ಕುಮಾರಿ ಆಂಟಿಗಾಗಿ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್! – ಕೊನೆಗೂ ಅಂಗಡಿ ತೆರೆಸಿದ ಸಿಎಂ!
ಸೋಶಿಯಲ್ ಮೀಡಿಯಾಗಳಲ್ಲಿ ಈಗ ಯಾರು, ಯಾವಾಗ ಟ್ರೆಂಡಿಂಗ್ನಲ್ಲಿ ಇರ್ತಾರೆ, ಟ್ರೋಲ್ ಆಗ್ತಾರೆ, ಫೇಮಸ್ ಆಗ್ತಾರೆ ಅನ್ನೋದನ್ನ ಹೇಳೋಕೆ ಆಗಲ್ಲ. ಹೀಗೆಯೇ ಇಲ್ಲೊಬ್ಬರು ರಸ್ತೆ ಬದಿ ಊಟದ ವ್ಯಾಪಾರ ಮಾಡ್ತಿದ್ದ ಆಂಟಿ ಯೂಟ್ಯೂಬ್ ಚಾನಲ್ ಮೂಲಕ ರಾತ್ರೋರಾತ್ರಿ ಫೇಮಸ್ ಆಗಿದ್ದರು. ಆದ್ರೆ ಆ ಜನಪ್ರಿಯತೆಯೇ ಕಂಟಕವಾಗಿದೆ.
ಇದನ್ನೂ ಓದಿ: ವನ್ಯಜೀವಿಗಳ ಅಂಗಾಂಗ ಸರ್ಕಾರಕ್ಕೆ ಹಿಂದಿರುಗಿಸಲು ಏಪ್ರಿಲ್ 10 ಕೊನೆ ದಿನ!
ಹೈದರಾಬಾದ್ನಲ್ಲಿ ರಸ್ತೆ ಪಕ್ಕ ಊಟ ಮಾರುವ ಸಾಯಿ ಕುಮಾರಿ ಅಲ್ಲಿ ಕುಮಾರಿ ಆಂಟಿ ಅಂಥಾನೇ ಫೇಮಸ್ ಆಗಿದ್ದಾರೆ. ಕಡಿಮೆ ಬೆಲೆ ರುಚಿಕರವಾದ ನಾನ್ವೆಜ್ ಊಟ ಕೊಡ್ತಾರೆ. ಯೂಟ್ಯೂಬ್ ಚಾನಲ್ವೊಂದ್ರಲ್ಲಿ ಇವ್ರ ವ್ಯಾಪಾರದ ಬಗ್ಗೆ ವಿಡಿಯೋ ಪ್ರಸಾರವಾಗಿತ್ತು. ವಿಡಿಯೋ ಬಳಿಕ ಹೆಚ್ಚೆಚ್ಚು ಜನ ಊಟಕ್ಕೆ ಬರಲು ಶುರು ಮಾಡಿದ್ರು. ಮಧ್ಯಾಹ್ನದ ಹೊತ್ತು 200ಕ್ಕೂ ಹೆಚ್ಚು ಜನ ಕ್ಯೂ ನಿಲ್ತಿದ್ರು. ಸ್ಟಾಲ್ನ ಸುತ್ತಲೂ ತಮ್ಮ ವಾಹನಗಳನ್ನು ನಿಲ್ಲಿಸುತ್ತಿದ್ರು. ಇದ್ರಿಂದ ಸಿಕ್ಕಾಪಟ್ಟೆ ಟ್ರಾಫಿಕ್ ಜಾಮ್ ಉಂಟಾಗಿದೆ. ಅಕ್ಕ ಪಕ್ಕದ ಅಂಗಡಿಯವ್ರು ಕಿರಿಕಿರಿ ಆಗ್ತಿದೆ ಅಂತಾ ದೂರು ನೀಡಿದ್ರು. ಬಳಿಕ ರಾಯದುರ್ಗಂ ಸಂಚಾರ ಪೊಲೀಸ್ ಇನ್ಸ್ಪೆಕ್ಟರ್ ಗಣೇಶ್ ಸಾಯಿಕುಮಾರಿ ಅವ್ರ ಅಂಗಡಿಯನ್ನು ತೆರವುಗೊಳಿಸಿದ್ದರು. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಅಂಗಡಿಯನ್ನು ಮತ್ತೆ ತೆರೆಯುವಂತೆ ಆಗ್ರಹ ಹೆಚ್ಚಾಗಿತ್ತು.
ಬಡ, ಮಧ್ಯಮ ವರ್ಗದ ಜನ ಹಾಗೂ ನಿರುದ್ಯೋಗಿಗಳು ಅಂಗಡಿ ಮುಂದೆ ಪ್ರತಿಭಟನೆಗಳನ್ನ ನಡೆಸಿದ್ದರು. ಈ ವಿಷಯ ತೆಲಂಗಾಣ ಸಿಎಂ ರೇವಂತ್ ರೆಡ್ಡಿವರೆಗೂ ತಲುಪಿತ್ತು. ಬಳಿಕ ರೇವಂತ್ ರೆಡ್ಡಿ ಕುಮಾರಿ ಆಂಟಿಯ ಫುಡ್ ಸ್ಟಾಲ್ ಮತ್ತೆ ತೆರೆಯುವಂತೆ ಆದೇಶ ನೀಡಿದ್ದಾರೆ. ಇದೀಗಾ ಕುಮಾರಿ ಆಂಟಿ ಎಂಬ ಹೆಸರು ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಸೆಟ್ ಕ್ರಿಯೇಟ್ ಮಾಡಿದೆ. ಸುಮಾರು 13 ವರ್ಷಗಳಿಂದ ಐಟಿಸಿ ಕೊಹಿನೂರ್ ಜಂಕ್ಷನ್ನಲ್ಲಿ ಪುಡ್ ಸ್ಟಾಲ್ ನಡೆಸುತ್ತಿರುವ ಸಾಯಿ ಕುಮಾರಿಯವರು, ಚಿಕನ್ ಕರಿ, ಮಟನ್ ಕರಿ, ಅನ್ನ ಮುಂತಾದ ವಿವಿಧ ಖಾದ್ಯಗಳನ್ನು ನೀಡುತ್ತಾರೆ. ಸೋಶಿಯಲ್ ಮೀಡಿಯಾ ಮತ್ತು ಫುಡ್ ವ್ಲಾಗರ್ಗಳಿಂದಾಗಿ ಅವರ ಫುಡ್ ಸ್ಟಾಲ್ ಸಾಕಷ್ಟು ಜನಪ್ರಿಯವಾಗಿದೆ.
ಪ್ರತಿದಿನ ಕಡಿಮೆ ಅಂದ್ರೂ 30 ಸಾವಿರ ರೂಪಾಯಿ ಗಳಿಸುತ್ತಾರೆ. ಒಟ್ಟಾರೆ ಸೋಶಿಯಲ್ ಮೀಡಿಯಾದಿಂದಲೇ ಫೇಮಸ್ ಆಗಿ ಇಕ್ಕಟ್ಟಿಗೆ ಸಿಲುಕಿದ್ದ ಸಾಯಿ ಕುಮಾರಿ ಈಗ ಮತ್ತೆ ವ್ಯಾಪಾರ ಆರಂಭಿಸಿದ್ದಾರೆ. ನೂರಾರು ಜನ ಕಡಿಮೆ ಬೆಲೆಗೆ ರುಚಿಕಟ್ಟಾದ ಊಟವನ್ನು ಇಷ್ಟ ಪಟ್ಟು ತಿನ್ನುತ್ತಿದ್ದಾರೆ.