ವಯಾಗ್ರ ಸೇವಿಸಿದ ಗಂಡನಿಂದಾಗಿ ಮೊದಲ ರಾತ್ರಿಯಾಯ್ತು ಕರಾಳ ರಾತ್ರಿ – ವರನ ಅಸಹಜ ಕಾಮಕ್ಕೆ ಫಸ್ಟ್ ನೈಟ್‌ಗೆ ವಧು ಬಲಿ

ವಯಾಗ್ರ ಸೇವಿಸಿದ ಗಂಡನಿಂದಾಗಿ ಮೊದಲ ರಾತ್ರಿಯಾಯ್ತು ಕರಾಳ ರಾತ್ರಿ – ವರನ ಅಸಹಜ ಕಾಮಕ್ಕೆ ಫಸ್ಟ್ ನೈಟ್‌ಗೆ ವಧು ಬಲಿ

ಮದುವೆಯ ಕನಸು ನನಸಾಗಿತ್ತು. ಮೊದಲ ರಾತ್ರಿಯ ಹೊಂಗನಸು ಶುರುವಾಗಿತ್ತು. ಮದುಮಗಳು ತನ್ನ ಹಾಗೂ ಗಂಡನ ಮೊದಲ ಮಿಲನದ ರಾತ್ರಿಗೆ ರೆಡಿಯಾಗಿದ್ದಳು. ಹಲವು ಕನಸುಗಳನ್ನು ಮನಸಿನಲ್ಲಿ ತುಂಬಿಕೊಂಡು ಮೊದಲ ರಾತ್ರಿಯ ಕೊಠಡಿಗೆ ಬಂದಿದ್ದಳು. ಆದರೆ, ಮದುಮಗನ ಮೋಜಿಗೆ ವಧು ಬಲಿಯಾಗಿ ಹೋಗಿದ್ದಾಳೆ..

ಇದನ್ನೂ ಓದಿ: ಪರಸ್ಪರ ಕೈ ಹಿಡಿದುಕೊಂಡು ದಯಾಮರಣಕ್ಕೆ ಶರಣಾದ ಹಾಲೆಂಡ್‌ ನ ಮಾಜಿ ಪ್ರಧಾನಿ ದಂಪತಿ!

ಮೊದಲ ರಾತ್ರಿಯೇ ವಧುವಿನ ಪಾಲಿಗೆ ಕರಾಳ ರಾತ್ರಿಯಾದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಮೊದಲ ರಾತ್ರಿ, ಪತಿ ಮಹಾಶಯ ವಯಾಗ್ರ ಮಾತ್ರೆ ಬಳಸಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದ. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಮೃತಪಟ್ಟಿದ್ದಾಳೆ. 3 ದಿನಗಳ ಕಾಲ ತೀವ್ರ ರಕ್ತಸ್ರಾವ ಹಾಗೂ ಸೋಂಕಿನಿಂದ ಬಳಲುತ್ತಿದ್ದ ಸಂತ್ರಸ್ತೆ ಕೊನೆಗೂ ಸಾವನ್ನಪ್ಪಿದ್ದಾಳೆ. ಉತ್ತರ ಪ್ರದೇಶದ ಹಮೀರ್ಪುರದಲ್ಲಿ ಈ ಘಟನೆ ನಡೆದಿದೆ. ಹಮೀರ್ಪುರದಲ್ಲಿ ಫೆಬ್ರವರಿ 3 ರಂದು ನತದೃಷ್ಟೆಯ ಮದುವೆ ನಡೆದಿತ್ತು. ಫಸ್ಟ್ ನೈಟ್ ಗಾಗಿ ವರ ವಯಾಗ್ರ ಮಾತ್ರೆ ತೆಗೆದುಕೊಂಡಿದ್ದ. ನಂತರ ಅಸಹಜ ಕಾಮಕ್ರಿಯೆಗೆ ಮುಂದಾಗಿದ್ದ. ಇದರಿಂದಾಗಿ ವಧುವಿನ ಖಾಸಗಿ ಭಾಗಗಳಿಗೆ ಗಂಭೀರ ಗಾಯಗಳಾಗಿದೆ. ರಕ್ತಸ್ರಾವ ಮತ್ತು ತೀವ್ರ ಗಾಯಗಳಿಂದ ವಧು ತೀವ್ರವಾಗಿ ಅಸ್ವಸ್ಥಳಾಗಿದ್ದಾಳೆ. ಗಂಭೀರ ಪರಿಸ್ಥಿತಿಯಲ್ಲಿದ್ದ ವಧುವನ್ನು ತಕ್ಷಣ ಕಾನ್ಪುರ ಜಿಲ್ಲೆಯ ಖಾಸಗಿ ನರ್ಸಿಂಗ್ ಹೋಂಗೆ ಸೇರಿಸಲಾಗಿತ್ತು. ಫೆಬ್ರವರಿ 7 ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೇ ಫೆಬ್ರವರಿ 10 ರ ಶನಿವಾರದಂದು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಸಂತ್ರಸ್ತೆಯ ಸ್ಥಿತಿ ಗ್ಯಾಂಗ್ ರೇಪ್‌ನಷ್ಟು ಕೆಟ್ಟದಾಗಿತ್ತು ಎಂದು ಚಿಕಿತ್ಸೆ ನೀಡಿದ ವೈದ್ಯರು ಹೇಳಿದ್ದಾರೆ.

ಮೃತರ ಸಂಬಂಧಿಕರು ಈಗಾಗಲೇ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದಾರೆ. ಪತಿ ಹಾಗೂ ಕುಟುಂಬದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಇದನ್ನು ತಿಳಿದ ವರ ತನ್ನ ಹೆತ್ತವರೊಂದಿಗೆ ಪರಾರಿಯಾಗಿದ್ದಾನೆ.

Sulekha