ಟೀಮ್ ಇಂಡಿಯಾ ಬೋನಸ್ ರನ್ ಆಂಗ್ಲರಿಗೆ ಬಿಟ್ಟು ಕೊಟ್ಟಿದ್ದು ಹೇಗೆ? – ನಿಯಮದ ಪಾಠ ಮಾಡುವವರೇ ನಿಯಮ ಮರೆತರಾ?
ಇಂಡಿಯಾ VS ಇಂಗ್ಲೆಂಡ್.. 3ನೇ ಟೆಸ್ಟ್.. ಡೇ-2 ಹೈಲೈಟ್ಸ್.. 326/5 ರನ್ ಗಳಿಸಿದ್ದ ಟೀಮ್ ಇಂಡಿಯಾ 500+ ಸ್ಕೋರ್ ಮಾಡುತ್ತಾ ಅನ್ನೋ ನಿರೀಕ್ಷೆ ಇತ್ತು. ಆದ್ರೆ, 445ಕ್ಕೆ ಆಲೌಟ್ ಆಗಿದೆ. 130.5 ಓವರ್ಗಳಲ್ಲಿ ಟೀಮ್ ಇಂಡಿಯಾ 445 ರನ್ ಗಳಿಸೋಕಷ್ಟೇ ಸಾಧ್ಯವಾಗಿತ್ತು. ಇಲ್ಲೊಂದು ಇಂಟ್ರೆಸ್ಟಿಂಗ್ ಡೆವಲಪ್ಮೆಂಟ್ ಆಗಿದೆ. ಇಂಗ್ಲೆಂಡ್ ಫಸ್ಟ್ ಇನ್ನಿಂಗ್ಸ್ನಲ್ಲಿ ಬ್ಯಾಟಿಂಗ್ಗೆ ಇಳಿಯೋವಾಗಲೇ ಬೋನಸ್ ರನ್ನೊಂದಿಗೆ ಆಟ ಶುರುಮಾಡಿತ್ತು. ಬ್ಯಾಟಿಂಗ್ ಆರಂಭಿಸೋವಾಗ ಟೀಮ್ ಸ್ಕೋರ್ ಯಾವಾಗಲೂ ಸೊನ್ನೆ ಇರುತ್ತೆ. ಬಟ್ ಇಂಗ್ಲೆಂಡ್ ಬ್ಯಾಟ್ಸ್ಮನ್ಗಳು ಮ್ಯಾಚ್ನ ಫಸ್ಟ್ ಬಾಲ್ ಫೇಸ್ ಮಾಡೋ ಮುನ್ನವೇ ಇಂಗ್ಲೆಂಡ್ ಸ್ಕೋರ್ ಬೋರ್ಡ್ನಲ್ಲಿ ಐದು ರನ್ಗಳು ಆ್ಯಡ್ ಆಗಿತ್ತು. ಹಾಗಿದ್ರೆ ಇನ್ನಿಂಗ್ಸ್ ಶುರುವಾಗೋ ಮುನ್ನ ಇಂಗ್ಲೆಂಡ್ ಸ್ಕೋರ್ ಐದು ರನ್ಗಳಾಗಿದ್ದು ಹೇಗೆ? ಅದಕ್ಕೆ ಕಾರಣ ಏನು? ಟೀಂ ಇಂಡಿಯಾ ಸೈಡ್ನಿಂದ ಎಡವಟ್ಟಾಯ್ತಾ? ಈ ಬಗ್ಗೆ ಅತ್ಯಂತ ಇಂಟ್ರೆಸ್ಟಿಂಗ್ ಮಾಹಿತಿ ನೀಡ್ತೀನಿ. ಇದ್ರ ಜೊತೆಗೆ ಆರ್.ಅಶ್ವಿನ್ 500 ವಿಕೆಟ್ ಪಡೆದು ಹಿಸ್ಟರಿಯ ಪಾರ್ಟ್ ಆಗಿದ್ದಾರೆ. ಈ ಎಲ್ಲಾ ವಿಚಾರಗಳ ಬಗ್ಗೆ ವಿಸ್ತೃತ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: 73 ವರ್ಷಗಳ ರೆಕಾರ್ಡ್ ಬ್ರೇಕ್ ಮಾಡಿದ ರೋಹಿತ್ ಶರ್ಮಾ – ಡೆಬ್ಯೂ ಪ್ಲೇಯರ್ ಸರ್ಫರಾಜ್ ಖಾನ್ ಅರ್ಧಶತಕ
