ಮಹಾಯುದ್ಧದ ವೇಳೆಯೂ ಶ್ವಾನ ಪಡೆಗಳಂತೆ ಪಾರಿವಾಳಗಳ ಪಡೆ ಇತ್ತು! – ಪಾರಿವಾಳಗಳನ್ನೇ ಬೇಹುಗಾರಿಕೆಗೆ ಬಳಸೋದ್ಯಾಕೆ?
ಪಾರಿವಾಳಗಳನ್ನು ಹಿಂದಿನ ಕಾಲದಿಂದಲೂ ಪತ್ರ ರವಾನಿಸಲು ಬಳಕೆ ಮಾಡಲಾಗುತ್ತಿದೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಗೂಢಾಚಾರಿಕೆಗೆ ಬಳಸಲಾಗುತ್ತಿದೆ. ಪರಿವಾಳಗಳನ್ನು ಯಾವ ರೀತಿ ಗೂಢಾಚಾರಿಕೆಗೆ ಬಳಸಲಾಗುತ್ತೆ? ಪಾರಿವಾಳಗಳನ್ನೇ ಬೇಹುಗಾರಿಕೆಗೆ ಬಳಸೋದ್ಯಾಕೆ ಅನ್ನೋ ಬಗ್ಗೆ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ.
ಒಂದನೇ ಮಹಾಯುದ್ಧ ವೇಳೆ ಗೂಢಾಚಾರಿಕೆಗೆ ಪಾರಿವಾಳಗಳನ್ನ ಭಾರಿ ಪ್ರಮಾಣದಲ್ಲಿ ಬಳಸಲಾಗಿತ್ತು. ಜರ್ಮನಿ ಮತ್ತು ಫ್ರಾನ್ಸ್ ಸೇನೆ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಪಾರಿವಾಳಗಳನ್ನ ತಮ್ಮ ವಾರ್ಫೇರ್ಗೆ ಬಳಸ್ತಾ ಇದ್ರು. ಪಾರಿವಾಳದ ದೇಹಕ್ಕೆ ಸಣ್ಣ ಕ್ಯಾಮರಾವನ್ನ ಕಟ್ಟಿ ಶತ್ರುಗಳ ಪ್ರದೇಶದ ಮೇಲೆ ಹಾರಿ ಬಿಡಲಾಗ್ತಿತ್ತು. ಶತ್ರು ಪ್ರದೇಶದ ಮೇಲೆ ಹಾರಿ ಕ್ಯಾಮರಾದಲ್ಲಿ ಎಲ್ಲವನ್ನ ಕ್ಯಾಪ್ಚರ್ ಮಾಡಿಕೊಂಡು ಮತ್ತೆ ಮಿಲಿಟರಿ ಬೇಸ್ಗೆ ರಿಟರ್ನ್ ಆಗ್ತಿತ್ತು. ಮಹಾಯುದ್ಧದ ವೇಳೆ ಮೆಸೇಜ್ ಪಾಸ್ ಮಾಡೋಕೂ ಪಾರಿವಾಳನ್ನ ಯೂಸ್ ಮಾಡಲಾಗಿತ್ತು. ಗೂಢಾಚಾರಿಕೆ ಇರಲಿ, ಲೆಟರ್ ರವಾನೆಯೇ ಇರಲಿ ಪಾರಿವಾಳಗಳು 95% ನಷ್ಟು ಸಕ್ಸಸ್ ರೇಟ್ ಹೊಂದಿವೆ.
ಇದನ್ನೂ ಓದಿ: ಅಮೆರಿಕದಲ್ಲಿ ಮತ್ತೊಂದು ಹೊಸ ಸೋಂಕು ಪತ್ತೆ! – ಕೊರೊನದಂತೆ ಜನರ ಜೀವ ಹಿಂಡುತ್ತಾ ಮಹಾಮಾರಿ?
