ಡಿಕೆಶಿಯೇ ನಂ.1 ಶ್ರೀಮಂತ ಶಾಸಕ! – ಟಾಪ್ 10ರಲ್ಲಿ ಕರ್ನಾಟಕದ ನಾಲ್ವರು ಶಾಸಕರು

ಡಿಕೆಶಿಯೇ ನಂ.1 ಶ್ರೀಮಂತ ಶಾಸಕ! – ಟಾಪ್ 10ರಲ್ಲಿ ಕರ್ನಾಟಕದ ನಾಲ್ವರು ಶಾಸಕರು

ನಮ್ಮ ದೇಶದಲ್ಲಿ ಶ್ರೀಮಂತ ರಾಜಕಾರಣಿಗಳಿಗೇನು ಕೊರತೆ ಇಲ್ಲ. ಅದ್ರಲ್ಲೂ ಕರ್ನಾಟಕದ ಹೆಚ್ಚು ನಾಯಕರು ದೇಶದಲ್ಲಿ ಶ್ರೀಮಂತ ಶಾಸಕರ ಪಟ್ಟಿಯಲ್ಲಿದ್ದಾರೆ. ಯಾರೆಲ್ಲಾ ಇದ್ದಾರೆ ಅನ್ನೋ ಮಾಹಿತಿ ಇಲ್ಲಿದೆ..

ಅಸೋಸಿಯೇಟ್ ಆಫ್ ಡೆಮಾಕ್ರಟಿಕ್ ರಿಫಾರ್ಮ್ ವರದಿಯೊಂದನ್ನು ಬಿಡುಗಡೆ ಮಾಡಿದೆ. ದೇಶದ 28 ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶ ಸೇರಿದಂತೆ ಒಟ್ಟು 4,001 ಹಾಲಿ ಶಾಸಕರ ಆಸ್ತಿ ವಿವರವನ್ನು ಬಹಿರಂಗ ಪಡಿಸಿದೆ. ಟಾಪ್ ಟೆನ್ ಶ್ರೀಮಂತ ಶಾಸಕರ ಪಟ್ಟಿಯಲ್ಲಿ ನಾಲ್ವರು ಶಾಸಕರು ಕರ್ನಾಟಕದರೇ ಆಗಿದ್ದಾರೆ. ನಾಲ್ವರ ಪೈಕಿ ಮೂವರು ಕಾಂಗ್ರೆಸ್ ಶಾಸಕರಿದ್ರೆ ಇನ್ನೋರ್ವರು ಪಕ್ಷೇತರ ಶಾಸಕರಿದ್ದಾರೆ.

ಇದನ್ನೂ ಓದಿ: ನಟ ನಾಗಚೈತನ್ಯಗೆ ಎರಡನೇ ಮದುವೆ – ನಾಗರ್ಜುನ ಕುಟುಂಬ ಕುಡಿ ಜೊತೆ ಮದುವೆಗೆ ಸಿದ್ಧತೆ?

ದೇಶದ ಕುಬೇರ ಶಾಸಕರ ಪಟ್ಟಿಯಲ್ಲಿ ಫಸ್ಟ್ ಪ್ಲೇಸ್​ನಲ್ಲಿ ಇರೋದೇ ನಮ್ಮ ರಾಜ್ಯದ ಡಿಸಿಎಂ ಡಿ.ಕೆ ಶಿವಕುಮಾರ್. 2023ರ ವಿಧಾನಸಭಾ ಚುನಾವಣೆಯಲ್ಲಿ ಕನಕಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಡಿಕೆಶಿ ತಮ್ಮ ಆಸ್ತಿ ವಿವರಗಳನ್ನು ನೀಡಿದ್ರು. ಅವ್ರ ಒಟ್ಟು ಆಸ್ತಿ 1,413 ಕೋಟಿ ರೂಪಾಯಿಗೂ ಹೆಚ್ಚಿದೆ. ಈ ಪೈಕಿ 503 ಕೋಟಿ ಸಾಲ ಇದೆ ಎಂದು ಹೇಳಿಕೊಂಡಿದ್ದಾರೆ. ಟಾಪ್ 2 ನಲ್ಲಿ ಗೌರಿಬಿದನೂರು ಪಕ್ಷೇತರ ಶಾಸಕ ಕೆ.ಹೆಚ್. ಪುಟ್ಟಸ್ವಾಮಿ ಗೌಡ ಇದ್ದಾರೆ. ಇವ್ರ ಆಸ್ತಿ 1,267 ಕೋಟಿಗೂ ಅಧಿಕ. ಇನ್ನು ಟಾಪ್ 3 ನಲ್ಲಿ ಬೆಂಗಳೂರಿನ ಗೋವಿಂದರಾಜ ನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಪ್ರಿಯಾಕೃಷ್ಣ ಇದ್ದು, 1,156 ಕೋಟಿಗೂ ಹೆಚ್ಚು ಮೌಲ್ಯದ ಆಸ್ತಿ ಹೊಂದಿದ್ದಾರೆ. ಈ ಪೈಕಿ 947 ಕೋಟಿ ರೂಪಾಯಿ ಸಾಲ ಇದ್ಯಂತೆ.

