ನ.20 ರಿಂದ 28 ರವರೆಗೆ ಪಣಜಿಯಲ್ಲಿ ನಡೆಯಲಿದೆ 53 ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ

ಪಣಜಿ: ಭಾರತದ 53 ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ದಿನಾಂಕ ನಿಗದಿಯಾಗಿದ್ದು, ಇದೇ ನ. 20 ರಿಂದ 28 ರವರೆಗೆ ಗೋವಾದ ಪಣಜಿಯಲ್ಲಿ ನಡೆಯಲಿದೆ.
ಇದನ್ನೂ ಓದಿ: 35 ವರ್ಷಗಳ ನಂತರ ಒಂದಾದ ಸೂಪರ್ ಹಿಟ್ ಜೋಡಿ!
ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವು ಆಸ್ಟ್ರಿಯನ್ ನಿರ್ದೇಶಕ ಡೈಟರ್ ಬರ್ನರ್ ಅವರ ಅಲ್ಮಾ ಮತ್ತು ಆಸ್ಕರ್ ಚಿತ್ರದೊಂದಿದೆ ಆರಂಭವಾಗಲಿದೆ. ಅಂತಾರಾಷ್ಟ್ರೀಯ ಸ್ಪರ್ಧಾತ್ಮಕ ವಿಭಾಗದಲ್ಲಿ ಒಟ್ಟು 15 ಚಲನಚಿತ್ರಗಳು ಪ್ರತಿಷ್ಠಿತ ಸುವರ್ಣ ಮಯೂರ್ ಪ್ರಶಸ್ತಿ ಸ್ಫರ್ಧೆಯಲ್ಲಿದೆ.
ಗೋಲ್ಡನ್ ಪೀಕಾಕ್ ಪ್ರಶಸ್ತಿ ವಿಜೇತರನ್ನು ಆಯ್ಕೆ ಮಾಡುವ ಜ್ಯೂರಿಯಲ್ಲಿ ಇಸ್ರೇಲಿ ಬರಹಗಾರ ಮತ್ತು ಚಲನಚಿತ್ರ ನಿರ್ದೇಶಕ ನಾದವ್ ಲ್ಯಾಪಿಡ್, ಅಮೆರಿಕನ್ ಚಲನಚಿತ್ರ ನಿರ್ಮಾಪಕ ಜಿಂಕೊ ಗೊಟೊಹ್, ಫ್ರೆಂಚ್ ಚಲನಚಿತ್ರ ಸಂಗ್ರಾಹಕ ಪಾಸ್ಕಲ್ ಚವಾನ್ಸ್, ಫ್ರೆಂಚ್ ಸಾಕ್ಷ್ಯಚಿತ್ರ ನಿರ್ಮಾಪಕ, ಚಲನಚಿತ್ರ ವಿಮರ್ಶಕ ಮತ್ತು ಖ್ಯಾತ ಭಾರತೀಯ ಚಲನಚಿತ್ರ ನಿರ್ದೇಶಕ ಸುದೀಪ್ಟೊ ಒಳಗೊಂಡಿದ್ದಾರೆ ಎಂದು ಗೋವಾ ಮನೋರಂಜನಾ ಸಂಸ್ಥೆ ಮಾಹಿತಿ ನೀಡಿದೆ.