ಮಾಲ್ಡೀವ್ಸ್ ನಲ್ಲಿ ಭೀಕರ ಅಗ್ನಿ ದುರಂತ: 9 ಭಾರತೀಯರು ಸೇರಿ 10 ಮಂದಿ ಸಜೀವ ದಹನ

ಮಾಲ್ಡೀವ್ಸ್ ನಲ್ಲಿ ಭೀಕರ ಅಗ್ನಿ ದುರಂತ: 9 ಭಾರತೀಯರು ಸೇರಿ 10 ಮಂದಿ ಸಜೀವ ದಹನ

ಮಾಲೆ: ಮಾಲ್ಡೀವ್ಸ್ ರಾಜಧಾನಿ ಮಾಲೆಯಲ್ಲಿನ ವಸತಿಗೃಹವೊಂದರಲ್ಲಿ ಭೀಕರ ಅಗ್ನಿ ದುರಂತ ಸಂಭವಿಸಿ, 9 ಭಾರತೀಯರು ಸೇರಿ ಒಟ್ಟು ಹತ್ತು ಮಂದಿ ಸಜೀವ ದಹನವಾದ ಘಟನೆ ಗುರುವಾರ ನಡೆದಿದೆ.

ಇದನ್ನೂ ಓದಿ: ಸೇತುವೆ ದುರಂತದಲ್ಲಿ ನದಿಗೆ ಹಾರಿ ಜೀವ ಉಳಿಸಿದವನಿಗೆ ಬಿಜೆಪಿ ಟಿಕೆಟ್!

ಈ ಕಟ್ಟಡದಲ್ಲಿ ವಿದೇಶಿ ಕಾರ್ಮಿಕರು ವಾಸವಾಗಿದ್ದು, ನೆಲಮಹಡಿಯಲ್ಲಿರುವ ವಾಹನ ದುರಸ್ತಿ ಗ್ಯಾರೇಜ್ ನಿಂದ ಬೆಂಕಿ ಅನಾಹುತ ಉಂಟಾಗಿದೆ. ಕೂಡಲೇ ಘಟನಾ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿಗಳು ದೌಡಾಯಿಸಿದ್ದು, ಬೆಂಕಿ ನಂದಿಸಲು ಹರಸಾಹಸ ಪಡಬೇಕಾಯಿತು. ಆ ವೇಳೆಗಾಗಲೇ 10 ಮಂದಿ ಸಾವನ್ನಪ್ಪಿದ್ದರು ಎಂದು ಅಗ್ನಿಶಾಮಕ ಸಿಬ್ಬಂದಿಗಳು ತಿಳಿಸಿದ್ದಾರೆ.

ಬೆಂಕಿ ದುರಂತದಿಂದ ಧ್ವಂಸವಾದ ಕಟ್ಟಡ ಮೇಲಿನ ಅಂತಸ್ತಿನಿಂದ 10 ಮೃತದೇಹಗಳನ್ನು ಹೊರತೆಗೆಯಲಾಗಿದೆ. ಬೆಂಕಿ ದುರಂತದಲ್ಲಿ 9 ಭಾರತೀಯ ಪ್ರಜೆಗಳು ಹಾಗೂ ಓರ್ವ ಬಾಂಗ್ಲಾ ಪ್ರಜೆ ಮೃತಪಟ್ಟವರು ಎಂದು ಅಧಿಕಾರಿಗಳು ಪ್ರಾಥಮಿಕ ಮಾಹಿತಿ ನೀಡಿದ್ದಾರೆ.

suddiyaana