ಟಿ20 ವಿಶ್ವಕಪ್‌ನಲ್ಲೂ ರೋಹಿತ್ ಶರ್ಮಾ ಕ್ಯಾಪ್ಟನ್ ಆಗಲು ಕಾರಣ ಏನು? – ಹಾರ್ದಿಕ್ ಪಾಂಡ್ಯಾ ಸಾಮರ್ಥ್ಯ ಬಗ್ಗೆ ಬಿಸಿಸಿಐ ನಿಲುವೇನು?
2024ರ ಜೂನ್ನಿಂದ ಟಿ-20 ವರ್ಲ್ಡ್ಕಪ್ ನಡೀತಿದೆ. ಟೀಂ ಇಂಡಿಯಾದ ಸ್ಕ್ವಾಡ್ ಸೆಲೆಕ್ಷನ್ಗೂ ಈಗಾಗ್ಲೇ ತಯಾರಿ ಶುರುವಾಗಿದೆ. ಈ ಮಧ್ಯೆ ಕ್ಯಾಪ್ಟನ್ಸಿ ವಿಚಾರವಾಗಿ ಇದ್ದ ಕನ್ಫ್ಯೂಷನ್ಗೂ ಈಗ ಕಂಪ್ಲೀಟ್ ಕ್ಲ್ಯಾರಿಟಿ ಸಿಕ್ಕಿದೆ. ರೋಹಿತ್ ಶರ್ಮಾರೇ ತಂಡವನ್ನ ಲೀಡ್ ಮಾಡೋದು ಕನ್ಫರ್ಮ್ ಆಗಿದೆ. ಟಿ20 ವಿಶ್ವಕಪ್‌ನಲ್ಲೂ ರೋಹಿತ್ ಟೀಮ್ನ್ನ ಲೀಡ್ ಮಾಡ್ತಾರೆ ಅಂತಾ ಬಿಸಿಸಿಐ ಘೋಷಿಸಿದೆ. ಹಾಗಿದ್ರೆ ವರ್ಲ್ಡ್ಕಪ್ನಲ್ಲೂ ರೋಹಿತ್ ಶರ್ಮಾರನ್ನೇ ಕ್ಯಾಪ್ಟನ್ ಮಾಡೋದಿಕ್ಕೆ ಕಾರಣ ಏನು? ಹಾರ್ದಿಕ್ ಪಾಂಡ್ಯಾರನ್ನ ಕ್ಯಾಪ್ಟನ್ ಮಾಡಿಲ್ಲ ಯಾಕೆ? ಇವೆಲ್ಲದರ ಬಗ್ಗೆಯೂ ವಿವರವಾದ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಟೀಮ್ ಇಂಡಿಯಾ ಪಾದಾರ್ಪಣೆ ಕನಸು ನನಸು- ಖುಷಿಯಲ್ಲಿ ಕಣ್ಣೀರಿಟ್ಟ ಸರ್ಫರಾಜ್ ಖಾನ್ ಕುಟುಂಬ