ಟೀಮ್ ಇಂಡಿಯಾ ಬೌಲರ್ಸ್ ಒಂದೇ ಒಂದು ಬಾಲ್ನ್ನ ಕೂಡ ಎಸೆದಿರಲಿಲ್ಲ. ಇಂಗ್ಲೆಂಡ್ ಓಪನರ್ಸ್ಗಳು ಒಂದು ಬಾಲ್ನ್ನ ಕೂಡ ಫೇಸ್ ಮಾಡಿರಲಿಲ್ಲ. ಎಲ್ಲಾ ಬಿಡಿ, ಇಂಗ್ಲೆಂಡ್ನ ಫಸ್ಟ್ ಇನ್ನಿಂಗ್ಸ್ ಬ್ಯಾಟಿಂಗ್ಗಾಗಿ ಎರಡೂ ಟೀಮ್ನ ಪ್ಲೇಯರ್ಸ್ಗಳು ಇನ್ನೂ ಗ್ರೌಂಡ್ಗೇ ಎಂಟ್ರಿ ಕೊಟ್ಟಿರಲಿಲ್ಲ. ಅಷ್ಟರಲ್ಲಾಗಲೇ, ಇಂಗ್ಲೆಂಡ್ ಸ್ಕೋರ್ ಬೋರ್ಡ್ನಲ್ಲಿ ಐದು ರನ್ ಗಳಿಸಿತ್ತು. ಇದಕ್ಕೆ ಕಾರಣ ನಮ್ಮ ರವೀಂದ್ರ ಜಡೇಜ ಮತ್ತು ಆರ್.ಅಶ್ವಿನ್. ಸ್ನೇಹಿತರೇ, ಆಗಿರೋದಿಷ್ಟೇ, ಡೇ-2 ಆರಂಭದಲ್ಲಿ ಕುಲ್ದೀಪ್ ಯಾದವ್ ಔಟಾಗುತ್ತಲೇ ಆರ್.ಅಶ್ವಿನ್ ಕ್ರೀಸ್ಗಿಳೀತಾರೆ. ಈ ವೇಳೆ ರವೀಂದ್ರ ಜಡೇಜ ಮತ್ತು ಆರ್.ಅಶ್ವಿನ್ ರನ್ನಿಂಗ್ ಬಿಟ್ವೀನ್ ದಿ ವಿಕೆಟ್ ವೇಳೆ ಪಿಚ್ನ ಮಧ್ಯ ಭಾಗದಲ್ಲೇ ಓಡಾಡ್ತಾರೆ. ನಿಮಗೆ ಗೊತ್ತಿರೋ ರೂಲ್ಸ್ ಪ್ರಕಾರ ಪಿಚ್ ಮಧ್ಯದಲ್ಲಿ ಓಡಾಡುವಂತಿಲ್ಲ. ಒಂದೂ ಪಿಚ್ನ ಕಾರ್ನರ್ನಲ್ಲಿ ಓಡಾಡ್ಬೇಕು. ಇಲ್ಲಾ. ಪಿಚ್ ಹೊರ ಭಾಗದಲ್ಲಿರೋ ಗ್ರಾಸ್ ಮೇಲೆ ರನ್ನಿಂಗ್ ಮಾಡಬಹುದು. ಬಟ್ ಅಂಪೈರ್ ವಾರ್ನಿಂಗ್ ಕೊಟ್ಟ ಮೇಲೂ ಅದ್ರಲ್ಲೂ ಅಶ್ವಿನ್ ಅಂತೂ ರನ್ನಿಂಗ್ ಬಿಟ್ವೀನ್ ದಿ ವಿಕೆಟ್ ವೇಳೆ ಪಿಚ್ ಮಿಡ್ಲ್ನಲ್ಲೇ ಓಡ್ತಿದ್ರು. ಒಂದ್ಸಾರಿಯಂತೂ ಪಿಚ್ ಮಧ್ಯೆ ಓಡೋಕೆ ಶುರು ಮಾಡುತ್ತಲೇ ನಾನ್ ಸ್ಟ್ರೈಕ್ನಲ್ಲಿದ್ದ ಧ್ರುವ್ ಜ್ಯುರೆಲ್ ಆರ್.