ಬೇಸ್‌ಬಾಲ್ ಅಂದ್ರೆ ಏನು? ಯಾಕೆ ಆ ಹೆಸರು ಬಂತು? – ಬೇಸ್‌ಬಾಲ್ ಬೇಕೋ ಬೇಡವೋ?

ಬೇಸ್‌ಬಾಲ್ ಅಂದ್ರೆ ಏನು? ಯಾಕೆ ಆ ಹೆಸರು ಬಂತು?  – ಬೇಸ್‌ಬಾಲ್ ಬೇಕೋ ಬೇಡವೋ?

ಬೇಸ್​​​ಬಾಲ್​ ಕ್ರಿಕೆಟ್.. ಇಂಗ್ಲೆಂಡ್ ತಂಡದ ಮೇನ್​ ವೆಪನ್ ಇದು. ಬ್ರೆಂಡನ್ ಮೆಕಲಂ ಕೋಚ್ ಆದಾಗಿನಿಂದ ಇಂಗ್ಲೆಂಡ್ ಟೆಸ್ಟ್ ಕ್ರಿಕೆಟ್ ಆಡೋ ರೀತಿಯೇ ಬದಲಾಗಿ ಹೋಯ್ತು. ಈ ಬೇಸ್​​ಬಾಲ್​ ಕ್ರಿಕೆಟ್​​ನ್ನ ಫಸ್ಟ್ ಇಂಟ್ರಡ್ಯೂಸ್​ ಮಾಡಿರೋದೆ ಬ್ರೆಂಡನ್ ಮೆಕಲಂ. ಈ ರೀತಿ ಕ್ರಿಕೆಟ್ ಆಡೋಕೆ ಫಸ್ಟ್ ಶುರು ಮಾಡಿರೋದು ಇಂಗ್ಲೆಂಡ್ ಟೀಮ್. ಕ್ರಿಕೆಟ್​​ನ್ನ ಕಂಡು ಹಿಡಿದ ಇಂಗ್ಲೆಂಡ್ ಇಡೀ ಕ್ರಿಕೆಟ್​​​ ಫಾರ್ಮೆಟ್​ಗೆ ಹೊಸ ಟ್ವಸ್ಟ್ ನೀಡಿದೆ.

ಬೇಸ್​​​ಬಾಲ್​ ಸ್ಟ್ರ್ಯಾಟಜಿಯಿಂದಾಗಿ ಇಂಗ್ಲೆಂಡ್ ಟೀಂ ಹಲವು ಟೆಸ್ಟ್ ಮ್ಯಾಚ್​​ಗಳನ್ನ ಕೂಡ ಗೆದ್ದುಕೊಂಡಿದೆ. ಇಂಗ್ಲೆಂಡ್ ಕ್ರಿಕೆಟರ್ಸ್​​ಗಳ ಮೆಂಟಾಲಿಟಿಯೇ ಚೇಂಜ್ ಆಗಿದೆ. ಅದ್ರಲ್ಲೂ ಟೆಸ್ಟ್​​ ಆಡೋವಾಗ ಅವರ ಅಪ್ರೋಚ್ ಕಂಪ್ಲೀಟ್ ಚೇಂಜ್ ಆಗಿದೆ. ಆದ್ರೆ ಭಾರತದಲ್ಲಿ ಮಾತ್ರ ಇಂಗ್ಲೆಂಡ್​​ನ ಬೇಸ್​​ಬಾಲ್ ಸ್ಟ್ರ್ಯಾಟಜಿ ವರ್ಕೌಟ್ ಆಗ್ತಾ ಇರುವಂತೆ ಕಾಣ್ತಿಲ್ಲ. 2ನೇ ಟೆಸ್ಟ್​ನಲ್ಲಿ ಸೋತ ಬಳಿಕ ಇಂಗ್ಲೆಂಡ್​ನ ಮಾಜಿ ಕ್ರಿಕೆಟಿಗರೊಬ್ಬರು ಬೇಸ್​​ಬಾಲ್ ಮೈಂಡ್​ಸೆಟ್ ಬಗ್ಗೆ ಆಕ್ರೋಶ ಹೊರ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಾಹಿತಿ ನೀಡ್ತೀನಿ. ಇದ್ರ ಜೊತೆಗೆ ಸಾಕಷ್ಟು ಮಂದಿ ಬೇಸ್​ಬಾಲ್​ ಸ್ಟ್ರ್ಯಾಟಜಿ ಬಗ್ಗೆ ವಿವರಿಸುವಂತೆ ಕಾಮೆಂಟ್ಸ್ ಮಾಡಿದ್ರು. ಬೇಸ್​​ಬಾಲ್ ಅಂದ್ರೆ ಏನು? ಯಾಕೆ ಆ ಹೆಸರು ಬಂತು? ಇವೆಲ್ಲದರ ಬಗ್ಗೆಯೂ ತಿಳಿಸ್ತೀನಿ. ಜೊತೆಗೆ ಬೇಸ್​​ಬಾಲ್​ ಬಗ್ಗೆ ನಡೀತಾ ಇರೋ ಪರ-ವಿರೋಧದ ಚರ್ಚೆ ಕೂಡ ಇಂಟ್ರೆಸ್ಟಿಂಗ್ ಆಗಿದೆ.