ಯಾವಾಗ ಮುಂಬೈ ಇಂಡಿಯನ್ಸ್ ಮ್ಯಾನೇಜ್ಮೆಂಟ್ ರೋಹಿತ್ ಶರ್ಮಾರನ್ನ ಕೆಳಗಿಳಿಸಿ ಹಾರ್ದಿಕ್ ಪಾಂಡ್ಯಾರನ್ನ ಕ್ಯಾಪ್ಟನ್ ಮಾಡ್ತೋ ಈ ಬಾರಿಯ ಟಿ20 ವರ್ಲ್ಡ್ಕಪ್ನಲ್ಲಿ ಟೀಮ್ನ್ನ ಯಾರು ಲೀಡ್ ಮಾಡ್ತಾರೆ ಅನ್ನೋ ಪ್ರಶ್ನೆ ಆಗಲೇ ಎದ್ದಿತ್ತು. ಎಲ್ಲೋ ಒಂದು ಕಡೆ ಟಿ20 ಫಾರ್ಮೆಟ್ನಲ್ಲಿ ರೋಹಿತ್ ಕ್ಯಾಪ್ಟನ್ಸಿಗೆ ಥ್ರೆಟ್ ಎದುರಾಗಿದೆ ಅಂತಾನೆ ಅಂದುಕೊಳ್ಳಲಾಗಿತ್ತು. ಬಿಸಿಸಿಐ ಕೂಡ ವರ್ಲ್ಡ್ಕಪ್ಗೆ ಹಾರ್ದಿಕ್ ಪಾಂಡ್ಯಾರನ್ನ ಕ್ಯಾಪ್ಟನ್ ಮಾಡುತ್ತಾ ಅಂತಾ ಚರ್ಚೆಗಳು ಶುರುವಾಗಿತ್ತು. ಆದ್ರೆ ಕ್ಯಾಪ್ಟನ್ಸಿ ವಿಚಾರದಲ್ಲಿ ಬಿಸಿಸಿಐ ತನ್ನ ಡಿಸೀಶನ್ ಏನು ಅನ್ನೋ ಹಿಂಟ್ನ್ನ ಈ ಹಿಂದೆ ಅಫ್ಘಾನಿಸ್ತಾನ ವಿರುದ್ಧ ನಡೆದ ಮೂರು ಮ್ಯಾಚ್ಗಳ ಟಿ20 ಸೀರಿಸ್ ವೇಳೆಯೇ ನೀಡಿತ್ತು. ಆಫ್ಘನ್ ಸೀರಿಸ್ಗೆ ರೋಹಿತ್ ಶರ್ಮಾರನ್ನೇ ಕ್ಯಾಪ್ಟನ್ ಮಾಡಲಾಗಿತ್ತು. ಸುಮಾರು ಒಂದೂವರೆ ವರ್ಷದ ಬಳಿಕ ಟಿ20 ಟೀಮ್ನ್ನ ರೋಹಿತ್ ಲೀಡ್ ಮಾಡಿದ್ರು. ಆ್ಯಕ್ಚುವಲಿ ಅವಾಗ್ಲೇ ಟಿ-20 ವರ್ಲ್ಡ್ಕಪ್ನಲ್ಲೂ ರೋಹಿತ್ ಶರ್ಮಾರನ್ನೇ ಕ್ಯಾಪ್ಟನ್ ಆಗಿ ಮುಂದುವರಿಸೋಕೆ ಬಿಸಿಸಿಐ ಡಿಸೈಡ್ ಮಾಡಿಯಾಗಿತ್ತು.
ಇಲ್ಲಿ ರೋಹಿತ್ ಶರ್ಮಾರನ್ನೇ ಕ್ಯಾಪ್ಟನ್ ಆಗಿ ಕಂಟಿನ್ಯೂ ಮಾಡೋದು ಒಂದಷ್ಟು ಕಾರಣಗಳಿವೆ. ನಿಮಗೆ ಗೊತ್ತಿರೋ ಹಾಗೆ ಹಾರ್ದಿಕ್ ಪಾಂಡ್ಯ ಈಗಷ್ಟೇ ಇಂಜ್ಯೂರಿಯಿಂದ ರಿಕವರಿ ಆಗ್ತಾ ಇದ್ದಾರೆ. ಇನ್ನೂ ಕೂಡ ಕಂಪ್ಲೀಟ್ ಫಿಟ್ ಆಗಿಲ್ಲ. ಬಟ್ ವರ್ಲ್ಡ್ಕಪ್ನಲ್ಲಿ ಪಾಂಡ್ಯಾ ಕೂಡ ಆಡ್ತಿದ್ದು, ಹೀಗಾಗಿ ಈಗ ಅವರನ್ನ ವೈಸ್ಕ್ಯಾಪ್ಟನ್ ಮಾಡಲಾಗಿದೆ. ಆದ್ರೆ ವರ್ಲ್ಡ್ಕಪ್ ಟೈಮ್ನಲ್ಲಿ ಪಾಂಡ್ಯಾ ವಿಚಾರದಲ್ಲಿ ಏನು ಬೇಕಾದ್ರೂ ಆಗಬಹುದು. ಒಂದು ವೇಳೆ ಟೂರ್ನಿ ಮಧ್ಯೆಯೇ ಹಾರ್ದಿಕ್ ಮತ್ತೆ ಇಂಜ್ಯೂರಿಗೆ ಒಳಗಾದ್ರೆ ಟೀಮ್ನ್ನ ಲೀಡ್ ಮಾಡೋದು ಯಾರು ಅನ್ನೋ ಪ್ರಶ್ನೆ ಬರುತ್ತೆ. ಹಾರ್ದಿಕ್ ಪಾಂಡ್ಯಾ ಕ್ಯಾಪ್ಟನ್ ಆಗಿ ರೋಹಿತ್ ಶರ್ಮಾರನ್ನ ವೈಸ್ ಕ್ಯಾಪ್ಟನ್ ಮಾಡೋದಕ್ಕಂತೂ ಸಾಧ್ಯವಿಲ್ಲ. ಹೀಗಾಗಿ ಹಾರ್ದಿಕ್ಗೆ ಇಂಜ್ಯೂರಿಯಾದ್ರೆ ಆಗ ಕ್ಯಾಪ್ಟನ್ಸಿ ವಿಚಾರದಲ್ಲಿ ಸಾಕಷ್ಟು ಗೊಂದಲವುಂಟಾಗುತ್ತೆ. ಇಡೀ ಟೀಮ್ ಮೇಲೆಯೇ ಅದು ಎಫೆಕ್ಟ್ ಆಗೋ ಸಾಧ್ಯತೆ ಇರುತ್ತೆ. ಹೀಗಾಗಿ ವರ್ಲ್ಡ್ಕಪ್ ವೇಳೆ ಇಂಥಾ ಪ್ರಾಬ್ಲಂ ರೇಸ್ ಆಗೋದೆ ಬೇಡ ಅನ್ನೋ ಕಾರಣಕ್ಕೆ ರೋಹಿತ್ ಶರ್ಮಾರನ್ನ ಕ್ಯಾಪ್ಟನ್ ಆಗಿ ಕಂಟಿನ್ಯೂ ಮಾಡೋಕೆ ಬಿಸಿಸಿಐ ನಿರ್ಧರಿಸಿದೆ. ಒಂದು ವೇಳೆ ರೋಹಿತ್ ಶರ್ಮಾಗೆ ಏನಾದ್ರೂ ಸಮಸ್ಯೆಯಾದ್ರೆ ಆಗ ವೈಸ್ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯಾ ಟೀಮ್ನ್ನ ಲೀಡ್ ಮಾಡ್ತಾರೆ.
