ಇವರೇ ನೋಡಿ ಶ್ರೀಮಂತ ಬಾಲನಟಿ! – ಈಕೆ ನಟಿಸಿದ ಸಿನಿಮಾ ಗಳಿಸಿದ್ದು ಬರೋಬ್ಬರಿ 800 ಕೋಟಿ!

ಇವರೇ ನೋಡಿ ಶ್ರೀಮಂತ ಬಾಲನಟಿ! – ಈಕೆ ನಟಿಸಿದ ಸಿನಿಮಾ ಗಳಿಸಿದ್ದು ಬರೋಬ್ಬರಿ 800 ಕೋಟಿ!

ಈಕೆ ಈಗ ಸೂಪರ್ ಸ್ಟಾರ್ ಕಿಡ್.. ಹಿರಿಯ ಕಲಾವಿದರಿಗೆ ಸೆಡ್ಡು ಹೊಡೆದು ಮಿಂಚುತ್ತಿದ್ದಾಳೆ‌. ಈಕೆ ಪಡೆಯೊ ಸಂಭಾವನೆ ವಿಷ್ಯ  ಕೇಳಿದ್ರೆ ಅಚ್ಚರಿಯಾಗುತ್ತೆ.. ಈಕೆ ನಟಿಸಿದ ಸಿನಿಮಾ ಗಳಿಸಿದ್ದು ಬರೋಬ್ಬರಿ 800 ಕೋಟಿ! ಅಷ್ಟಕ್ಕೂ ಈ ಸ್ಟಾರ್ ಕಿಡ್ ಸಾರಾ ಸಕ್ಸಸ್ ಸೀಕ್ರೇಟ್  ಬಗ್ಗೆ ಮಾಹಿತಿ ಇಲ್ಲಿದೆ.

ಸಾರಾ ಅರ್ಜುನ್ ಬಾಲ ನಟಿಯಾಗಿ ತಾನು ಪಡೆಯುವ ಸಂಭಾವನೆಯಲ್ಲಿ ಹೊಸ ದಾಖಲೆಯೊಂದನ್ನು ಸೃಷ್ಟಿಸಿದ್ದಾರೆ . ಈ ಸಾರಾ ಅರ್ಜುನ್‌ ಬೇರೆ ಯಾರು ಅಲ್ಲ.. ಎರಡು ದಶಕಗಳಿಂದ ತೆಲುಗು ಮತ್ತು ಹಿಂದಿ ಚಿತ್ರರಂಗದಲ್ಲಿ ಹೆಸರು ಮಾಡಿರುವ ನಟ ರಾಜ್ ಅರ್ಜುನ್ ಅವರ ಪುತ್ರಿ. ಸಾರಾ ಕೇವಲ ಒಂದೂವರೆ ವರ್ಷದವಳಿದ್ದಾಗ ಮನರಂಜನಾ ಕ್ಷೇತ್ರದಲ್ಲಿ ತನ್ನ ಪ್ರಯಾಣ ಪ್ರಾರಂಭಿಸಿದ್ದರು. ತನ್ನ ಹೆತ್ತವರೊಂದಿಗೆ ಮಾಲ್‌ನಲ್ಲಿ ಚಿತ್ರೀಕರಿಸಿದ ಮೊದಲ ಜಾಹೀರಾತಿನಲ್ಲಿ ಕಾಣಿಸಿಕೊಂಡರು. 2 ನೇ ವಯಸ್ಸಿನಲ್ಲಿ, ನಿರ್ದೇಶಕ ವಿಜಯ್, ಸಾರಾಳ ಜಾಹೀರಾತು ನಿರ್ದೇಶಿಸಿದ್ದರು, ನಂತರ ಅದೇ ನಿರ್ದೇಶಕರ ದೈವ ತಿರುಮಗಳು ಚಿತ್ರದ ಮೂಲಕ ನಟಿಸಿ  ಮೊದಲ ಬ್ರೇಕ್ ಪಡೆದರು. ಬಳಿಕ ತನ್ನ 5 ನೇ ವಯಸ್ಸಿನಲ್ಲಿ ಸಾರಾ 404 ಚಿತ್ರದಲ್ಲಿ ನಟಿಸುವ ಮೂಲಕ ಹಿಂದಿ ಚಿತ್ರರಂಗಕ್ಕೆ ಕಾಲಿಟ್ಟರು.