ಇದನ್ನೂ ಓದಿ: ಐಸಿಸಿ ಅಂಡರ್-19 ವಿಶ್ವಕಪ್ 2024 ರ ಫೈನಲ್ – ಆಸ್ಟ್ರೇಲಿಯಾ ವಿರುದ್ಧ ಸೇಡು ತೀರಿಸಿಕೊಳ್ಳುತ್ತಾ ಭಾರತದ ಯುವಪಡೆ

ಬೇಸ್​​ಬಾಲ್​ ಅಂದ್ರೆ ಏನು ಅನ್ನೋದನ್ನು ತಿಳಿದುಕೊಳ್ಳೋಣ. ಬೇಸ್​​ಬಾಲ್​ ಅಂದ್ರೆ ಅಗ್ರೆಸ್ಸಿವ್ ಟೈಪ್ ಆಫ್ ಕ್ರಿಕೆಟ್. ಇದೊಂದು ಮೈಂಡ್​ಸೆಟ್ ಗೇಮ್. ಬ್ಯಾಟಿಂಗ್, ಬೌಲಿಂಗ್ ಎಲ್ಲವನ್ನೂ ಅಗ್ರೆಸ್ಸಿವ್ ಆಗಿಯೇ ಆಡೋದು ಬೇಸ್​​ಬಾಲ್​​ನ ಮೇನ್ ಸ್ಟ್ರ್ಯಾಟಜಿ. ಬೇಸ್​ಬಾಲ್ ಅನ್ನೋ ಪದ ಕ್ರಿಕೆಟ್​​ನಲ್ಲಿ ಬರೋಕೆ ಕಾರಣ ಇಂಗ್ಲೆಂಡ್ ತಂಡದ ಕೋಚ್ ಬ್ರೆಂಡನ್ ಮೆಕಲಂ. ಇಎಸ್​ಪಿಎನ್​​ ಕ್ರಿಕ್​ ಇನ್ಫೋದ ಪತ್ರಕರ್ತ ಆಂಡ್ರ್ಯೂ ಮಿಲ್ಲರ್ ಅನ್ನೋರು ಬೇಸ್​​ಬಾಲ್ ಪದವನ್ನ ಮೊಟ್ಟ ಮೊದಲ ಬಾರಿಗೆ ಕ್ರಿಕೆಟ್​​ನಲ್ಲಿ ಬಳಸ್ತಾರೆ. 2022ರ ಮೇನಲ್ಲಿ ನ್ಯೂಜಿಲ್ಯಾಂಡ್​​ನ ಬ್ರೆಂಡನ್​​ ಮೆಕಲಂ ಇಂಗ್ಲೆಂಡ್ ಕೋಚ್ ಆಗಿ ಆಯ್ಕೆಯಾದಾಗ ಪತ್ರಕರ್ತ ಆ್ಯಂಡ್ರ್ಯೂ ಮಿಲ್ಲರ್ ಬೇಸ್​ ಪದ ಬಳಕೆ ಮಾಡ್ತಾರೆ. ನ್ಯೂಜಿಲ್ಯಾಂಡ್ ಪರ ಬ್ರೆಂಡನ್ ಮೆಕಲಂ ಕ್ರಿಕೆಟ್ ಆಡ್ತಿದ್ದಾಗ ಸಿಕ್ಕಾಪಟ್ಟೆ ಅಗ್ರೆಸ್ಸಿವ್ ಬ್ಯಾಟ್ಸ್​ಮನ್ ಆಗಿದ್ರು. ಫಸ್ಟ್​​ ಬಾಲ್​​ನಿಂದಲೇ ಬೌಂಡರಿ, ಸಿಕ್ಸರ್​​ ಹೊಡಿಯುವಂಥಾ ಜಾಯಮಾನ. 2008ರಲ್ಲಿ ಐಪಿಎಲ್​​ ಆರಂಭವಾದಾಗ, ಟೂರ್ನಿಯ ಮೊದಲ ಮ್ಯಾಚ್​​ನಲ್ಲೇ ರಾಯಲ್​ ಚಾಲೆಂಜರ್ಸ್​​ ಪರ ಬ್ರೆಂಡನ್ ಮೆಕಲಂ ಸೆಂಚೂರಿ ಹೊಡೆದಿದ್ರು. ಐಪಿಎಲ್​​ನಲ್ಲಿ ಫಸ್ಟ್ ಸೆಂಚೂರಿ ಹೊಡೆದಿದ್ದೇ ಬ್ರೆಂಡನ್ ಮೆಕಲಂ. ಬೆನ್​ಸ್ಟೋಕ್ಸ್ ಇಂಗ್ಲೆಂಡ್ ಕ್ಯಾಪ್ಟನ್​ ಆಗಿದ್ದಾಗ, ಮೆಕಲಂ ಇಂಗ್ಲೆಂಡ್ ಕೋಚ್ ಆಗುತ್ತಲೇ ಕ್ರಿಕೆಟ್​ನಲ್ಲಿ ಬೇಸ್​​ಬಾಲ್​​ ಅಂದ್ರೆ ಅಗ್ರೆಸಿವ್ ಆಟ ಅನ್ನೋ ಹೆಸರು ಬಂತು. ಇಲ್ಲಿ ಮೆಕಲಂ ಮತ್ತು ಬೆನ್​ಸ್ಟೋಕ್ಸ್ ಇಬ್ಬರೂ ಅಗ್ರೆಸ್ಸಿವ್ ಕ್ರಿಕೆಟರ್ಸೇ. ಕ್ಯಾಪ್ಟನ್ ಮತ್ತು ಕೋಚ್ ಇವರಿಬ್ಬರ ಕಾಂಬಿನೇಷನ್​​​ನಿಂದಾಗಿಯೇ ಇಂಗ್ಲೆಂಡ್ ಟೀಮ್ ಬೇಸ್​ಬಾಲ್​ ಸ್ಟ್ರ್ಯಾಟಜಿಯಲ್ಲಿ ಸಕ್ಸಸ್ ಆಗಿರೋದು. ಇನ್ನು, ಇಂಗ್ಲೆಂಡ್​ ತಂಡದ ವಿಕೆಟ್​ ಕೀಪರ್ ಬ್ಯಾಟ್ಸ್​​ಮನ್ ಜಾನಿ ಬ್ಯಾರ್​ಸ್ಟೋ ಬೇಸ್​ಬಾಲ್ ವರ್ಡ್​​​ನ್ನ ಫ್ರೀಡಂ ಅಂತಾನೂ ಡಿಫೈನ್ ಮಾಡಿದ್ದಾರೆ. ಅಂದ್ರೆ ಬ್ಯಾಟ್ಸ್​​ಮನ್​​, ಬೌಲರ್ಸ್​ಗಳಿಗೆ ಹೀಗೆಯೇ ಆಡಬೇಕು ಅಂತಾ ಯಾವುದೇ ಷರತ್ತು ವಿಧಿಸದೆ ಅವರ ಮನಸ್ಸಿಗೆ ತೋಚಿದ ಹಾಗೆ, ಬಿಂದಾಸ್ ಆಗಿ ಆಡುವ ಸ್ವಾತಂತ್ರ್ಯ. ಆ ಮೂಮೆಂಟ್​​ನಲ್ಲಿ ಹೇಗೆ ಆಡಬೇಕು ಅನ್ನೋ ಬಗ್ಗೆ ನಿರ್ಧರಿಸುಂಥಾ ಫುಲ್ ಫ್ರೀಡಂ ಫ್ಲೇಯರ್ಸ್​ಗಳಿಗೆ ಇರುತ್ತೆ.