ಅಶ್ವಿನ್ರನ್ನ ಹಿಂದಕ್ಕೆ ಕಳಿಸಿದ್ರು. ಜಡೇಜ ಬಳಿಕ ಅಶ್ವಿನ್ ಕೂಡಾ ಅದೇ ತಪ್ಪನ್ನು ಮಾಡಿದರು. ಹೀಗಾಗಿ ಟೀಂ ಇಂಡಿಯಾಗೆ 5 ರನ್ಗಳ ಪೆನಾಲ್ಟಿ ನೀಡಲಾಯ್ತು. ಇಂಗ್ಲೆಂಡ್ಗೆ 5 ರನ್ಗಳ ಬೋನಸ್ ಸಿಗ್ತು.
ಎಂಸಿಸಿ ರೂಲ್ ನಂಬರ್ 41.14.1 ಪ್ರಕಾರ ಪ್ಲೇಯರ್ಸ್ಗಳು ಪಿಚ್ ಮಧ್ಯೆ ಓಡಾಡುವಂತೆಯೇ ಇಲ್ಲ. ಅಂದ್ರೆ ಪಿಚ್ನ್ನ ಡ್ಯಾಮೇಜ್ ಮಾಡಿದ ಆರೋಪಕ್ಕೆ ಒಳಗಾಗಬೇಕಾಗುತ್ತೆ. ಬ್ಯಾಟ್ಸ್ಮನ್ಗಳು ರನ್ನಿಂಗ್ ಬಿಟ್ವೀನ್ ದ ವಿಕೆಟ್ ವೇಳೆ ಪಿಚ್ ಮಧ್ಯೆ ಓಡಾಡಬಾರದು ಅಂತಾ ಕೇವಲ ಬ್ಯಾಟ್ಸ್ಮನ್ಗಳಿಗಷ್ಟೇ ಈ ರೂಲ್ಸ್ ಅನ್ವಯವಾಗೋದಲ್ಲ. ಬೌಲರ್ಸ್ಗಳಿಗೂ ಇದು ಅಪ್ಲೈ ಆಗುತ್ತೆ. ಬೌಲಿಂಗ್ ಮಾಡಿದ ಮೇಲೆ ಪಿಚ್ ಮಧ್ಯ ಭಾಗದಲ್ಲಿ ಓಡಾಡುವಂತಿಲ್ಲ. ಫೀಲ್ಡರ್ಸ್ಗಳು ಕೂಡ ಅಷ್ಟೇ, ಪಿಚ್ ನಡುವೆ ಹಾದು ಹೋಗುವಂತೆ ಇಲ್ಲ. ಸೆಂಟರ್ ಆಫ್ ದಿ ಪಿಚ್ನ್ನ ಕಂಪ್ಲೀಟ್ಲಿ ಪ್ರೊಟೆಕ್ಟೆಡ್ ಏರಿಯಾ ಅಂತಾ ಪರಿಗಣಿಸಲಾಗಿದೆ. ಇಲ್ಲಿ ಅಂಪೈರ್ಗಳು ಒಂದು ಬಾರಿ ವಾರ್ನಿಂಗ್ ಕೊಡ್ತಾರೆ. ಇಷ್ಟಾದ್ಮೇಲೂ ಪಿಚ್ ಮೇಲೆ ಓಡಾಟ ಕಂಟಿನ್ಯೂ ಮಾಡಿದ್ರೆ ಐದು ರನ್ಗಳ ಪೆನಾಲ್ಟಿ ನೀಡಲಾಗುತ್ತೆ. ಜಡೇಜಾ ಮತ್ತು ಅಶ್ವಿನ್ ಮಾಡಿದ ಮಿಸ್ಟೇಕ್ಸ್ನಿಂದಾಗಿಯೇ ಬ್ಯಾಟಿಂಗ್ ಆರಂಭಿಸೋ ಮುನ್ನವೇ ಇಂಗ್ಲೆಂಡ್ ಸ್ಕೋರ್ 5 ರನ್ಗಳಾಗಿತ್ತು.