ಇದನ್ನೂ ಓದಿ: ರೈಲಿನಲ್ಲಿ ಪ್ರಯಾಣಿಸುವಾಗ ಜೋರಾಗಿ ಮಾತಾಡಿದ್ರೆ ಹುಷಾರ್!‌ – ನಿಮ್ಮ ಮೇಲೆ ಬೀಳುತ್ತೆ ಕೇಸ್!

ಸಾರಾ ಅರ್ಜುನ್,  ನಂತರ ಸಲ್ಮಾನ್ ಖಾನ್ ಅವರ ಜೈ ಹೋ, ಇಮ್ರಾನ್ ಹಶ್ಮಿ ಅವರ ಏಕ್ ಥಿ ದಯಾನ್, ಐಶ್ವರ್ಯಾ ರೈ ಸೇರಿದಂತೆ ಹಲವು ಸೂಪರ್‌ ಸ್ಟಾರ್‌ಗಳೊಂದಿಗೆ ದೊಡ್ಡ ಬಜೆಟ್ ಚಿತ್ರಗಳಲ್ಲಿ ಅವಕಾಶ ಪಡೆದರು. ಮಣಿರತ್ನಂ ಅವರ ಪೊನ್ನಿಯಿನ್ ಸೆಲ್ವನ್ ಚಿತ್ರದಲ್ಲಿ ಐಶ್ವರ್ಯ ರೈ ಅವರ ಪಾತ್ರವಾಗಿದ್ದ ನಂದಿನಿಯ ಯವ್ವನದ  ಪಾತ್ರದಲ್ಲಿ ಅಭಿನಯಿಸಿದ್ದರು. ಇದು 2021 ರಲ್ಲಿ ಸಾರಾ ಅವರಿಗೆ ದೊಡ್ಡ ಬ್ರೇಕ್ ನೀಡಿತ್ತು. ಅವರು ಭಾಗ 1 ರಲ್ಲಿ ಸಣ್ಣ ಪಾತ್ರವನ್ನು ಹೊಂದಿದ್ದರು ಆದರೆ ಭಾಗ 2 ರಲ್ಲಿ ದೊಡ್ಡದಾದ, ಹೆಚ್ಚು ತಿರುಳಿರುವ ಪ್ರಮುಖ ಪಾತ್ರ ಹೊಂದಿದ್ದರು. ಒಟ್ಟಿಗೆ, ಎರಡು ಭಾಗಗಳ ಚಿತ್ರ ಬಾಕ್ಸ್ ಆಫೀಸ್ನಲ್ಲಿ 800 ಕೋಟಿ ರೂಪಾಯಿಗೂ ಹೆಚ್ಚು ಗಳಿಕೆ ಮಾಡಿಕೊಂಡಿತ್ತು. ಇದೇ ಚಿತ್ರ ಈಕೆಗೆ ಭಾರತದಾದ್ಯಂತ ಹೆಚ್ಚಿನ ಮನ್ನಣೆಯನ್ನು ನೀಡಿತು. ಸಾರಾ 2023ರಲ್ಲಿ 10 ಕೋಟಿ ರೂಪಾಯಿಗಳ ಒಟ್ಟು ಸಂಭಾವನೆ ಹೊಂದಿದ್ದರು ಎಂದು ವರದಿಯಾಗಿದೆ. ಇದು ಅವರನ್ನು ಭಾರತದ ಅತ್ಯಂತ ಶ್ರೀಮಂತ ಬಾಲನಟಿಯನ್ನಾಗಿ ಮಾಡಿದೆ. ಆದರೆ, ಈಗ 18 ವರ್ಷ ತುಂಬುತ್ತಿದ್ದಂತೆ ಬಾಲ ನಟಿಯಾಗಿ ಅವಕಾಶವನ್ನು ಸಾರಾ ಕಳೆದುಕೊಂಡಿದ್ದಾರೆ.

Shwetha M