ದುರಂತಗಳು ಸಂಭವಿಸಿದರೆ ಇಲಿಗಳೇ ರಕ್ಷಣೆಗೆ ನಿಲ್ಲುತ್ತವೆ!
ಇಲ್ಲಿ ಆಪತ್ತು ಬಂದರೆ ಇಲಿಗಲೇ ಅಪತ್ಭಾಂಧವರು!

ದುರಂತಗಳು ಸಂಭವಿಸಿದರೆ ಇಲಿಗಳೇ ರಕ್ಷಣೆಗೆ ನಿಲ್ಲುತ್ತವೆ!ಇಲ್ಲಿ ಆಪತ್ತು ಬಂದರೆ ಇಲಿಗಲೇ ಅಪತ್ಭಾಂಧವರು!

ಮೊರೊಗೊರೊ: ರಕ್ಷಣಾ ಕಾರ್ಯಾಚರಣೆ ಅಂದಾಗ ಅಲ್ಲಿ ವಿಶೇಷ ತನಿಖಾ ದಳ, ಶ್ವಾನದಳಗಳು ಇರುತ್ತವೆ. ಆದರೆ ಇಲಿಗಳನ್ನೂ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಳ್ಳಬಹುದು ಎಂದು ಬೆಲ್ಜಿಯಂನ ಎಪಿಒಪಿಒ ಹೆಸರಿನ ಕಂಪನಿಯೊಂದು ತೋರಿಸಿಕೊಟ್ಟಿದೆ.

ಇದನ್ನೂ ಓದಿ: ಚಳಿಗಾಲದಲ್ಲಿ ಕೂದಲಿನ ಹಾರೈಕೆ ಹೀಗಿದ್ದರೆ ಉತ್ತಮ: ಇಂತಹ ತಪ್ಪುಗಳನ್ನು ಮಾಡಬೇಡಿ…

ತಾಂಜಾನಿಯಾದ ಮೊರೊಗೊರೊದಲ್ಲಿ ಎಪಿಒಪಿಒ ಕಂಪನಿ ಆಫ್ರಿಕನ್ ದೈತ್ಯ ಇಲಿಗಳಿಗೆ ಶ್ವಾನಗಳ ರೀತಿಯಲ್ಲಿ  ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯ ತರಬೇತಿ ನೀಡುತ್ತಿದೆ. ಅಲ್ಲದೇ ಈ ಇಲಿಗಳಿಗೆ ವಿಡಿಯೋ ಕ್ಯಾಮೆರಾ ಜೊತೆಗೆ ದ್ವಿಮುಖ ರೇಡಿಯೊ ಒಳಗೊಂಡ ಹೈಟೆಕ್ ಬ್ಯಾಕ್ ಪ್ಯಾಕ್ ಅಳವಡಿಸಲಾಗಿರುತ್ತದೆ. ಇದು ಸಂಭಾವ್ಯ ವಿಪತ್ತುಗಳನ್ನು ತಪ್ಪಿಸಲು ಮತ್ತು ನಿಗ್ರಹಿಸಲು ನೆರವಾಗಲಿದೆ.

ಇಲಿಗಳಿಗೆ ಅಳವಡಿಸಿರುವ ರೇಡಿಯೋಗಳು ದುರಂತದಲ್ಲಿ ಸಿಲುಕಿರುವ ಸಂತ್ರಸ್ತರೊಂದಿಗೆ ಮಾತುಕತೆ ನಡೆಸಲು ಅನುವು ಮಾಡಿಕೊಡುತ್ತದೆ. ಈ ಇಲಿಗಳಿಗೆ ಶ್ವಾನಗಳಂತೆಯೇ ತರಬೇತಿ ನೀಡುವುದರಿಂದ, ಅವುಗಳು ಉತ್ತಮ ವಾಸನೆ ಗ್ರಹಿಕೆ ಹೊಂದಿವೆ. ಅಲ್ಲದೇ ಅವು ಸಣ್ಣ ಗಾತ್ರ ಮತ್ತು ನೈಸರ್ಗಿಕ ಚುರುಕುತನ ಹೊಂದಿರುವುದರಿಂದ ಚಿಕ್ಕ ಜಾಗಗಳಿಗೂ ತೆರಳಿ ಸಂತ್ರಸ್ತರಿಗೆ ಸಹಾಯಕವಾಗಬಹುದು ಎಂದು ಸಂಶೋಧಕ ಡಾ. ಡೊನ್ನಾ ಕೀನ್ ತಿಳಿಸಿದ್ದಾರೆ.

suddiyaana