ಇಲ್ಲಿ ನಿಜಕ್ಕೂ ಆಶ್ಚರ್ಯ ಆಗೋದು ಏನಂದ್ರೆ, ಆರ್.ಅಶ್ವಿನ್ ರೂಲ್ಸ್ ಬ್ರೇಕ್ ಮಾಡಿರೋದು. ಆ್ಯಕ್ಚುವಲಿ ಅಶ್ವಿನ್ ವನ್ ಆಫ್ ದಿ ಮೋಸ್ಟ್ ಇಂಟೆಲಿಜೆಂಟ್ ಕ್ರಿಕೆಟರ್. ಕ್ರಿಕೆಟ್ ರೂಲ್ ಬುಕ್ನ್ನೇ ಅರೆದು ಕುಡದಿರೋ ವ್ಯಕ್ತಿ. ಬಿಟ್ರೆ ಅಂಪೈರ್ಸ್, ರೆಫ್ರಿಗಳಿಗೇ ರೂಲ್ಸ್ ಬಗ್ಗೆ ಪಾಠ ಮಾಡ್ತಾರೆ. ಅಶ್ವಿನ್ ಅಂಪೈರ್ ಜೊತೆ ಡಿಸ್ಕಸ್ ಮಾಡ್ತಾ ಇದ್ದಾರೆ ಅಂದ್ರೆ ಏನೋ ರೂಲ್ಸ್ ಬಗ್ಗೆ ಟೀಚಿಂಗ್ ಮಾಡ್ತಿರಬೇಕು ಅಂತಾ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡ್ತಾರೆ. ಅಂಥಾ ಅಶ್ವಿನ್ರಿಂದಲೇ ಇಂಥಾ ಸಿಲ್ಲಿ ಮಿಸ್ಟೇಕ್ ಆಗಿದೆ. ಬಟ್..ಅಶ್ವಿನ್ ಕಡೆಯಿಂದಾದ ಈ ರಿಪೀಟೆಡ್ ಅಫೆನ್ಸಿವ್ನ್ನ ಇಂಗ್ಲೆಂಡ್ ಮಾಜಿ ಕ್ಯಾಪ್ಟನ್ ಅಲಿಸ್ಟರ್ ಕುಕ್ ಬೇರೆಯದೇ ಆ್ಯಂಗಲ್ನಲ್ಲಿ ಡಿಫೈನ್ ಮಾಡಿದ್ದಾರೆ. ಅಶ್ವಿನ್ ಬೇಕು ಬೇಕು ಅಂತಾನೆ ಈ ರೀತಿ ಪಿಚ್ ಮಧ್ಯೆ ಓಡಾಡಿದ್ದಾರೆ. ಇದು ಅಶ್ವಿನ್ರ ಟ್ಯಾಕ್ಟಿಕಲ್ ಸ್ಟ್ರ್ಯಾಟಜಿಯಂತೆ. ತಾವು ಬೌಲಿಂಗ್ ಮಾಡೋ ವೇಳೆ ಪಿಚ್ ಡಿಫರೆಂಟ್ ಆಗಿ ಬಿಹೇವ್ ಮಾಡಲಿ. ತಮ್ಮ ಬೌಲಿಂಗ್ಗೆ ಹೆಲ್ಪ್ ಆಗಲಿ. ತಾವು ಪಿಚ್ ಮಧ್ಯೆ ಓಡಾಡಿದ ಜಾಗಕ್ಕೆ ಬಾಲ್ ಎಸೆಯೋದು ಅಶ್ವಿನ್ ಸ್ಟ್ರ್ಯಾಟಜಿಯಾಗಿರಬಹುದು