿಕೆ ಕಡಿಮೆಯಾಗಲು ಬಹಳ ಸಮಯ ತೆಗೆದುಕೊಳ್ಳಬಹುದು.
ಕೆಲವರಿಗೆ ಕೆಂಪು ಕಲೆಗಳೊಂದಿಗೆ ತುರಿಕೆ ಬರುತ್ತೆ. ಚರ್ಮವು ಒಣಗಿದಂತಾಗುತ್ತೆ. ಇದು ಎಕ್ಸಿಮಾ ಲಕ್ಷಣವಾಗಿದೆ. ಇನ್ನು ಕೈಕಾಲು ತುರಿಕೆ ಮಧುಮೇಹದ ಲಕ್ಷಣ ಕೂಡ ಆಗಿರಬಹುದು. ಮಧುಮೇಹದಿಂದ ಬಳಲುತ್ತಿರುವ ಅನೇಕರಿಗೆ ಪಾದದಲ್ಲಿ ತುರಿಕೆ ಶುರುವಾಗುತ್ತದೆ. ಈ ರೀತಿಯ ಸಮಸ್ಯೆಗಳಿರುವ ಜನ ಸ್ನಾನದ ನಂತರ ಪ್ರತಿ ಬಾರಿ ಮಾಯಿಶ್ಚರೈಸರ್ ಹಚ್ಚೋದು ಉತ್ತಮ. ತೀವ್ರವಾದಲ್ಲಿ ವೈದ್ಯರನ್ನು ಸಂಪರ್ಕಿಸಬೇಕು.