ಮಹಾಯುದ್ಧದ ವೇಳೆ ಪಾರಿವಾಳಗಳು ಸೇನೆಯ ಪ್ರಮುಖ ಭಾಗವಾಗಿದ್ವು. ಹೇಗೆ ಈಗ ಶ್ವಾನ ಪಡೆಗಳಿದ್ಯೋ, ಅದೇ ರೀತಿ ಆಗ ಪಾರಿವಾಳಗಳ ಪಡೆಯಿತ್ತು. ಈ ಪೈಕಿ ಅಮೆರಿಕ ಸೇನೆಯಲ್ಲಿದ್ದ ಚೆರ್ ಅಮಿ ಅನ್ನೋ ಪಾರಿವಾಳ ತುಂಬಾನೆ ಫೇಮಸ್ ಆಗಿತ್ತು. 1918 ಅಕ್ಟೋಬರ್ 14ರಂದು ಜರ್ಮನ್ ಸೇನೆ ವಿರುದ್ಧದ ಆಪರೇಷನ್ನಲ್ಲಿ ಭಾಗಿಯಾಗಿ ಸುಮಾರು 194 ಸೈನಿಕರ ರಕ್ಷಣೆಗೆ ಈ ಪಾರಿವಾಳ ಕಾರಣವಾಗಿತ್ತು. ಬೆಟ್ಟ ಪ್ರದೇಶವೊಂದರಲ್ಲಿ ಅಮೆರಿಕ ಸೈನಿಕರು ಟ್ರ್ಯಾಪ್ ಆಗಿದ್ರು. ಆ ಬೆಟ್ಟವನ್ನ ಸಂಪೂರ್ಣವಾಗಿ ಜರ್ಮನ್ ಸೈನಿಕರು ಸುತ್ತುವರೆದಿದ್ರು. ಆಗ ಚೆರ್ ಅಮಿ ಪಾರಿವಾಳವನ್ನ ಆ ಭಾಗಕ್ಕೆ ಕಳುಹಿಸಲಾಗುತ್ತೆ. ಅಲ್ಲಿ ಸಿಕ್ಕಿ ಹಾಕ್ಕೊಂಡಿದ್ದ ಅಮೆರಿಕ ಸೈನಿಕರ ಬಳಿ ಇಳಿಯುತ್ತಲೇ ತಮ್ಮ ಪರಿಸ್ಥಿತಿ ಏನಾಗಿದೆ? ಎಷ್ಟು ಮಂದಿ ಸಿಕ್ಕಿ ಹಾಕ್ಕೊಂಡಿದ್ದೇವೆ ಅನ್ನೋದನ್ನ ಲೆಟರ್ನಲ್ಲಿ ಬರೆದು ಪಾರಿವಾಳದ ದೇಹಕ್ಕೆ ಕಟ್ಟಲಾಗುತ್ತೆ. ಲೆಟರ್ ಸಮೇತ ಬೆಟ್ಟ ಪ್ರದೇಶದಿಂದ ಹಾರಿ ಬರುವಾಗ ಪಾರಿವಾಳದ ಮೇಲೆ ಜರ್ಮನ್ ಸೈನಿಕರಿಂದ ಗುಂಡಿನ ದಾಳಿಯಾಗುತ್ತೆ. ಕಾಲಿಗೆ ಗುಂಡು ತಗುಲಿದ್ರೂ ಕೂಡ ಅಮೆರಿಕ ಸೈನಿಕರ ತುಕಡಿಗೆ ವಾಪಸ್ ಬಂದು ಮೆಸೇಜ್ ಪಾಸ್ ಮಾಡುತ್ತೆ. ನಂತರ ಕೌಂಟರ್ ಆಪರೇಷನ್ ಮೂಲಕ ಅಮೆರಿಕ ಸೇನೆ ತನ್ನೆಲ್ಲಾ 194 ಸೈನಿಕರನ್ನ ಕೂಡ ರಕ್ಷಿಸುತ್ತೆ. ಅಂದು ಚೆರ್ ಅಮಿ ಪಾರಿವಾಳ ಇರದೇ ಇರ್ತಿದ್ರೆ ಅಷ್ಟೂ ಸೈನಿಕರು ಆ ಬೆಟ್ಟದಲ್ಲೇ ಸತ್ತು ಹೋಗಿದ್ರು. ಗಾಯಗೊಂಡಿದ್ರಿಂದಾಗಿ 1919 ಜೂನ್ 13ರಂದು ಚೆರ್ ಅಮಿ ಪಾರಿವಾಳ ಕೊನೆಯುಸಿರೆಳೆಯುತ್ತೆ. ಬಳಿಕ ಆ ಪಾರಿವಾಳಕ್ಕೆ ಸೇನಾ ಪದಕ ನೀಡಿ ಗೌರವ ಸಲ್ಲಿಸಲಾಗುತ್ತೆ.
