ಪಂಚ ಭಾಷಾ ಸಿನಿಮಾ ಯಶೋದಾ ತೆರೆಗೆ ಬರಲು ಸಿದ್ದ: ಹೇಗಿರಲಿದೆ ಚಿತ್ರ!

ಪಂಚ ಭಾಷಾ ಸಿನಿಮಾ ಯಶೋದಾ ತೆರೆಗೆ ಬರಲು ಸಿದ್ದ: ಹೇಗಿರಲಿದೆ ಚಿತ್ರ!

ಮುಂಬೈ: ಟಾಲಿವುಡ್​ ನಟಿ ಸಮಂತಾ ರುತ್ ಪ್ರಭು ಅಭಿನಯದ ಯಶೋದಾ ಸಿನಿಮಾ ಈಗಾಗಲೇ ಪ್ರೇಕ್ಷಕರಲ್ಲಿ ಭಾರಿ ನಿರೀಕ್ಷೆಗಳನ್ನು ಹುಟ್ಟುಹಾಕಿದ್ದು, ನಾಳೆ ದೇಶಾದ್ಯಂತ ಐದು ಭಾಷೆಗಳಲ್ಲಿ ತೆರೆಕಾಣಲಿದೆ.

ಇದನ್ನೂ ಓದಿ:  ಕನ್ನಡಿಗರ ಒತ್ತಾಯಕ್ಕೆ ಮನ್ನಣೆ: ಕನ್ನಡದಲ್ಲೂ ತೆರೆಗೆ ಬರುತ್ತಿದೆ ಅವತಾರ್-2

ಈಗಾಗಲೇ ಈ ಚಿತ್ರದ ತುಣುಕೊಂದನ್ನು ಸಮಂತಾ ತನ್ನ ಇನ್​ಸ್ಟಾಗಾಂನಲ್ಲಿ ಹಂಚಿಕೊಂಡಿದ್ದು, ಈ ಚಿತ್ರ ಹೇಗಿರಲಿದೆ, ಚಿತ್ರದಲ್ಲಿ ಏನೆಲ್ಲಾ ಇರಲಿದೆ ಎಂಬುದನ್ನು ಹಂಚಿಕೊಂಡಿದ್ದು, ಅಭಿಮಾನಿಗಳು ಥ್ರಿಲ್​ ಆಗಿದ್ದಾರೆ.

ಚಿತ್ರದ ಮುಖ್ಯ ಪಾತ್ರಧಾರಿ (ಸಮಂತಾ) ಒಂದು ಕೊಠಡಿಯಲ್ಲಿ ಮಲಗಿದ್ದಾಳೆ. ಆಕೆ ಬೆಡ್​ನಿಂದ ಎದ್ದ ತಕ್ಷಣ ತಾನು ತೊಟ್ಟ ಬಟ್ಟೆಯನ್ನು ನೋಡಿಕೊಳ್ಳುತ್ತಾಳೆ. ಕೈಗೆ ಏನೋ ಬೆಲ್ಟ್​ ಕಟ್ಟಲಾಗಿದೆ. ಆಕೆಗೆ ಎಲ್ಲವೂ ಹೊಸ ರೀತಿಯಲ್ಲಿ ಕಾಣುತ್ತಿದೆ. ಬೆಡ್​ನಿಂದ ಇಳಿದು ಬರುವ ಅವಳು, ಕಿಟಕಿಯ ಹೊರ ಭಾಗದಲ್ಲಿರುವ ಪಾರಿವಾಳ ಮುಟ್ಟೋಕೆ ತೆರಳುತ್ತಾಳೆ. ತಕ್ಷಣ ಕ್ಯಾಮೆರಾ ಜೂಮ್​ಔಟ್ ಆಗುತ್ತದೆ. ಗಲ್ಲಿ ರೀತಿಯ ದಾರಿಯಲ್ಲಿ ಕ್ಯಾಮೆರಾ ಸಾಗುತ್ತದೆ. ನಂತರ ‘ಯಶೋದ’ ಎಂದು ಟೈಟಲ್ ಕಾರ್ಡ್ ತೋರಿಸಲಾಗುತ್ತದೆ.

‘ಯಶೋದ’ ಸಿನಿಮಾವನ್ನು ಹರಿ ಶಂಕರ್ ಹಾಗೂ ಹರೀಶ್ ನಾರಾಯಣ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಶ್ರೀದೇವಿ ಮೂವೀಸ್ ಅಡಿಯಲ್ಲಿ ಸಿನಿಮಾ ನಿರ್ಮಾಣ ಆಗುತ್ತಿದೆ. ಉನ್ನಿ ಮುಕುಂದನ್​ ಮತ್ತು ವರಲಕ್ಷ್ಮೀ ಶರತ್​ಕುಮಾರ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಸಮಂತಾ ಕೊನೆಯದಾಗಿ ಕಾಣಿಸಿಕೊಂಡಿದ್ದು ‘ಕಾತುವಾಕುಲ ರೆಂಡು ಕಾದಲ್’ ಸಿನಿಮಾದಲ್ಲಿ. ವಿಜಯ್​ ಸೇತುಪತಿ ಹಾಗೂ ನಯನತಾರಾ ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿತ್ತು.

suddiyaana