ಇನ್ನು ಟಾಪ್ 4ನಲ್ಲಿ ಆಂಧ್ರಪ್ರದೇಶದ ಕುಪ್ಪಂ ಜಿಲ್ಲೆಯ ಟಿಟಿಡಿ ಪಕ್ಷದ ಶಾಸಕ ಎನ್.ಚಂದ್ರಬಾಬು ನಾಯ್ಡು, ಟಾಪ್ 5ನಲ್ಲಿ ಗುಜರಾತ್​ನ ಮನ್ಸಾ ಕ್ಷೇತ್ರದ ಬಿಜೆಪಿ ಶಾಸಕ ಜಯಂತಿಭಾಯ್ ಪಟೇಲ್ ಇದ್ದಾರೆ. 6ನೇ ಸ್ಥಾನದಲ್ಲಿ ಬೆಂಗಳೂರಿನ ಹೆಬ್ಬಾಳ ಕ್ಷೇತ್ರದ ಕಾಂಗ್ರೆಸ್ ಶಾಸಕ ಭೈರತಿ ಸುರೇಶ್ ಇದ್ದು, 648 ಕೋಟಿಗೂ ಹೆಚ್ಚು ಮೌಲ್ಯದ ಆಸ್ತಿ ಹೊಂದಿದ್ದಾರೆ. ಟಾಪ್ 7ನಲ್ಲಿ ಆಂಧ್ರದ ಪುಲಿವೆಂದುಲ ಕ್ಷೇತ್ರ ಪ್ರತಿನಿಧಿಸುವ ಶಾಸಕ ಹಾಗೂ ಹಾಲಿ ಸಿಎಂ ವೈ.ಎಸ್. ಜಗನ್ ಮೋಹನ್ ರೆಡ್ಡಿ ಇದ್ದಾರೆ.  8ನೇ ಸ್ಥಾನದಲ್ಲಿ ಮಹಾರಾಷ್ಟ್ರದ ಮುಂಬೈ ಉಪನಗರದ ಘಾಟ್ಕೋಪರ್ ಪೂರ್ವ ಕ್ಷೇತ್ರದ ಬಿಜೆಪಿ ಶಾಸಕ ಪರಾಗ್ ಶಾ ಇದ್ದಾರೆ. ಇನ್ನು ಛತ್ತೀಸ್‌ಘಡ್ ನ ಅಂಬಿಕಾಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ ಟಿ.ಎಸ್ ಬಾಬಾ 9ನೇ ಸ್ಥಾನದಲ್ಲಿದ್ದಾರೆ. ಟಾಪ್ 10ನಲ್ಲಿ ಮಹಾರಾಷ್ಟ್ರದ ಮಲಬಾರ್ ಹಿಲ್ ಕ್ಷೇತ್ರದ ಬಿಜೆಪಿ ಶಾಸಕ ಮಂಗಲ್ ಪ್ರಭಾತ್ ಲೋಧಾ ಇದ್ದಾರೆ. ಕರ್ನಾಟಕದ ಮೂವರು ಶಾಸಕರು ಸಾವಿರ ಕೋಟಿಗೂ ಹೆಚ್ಚು ಆಸ್ತಿ ಹೊಂದಿರೋದು ವಿಶೇಷವಾಗಿದೆ.

Shwetha M