ಇನ್ನು ಅಫ್ಘಾನಿಸ್ತಾನ ವಿರುದ್ಧ 3ನೇ ಟಿ20 ಮ್ಯಾಚ್ನಲ್ಲಿ ರೋಹಿತ್ ಶರ್ಮಾರ ಪರ್ಫಾಮೆನ್ಸ್ ಕೂಡ ಕ್ಯಾಪ್ಟನ್ಗೆ ದೊಡ್ಡ ಪ್ಲಸ್ ಪಾಯಿಂಟ್ ಆಗಿದೆ. ಟೀಂ ಇಂಡಿಯಾ ಕೇವಲ 22 ರನ್ಗಳಿಗೆ 4 ವಿಕೆಟ್ ಕಳೆದುಕೊಂಡಿತ್ತು. ಆಗ ರೋಹಿತ್ ಸೆಂಚೂರಿ ಹೊಡೆದು ಟೀಮ್ನ್ನ ಸೇವ್ ಮಾಡಿದ್ರು. ಇಂಥಾ ಪರ್ಫಾಮೆನ್ಸ್ ನೀಡಿರೋವಾಗ ರೋಹಿತ್ ಶರ್ಮಾರನ್ನ ಜಾಸ್ತಿ ಕ್ವಶ್ಚನ್ ಮಾಡೋದು ಸರಿಯಲ್ವಲ್ಲಾ ಅಂತಾ ಬಿಸಿಸಿಐ ಸೆಕ್ರೆಟರಿ ಜೈ ಶಾ ಹೇಳಿದ್ದಾರೆ. ಹಾಗೆಯೇ ವಂಡೇ ವರ್ಲ್ಡ್ಕಪ್ನಲ್ಲಿ ರೋಹಿತ್ ಕ್ಯಾಪ್ಟನ್ಸಿಯಲ್ಲಿ ಟೀಂ ಇಂಡಿಯಾ ನಿರಂತರವಾಗಿ 10 ಮ್ಯಾಚ್ಗಳನ್ನ ಗೆದ್ದಿತ್ತು. ಫೈನಲ್ ಮ್ಯಾಚ್ ಮಾತ್ರ ಸೋತಿತ್ತು. ಹೀಗಾಗಿ ರೋಹಿತ್ ಶರ್ಮಾ ಕ್ಯಾಪ್ಟನ್ಸಿ ಏನು? ಎಷ್ಟು ಸಕ್ಸಸ್ಫುಲ್ ಆಗಿ ಟೀಮ್ನ್ನ ಲೀಡ್ ಮಾಡಿದ್ದಾರೆ ಅನ್ನೋದು ಎಲ್ಲರಿಗೂ ಗೊತ್ತಿದೆ. ಇದೇ ಕಾರಣಕ್ಕೆ ಈಗ ಟಿ20 ವರ್ಲ್ಡ್ಕಪ್ನಲ್ಲೂ ರೋಹಿತ್ ಶರ್ಮಾರನ್ನೇ ಕ್ಯಾಪ್ಟನ್ ಆಗಿ ಕಂಟಿನ್ಯೂ ಮಾಡೋಕೆ ಬಿಸಿಸಿಐ ನಿರ್ಧರಿಸಿದೆ.
ಆ್ಯಕ್ಚುವಲಿ ಟಿ20 ವರ್ಲ್ಡ್ಕಪ್ ಕ್ಯಾಪ್ಟನ್ಸಿ ವಿಚಾರವಾಗಿ ಬಿಸಿಸಿಐ ರೈಟ್ ಡಿಸೀಶನನ್ನೇ ತೆಗೆದುಕೊಂಡಿದೆ. ಯಾಕಂದ್ರೆ ಸದ್ಯ ಟೀಂ ಇಂಡಿಯಾವನ್ನ ಲೀಡ್ ಮಾಡೋಕೆ ರೋಹಿತ್ ಶರ್ಮಾಗಿಂತ ಬೆಟರ್ ಚಾಯ್ಸ್ ಇನ್ಯಾರೂ ಕೂಡ ಇಲ್ಲ. ಈಗಿನ ಕಂಡೀಷನ್ನಲ್ಲಿ ಹಾರ್ದಿಕ್ ಪಾಂಡ್ಯಾರನ್ನ ಕ್ಯಾಪ್ಟನ್ ಮಾಡೋದು ತುಂಬಾನೆ ರಿಸ್ಕೀ ಬ್ಯುಸಿನೆಸ್. ಪಾಂಡ್ಯಾ ಫಿಟ್ನೆಸ್ ಬಗ್ಗೆ ಇನ್ನೂ ಕೂಡ ಯಾವುದೇ ಗ್ಯಾರಂಟಿ ಇಲ್ಲ. ವರ್ಲ್ಡ್ಕಪ್ಗೂ ಮುನ್ನ ಐಪಿಎಲ್ನಲ್ಲಿ ಹಾರ್ದಿಕ್ ಮುಂಬೈ ಇಂಡಿಯನ್ಸ್ನ್ನ ಲೀಡ್ ಮಾಡ್ತಾರೆ. ಹೀಗಾಗಿ ಐಪಿಎಲ್ ಪರ್ಫಾಮೆನ್ಸ್ ಮತ್ತು ಫಿಟ್ನೆಸ್ ಪಾಂಡ್ಯಾಗೆ ತುಂಬಾ ಕ್ರೂಶಿಯಲ್ ಆಗುತ್ತೆ. ಇಲ್ಲಿ ಹಾರ್ದಿಕ್ ಪಾಂಡ್ಯಾ ವಿಚಾರದಲ್ಲೇ ಬಿಸಿಸಿಐಗೆ ಇನ್ನಷ್ಟು ಕ್ಲ್ಯಾರಿಟಿ ಸಿಗಬೇಕಿದೆ. ಹೀಗಿರೋವಾಗ ಅವರನ್ನ ಈಗ ಕ್ಯಾಪ್ಟನ್ ಮಾಡೋದ್ರಲ್ಲಿಯೂ ಯಾವುದೇ ಅರ್ಥ ಇಲ್ಲ. ರೋಹಿತ್ ಶರ್ಮಾರಂಥಾ ಒಬ್ಬ ಸೆಟ್ ಕ್ಯಾಪ್ಟನ್ ಇರೋವಾಗ ವರ್ಲ್ಡ್ಕಪ್ ಟೀಮ್ನ್ನ ಸೆಟ್ಅಪ್ ಮಾಡೋದು ಕೂಡ ಈಸಿಯಾಗುತ್ತೆ. ಯಾವ್ಯಾವ ಪ್ಲೇಯರ್ನ ಕೆಪಾಸಿಟಿ ಏನು ಅನ್ನೋದು ರೋಹಿತ್ಗೆ ಚೆನ್ನಾಗಿಯೇ ಗೊತ್ತಿದೆ. ರೋಹಿತ್ ಮತ್ತು ಪ್ಲೇಯರ್ಸ್ಗಳೊ ನಡುವಿನ ಅಂಡರ್ಸ್ಟ್ಯಾಂಡಿಂಗ್ ಕೂಡ ಚೆನ್ನಾಗಿದೆ. ಹೀಗಾಗಿ ವರ್ಲ್ಡ್ಕಪ್ಗೆ ರೋಹಿತ್ ಶರ್ಮಾಗೆ ತಮಗೆ ಬೇಕಾದ ಟೀಮ್ನ್ನ ಕಟ್ಟೋದು ಕೂಡ ಸುಲಭ. ಅತ್ತ ಹಾರ್ದಿಕ್ ಪಾಂಡ್ಯಾರನ್ನ ಮುಂಬೈ ಇಂಡಿಯನ್ಸ್ ಕ್ಯಾಪ್ಟನ್ ಮಾಡಿದ್ದಕ್ಕೆ ಕೆಲ ಆಟಗಾರರು ಅಪ್ಸೆಟ್ ಆಗಿದ್ದಾರೆ. ಇನ್ನು ವರ್ಲ್ಡ್ಕಪ್ನಂಥಾ ಮೇನ್ ಟೂರ್ನಿಯಲ್ಲಿ ಇಂಥಾ ಕಿರಿಕ್ ಯಾಕೆ ಅನ್ನೋ ಬಗ್ಗೆಯೂ ಯೋಚನೆ ಮಾಡಿಯೇ ಬಿಸಿಸಿಐ ರೋಹಿತ್ ಶರ್ಮಾಗೆ ಲೀಡ್ ಮಾಡುವಂತೆ ಸೂಚಿಸಿದೆ.
