ರವೀಂದ್ರ ಜಡೇಜಾ ವೈಯಕ್ತಿಕ ಬದುಕಲ್ಲಿ ಬಿರುಗಾಳಿ – ಪತ್ನಿ ವಿರುದ್ಧ ತಂದೆಯ ಆರೋಪಕ್ಕೆ ತತ್ತರಿಸಿದ ಟೀಮ್ ಇಂಡಿಯಾ ಆಲ್‌ರೌಂಡರ್

ರವೀಂದ್ರ ಜಡೇಜಾ ವೈಯಕ್ತಿಕ ಬದುಕಲ್ಲಿ ಬಿರುಗಾಳಿ – ಪತ್ನಿ ವಿರುದ್ಧ ತಂದೆಯ ಆರೋಪಕ್ಕೆ ತತ್ತರಿಸಿದ ಟೀಮ್ ಇಂಡಿಯಾ ಆಲ್‌ರೌಂಡರ್

ಟೀಮ್ ಇಂಡಿಯಾ ಆಲ್‌ರೌಂಡರ್ ರವೀಂದ್ರ ಜಡೇಜಾ ವೈಯಕ್ತಿಕ ಬದುಕಿನಲ್ಲಿ ಬಿರುಗಾಳಿ ಎದ್ದಿದೆ. ರವೀಂದ್ರ ಜಡೇಜಾ ಪತ್ನಿ ವಿರುದ್ಧ ಪೋಷಕರೇ ಆರೋಪಗಳ ಸುರಿಮಳೆ ಮಾಡುತ್ತಿದ್ದಾರೆ. ಫೆಬ್ರವರಿ 8 ಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಕಾಲಿಟ್ಟು 15 ವರ್ಷ ಪೂರೈಸಿದ ಸಂತಸದಲ್ಲಿದ್ದರು ರವೀಂದ್ರ ಜಡೇಜಾ. ಈ ಸಂತಸದ ನಡುವೆ ಅಭಿಮಾನಿಗಳಿಗೆ ಒಂದು ಶಾಕಿಂಗ್ ನ್ಯೂಸ್ ಕೂಡಾ ಸಿಕ್ಕಿದೆ.

ಇದನ್ನೂ ಓದಿ:ಮೂರನೇ ದಿನದಾಟದಲ್ಲಿ ಜಡೇಜಾ ಜಾದು – ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ರವೀಂದ್ರ ಜಡೇಜಾ ದಾಖಲೆ

ಟೀಮ್ ಇಂಡಿಯಾಗೆ ಒಬ್ಬ ಅದ್ಭುತ ಆಲ್‌ರೌಂಡರ್​ನನ್ನು ನೀಡಿದ ಪೋಷಕರೇ ಜಡೇಜಾ ವಿರುದ್ಧ ಆರೋಪಗಳ ಸುರಿಮಳೆಗೈದಿದ್ದಾರೆ. ಇದು ಕ್ರಿಕೆಟ್ ಲೋಕದಲ್ಲಿ ಟೀಂ ಇಂಡಿಯಾ ಅಭಿಮಾನಿಗಳು ಹಾಗೂ ರವೀಂದ್ರ ಜಡೇಜಾ ಅವರ ಅಭಿಮಾನಿಗಳನ್ನು ದಿಗ್ಭ್ರಮೆಗೊಳ್ಳುವಂತೆ ಮಾಡಿದೆ. ಟೀಂ ಇಂಡಿಯಾ ಆಟಗಾರ ರವೀಂದ್ರ ಜಡೇಜಾ ಅವರ ತಂದೆ ಅನಿರುದ್ಧ್ ಸಿಂಗ್ ಜಡೇಜಾ, ಮಗ ಹಾಗೂ ಸೊಸೆಯ ವಿರುದ್ಧ ಗಂಭೀರ ಆರೋಪಗಳನ್ನ ಮಾಡಿದ್ದಾರೆ. ಜಡೇಜಾ ಪತ್ನಿ ರಿವಾಬ ಮನೆ ಒಡೆಯುವ ಕೆಲಸ ಮಾಡಿದ್ದಾಳೆ. ರಿವಾಬ ಏನು ಮ್ಯಾಜಿಕ್ ಮಾಡಿದಳೋ ಗೊತ್ತಿಲ್ಲ. ನನ್ನ ಮಗ ನನ್ನಿಂದ ದೂರಾಗಿ ವರ್ಷಗಳೇ ಕಳೆದಿವೆ. ನನ್ನ ಮಗನಿಗೆ ಮದುವೆ ಮಾಡದಿದ್ದರೇ ಚೆನ್ನಾಗಿತ್ತು ಎಂದಿದ್ದಾರೆ.

ತಂದೆಯ ಆರೋಪಗಳಿಗೆ ತಮ್ಮ ಸೋಶಿಯಲ್ ಮೀಡಿಯಾ ಖಾತೆ ಎಕ್ಸ್​ನಲ್ಲಿ ಜಡೇಜಾ ಸ್ಪಷ್ಟನೆ ನೀಡಿದ್ದಾರೆ.  ಈ ಆರೋಪಗಳೆಲ್ಲ ಪೂರ್ವ ನಿಯೋಜಿತ ಪಿತೂರಿ. ಅವರು ಹೊರಿಸಿರುವ ಆರೋಪಗಳಲ್ಲಿ ಹುರುಳಿಲ್ಲ. ಎಲ್ಲವೂ ಸತ್ಯಕ್ಕೆ ದೂರವಾದ್ದವು. ಇದೆಲ್ಲ ನನ್ನ ಪತ್ನಿಯ ಹೆಸರಿಗೆ ಕಳಂಕ ತರುವ ಪ್ರಯತ್ನವಾಗಿದೆ. ಇದೆಲ್ಲವನ್ನು ನಾನು ಖಂಡಿಸುತ್ತೇನೆ. ನನಗೂ ಹೇಳಲಿಕ್ಕೆ ಸಾಕಷ್ಟಿದೆ. ಆದರೆ ನಾನು ಅದೆಲ್ಲವನ್ನು ಸಾರ್ವಜನಿಕವಾಗಿ ಬಿಚ್ಚಿಡಲು ಬಯಸುವುದಿಲ್ಲ ಎಂದಿದ್ದಾರೆ.

Sulekha