2022ರ ಡಿಸೆಂಬರ್​​ನಲ್ಲಿ ಇಂಗ್ಲೆಂಡ್​ ತಂಡ ಪಾಕಿಸ್ತಾನ ಪ್ರವಾಸ ಕೈಗೊಂಡಿದ್ದಾಗ ಫಾರ್ ದಿ ಫಸ್ಟ್ ಟೈಮ್  ಬೇಸ್​​ಬಾಲ್ ಸ್ಟ್ರ್ಯಾಟಜಿಯೊಂದಿಗೆ ಕ್ರಿಕೆಟ್ ಆಡಿತ್ತು. ರಾವಲ್ಪಿಂಡಿಯಲ್ಲಿ ನಡೆದ ಟೆಸ್ಟ್ ಪಂದ್ಯದ ಮೊದಲ ದಿನವೇ ಇಂಗ್ಲೆಂಡ್​​ ಕೇವಲ 4 ವಿಕೆಟ್​​ ಕಳೆದುಕೊಂಡು ಬರೋಬ್ಬರಿ 506 ರನ್​​ ಗಳಿಸಿತ್ತು. ಮೂವರು ಬ್ಯಾಟ್ಸ್​​ಮನ್​ಗಳು ಸೆಂಚೂರಿ ಬಾರಿಸಿದ್ರು. ಟೆಸ್ಟ್ ಕ್ರಿಕೆಟ್​​ನ ಇತಿಹಾಸದಲ್ಲೇ ಮೊದಲ ದಿನದಾಟದಲ್ಲೇ ಅಷ್ಟೊಂದು ರನ್​ ಪೇರಿಸಿರೋದು ದಾಖಲೆ. ಬೇಸ್​​ಬಾಲ್ ಅಸ್ತ್ರದ ಮೂಲಕ ಇಂಗ್ಲೆಂಡ್​ ತಂಡ ಹೊಸ ಇತಿಹಾಸವನ್ನೇ ಸೃಷ್ಟಿಸಿತ್ತು. 6.75 ರನ್​​ ರೇಟ್​​ನಲ್ಲಿ ಅಂದು ಇಂಗ್ಲೆಂಡ್ ಬ್ಯಾಟ್ಸ್​​ಮನ್​​​ಗಳು ಪಾಕಿಸ್ತಾನದ ಬೌಲರ್​ಗಳನ್ನ ಚಚ್ಚಿ ಬಿಸಾಕಿದ್ರು. ಬ್ರೆಂಡನ್ ಮೆಕಲಂ ಕೋಚ್ ಆದ ಬಳಿಕ ಇಂಗ್ಲೆಂಡ್ ತಂಡದ ಬ್ಯಾಟಿಂಗ್ ಸ್ಟ್ರೈಕ್​ರೇಟ್ 77.06ಕ್ಕೆ ಏರಿತ್ತು. ಅಷ್ಟೇ ಅಲ್ಲ, ಬ್ಯಾಟ್ಸ್​​ಮನ್​ಗಳು ಟಿ-20ಯಲ್ಲಿ ಆಡುವಂತೆ ಅನ್​ಆರ್ಥಡಾಕ್ಸ್​ ಶಾಟ್ಸ್​​ಗಳನ್ನ ಟೆಸ್ಟ್​​ನಲ್ಲೂ ಹೆಚ್ಚಿನ ಪ್ರಮಾಣದಲ್ಲಿ ಹೊಡೆಯೋಕೆ ಶುರು ಮಾಡಿದ್ರು. ಜೋ ರೋಟ್, ಬೆನ್​ಸ್ಟೋಕ್​​ರಂಥಾ ಆಟಗಾರರು ವಿಕೆಟ್​ ಕೀಪರ್​ ಹಿಂಭಾಗದಿಂದ ರಿವರ್ಸ್​ ಱಂಪ್​​, ರಿವರ್ಸ್ ಸ್ವೀಚ್, ಸ್ವಿಚ್ ಹಿಟ್​ನಂಥಾ ಶಾಟ್ಸ್​ ಹೊಡೆಯೋಕೆ ಆರಂಭಿಸಿದ್ರು. ಹೈದರಾಬಾದ್​​ನಲ್ಲಿ ಭಾರತದ ವಿರುದ್ಧ ಫಸ್ಟ್​ ಟೆಸ್ಟ್​ನಲ್ಲಿ 196 ರನ್​ ಹೊಡೆದಿದ್ದ ಓಲಿ ಪಾಪ್ ಕೂಡ ದಿಲ್​ಸ್ಕೂಪ್​, ರಿವರ್ಸ್​ ಸ್ವೀಪ್​ ಶಾಟ್ಸ್​​ಗಳನ್ನ ಹೊಡೆದಿದ್ರು. ಆಲ್​ಮೋಸ್ಟ್​ ಎಲ್ಲಾ ಬಾಲ್​ನಲ್ಲೂ ಸ್ಕೋರ್​ ಗಳಿಸೋದು ಬೇಸ್​​ಬಾಲ್​ ಕ್ರಿಕೆಟ್​​ನ ಮೇನ್ ಸ್ಟ್ರ್ಯಾಟಜಿ. ಅಂದ್ರೆ ಬಹುತೇಕ ಟಿ-20 ಮಾದರಿಯಲ್ಲೇ ಬ್ಯಾಟಿಂಗ್​ ಮಾಡೋದು. ಹಳೆಯ ಟೆಸ್ಟ್​ ಶೈಲಿಯಂತೆ ನಿಧಾನಕ್ಕೆ ಸ್ಕೋರ್ ಮಾಡೋದನ್ನ ಬಿಟ್ಟು ವೇಗವಾಗಿ ರನ್ ಕಲೆ ಹಾಕೋದೆ ಬ್ಯಾಟ್ಸ್​ಮನ್​ಗಳ ಉದ್ದೇಶವಾಗಿರುತ್ತೆ.

2023ರ ಆ್ಯಶಸ್ ಸರಣಿಯ 2ನೇ ಟೆಸ್ಟ್​ ಪಂದ್ಯದಲ್ಲಿ ಸೆಕೆಂಡ್​​ ಇನ್ನಿಂಗ್ಸ್​​ನಲ್ಲಿ ಬೆನ್​ಸ್ಟೋಕ್ಸ್ ಏಕಾಂಗಿ ಹೋರಾಟ ನಡೆಸಿ 150 ರನ್​ ಹೊಡೆದಿದ್ರು. ಆ ಇನ್ನಿಂಗ್ಸ್​​ನಲ್ಲಿ 9 ಸಿಕ್ಸರ್​ಗಳನ್ನ ಬಾರಿಸಿದ್ರು. ಬೆನ್​ಸ್ಟೋಕ್ ಅಂತೂ ಬೇಸ್​​ಬಾಲ್ ಕ್ರಿಕೆಟ್​​ನ ಎಕ್ಸ್​ಪರ್ಟ್ ಆಗಿದ್ದಾರೆ. ಇನ್ನು ಈ ಬೇಸ್​ಬಾಲ್ ಅಸ್ತ್ರ ಕೇವಲ ಬ್ಯಾಟಿಂಗ್​​ಗಷ್ಟೇ ಸೀಮಿತವಾಗಿಲ್ಲ. ಫೀಲ್ಡಿಂಗ್, ಬೌಲಿಂಗ್ ವೇಳೆಯೂ ಇಂಗ್ಲೆಂಡ್​ ತಂಡ ಬೇಸ್​​ಬಾಲ್ ಸ್ಟ್ರ್ಯಾಟಜಿಯಲ್ಲೇ ಆಡ್ತಿದೆ.