ಅಂತಾ ಅಲಿಸ್ಟರ್ ಕುಕ್ ಹೇಳಿದ್ದಾರೆ. ಇಲ್ಲಿ ಅಲಿಸ್ಟರ್ ಕುಕ್ ಹೇಳಿರೋದು ನಿಜವಾಗಿರಲೂಬಹುದು. ಇಲ್ಲಾಂದ್ರೆ ಅಶ್ವಿನ್ರಂಥಾ ಎಕ್ಸ್ಪೀರಿಯನ್ಸ್ ಪ್ಲೇಯರ್ ಪಿಚ್ ಮಧ್ಯೆ ರಿಪೀಟೆಡ್ಲಿ ಓಡಾಡಿದ್ದಾರೆ ಅಂದ್ರೆ ಏನರ್ಥ. ಡೌಟ್ ಬಂದೇ ಬರುತ್ತೆ.
ಇರ್ಲಿ ಬಿಡಿ, ಈಗ ಇಂಗ್ಲೆಂಡ್ ಬ್ಯಾಟಿಂಗ್ ವಿಚಾರಕ್ಕೆ ಬರೋಣ. ಅಕ್ಷರಶ: ನಮ್ಮ ಬೌಲರ್ಸ್ಗಳ ಪಿಕ್ಚರ್ ಬಿಡಿಸ್ತಾ ಇದ್ದಾರೆ. ಬ್ಯಾಸ್ಬಾಲ್ ಆಟ ಶುರುಮಾಡಿದಂತೆ ಕಾಣಿಸ್ತಾ ಇದೆ. ತಮ್ಮ ಫಸ್ಟ್ ಇನ್ನಿಂಗ್ಸ್ನ ಫಸ್ಟ್ ಸೆಷನ್ನಲ್ಲೇ ಇಂಗ್ಲೆಂಡ್ 200+ ಕ್ರಾಸ್ ಮಾಡಿದೆ. ಅಫ್ಕೋಸ್ ಇದು ಬ್ಯಾಟಿಂಗ್ ಪಿಚ್. ಅದ್ರಲ್ಲಿ ಡೌಟೇ ಇಲ್ಲ. ಆದ್ರೆ ಇಂಗ್ಲೆಂಡ್ ಫಸ್ಟ್ ಇನ್ನಿಂಗ್ಸ್ನಲ್ಲಿ ಆಡ್ತಾ ಇರೋದನ್ನ ನೋಡಿದ್ರೆ, ಟೀಂ ಇಂಡಿಯಾದ 445 ಸ್ಕೋರ್ ಕಡಿಮೆಯಾಯ್ತು ಅಂತಾನೆ ಅನ್ಸುತ್ತೆ. ಸೆಕೆಂಡ್ ಡೇ ಫಸ್ಟ್ ಸೆಷನ್ನಲ್ಲಿ ಇಂಗ್ಲೆಂಡ್ ಓವರ್ಗೆ ಆರರ ರನ್ರೇಟ್ನಲ್ಲಿ ಸ್ಕೋರ್ ಮಾಡಿದೆ. ಅದ್ರಲ್ಲೂ ಓಪನರ್ ಬೆನ್ ಡಕೆಟ್ ಅಂತೂ ನಮ್ಮ ಬೌಲರ್ಸ್ಗಳ ಬೆಂಡೆತ್ತಿದ್ದಾರೆ. ನೋ ಡೌಟ್ ಬ್ಯಾಸ್ಬಾಲ್ ಸ್ಟೈಲ್ನಲ್ಲೇ ಆಡಿದ್ದಾರೆ. ಕೇವಲ 88 ಬಾಲ್ಗಳಲ್ಲೇ ಸೆಂಚೂರಿ ಹೊಡೆದ್ರು. 21 ಬೌಂಡರಿ..2 ಸಿಕ್ಸರ್.. 