ಇಶಾನ್ ಗೆ ನಿಜಕ್ಕೂ ಆಗಿರೋದೇನು? – ದ್ರಾವಿಡ್ ಯೂ ಟರ್ನ್?
ನಮಗೆಲ್ಲ ಗೊತ್ತಿರೋ ಹಾಗೆ ಇಶಾನ್ ಕಿಶನ್ ಈಗಾಗ್ಲೇ ಟೀಂನಿಂದ ಔಟಾಗಿದ್ದಾರೆ. ಯಾವ ಸೀರಿಸ್ಗೂ ಕೂಡ ಇಶಾನ್ರನ್ನ ಪಿಕ್ ಮಾಡ್ತಾ ಇಲ್ಲ. ಈ ಹಿಂದೆಯೇ ಕೋಚ್ ರಾಹುಲ್ ದ್ರಾವಿಡ್ ಡೊಮೆಸ್ಟಿಕ್ ಕ್ರಿಕೆಟ್ ಆಡಿ ಬರುವಂತೆ ಇಶಾನ್ ಕಿಶನ್ಗೆ ಸೂಚನೆ ಬೇರೆ ಕೊಟ್ಟಿದ್ರು. ಬಟ್ ಇಶಾನ್ ಮಾತ್ರ ಡೋಂಟ್ ಕೇರ್ ಅಂತಿದ್ದಾರೆ. ರಣಜಿಯಾಗಲಿ ಯಾವುದೇ ಫಸ್ಟ್ ಕ್ಲಾಸ್ ಮ್ಯಾಚ್ಗಳನ್ನ ಆಡ್ತಾ ಇಲ್ಲ. ಅಷ್ಟೇ ಯಾಕೆ, ಇಶಾನ್ ಕಿಶನ್ ಎಲ್ಲಿದ್ದಾರೆ? ಏನ್ಮಾಡ್ತಾ ಇದ್ದಾರೆ ಅನ್ನೋದೆ ಯಾರಿಗೂ ಗೊತ್ತಿಲ್ಲ. ಆದ್ರೆ ಕೋಚ್ ರಾಹುಲ್ ದ್ರಾವಿಡ್ ಮತ್ತೊಮ್ಮೆ ಇಶಾನ್ ಕಿಶನ್ಗೆ ವಾರ್ನಿಂಗ್ ಮಾಡಿದ್ದಾರೆ. ಜೊತೆಗೆ ಸ್ಟೇಟ್ಮೆಂಟ್ ಕೊಟ್ಟ ಮೇಲೆಯೂ ಟರ್ನ್ ಕೂಡ ಹೊಡೆದಿದ್ದಾರೆ. ಈ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ..
ಇದನ್ನೂ ಓದಿ: ಆಂಗ್ಲರನ್ನು ಮಣಿಸಿ ಸೋಲಿಗೆ ಸೇಡು ತೀರಿಸಿಕೊಂಡ ಭಾರತ – ಗೆದ್ದರೂ ರೊಚ್ಚಿಗೆದ್ದಿದ್ದೇಕೆ ರೋಹಿತ್ ಶರ್ಮಾ?
ಇಶಾನ್ ಕಿಶನ್ ಒಬ್ಬ ಗ್ರೇಟ್ ಟ್ಯಾಲೆಂಟ್ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಬಟ್ ಇಶಾನ್ ಕಿಶನ್ ಅದೇನೋ ಟ್ರಬಲ್ನಲ್ಲಿ ಸಿಕ್ಕಿ ಹಾಕಿಕೊಂಡಿರುವಂತೆ ಕಾಣ್ತಿದೆ. ಇಂಡಿಯನ್ ಟೀಮ್ನಲ್ಲಂತೂ ಆಡ್ತಿಲ್ಲ. ಆದ್ರೆ ಫಸ್ಟ್ ಕ್ಲಾಸ್ ಕ್ರಿಕೆಟ್ ಸೇರಿದಂತೆ ಇತರೆ ಯಾವುದೇ ಟೂರ್ನಿಯಲ್ಲೂ ಇಶಾನ್ ಕಿಶನ್ ಆಡ್ತಿಲ್ಲ. ಈ ಹಿಂದೆ ಕೋಚ್ ದ್ರಾವಿಡ್ ಒಂದಷ್ಟು ಡೊಮೆಸ್ಟಿಕ್ ಮ್ಯಾಚ್ಗಳನ್ನ ಅಡಿ ಬರುವಂತೆ ಇಶಾನ್ ಕಿಶನ್ಗೆ ಸಲಹೆ ಕೊಟ್ಟಿದ್ರು. ಆದ್ರೆ ಇಶಾನ್ ಮಾತ್ರ ಇದುವರೆಗೂ ಡೊಮೆಸ್ಟಿಕ್ ಮ್ಯಾಚ್ಗಳಲ್ಲಿ ಆಡೋಕೆ ಮುಂದಾಗಿಲ್ಲ. ಇಂಗ್ಲೆಂಡ್ ವಿರುದ್ಧದ ಸೆಕೆಂಡ್ ಟೆಸ್ಟ್ ಬಳಿಕ ಇಶಾನ್ ಕಿಶನ್ ವಿಚಾರವಾಗಿ ಕೋಚ್ ರಾಹುಲ್ ದ್ರಾವಿಡ್ರನ್ನ ಮತ್ತೆ ಪ್ರಶ್ನೆ ಮಾಡಲಾಗಿದ್ದು, ಈ ವೇಳೆ ದ್ರಾವಿಡ್ ನೀಡಿರೋ ಸ್ಟೇಟ್ಮೆಂಟ್ ಈಗ ಟಾಕಿಂಗ್ ಪಾಯಿಂಟ್ ಆಗಿದೆ. ದ್ರಾವಿಡ್ ಹೇಳಿರೋ ಪ್ರಕಾರ ಇಶಾನ್ ಕಿಶನ್ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ಬ್ರೇಕ್ ಬೇಕು ಅಂತಾ ಕೇಳಿದ್ರಂತೆ. ಹೀಗಾಗಿ ಇಶಾನ್ಗೆ ಬ್ರೇಕ್ ನೀಡಲಾಗಿದೆ. ಆದ್ರೆ ಮತ್ತೆ ಟೀಂ ಇಂಡಿಯಾ ಪರ ಆಡೋಕೆ ರೆಡಿ ಇದ್ದಾರೆ ಅನ್ನೋದಾದ್ರೆ ಒಂದಷ್ಟು ಕ್ರಿಕೆಟ್ ಮ್ಯಾಚ್ಗಳನ್ನ ಆಡಲೇಬೇಕು. ಹಾಗಂತಾ ಡೊಮೆಸ್ಟಿಕ್ ಮ್ಯಾಚ್ಗಳನ್ನೇ ಆಡ್ಬೇಕು ಅಂತಾ ಹೇಳ್ತಿಲ್ಲ. ಸಮ್ ಫಾರ್ಮ್ ಆಫ್ ಕ್ರಿಕೆಟ್ ಆಡಲೇಬೇಕು ಅನ್ನೋದಾಗಿ ದ್ರಾವಿಡ್ ಹೇಳಿದ್ದಾರೆ. ಆದ್ರೆ ಈ ಹಿಂದೆ ದ್ರಾವಿಡ್ ಡೊಮೆಸ್ಟಿಕ್ ಕ್ರಿಕೆಟ್ ಆಡಿ ಮತ್ತೆ ಟೀಮ್ಗೆ ಕಮ್ಬ್ಯಾಕ್ ಮಾಡಲಿ ಅಂತಾನೆ ಇಶಾನ್ ಕಿಶನ್ಗೆ ಸಜೆಸ್ಟ್ ಮಾಡಿದ್ರು. ಆದ್ರೆ ಇಶಾನ್ ಮಾತ್ರ ಡೊಮೆಸ್ಟಿಕ್ ಕ್ರಿಕೆಟ್ನತ್ತ ತಲೆ ಹಾಕಿಯೇ. ಅವರಿಗೇನಾದ್ರೂ ಇಗೋ ಹರ್ಟ್ ಆಗಿದ್ರೂ ಆಗಿರ್ಬಹುದು. ಬಟ್ ಇಲ್ಲಿ ದ್ರಾವಿಡ್ ನೀಡಿರೋ ಸಜೆಷನ್ ಮಾತ್ರ ಕರೆಕ್ಟ್ ಆಗಿಯೇ ಇದೆ. ಡೊಮೆಸ್ಟಿಕ್ ಕ್ರಿಕೆಟ್ ಸ್ಟೇಟ್ಮೆಂಟ್ ವಿಚಾರದಲ್ಲಿ ದ್ರಾವಿಡ್ ಯೂ ಟರ್ನ್ ಹೊಡೆದ್ರೋ, ಇಲ್ವೋ ಅನ್ನೋದು ಇಲ್ಲಿ ಬೇಕಾಗಿಲ್ಲ. ಬಟ್ ಟೀಂ ಇಂಡಿಯಾಗೆ ಕಮ್ಬ್ಯಾಕ್ ಮಾಡಬೇಕು ಅನ್ನೋದಾದ್ರೆ ಇಶಾನ್ ಕಿಶನ್ ಡೊಮೆಸ್ಟಿಕ್ ಆಗಲಿ, ಕೌಂಟಿ ಆಗಲಿ ಅಥವಾ ಇನ್ಯಾವುದೇ ಮ್ಯಾಚ್ಗಳಾಗಲಿ ಒಂದಷ್ಟು ಕ್ರಿಕೆಟ್ ಆಡಲೇಬೇಕು ಅನ್ನೋದು ಫ್ಯಾಕ್ಟ್. ತುಂಬಾ ಗ್ಯಾಪ್ ಬಳಿಕ ನ್ಯಾಷನಲ್ ಟೀಮ್ನಲ್ಲಿ ಸ್ಥಾನ ಪಡೆದುಕೊಳ್ಳಬೇಕು ಅಂದ್ರೆ ಯಾವುದೇ ಪ್ಲೇಯರ್ ಆದ್ರೂ ತಮ್ಮ ಫಾರ್ಮ್, ಫಿಟ್ನೆಸ್ನ್ನ ಪ್ರೂವ್ ಮಾಡಲೇಬೇಕು. ಅದಕ್ಕಿರೋ ಬೆಸ್ಟ್ ವೇದಿಕೆ ಅಂದ್ರೆ ಡೊಮೆಸ್ಟಿಕ್ ಕ್ರಿಕೆಟ್. ಆ್ಯಕ್ಚುವಲಿ ಇಂಗ್ಲೆಂಡ್ ವಿರುದ್ಧದ ಸೀರಿಸ್ಗೆ ಸೆಲೆಕ್ಟ್ ಆಗೋಕೆ ಇಶಾನ್ ಕಿಶನ್ಗೆ ಗೋಲ್ಡನ್ ಅಪಾರ್ಚ್ಯುನಿಟಿ ಇತ್ತು. ಯಾಕಂದ್ರೆ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಕೆಎಸ್ ಭರತ್ ಇಂಗ್ಲೆಂಡ್ ವಿರುದ್ಧದ ಎರಡೂ ಮ್ಯಾಚ್ಗಳಲ್ಲೂ ಫ್ಲಾಪ್ ಆಗಿದ್ದಾರೆ. ಅಷ್ಟೇ ಅಲ್ಲ, ಕಳೆದ 12 ಇನ್ನಿಂಗ್ಸ್ಗಳಲ್ಲಿ ಭರತ್ ಹೊಡೆದಿರೋದು 221 ರನ್ ಮಾತ್ರ. ಒಂದೇ ಒಂದು ಹಾಫ್ ಸೆಂಚೂರಿ ಕೂಡ ಹೊಡೆದಿಲ್ಲ. ಬಟ್ ಕೀಪಿಂಗ್ ತುಂಬಾ ಚೆನ್ನಾಗಿ ಮಾಡ್ತಾ ಇದ್ದಾರೆ. ಒಂದು ವೇಳೆ ಈ ಟೈಮ್ನಲ್ಲಿ ಇಶಾನ್ ಕಿಶನ್ ರಣಜಿ ಅಥವಾ ಯಾವುದೇ ಫಸ್ಟ್ ಕ್ಲಾಸ್ ಮ್ಯಾಚ್ಗಳನ್ನ ಆಡಿ ತಮ್ಮ ಫಾರ್ಮ್ನ್ನ ಪ್ರೂವ್ ಮಾಡ್ತಿದ್ರೆ, ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ವೇಳೆಗೆ ಟೀಂ ಇಂಡಿಯಾಗೆ ಮತ್ತೆ ಸೆಲೆಕ್ಟ್ ಆಗ್ತಾ ಇದ್ರೋ ಏನೊ. ಹೇಗೂ ರಿಷಬ್ ಪಂತ್ ಅವೈಲೇಬಲ್ ಇಲ್ಲ. ಹೀಗಾಗಿ ಕೆಎಸ್ ಭರತ್ರನ್ನ ಡ್ರಾಪ್ ಮಾಡಿ ಇಶಾನ್ ಕಿಶನ್ರನ್ನ ಪಿಕ್ ಮಾಡೋ ಚಾನ್ಸ್ ಇತ್ತು. ಆದ್ರೆ ಇಶಾನ್ ಕಿಶನ್ ಮಾತ್ರ ಇದುವರೆಗೂ ಬ್ಯಾಟ್ ಕೈಗೆತ್ತಿಕೊಂಡಿಲ್ಲ.