ಇಲ್ಲಿ ರನ್​ ತಡೆಗಟ್ಟೋದು ಉದ್ದೇಶವಲ್ಲ.. ವಿಕೆಟ್ ತೆಗಿಯೋ ಏಕೈಕ ಉದ್ದೇಶದೊಂದಿಗೆ ಬೇಸ್​ಬಾಲ್ ಸ್ಟ್ರ್ಯಾಟಜಿಯಲ್ಲಿ ಇಂಗ್ಲೆಂಡ್ ಆಟವಾಡ್ತಿದೆ. ಅದ್ರಲ್ಲೂ 2023ರ ಆ್ಯಶಸ್ ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲಂತೂ ಬೆನ್​ಸ್ಟೋಕ್ ಕ್ರಿಕೆಟ್ ಜಗತ್ತು ಈ ಹಿಂದೆಂದೂ ಕಂಡಿರದ ರೀತಿ ವಿಚಿತ್ರವಾಗಿ ಫೀಲ್ಡಿಂಗ್​​ ಸೆಟ್ ಮಾಡಿ, ಆಸ್ಟ್ರೇಲಿಯಾದ ಉಸ್ಮಾನ್ ಖ್ವಾಜಾರನ್ನ ಔಟ್ ಮಾಡಿದ್ರು. ಅದು ಬೇಸ್​ಬೇಲ್ ಸ್ಟ್ರ್ಯಾಟಜಿಯ ಒಂದು ಭಾಗವಾಗಿತ್ತು. ಬೇಸ್​ಬಾಲ್​ ಸ್ಟ್ರ್ಯಾಟಜಿ ಪ್ರಕಾರ ಆಡುತ್ತಿರುವ ಇಂಗ್ಲೆಂಡ್​ ತಂಡದ ಉದ್ದೇಶ ಏನೇ ಇದ್ರೂ ಮ್ಯಾಚ್ ಗೆಲ್ಲೋದು. ಪಂದ್ಯ ಡ್ರಾ ಮಾಡಬೇಕು ಅನ್ನೋ ಯೋಚನೆ ಆಟಗಾರರಿಗೆ ಯಾವ ಹಂತದಲ್ಲೂ ಕೂಡ ಬರೋದಿಲ್ಲ. ಇಂಗ್ಲೆಂಡ್​ ಬೇಸ್​ಬಾಲ್ ಸ್ಟ್ರ್ಯಾಟಜಿಯಲ್ಲಿ ಆಡಿದ ಬಹುತೇಕ ಎಲ್ಲಾ ಟೆಸ್ಟ್​ ಪಂದ್ಯಗಳಲ್ಲೂ ಕೂಡ ಫಲಿತಾಂಶ ಬಂದಿವೆ.

ಟೆಸ್ಟ್ ಕ್ರಿಕೆಟ್ ಸೇವ್ ಮಾಡುತ್ತಾ BAZBALL?

ಈಗಿನ ಪರಿಸ್ಥಿತಿ ನೋಡಿದ್ರೆ ಒಂದು ಲೆಕ್ಕದಲ್ಲಿ ಟೆಸ್ಟ್​ ಕ್ರಿಕೆಟ್​ಗೆ ಬೇಸ್​​ಬಾಲ್​ ಸ್ಟ್ರ್ಯಾಟಜಿ ಒಳ್ಳೆಯದೇ. ಯಾಕಂದ್ರೆ ಟಿ-20 ಅಬ್ಬರದಿಂದಾಗಿ ಇತ್ತೀಚಿನ ವರ್ಷಗಳಲ್ಲಿ ಟೆಸ್ಟ್​ ಕ್ರಿಕೆಟ್ ಬಗ್ಗೆ ಜನರು ಆಸಕ್ತಿಯೇ ಕಳೆದುಕೊಂಡಿದ್ದಾರೆ. ಕಟ್ಟಾ ಕ್ರಿಕೆಟ್ ಫಾಲೋವರ್ಸ್​ ಕೂಡ ಟೆಸ್ಟ್​ ಮ್ಯಾಚ್​​ಗಳನ್ನ ನೋಡ್ತಾ ಇಲ್ಲ. ಐದು ದಿನ ಆಡಿ ಮ್ಯಾಚ್ ಡ್ರಾ ಆಗೋದಾದ್ರೆ ನೋಡೋದ್ಯಾಕೆ ಅನ್ನೋ ಮನೋಭಾವನೆಯೇ ಬಹುತೇಕ ಮಂದಿಯದ್ದು. ಅಷ್ಟೇ ಅಲ್ಲ, ಟೆಸ್ಟ್ ಕ್ರಿಕೆಟ್​ ಬರೀ ಬೋರಿಂಗ್​ ಅಂತಾ ಯುವಕರು ಕೂಡ ಆಸಕ್ತಿ ವಹಿಸುತ್ತಿಲ್ಲ. ಆದ್ರೆ ಈ ಬೇಸ್​​ಬಾಲ್ ಮಾದರಿ ಕ್ರಿಕೆಟ್​​ನಿಂದ ಟೆಸ್ಟ್​ ಬಗ್ಗೆಯೂ ಹೆಚ್ಚಿನ ಆಸಕ್ತಿಯುಂಟಾಗುವಂತೆ ಮಾಡಬಹುದು. ಅಗ್ರಸ್ಸಿವ್ ಕ್ರಿಕೆಟ್ ಆಡೋದ್ರಿಂದ. ಬ್ಯಾಟ್ಸ್​ಮನ್​ಗಳು ಮೇಲಿಂದ ಮೇಲೆ ಫೋರ್​, ಸಿಕ್ಸರ್​​ಗಳನ್ನ ಟೆಸ್ಟ್​ನಲ್ಲೂ ಹೊಡೆದ್ರೆ. ಸುಮ್ನೆ ಬಾಲ್ ತಿನ್ನೋ ಬದಲು ಹೆಚ್ಚಿನ ಸ್ಕೋರ್​​ ಗಳಿಸೋಕೆ ಯತ್ನಿಸಿದ್ರೆ.. ಅಗ್ರೆಸಿವ್​ ಆಗಿ ಬೌಲಿಂಗ್, ಫೀಲ್ಡಿಂಗ್ ಮಾಡಿದ್ರೆ.. ಗೆಲ್ಲಲೇಬೇಕು ಅನ್ನೋ ಹಠದಲ್ಲಿ ಕ್ರಿಕೆಟ್ ಆಡಿದ್ರೆ ಟೆಸ್ಟ್​ ಮ್ಯಾಚ್​ಗಳು ಕೂಡ ಇಂಟ್ರೆಸ್ಟಿಂಗ್​ ಆಗಿರುತ್ತೆ. ಈಗ ನೋಡಿ, ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್​ ಸೀರಿಸ್​​ಗೆ ಸ್ಟೇಡಿಯಂಗೆ ಬರ್ತಾ ಇರೋ ಜನರ ಸಂಖ್ಯೆ ಹೆಚ್ಚಾಗ್ತಿದೆ. ಕೆಲ ವರ್ಷಗಳಿಂದ ಭಾರತದಲ್ಲಿ ಟೆಸ್ಟ್ ಮ್ಯಾಚ್​ ಆಡೋವಾಗ ಸ್ಟೇಡಿಯಂಗಳೆಲ್ಲಾ ಖಾಲಿ ಹೊಡೀತಿದ್ವು. ಬಟ್ ಈಗ ಟೆಸ್ಟ್​​ ಮ್ಯಾಚ್​ಗಳಲ್ಲಿ ರಿಸಲ್ಟ್ ಬರ್ತಿದೆ. ಅಗ್ರೆಸ್ಸಿವ್ ಆಗಿ ಆಡ್ತಾರೆ. ಅದ್ರಲ್ಲೂ ಬೇಸ್​​ಬಾಲ್​ನಂಥಾ ಕಾನ್ಸೆಪ್ಟ್​ ಟೆಸ್ಟ್​ ಕ್ರಿಕೆಟ್​ಗೆ ಜೀವ ಕೊಡಬಹುದು.

ಆದ್ರೆ ಬೇಸ್​ಬಾಲ್ ಕ್ರಿಕೆಟ್​ ಬಗ್ಗೆಯೂ ಒಂದಷ್ಟು ಟೀಕೆಗಳು ವ್ಯಕ್ತವಾಗಿವೆ. ಎಲ್ಲಾ ಪರಿಸ್ಥಿತಿಯಲ್ಲೂ ಬೇಸ್​ಬಾಲ್ ಕ್ರಿಕೆಟ್ ಆಡೋಕೆ ಸಾಧ್ಯವಿಲ್ಲ. ಕೆಲವೊಂದು ಪಿಚ್​ಗಳಲ್ಲಿ ಅಗ್ರೆಸಿವ್ ಆಗಿ ಆಡೋದು ಸಾಧ್ಯವೇ ಇಲ್ಲ. ಅತ್ಯುತ್ತಮ ಬೌಲರ್​​ಗಳು ಇರುವಾಗ ಎಲ್ಲಾ ಬಾಲ್​​ಗೂ ಹೊಡೆಯುತ್ತೇನೆ ಅಂತಾ ನಿರ್ಧರಿಸೋದು ಮೂರ್ಖತನವಾಗುತ್ತೆ ಅಂತಾ ಟೀಂ ಇಂಡಿಯಾ ಸ್ಪಿನ್ನರ್ ಆರ್. ಅಶ್ವಿನ್ ಈ ಹಿಂದೆಯೇ ಹೇಳಿದ್ರು. ಅದು ಇಂಗ್ಲೆಂಡ್​ಗೆ ಈಗ ಭಾರತದ ಪಿಚ್​​ಗಳಲ್ಲಿ ಆಡೋವಾಗ ಅರ್ಥವಾಗ್ತಿರಬಹುದೋ ಏನೊ. ಯಾಕಂದ್ರೆ ಮೊದಲ ಎರಡು ಮ್ಯಾಚ್​ಗಳಲ್ಲೂ ಇಂಗ್ಲೆಂಡ್​ ಬ್ಯಾಟ್ಸ್​​ಮನ್​ಗಳು ಬೇಸ್​​ಬಾಲ್​ ಸ್ಟ್ರ್ಯಾಟಜಿಯಲ್ಲಿ ಆಡೋಕೆ ಅಷ್ಟಾಗಿ ಯತ್ನಿಸಿಲ್ಲ. ಸೆಕೆಂಡ್​ ಟೆಸ್ಟ್​ನಲ್ಲಿ ಇಂಗ್ಲೆಂಡ್ ಸೋತ ಬಳಿಕ ಮಾಜಿ ಕ್ರಿಕೆಟರ್ ಜೆಫ್ರಿ ಬಾಯ್ಕಾಟ್ ಒಂದು ಇಂಪಾರ್ಟೆಂಟ್ ಸ್ಟೇಟ್​ಮೆಂಟ್ ಕೊಟ್ಟಿದ್ದಾರೆ. ಬೇಸ್​​ಬಾಲ್ ಕ್ರಿಕೆಟ್ ಅಂತಾ ಹೇಳ್ಕೊಂಡು ಟೆಸ್ಟ್​​ ಮ್ಯಾಚ್​​ನ್ನ ಯಾವಾಗಲೂ ಟಿ20 ಫಾರ್ಮೆಟ್​ನಲ್ಲಿ ಆಡೋದು ಒಳ್ಳೆಯದಲ್ಲ. ​ಟೆಸ್ಟ್​​ನಲ್ಲೇ ​​ಇಂಗ್ಲೆಂಡ್​​ ಬ್ಯಾಟ್ಸ್​​ಮನ್​ಗಳು ಸ್ವೀಪ್, ಸ್ವೈಪ್, ಕ್ರಾಸ್​​ ಬ್ಯಾಟ್​​ನಲ್ಲಿ ಹೊಡಿಯೋಕೆ ಹೋಗಿಯೇ ಔಟಾಗ್ತಿದ್ದಾರೆ. ಕಳೆದ ಆ್ಯಶಸ್ ಸೀರಿಸ್​ನಲ್ಲಿ ಲಾರ್ಡ್ಸ್​ ಮತ್ತು ಎಡ್ಜ್​​ಬ್ಯಾಸ್ಟನ್​ ಟೆಸ್ಟ್​​ ಮ್ಯಾಚ್​ಗಳನ್ನ ಬೇಸ್​​ಬಾಲ್​ ಸ್ಟ್ರ್ಯಾಟಜಿಯಿಂದಾಯೇ ಇಂಗ್ಲೆಂಡ್ ಸೋತಿತ್ತು ಅಂತಾ ಜೆಫ್ರಿ ಬಾಯ್ಕಾಟ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇನ್ನು ಇಂಗ್ಲೆಂಡ್ ಬ್ಯಾಟ್ಸ್​ಮನ್​​ ಜೋ ರೂಟ್ ಒಂದು ಸಂಗತಿಯನ್ನ ರಿವೀಲ್ ಮಾಡಿದ್ದಾರೆ. ಈ ಬೇಸ್​​ಬಾಲ್ ಸ್ಟ್ರ್ಯಾಟಜಿಯಿಂದಾಗಿ ಈಗ ಇಂಗ್ಲೆಂಡ್ ಟೀಮ್ ಮೀಟಿಂಗ್ ಕೂಡ ಮಾಡ್ತಿಲ್ಲ ಎಂದಿದ್ದಾರೆ. ಬೆನ್​ ಸ್ಟೋಕ್ಸ್​​ ಕ್ಯಾಪ್ಟನ್ಸಿಯಲ್ಲಿ ಯಾವುದೇ ಟೀಮ್ ಮೀಟಿಂಗ್ ನಡೀತಾ ಇಲ್ವಂತೆ. ಬೇಸ್​​ಬಾಲ್​ ಅನ್ನೋದು ಇಂಗ್ಲೆಂಡ್​​ ಟೀಮ್​ನ್ನ ಎಷ್ಟರ ಮಟ್ಟಿಗೆ ಚೇಂಜ್ ಮಾಡಿದೆ ಅನ್ನೋದಕ್ಕೆ ಇದೇ ಸಾಕ್ಷಿ ನೋಡಿ.

Sulekha