ದೇವರೆದುರು ಕಿವಿ ಹಿಡಿದು ಬಸ್ಕಿ ಹೊಡೆಯುವುದೇಕೆ? – ಶಿಕ್ಷೆಯಲ್ಲೂ ಇದೆ ಯಾರಿಗೂ ಗೊತ್ತಿರದ ಲಾಭ!

ದೇವರೆದುರು ಕಿವಿ ಹಿಡಿದು ಬಸ್ಕಿ ಹೊಡೆಯುವುದೇಕೆ? – ಶಿಕ್ಷೆಯಲ್ಲೂ ಇದೆ ಯಾರಿಗೂ ಗೊತ್ತಿರದ ಲಾಭ!

ಶಾಲೆಯಲ್ಲಿ ತಪ್ಪು ಮಾಡುವ ವಿದ್ಯಾರ್ಥಿಗಳಿಗೆ ಶಿಕ್ಷಕರು ಬಸ್ಕಿ ಹೊಡೆಸುತ್ತಾರೆ. ಇನ್ನು ದೇವಸ್ಥಾನಗಳಲ್ಲೂ‌ ದೇವರ ಮುಂದೆ ಬಹಳ ಜನರು ಬಸ್ಕಿ ಹೊಡೆಯೋದನ್ನ ನೋಡಿರ್ತೀರಿ.. ಅಷ್ಟಕ್ಕೂ ದೇವರ ಮುಂದೆ ಬಸ್ಕಿ ಹೊಡೆದ್ರೆ ದೇವರ ಅನುಗ್ರಹ ಸಿಗುತ್ತಾ? ಬಸ್ಕಿ ಹೊಡೆಯುವುದು ಆರೋಗ್ಯಕ್ಕೆ‌ ಒಳ್ಳೆದಾ ಕೆಟ್ಟದ್ದಾ ಅನ್ನೋದ್ರ ಬಗ್ಗೆ ಮಾಹಿತಿ ಇಲ್ಲಿದೆ..

ದೇವಸ್ಥಾನಗಳಲ್ಲಿ ಬಹಳ ಜನರು ಎರಡೂ ಕೈಹಿಡಿದು ಬಸ್ಕಿ ಹೊಡೆಯುತ್ತಾರೆ. ಶಾಲೆಯಲ್ಲಿ ತಪ್ಪು ಮಾಡುವ ವಿದ್ಯಾರ್ಥಿಗಳಿಗೆ ಶಿಕ್ಷಕರು ಬಸ್ಕಿ ಹೊಡೆಸುತ್ತಾರೆ. ಇದಕ್ಕೆ ಉಟಾಬೈಸ್, ಉಟಕ್-ಬೈಠಕ್, ಸಿಟ್‌ಅಪ್ಸ್  ಮುಂತಾದ ಹೆಸರುಗಳಿವೆ. ಬಸ್ಕಿ ಹೊಡೆಯೋದ್ರ ಹಿಂದೆಯೂ ವೈಜ್ಞಾನಿಕ ಕಾರಣವಿದೆ. ಹಿಂದಿನಿಂದಲೂ ಭಾರತದ ಶಾಲೆಗಳಲ್ಲಿ ಮಕ್ಕಳ ತಪ್ಪಿಗೆ ಶಿಕ್ಷೆಯೆಂದರೆ ಅದು ಬಸ್ಕಿ ಹೊಡೆಸುವುದು. ಇದು ಕೇವಲ ಶಿಕ್ಷೆಯಲ್ಲ, ಬದಲಿಗೆ ಇದು ‘ಸೂಪರ್ ಬ್ರೈನ್ ಯೋಗ’ ಕೂಡಾ ಅನ್ನೋದು ಶಿಕ್ಷೆ ಕೊಡುವ ಬಹುತೇಕರಿಗೂ ಗೊತ್ತಿರಲಿಕ್ಕಿಲ್ಲ.

