ತೊಡೆಯ ಮೇಲೆ ಟ್ಯಾಟೂ ಹಾಕಿಸಿಕೊಂಡು ಪ್ರೇಮ ನಿವೇದನೆ – ವಿಭಿನ್ನ ಲವ್ ಪ್ರಪೋಸ್ ಗೆ ಪ್ರೇಯಸಿ ಮಾಡಿದ್ದೇನು?

ತೊಡೆಯ ಮೇಲೆ ಟ್ಯಾಟೂ ಹಾಕಿಸಿಕೊಂಡು ಪ್ರೇಮ ನಿವೇದನೆ – ವಿಭಿನ್ನ ಲವ್ ಪ್ರಪೋಸ್ ಗೆ ಪ್ರೇಯಸಿ ಮಾಡಿದ್ದೇನು?

ಪ್ರೇಮಿಗಳ ದಿನಾಚರಣೆಗೆ ಕ್ಷಣಗಣನೆ ಶುರುವಾಗಿದೆ. ಪ್ರೇಮ ನಿವೇದನೆ ಮಾಡಿಕೊಳ್ಳಲು, ಆ ದಿನವನ್ನು ಅವಿಸ್ಮರಣೀಯವಾಗಿ ನೆನಪಿನಲ್ಲಿಟ್ಟುಕೊಳ್ಳವ ಸಲುವಾಗಿ ಹೊಸ ಹೊಸ ಪ್ಲಾನ್‌ ಮಾಡಿಕೊಳ್ಳುತ್ತಿದ್ದಾರೆ. ಇದೀಗ ಇಲ್ಲೊಬ್ಬ ತನ್ನ ಪ್ರಿಯತಮೆ ಬಳಿ ವಿಭಿನ್ನವಾಗಿ ಪ್ರೇಮ ನಿವೇದನೆ ಮಾಡಿಕೊಂಡಿದ್ದಾನೆ. ಇದರ ಫೋಟೋ ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ವೈರಲ್‌ ಆಗಿದೆ.

ಇದನ್ನೂ ಓದಿ: ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ? – ಸೋತ ಕ್ಷೇತ್ರದಲ್ಲಿಯೇ ರಣತಂತ್ರ ರೂಪಿಸುತ್ತಿರುವ ದಳಪತಿಗಳು..!

ಫೆಬ್ರವರಿ 14 ರಂದು ಪ್ರೇಮಿಗಳ ದಿನಾಚರಣೆ ಹಿನ್ನೆಲೆಯಲ್ಲಿ ಜೋಡಿ ಹಕ್ಕಿಗಳು ತೇಲಾಡುತ್ತಿವೆ. ಪ್ರತಿಯೊಂದು ದಿನವನ್ನೂ ಸ್ಮರಣೀಯವಾಗಿ ನೆನಪಿನಲ್ಲಿ ಇಟ್ಟುಕೊಳ್ಳುವ ಉದ್ದೇಶದಿಂದ ಲವ್ ಕಹಾನಿಯನ್ನು ವಿಭಿನ್ನವಾಗಿ ಸೆಲೆಬ್ರೇಟ್ ಮಾಡ್ತಿದ್ದಾರೆ. ಫೆ. 8 ರಂದು ಪ್ರಪೋಸ್ ಡೇ ಆಗಿತ್ತು. ಈ ದಿನವನ್ನು ಬ್ರಿಟನ್​ 32 ವರ್ಷದ ಪ್ರೇಮಿಯೊಬ್ಬರು ವಿಭಿನ್ನವಾಗಿ ತಮ್ಮ ಗೆಳತಿಗೆ ಪ್ರಪೋಸ್ ಮಾಡಿ ಸುದ್ದಿಯಾಗಿದ್ದಾರೆ.

ಹೌದು, ಮೂರ್ ಎಂಬ ಪ್ರೇಮಿಯು ತಮಗಿಂತ ಮೂರು ವರ್ಷ ದೊಡ್ಡವಳಾದ ಸಾರಾ ಅನ್ನೋರನ್ನು ಮೂರು ವರ್ಷಗಳಿಂದ ಪ್ರೀತಿ ಮಾಡ್ತಿದ್ದಾರಂತೆ. ಫೆ.8 ರಂದು ತನ್ನ ಪ್ರಿಯತಮೆಗೆ ಮದುವೆ ಪ್ರಸ್ತಾಪ ಮಾಡಿದ್ದಾರೆ. ತನ್ನ ಮದುವೆ ವಿಚಾರದ ಬಗ್ಗೆ ಮಾತನಾಡುವ ಉದ್ದೇಶದಿಂದಲೇ, ಟ್ಯಾಟೂ ಅಂಗಡಿಗೆ ಹೋಗಿ ತಾವು ಅಂದುಕೊಂಡಿದ್ದನ್ನು ಬರೆಸಿಕೊಂಡು ಬಂದಿದ್ದರು.

ಪ್ಲಾನ್‌ ಹಾಕಿಕೊಂಡಂತೆಯೇ ಸಾರಾಗೆ ಜೋಗೆ ವಿಡಿಯೋ ಕಾಲ್ ಮಾಡಿದ್ದಾರೆ. ಕೊನೆಗೆ ತಾವು ಹಚ್ಚೆ ಹಾಕಿಸಿರೋದನ್ನು ತೋರಿಸಿದ್ದಾರೆ. ಅದರಲ್ಲಿ ಹುಡುಗ ಮತ್ತು ಹುಡುಗಿ ಇರುವ ಎರಡು ಕಾರ್ಟೂನ್​​ಗಳ ಚಿತ್ರದಲ್ಲಿ ಲವ್ ಪ್ರಪೋಸ್ ಮಾಡುತ್ತಿದ್ದವು. ಅದರ ಕೆಳಗೆ ನನ್ನನ್ನು ಮದುವೆ ಆಗುತ್ತಿಯಾ ಎಂದು ಬರೆಸಿಕೊಂಡಿದ್ದರು. ಜೊತೆಗೆ ಯೆಸ್​, ನೋ ಎಂದು ಕೂಡ ಬರೆಯಲಾಗಿತ್ತು. ಇದನ್ನು ನೋಡಿದ ಸಾರಾ ತುಂಬಾ ಸಂತೋಷಗೊಂಡಿದ್ದಾರೆ. ತನ್ನನ್ನು ಮದುವೆಯಾಗಲು ಒಪ್ಪಿಗೆ ಸೂಚಿಸಿದ್ದಾರೆ ಎಂದು ಜೋ ಹೇಳಿದ್ದಾರೆ. ಸದ್ಯ ಈ ಫೋಟೋ ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ವೈರಲ್‌ ಆಗಿದ್ದು, ಎಲ್ಲರನ್ನು ಆಕರ್ಷಿಸುತ್ತಿದೆ.

Shwetha M