ಅಂತೂ ಟಿ20 ವರ್ಲ್ಡ್ಕಪ್ಗೂ ರೋಹಿತ್ ಶರ್ಮಾರನ್ನೇ ಕ್ಯಾಪ್ಟನ್ ಆಗಿ ಮುಂದುವರಿಸ್ತಾ ಇರೋದ್ರಿಂದ ಒಂದು ದೊಡ್ಡ ಮೆಸೇಜ್ ಕೂಡ ಪಾಸ್ ಆದಂತಾಗಿದೆ. ಐಪಿಎಲ್ ಫ್ರಾಂಚೈಸಿಗಳ ಡಿಸೀಶನ್ಸ್ ಯಾವುದೇ ಕಾರಣಕ್ಕೂ ಬಿಸಿಸಿಐ ಮೇಲೆ ಎಫೆಕ್ಟ್ ಆಗಿಲ್ಲ. ಫ್ರಾಂಚೈಸಿಗಳ ನಡೆ ನೋಡ್ಕೊಂಡು ಟೀಂ ಇಂಡಿಯಾದಲ್ಲಿ ನಿರ್ಧಾರಗಳನ್ನ ತಗೊಳ್ಳೋದಿಲ್ಲ ಅಂತಾ ಈಗ ಬಿಸಿಸಿಐ ರೋಹಿತ್ ಮೂಲಕ ಸ್ಪಷ್ಟಪಡಿಸಿದೆ. ಫ್ರಾಂಚೈಸಿ ಕ್ರಿಕೆಟೇ ಬೇರೆ, ಇಂಟರ್ನ್ಯಾಷನಲ್ ಕ್ರಿಕೆಟೇ ಬೇರೆ. ಹೀಗಾಗಿ ತಮ್ಮ ಡಿಸೀಶನ್ಗಳೇನಿದ್ರೂ ಟೀಂ ಇಂಡಿಯಾದ ಪರ್ಸ್ಪೆಕ್ಟಿವ್ನಲ್ಲೇ ಇರುತ್ತೆ ಅಂತಾ ಬಿಸಿಸಿಐ ಈಗ ಕ್ಲೀಯರ್ ಆಗಿ ಹೇಳಿದೆ. ಯಾವಾಗ ಬಿಸಿಸಿಐ ರೋಹಿತ್ ಶರ್ಮಾರನ್ನೇ ಟಿ20 ವರ್ಲ್ಡ್ಕಪ್ ಕ್ಯಾಪ್ಟನ್ ಆಗಿ ಘೋಷಿಸ್ತೋ ಅತ್ತ ರೋಹಿತ್ ಫ್ಯಾನ್ಸ್ ಮತ್ತೆ ಮುಂಬೈ ಇಂಡಿಯನ್ಸ್ನ್ನ ಟ್ರೋಲ್ ಮಾಡೋಕೆ ಶುರು ಮಾಡಿದ್ದಾರೆ. ರೋಹಿತ್ ಶರ್ಮಾಗೆ ಬಿಸಿಸಿಐ ಮರ್ಯಾದೆ ಕೊಟ್ಟಿದೆ. ಆದ್ರೆ ಐದು ಬಾರಿ ಟ್ರೋಫಿ ಗೆಲ್ಲಿಸಿದ ಕ್ಯಾಪ್ಟನ್ನನ್ನ ಮುಂಬೈ ಇಂಡಿಯನ್ಸ್ ಮ್ಯಾನೇಜ್ಮೆಂಟ್ ಮರೆತಿದೆ ಅಂತಾ ಸಾಕಷ್ಟು ಮಂದಿ ಕಾಮೆಂಟ್ಸ್ ಮಾಡ್ತಿದ್ದಾರೆ.