ಇದನ್ನೂ ಓದಿ: ರವೀಂದ್ರ ಜಡೇಜಾ ವೈಯಕ್ತಿಕ ಬದುಕಲ್ಲಿ ಬಿರುಗಾಳಿ – ಪತ್ನಿ ವಿರುದ್ಧ ತಂದೆಯ ಆರೋಪಕ್ಕೆ ತತ್ತರಿಸಿದ ಟೀಮ್ ಇಂಡಿಯಾ ಆಲ್‌ರೌಂಡರ್

ಬಸ್ಕಿ ಹೊಡೆಯುವುದರಿಂದ ಮೆದುಳಿನಲ್ಲಿ ಬೂದು ದ್ರವ್ಯವು ಹೆಚ್ಚಾಗುತ್ತದೆ. ಹಾಗೂ ಮೆದುಳು ಚುರುಕಾಗುತ್ತದೆ.  ಮೆದುಳು ನಮ್ಮ ಆಲೋಚನಾ ಶಕ್ತಿಯ ಕೇಂದ್ರ. ಬಸ್ಕಿ ಹೊಡೆಯುವಾಗ ಉಸಿರಾಟ ಮತ್ತು ಆಕ್ಯುಪ್ರೆಶರ್​​ನಿಂದಾಗಿ ಮೆದುಳಿನ ಬಲಭಾಗವು ಉತ್ತೇಜಿಸಲ್ಪಡುತ್ತದೆ. ಪರಿಣಾಮವಾಗಿ ಪಿಟ್ಯುಟರಿ ಗ್ರಂಥಿಯು ಶಕ್ತಿಯುತವಾಗುತ್ತದೆ. ಇದು ಮೆದುಳಿನಲ್ಲಿ ಆಲ್ಫಾ ತರಂಗಗಳನ್ನು ಸಕ್ರಿಯಗೊಳಿಸುತ್ತದೆ. ಇದು ವಾಸ್ತವವಾಗಿ ಏಕಾಗ್ರತೆಯನ್ನು ಹೆಚ್ಚಿಸಲು ಸಹಕಾರಿಯಾಗಿದೆ. ಹಾಗೂ ನಮ್ಮ ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ ಎಂದು ಅಧ್ಯಯನಗಳು ಸಾಬೀತುಪಡಿಸಿವೆ.

ಇನ್ನು ಬಸ್ಕಿ ಹೊಡೆಯೋದು ಚಿಂತನಾ ಸಾಮಾರ್ಥ್ಯವನ್ನು ಉತ್ತೇಜಿಸುತ್ತದೆ. ಹೆಚ್ಚು ಸೃಜನಶೀಲರನ್ನಾಗಿಸುತ್ತದೆ. ಗಮನ ಮತ್ತು ಏಕಾಗ್ರತೆಯನ್ನು ಸುಧಾರಿಸುತ್ತದೆ ಒತ್ತಡವನ್ನು ನಿವಾರಿಸಲು ಸಹಕಾರಿಯಾಗಿದೆ. ಸ್ಮರಣಾ ಶಕ್ತಿಯನ್ನು ಹೆಚ್ಚಿಸುತ್ತದೆ. ಸೂಪರ್ ಬ್ರೈನ್ ಯೋಗದಿಂದ ನಿಮ್ಮ ಎಡ ಮತ್ತು ಬಲ ಮೆದುಳಿನ ಸಮನ್ವಯ ಉತ್ತಮವಾಗಿರುತ್ತದೆ. ಮನಸ್ಸನ್ನು ಶಾಂತವಾಗಿರಿಸುತ್ತದೆ. ಹೀಗಾಗಿ ದಿನದಲ್ಲಿ  ಹತ್ತು ಬಾರಿಯಾದ್ರು ಬಸ್ಕಿ ಹೊಡೀರಿ. ಇದ್ರಿಂದ ಆರೋಗ್ಯ ಕೂಡ ಸುಧಾರಿಸುತ್ತೆ.

Shwetha M