5 ವರ್ಷದಲ್ಲಿ ಒಂದೂ ಮಾತು ಆಡಲಿಲ್ಲ ನಾಲ್ವರು ಸಂಸದರು – ಕರ್ನಾಟಕದ ಮೌನಿ ಬಾಬಾಗಳು ಸಂಸದರಾಗಿ ಸಾಧಿಸಿದ್ದೇನು?

5 ವರ್ಷದಲ್ಲಿ ಒಂದೂ ಮಾತು ಆಡಲಿಲ್ಲ ನಾಲ್ವರು ಸಂಸದರು – ಕರ್ನಾಟಕದ ಮೌನಿ ಬಾಬಾಗಳು ಸಂಸದರಾಗಿ ಸಾಧಿಸಿದ್ದೇನು?

ಕ್ಷೇತ್ರದ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಲು ಮತದಾರರು ಲೋಕಸಭೆ ಮತ್ತು ವಿಧಾನಸಭೆಗೆ ಪ್ರತಿನಿಧಿಗಳನ್ನ ಆರಿಸಿ ಕಳಿಸ್ತಾರೆ. ಆದ್ರೆ ಕಳೆದ ಐದು ವರ್ಷದಲ್ಲಿ ಲೋಕಸಭೆಯ ಒಟ್ಟು 543 ಸದಸ್ಯರಲ್ಲಿ ಒಂಬತ್ತು ಸಂಸದರು ಸದನದಲ್ಲಿ ಒಮ್ಮೆಯೂ ಮಾತನಾಡಿಲ್ಲ. ಇದರಲ್ಲಿ ಕರ್ನಾಟಕದ ನಾಲ್ಕು ಸಂಸದರೂ ಕೂಡಾ ಸೇರಿದ್ದಾರೆ.

ಇದನ್ನೂ ಓದಿ: ಸಿಕ್ಸರ್ ಸಿಂಗ್ ಚುನಾವಣಾ ಅಖಾಡಕ್ಕೆ ಎಂಟ್ರಿ – ಬಿಜೆಪಿಯಿಂದ ಲೋಕಸಭಾ ಚುನಾವಣೆಗೆ ನಿಲ್ಲುತ್ತಾರಾ ಯುವರಾಜ್ ಸಿಂಗ್?

ಕಳೆದ ಐದು ವರ್ಷಗಳು. 1,354 ಗಂಟೆಗಳು.. ಲೋಕಸಭೆ ಅಧಿವೇಶನದಲ್ಲಿ ನಾನಾ ರೀತಿಯ ಚರ್ಚೆಗಳು.. ಅವರವರ ರಾಜ್ಯದ ಸಮಸ್ಯೆಗಳು.. ಆದರೆ, ನಮ್ಮ ಕರ್ನಾಟಕದಿಂದ ಲೋಕಸಭೆಗೆ ಆಯ್ಕೆಯಾದ ಸಂಸದರು ಮಾತ್ರ ಮೌನಿ ಬಾಬಾಗಳು. ಹೌದು.. ಕರ್ನಾಟಕದ ನಾಲ್ವರು ಬಿಜೆಪಿ ಸಂಸದರು ಸೇರಿದಂತೆ ಒಂಬತ್ತು ಸಂಸದರು ಈ 5 ವರ್ಷದ ಅವಧಿಯಲ್ಲಿ ತುಟಿ ಬಿಚ್ಚಲೇ ಇಲ್ಲ. ಒಂದಕ್ಷರವನ್ನೂ ಮಾತನಾಡಲಿಲ್ಲ. ಇದರ ಜೊತೆಗೆ  ಯಾವುದೇ ಚರ್ಚೆಯಲ್ಲೂ ಭಾಗವಹಿಸಲಿಲ್ಲ.

ಬಿಜೆಪಿ ಸಂಸದರಾದ ಚಿಕ್ಕಬಳ್ಳಾಪುರದ ಬಿಎನ್ ಬಚ್ಚೇಗೌಡ, ಉತ್ತರ ಕನ್ನಡದ ಅನಂತ್ ಕುಮಾರ್ ಹೆಗ್ಡೆ, ಚಾಮರಾಜನಗರದ ವಿ. ಶ್ರೀನಿವಾಸ ಪ್ರಸಾದ್, ಬಿಜಾಪುರದ ರಮೇಶ್ ಸಿ ಜಿಗಜಿಣಗಿ ಅವರು ಒಮ್ಮೆಯೂ ಸಂಸತ್​ನಲ್ಲಿ ಮಾತನಾಡಿಲ್ಲ. ಯಾರಾದರೂ ಮಾತಾಡಿಲ್ಲ ಅಂದರೆ ನಂಬಬಹುದು. ಆದರೆ, ಮಾತೇ ಬಂಡವಾಳ ಮಾಡಿಕೊಂಡಿರುವ, ಹಿಂದೂ ಫೈರ್ ಬ್ರಾಂಡ್, ಹುಲಿ ಎಂದೇ ಅಭಿಮಾನಿಗಳಿಂದ ಕರೆಸಿಕೊಂಡಿರುವ ಅನಂತ್ ಕುಮಾರ್ ಹೆಗ್ಡೆ ಮೌನ, ಸಂಸತ್‌ನಲ್ಲಿ ಒಂದೂ ಪ್ರಶ್ನೆ ಮಾಡದೇ ಇರುವುದು ನಿಜಕ್ಕೂ ಅಚ್ಚರಿ ಮೂಡಿಸಿದೆ.

ಹಾಗೇ ಸಿನಿಮಾಗಳಲ್ಲಿ ಡೈಲಾಗ್ ಹೊಡೆಯುವ ಸನ್ನಿ ಡಿಯೋಲ್ ಮತ್ತು ಶತ್ರುಘ್ನ ಸಿನ್ಹಾ ಅವರು ಲೋಕಸಭೆಯಲ್ಲಿ ತುಟಿ ಬಿಚ್ಚಿಲ್ಲ. ಸಿನಿಮಾದಲ್ಲಿ ಮಾತ್ರ ಅಭಿವೃದ್ಧಿ ಬಗ್ಗೆ ಮಾತಾನಾಡುವ, ಜನರ ಬಗ್ಗೆ ಕಾಳಜಿ ತೋರಿಸುವ ನಟರು, ರಿಯಲ್ ಲೈಫ್ ನಲ್ಲಿ ಮಾತ್ರ ಮೌನಿ ಬಾಬಾಗಳು.  ಇನ್ನು ಪ್ರಧಾನ್ ಬರುವಾ, ಅತುಲ್ ಕುಮಾರ್ ಸಿಂಗ್, ದಿಬ್ಯೇಂದು ಅಧಿಕಾರಿ ಕೂಡ ಲೋಕಸಭೆಯಲ್ಲಿ ಪ್ರಶ್ನೆಯನ್ನೇ ಕೇಳಿಲ್ಲ.

Sulekha