ಇನ್ನೂ ಗೂಢಾಚಾರಿಕೆಗೆ, ಸಂದೇಶ ರವಾನಿಸೋಕೆ ಪಾರಿವಾಳಗಳನ್ನ ಬಳಸೋಕೂ ಒಂದು ನಿರ್ದಿಷ್ಟ ಕಾರಣ ಇದೆ. ತಾವು ಎಲ್ಲಿಂದ ಹಾರಾಟ ಶುರು ಮಾಡಿದ್ವೋ, ಅದೆಷ್ಟೋ ದೂರ ಹಾರಿದ್ರೂ ಮರಳಿ ಅಲ್ಲಿಗೇ ಬರೋ ವಿಶೇಷ ಸಾಮರ್ಥ್ಯ ಪಾರಿವಾಳಗಳಿಗಿವೆ. ಹೀಗಾಗಿ 1917ರಲ್ಲಿ ಅಮೆರಿಕದ ಸಿಐಎ ಪಾರಿವಾಳಗಳ ಮೂಲಕ ಗೂಢಾಚಾರಿಕೆ ನಡೆಸೋಕೆ ನಿರ್ಧರಿಸಿತ್ತು. ಪಾರಿವಾಳಗಳಿಗೆ ವಿಶೇಷ ತರಬೇತಿ ನೀಡಿ, ಅವುಗಳ ಕಾಲಿಗೆ ಕ್ಯಾಮರಾ ಕಟ್ಟಿ ಹಲವು ಸ್ಪೈ ಆಪರೇಷನ್ಗಳನ್ನ ಅಮೆರಿಕ ಮಾಡಿದೆ. ಮಹಾಯುದ್ಧ ಸೇರಿದಂತೆ ವಿವಿಧ ಸಂದರ್ಭಗಳಲ್ಲಿ ಪಾರಿವಾಳಗಳ ಕಾಲಿಗೆ ಕಟ್ಟಿ ತೆಗೆಯಲಾಗಿದ್ದ ಫೋಟೋಗಳನ್ನ 2019ರಲ್ಲಿ ಸಿಐಎ ರಿಲೀಸ್ ಕೂಡ ಮಾಡಿತ್ತು. ಕೋಲ್ಡ್ ವಾರ್ ಟೈಮ್ನಲ್ಲಿ ರಷ್ಯಾ ರಾಜಧಾನಿ ಮಾಸ್ಕೋಗೂ ಅಮೆರಿಕ ತನ್ನ ಪಾರಿವಾಳಗಳನ್ನ ಕಳುಹಿಸಿತ್ತು. ರಷ್ಯಾ ಸಬ್ಮರೀನ್ಗಳನ್ನ ನಿರ್ಮಿಸ್ತಿರೋದನ್ನ ಇದೇ ಪರಿವಾಳಗಳು ಪತ್ತೆ ಹಚ್ಚಿದ್ವು. ಪಾರಿವಾಳಗಳು ನೆಲಕ್ಕೆ ತುಂಬಾ ಹತ್ತಿರದಲ್ಲೇ ಹಾರೋದ್ರಿಂದ ಅವುಗಳ ಮೂಲಕ ಬೇಹುಗಾರಿಕೆ ಮಾಡೋದು ಸುಲಭ. ಕಟ್ಟಡದಲ್ಲಿರೋ ಕಿಟಕಿ, ಸಣ್ಣ ಗ್ಯಾಪ್ ಇದ್ರೂ ಪಾರಿವಾಳಗಳು ಅದ್ರ ಮೂಲಕ ಎಂಟ್ರಿಯಾಗುತ್ತೆ. ಒಂದೇ ಕಟ್ಟಡದಲ್ಲಿ ದಿನಗಟ್ಟಲೆ ವಾಸಿಸ್ತವೆ. ಅದ್ರ ಕಾಲಿಗೆ ಕ್ಯಾಮರಾ ಕಟ್ಟಿ ಕಾರಿನಲ್ಲಿ ಹೋಗೋರನ್ನ ಕೂಡ ಪತ್ತೆ ಹಚ್ಚಲಾಗುತ್ತೆ. ಇನ್ನು ಪಾರಿವಾಳಗಳು ಏಕಕಾಲಕ್ಕೆ 700 ಮೈಲಿ ದೂರ ಹಾರುವಂಥಾ ಸಾಮರ್ಥ್ಯ ಹೊಂದಿವೆ. ಗಂಟೆಗೆ 140 ಕಿಲೋ ಮೀಟರ್ ದೂರ ಹಾರ್ತವೆ. ಎಲ್ಲಕ್ಕಿಂತ ಹೆಚ್ಚಾಗಿ ಎಲ್ಲಿಂದ ಹಾರಿದ್ವೋ, ಪುನ: ಅಲ್ಲಿಗೇ ಬಂದಿಳಿಯೋ ಕೆಪಾಸಿಟಿ ಪಾರಿವಾಳಕ್ಕಿದೆ. ದಾರಿ ತಪ್ಪಿ ಹೋದ್ರೂ ಕೆಲ ಸಮಯದ ಬಳಿಕ ಮತ್ತೆ ಎಲ್ಲಿಂದ ಹಾರಿದ್ವೋ ಅಲ್ಲಿಗೇ ಬಂದಿಳಿಯುತ್ತವೆ. ಪಾರಿವಾಳಗಳಿಗೆ ಇಥದ್ದೊಂದು ಸಾಮರ್ಥ್ಯವಿರೋದಕ್ಕೆ ಕಾರಣ ಏನು ಅನ್ನೋದಕ್ಕೆ ಇನ್ನೂ ಸರಿಯಾದ ಉತ್ತರ ಸಿಕ್ಕಿಲ್ಲ. ಈ ಬಗ್ಗೆ ಈಗಲೂ ಸಂಶೋಧನೆ ನಡೀತಾನೆ ಇದೆ. ಕೆಲ ಸಂಶೋಧಕರ ಪ್ರಕಾರ, ಸೂರ್ಯನ ಸಂಚಾರವನ್ನ ಗಮನಿಸಿ ಪಾರಿವಾಳಗಳು ಲೊಕೇಶನ್ ಪತ್ತೆ ಹಚ್ಚುತ್ತವಂತೆ. ಪಾರಿವಾಳಗಳು ಹಾರಾಟದ ವೇಳೆ ತಮ್ಮದೇ ಆದ ವಿಶೇಷ ನ್ಯಾವಿಗೇಶನ್ ಸಿಸ್ಟಮ್ನ್ನ ಬಳಸುತ್ತವೆ. ಜೊತೆಗೆ ಭೂಮಿಯ ಗರ್ಭದಲ್ಲಿರೋ ಅಯಸ್ಕಾಂತೀಯ ಅಂಶವನ್ನ ಬಳಸಿಕೊಂಡು ಪಾರಿವಾಳಗಲು ಟ್ರಾವೆಲ್ ಮಾಡ್ತವೆ. ಆದ್ರೆ ಆಯ್ಕೆಸ್ಕಾಂತೀಯ ಅಂಶವನ್ನ ಪಾರಿವಾಳ ಹೇಗೆ ಗ್ರಾಸ್ಪ್ ಮಾಡ್ತಿವೆ ಅನ್ನೋದು ಇದುವರೆಗೂ ನಿಗೂಢವಾಗಿಯೇ ಇದೆ. ಹಾಗೆಯೇ ತಾವು ಹಾರಾಟ ಆರಂಭಿಸಿದ ಏರಿಯಾದ ಸೌಂಡ್ನ್ನ ಗ್ರಾಸ್ಪ್ ಮಾಡಿ, ಮತ್ತದೇ ಸ್ಥಳಕ್ಕೆ ಪಾರವಾಳಗಳು ಬಂದಿಳಿಯಬಹುದು. ಅಂದ್ರೆ ಶಬ್ದವನ್ನ ಬಳಸಿಯೂ ಹಾರಾಟ ಆರಂಭಿಸಿದ ಪ್ರದೇಶ ಯಾವುದು ಅನ್ನೋದನ್ನ ಪತ್ತೆ ಹಚ್ಚಬಹುದು ಅಂತಾ ಕೆಲ ಸಂಶೋಧನ ವರದಿಯಲ್ಲಿ ಉಲ್ಲೇಖವಾಗಿದೆ. ಒಂದು ವೇಳೆ ಮುಂಬೈನಲ್ಲಿ ಸೆರೆಯಾದ ಪರಿವಾಳವನ್ನ ಅಂದು ಯಾರು ಕ್ಯಾಪ್ಚರ್ ಮಾಡದೆ ಇರ್ತಿದ್ರೆ ಕೆಲ ದಿನಗಳ ಬಳಿಕ ಅದು ತೈವಾನ್ನಲ್ಲಿರೋ ತನ್ನ ಮಾಲೀಕನ ಮನೆಗೇ ವಾಪಸ್ ಆಗ್ತಿತ್ತೋ ಏನೊ. ಅಥವಾ ಈಗ ಅದನ್ನ ರಿಲೀಸ್ ಮಾಡಲಾಗಿದ್ದು, ಮತ್ತೆ ತೈವಾನ್ಗೆ ಹೋಗುತ್ತೋ ಗೊತ್ತಿಲ್ಲ. ಅಂತೂ ಪಾರಿವಾಳ ಅನ್ನೋದು ಅತ್ಯಂತ ಸೂಕ್ಷ್ಮ ಪಕ್ಷಿ ಅನ್ನೋದ್ರಲ್ಲಿ ಯಾವುದೇ ಡೌಟ್ ಇಲ್ಲ. ಇದೇ ಕಾರಣಕ್ಕೆ ಅವುಗಳನ್ನ ಗೂಢಾಚಾರಿಕೆಗೂ ಬಳಸಲಾಗ್ತಿದೆ.