ಇನ್ನು ವಿರಾಟ್ ಕೊಹ್ಲಿ ಕೂಡ ಟಿ20 ವರ್ಲ್ಡ್ಕಪ್ನಲ್ಲಿ ಆಡೋದು ಆಲ್ಮೋಸ್ಟ್ ಗ್ಯಾರಂಟಿ. ಆದ್ರೆ ಈ ಬಗ್ಗೆ ಬಿಸಿಸಿಐ ಯಾವುದೇ ಅಫೀಶಿಯಲ್ ಸ್ಟೇಟ್ಮೆಂಟ್ನ್ನ ಕೊಟ್ಟಿಲ್ಲ. ಐಪಿಎಲ್ನಲ್ಲಿ ವಿರಾಟ್ ಕೊಹ್ಲಿಯ ಪರ್ಫಾಮೆನ್ಸ್ ಮ್ಯಾಟರ್ ಆಗಿಯೇ ಆಗುತ್ತೆ. ಬಟ್ ಈ ಹಿಂದೆ ವಿರಾಟ್ ಕೊಹ್ಲಿ ವರ್ಲ್ಡ್ಕಪ್ ಟೀಮ್ನಲ್ಲಿ ಬೇಕೇಬೇಕು ಅನ್ನೋದಾಗಿ ರೋಹಿತ್ ಶರ್ಮಾ ಬಿಸಿಸಿಐ ಜೊತೆಗಿನ ಮೀಟಿಂಗ್ ವೇಳೆ ಹೇಳಿದ್ರು. ಇದ್ರ ಜೊತೆಗೆ ಟಿ20 ವರ್ಲ್ಡ್ಕಪ್ನಲ್ಲೂ ರಾಹುಲ್ ದ್ರಾವಿಡ್ ಟೀಮ್ ಇಂಡಿಯಾ ಕೋಚ್ ಆಗಿ ಮುಂದುವರೀತಾರೆ. ಸೋ ಕೋಚಿಂಗ್ ಸ್ಟಾಫ್ನಲ್ಲೂ ಯಾವುದೇ ಚೇಂಜೆಸ್ಗಳು ಆಗೋದಿಲ್ಲ. ಬಟ್ ಟಿ20 ವರ್ಲ್ಡ್ಕಪ್ ಬಳಿಕ ಗೆದ್ರೂ, ಸೋತ್ರೂ ಸಾಕಷ್ಟು ಬದಲಾವಣೆಗಳಾಗೋದು ಗ್ಯಾರಂಟಿ. ರೋಹಿತ್ ಶರ್ಮಾ ಪಾಲಿಗೆ ಕೇವಲ ಕ್ಯಾಪ್ಟನ್ ಆಗಿಯಷ್ಟೇ ಅಲ್ಲ, ಪ್ಲೇಯರ್ ಆಗಿಯೂ ಇದು ಕೊನೆಯ ಟಿ20 ವರ್ಲ್ಡ್ಕಪ್ ಟೂರ್ನಿಯಾಗಲಿದೆ. ವಿಶ್ವಕಪ್ ಬಳಿಕ ರೋಹಿತ್ ಟಿ-20ಗೆ ಗುಡ್ಬೈ ಹೇಳಬಹುದು. ಹಾರ್ದಿಕ್ ಪಾಂಡ್ಯಾ ಟೀಂ ಇಂಡಿಯಾ ಕ್ಯಾಪ್ಟನ್ ಆಗಬಹುದು. 2007ರಲ್ಲಿ ಧೋನಿ ಕ್ಯಾಪ್ಟನ್ಸಿಯಲ್ಲಿ ಟಿ20 ವರ್ಲ್ಡ್ಕಪ್ ಗೆದ್ದಾಗ ರೋಹಿತ್ ಶರ್ಮಾ ಕೂಡ ಟೀಮ್ನಲ್ಲಿದ್ರು. ಇದೀಗ ಕ್ಯಾಪ್ಟನ್ ಆಗಿ ವರ್ಲ್ಡ್ಕಪ್ ಗೆಲ್ಲೋ ಟೈಮ್ ಬಂದಿದೆ.