118 ಬಾಲ್ಗಳಲ್ಲಿ 133 ರನ್ ಗಳಿಸಿ ನಾಟ್ಔಟ್ ಆಗಿದ್ದಾರೆ. ಬೆನ್ ಡಕೆಟ್ ಬ್ಯಾಟಿಂಗ್ ಹೈಲೈಟ್ಸ್ ನೋಡಿದ ಹಾಗಿತ್ತು. ಪ್ರತಿ ಇನ್ನಿಂಗ್ಸ್ನಲ್ಲೂ ಇಂಗ್ಲೆಂಡ್ ಯಾರಾದ್ರೂ ಒಬ್ಬ ಬ್ಯಾಟ್ಸ್ಮನ್ ಬ್ಯಾಸ್ಬಾಲ್ ಮೋಡ್ನಲ್ಲೇ ಬ್ಯಾಟ್ ಬೀಸ್ತಾರೆ. ಈ ಹಿಂದಿನ ಮ್ಯಾಚ್ಗಳಲ್ಲಿ ಓಲಿ ಪಾಪ್, ಜ್ಯಾಕ್ ಕ್ರೌವ್ಲಿ ಮತ್ತು ಬೆನ್ಸ್ಟೋಕ್ಸ್ ಅಗ್ರೆಸ್ಸಿವ್ ಆಗಿಯೇ ಬ್ಯಾಟಿಂಗ್ ಮಾಡಿದ್ರು.
ತಮ್ಮ ಟೀಮ್ನ ಪ್ರಮುಖ ಅಸ್ತ್ರ ಬೇಸ್ಬಾಲ್ನ್ನ ಟೀಂ ಇಂಡಿಯಾದ ಮೇಲೆ ಪ್ರಯೋಗಿಸೋಕೆ ಇಂಗ್ಲೆಂಡ್ ಇನ್ನಿಲ್ಲದ ಪ್ರಯತ್ನ ಮಾಡ್ತಾನೆ ಇದೆ. ಹಾಗೆಯೇ ಮ್ಯಾಚ್ನಿಂದ ಮ್ಯಾಚ್ಗೆ ಸಕ್ಸಸ್ಫುಲ್ ಎಕ್ಸಿಕ್ಯೂಟ್ ಕೂಡ ಮಾಡ್ತಿದೆ. ಭಾರತದಲ್ಲೂ ಬೇಸ್ಬಾಲ್ ಆಟ ನಡೆಯುತ್ತೆ ಅನ್ನೋದನ್ನ ಇಂಗ್ಲೆಂಡ್ ಪ್ರೂವ್ ಮಾಡೋಕೆ ಹೊರಟಂತೆ ಕಾಣ್ತಿದೆ. ಎರಡನೇ ದಿನದಾಟದ ಅಂತ್ಯಕ್ಕೆ ಇಂಗ್ಲೆಂಡ್ 207/2 ರನ್ ಗಳಿಸಿದೆ. ಮೂರನೇ ದಿನವೂ ಇದೇ ರೀತಿ ಬ್ಯಾಟಿಂಗ್ ಕಂಟಿನ್ಯೂ ಮಾಡಿದ್ರೆ ಇಂಗ್ಲೆಂಡ್ 500+ ಸ್ಕೋರ್ ಮಾಡಿದ್ರೂ ಆಶ್ಚರ್ಯ ಇಲ್ಲ. ಬಟ್ ಮೂರನೇ ದಿನ ಮ್ಯಾಚ್ನ ಮೊದಲ ಒಂದು ಗಂಟೆ ತುಂಬಾ ಕ್ರೂಶಿಯಲ್ ಆಗಿರುತ್ತೆ. ಈ ವೇಳೆ ವಿಕೆಟ್ ಬಿತ್ತು ಅಂದ್ರೆ ಬಚಾವ್. ಇಲ್ಲಾ ಜೋ ರೂಟ್ ಕೂಡ ಕ್ರೀಸ್ನಲ್ಲಿ ನಿಂತ್ರೂ ಅಂದ್ರೆ ಬೆನ್ ಡಕೆಟ್ ಜೊತೆ ಸೇರಿ ಬೆಂಡೆತ್ತೋದು ಗ್ಯಾರಂಟಿ. ಬೆನ್ ಡಕೆಟ್ ರಿವರ್ಸ್ ಸ್ಕೂಪ್, ಸ್ವೀಪ್ ಸೇರಿ 360 ಡಿಗ್ರಿನಲ್ಲಿ ಸ್ಕೋರ್ ಮಾಡ್ತಾ ಇದ್ದಾರೆ. ಜೋ ರೂಟ್ ಅಂತೂ ಕೇಳೋದೆ ಬೇಡ ಸ್ವೀಪಿಂಗ್ ಎಕ್ಸ್ಪರ್ಟ್. ಇವರಿಬ್ಬರನ್ನೂ ಬೇಗನೆ ಪೆವಿಲಿಯನ್ಗೆ ಕಳಿಸಿಲ್ಲಾಂದ್ರೆ ಇಡೀ ಮ್ಯಾಚ್ನ್ನೇ ಟರ್ನ್ ಮಾಡಿಬಿಡ್ತಾರೆ. ಸರ್ಫರಾಜ್ ಖಾನ್ ರನ್ನೌಟ್ ಆದ್ರಲ್ಲಾ. ಅದ್ರಿಂದ ಟೀಮ್ ಇಂಡಿಯಾಗೆ ನಿಜಕ್ಕೂ ಹೊಡೆತ ಬಿದ್ದಿದೆ. ಇಲ್ಲಾಂದ್ರೆ ಸರ್ಫರಾಜ್ ನಿಂತು ಆಡ್ತಿದ್ರು. ಟೋಟಲ್ 500+ ಆಗ್ತಿತ್ತು. ಬೌಲರ್ಸ್ಗಳ ಪೈಕಿ ಮೊಹಮ್ಮದ್ ಸಿರಾಜ್ ವರ್ಕೌಟ್ ಆಗ್ತಿಲ್ಲ. ಫಸ್ಟ್ ಮ್ಯಾಚ್ನಲ್ಲೂ ಎಫೆಕ್ಟಿವ್ ಆಗಿ ಬೌಲಿಂಗ್ ಮಾಡುವಲ್ಲಿ ಸಿರಾಜ್ ಫೇಲ್ ಆಗಿದ್ರು. ಈಗ 10 ಓವರ್ಗಳಲ್ಲಿ 54 ರನ್ ಕೊಟ್ಟಿದ್ದಾರೆ. ಜಡೇಜಾ 4 ಓವರ್ಗಳಲ್ಲಿ 33 ರನ್ ದಾನ ಮಾಡಿದ್ದಾರೆ.
ಅಶ್ವಿನ್ 500 ವಿಕೆಟ್ ಪಡೆದ ಭಾರತದ ಎರಡನೇ ಬೌಲರ್ ಆಗಿದ್ದಾರೆ. ಅನಿಲ್ ಕುಂಬ್ಳೆ 132 ಟೆಸ್ಟ್ ಮ್ಯಾಚ್ಗಳಲ್ಲಿ 619 ವಿಕೆಟ್ ಪಡೆದಿದ್ರು. ಅಶ್ವಿನ್ 98 ಮ್ಯಾಚ್ಗಳಲ್ಲಿ 500 ವಿಕೆಟ್ ಪಡೆದಿದ್ದಾರೆ. ವರ್ಲ್ಡ್ ಕ್ರಿಕೆಟ್ನಲ್ಲಿ 500+ ವಿಕೆಟ್ ಪಡೆದ 9ನೇ ಬೌಲರ್ ಅಶ್ವಿನ್.