ನಾನು ಸತ್ತಿಲ್ಲ ಬದುಕಿದ್ದೇನೆ – ನಿನ್ನೆ ಸತ್ತಿರುವ ಪೂನಂ ಪಾಂಡೆ ಇವತ್ತು ಜೀವಂತ – ಇಷ್ಟೆಲ್ಲಾ ಬಿಟ್ಟಿ ಪ್ರಚಾರ ಬೇಕಿತ್ತಾ ಈ ನಟಿಗೆ?
ಇಂಟರ್ನೆಟ್ನಲ್ಲಿ ಈಗ ಪೂನಂ ಪಾಂಡೆಯದ್ದೇ ಸುದ್ದಿ. ಶುಕ್ರವಾರ ಸತ್ತಿರುವ ಸುದ್ದಿ ವೇಗವಾಗಿ ಹಬ್ಬಿದರೆ, ಶನಿವಾರ ಬದುಕಿರುವ ಸುದ್ದಿ ಹರಿದಾಡುತ್ತಿದೆ. ಹಾಗಾದರೆ, ಸದಾ ವಿವಾದಗಳಿಂದಲೇ ಸುದ್ದಿಯಾಗ್ತಿದ್ದ ನಟಿ ಪೂನಂ ಪಾಂಡೆ ಮತ್ತೊಮ್ಮೆ ಜನರ ಭಾವನೆಗಳ ಜೊತೆ ಚೆಲ್ಲಾಟ ಆಡಿದ್ರಾ? ಯಾಕೆಂದರೆ, ಮಾಡೆಲ್ ಹಾಗೂ ನಟಿ ಪೂನಂ ಪಾಂಡೆ ಸಾವಿನ ಸುದ್ದಿಗೆ ಸ್ಫೋಟಕ ಟ್ವಿಸ್ಟ್ ಸಿಕ್ಕಿದೆ.
ಇದನ್ನೂ ಓದಿ: ಬಾಲಿವುಡ್ನ ಹಾಟ್ ನಟಿ ಪೂನಂ ಪಾಂಡೆ ಇನ್ನು ನೆನಪು ಮಾತ್ರ – ಕ್ಯಾನ್ಸರ್ಗೆ ಬಲಿಯಾದ ನಟಿಗೆ ಅಭಿಮಾನಿಗಳ ಅಂತಿಮ ನಮನ
ಪೂನಂ ಪಾಂಡೆ ಮೃತಪಟ್ಟಿದ್ದಾರೆ ಎಂದು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಲಾಯಿತು. ಅವರ ಮ್ಯಾನೇಜರ್ ಪಾರುಲ್ ಚಾವ್ಲಾ ಕೂಡ ಈ ವಿಚಾರ ಖಚಿತಪಡಿಸಿದ್ದರು. ದೊಡ್ಡ ದೊಡ್ಡ ಸೆಲೆಬ್ರಿಟಿಗಳು ಅವರ ಸಾವಿಗೆ ಸಂತಾಪ ಸೂಚಿಸಿದರು. ಆದರೆ, ಫೆಬ್ರವರಿ 3ರಂದು ಪೂನಂ ಪಾಂಡೆ ಹೊಸ ವಿಡಿಯೋ ಹಂಚಿಕೊಂಡಿದ್ದಾರೆ ಪೂನಂ. ತಾವು ಬದುಕಿರುವುದಾಗಿ ಅವರು ಹೇಳಿದ್ದಾರೆ.
ಪೂನಂ ಪಾಂಡೆ ‘ನಾನು ಸತ್ತಿಲ್ಲ ಬದುಕಿದ್ದೇನೆ’ ಎಂದು ಪೋಸ್ಟ್ ಹಾಕಿದ್ದಾರೆ. ತಮ್ಮ ಸಾವಿನ ಬಗ್ಗೆ ತಾವೇ ಸುಳ್ಳು ಸುದ್ದಿ ಹಬ್ಬಿಸಿಕೊಳ್ಳಲು ಒಂದು ಕಾರಣವೂ ಇದೆಯಂತೆ. ಅದುವೇ ಗರ್ಭಕಂಠ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುವುದು. ‘ನಾನು ಬದುಕಿದ್ದೇನೆ. ಗರ್ಭಕಂಠ ಕ್ಯಾನ್ಸರ್ನಿಂದ ನಾನು ಸತ್ತಿಲ್ಲ. ಆದರೆ, ಈ ರೋಗವನ್ನು ಹೇಗೆ ಎದುರಿಸಬೇಕು ಎನ್ನುವ ಜ್ಞಾನ ಇಲ್ಲದೆ ಸಾವಿರಾರು ಮಹಿಳೆಯರು ಸಾಯುತ್ತಿದ್ದಾರೆ. ಇತರ ಕೆಲವು ಕ್ಯಾನ್ಸರ್ಗಳಿಗಿಂತ ಇದು ಭಿನ್ನವಾಗಿದೆ. ಗರ್ಭಕಂಠದ ಕ್ಯಾನ್ಸರ್ ಸಂಪೂರ್ಣವಾಗಿ ತಡೆಯಬಹುದು. HPV ಲಸಿಕೆ ಮತ್ತು ಆರಂಭಿಕ ಪತ್ತೆ ಪರೀಕ್ಷೆಗಳಿಂದ ಇದು ಸಾಧ್ಯ. ಈ ಕಾಯಿಲೆಯಿಂದ ತಮ್ಮ ಪ್ರಾಣ ಕಳೆದುಕೊಳ್ಳದಂತೆ ನೋಡಿಕೊಳ್ಳುವುದು ನಮ್ಮ ಕೈಯಲ್ಲೇ ಇದೆ ಎಂದು ಅವರು ಹೇಳಿದ್ದಾರೆ. DeathToCervicalCancer ಎನ್ನುವ ಹ್ಯಾಶ್ ಟ್ಯಾಗ್ ಹಾಕಿದ್ದಾರೆ. ಯಾವ ಬಗ್ಗೆ ಹೇಗೆ ಬೇಕಾದರೂ ಜಾಗೃತಿ ಮೂಡಿಸಿ. ಆದರೆ, ಸಾವಿನ ವಿಚಾರದಲ್ಲಿ ಬಿಟ್ಟಿ ಪ್ರಚಾರ ಬೇಕಿತ್ತಾ..?
ಪೂನಂ ಪಾಂಡೆ ಸತ್ತಿರೋ ಸುದ್ದಿ ಕೇಳಿ ಅಭಿಮಾನಿಗಳು ನಿನ್ನೆಯಿಂದಲೇ ನಂಬಲು ರೆಡಿಯಿರಲಿಲ್ಲ. ಈ ಬಗ್ಗೆ ಸ್ಪಷ್ಟನೆ ಕೇಳೋಣ ಅಂದರೆ, ಅಂದರೆ ಕುಟುಂಬದವರು ನಾಟ್ ರೀಚೇಬಲ್.. ಇನ್ನು ಪೂನಂ ಪಾಂಡೆ ಬಾಡಿ ಕೂಡಾ ಮಿಸ್ಸಿಂಗ್. ಯಾರೊಬ್ಬರೂ ಕೂಡಾ ನಟಿಯ ಅಂತಿಮ ದರ್ಶನ ಮಾಡಿಲ್ಲ. ಯಾಕೆಂದರೆ, ಕುಟುಂಬದವರು ಈ ಬಗ್ಗೆ ಗುಪ್ ಚುಪ್.. ಪೂನಂ ಪಾಂಡೆಗೆ ಗರ್ಭಕಂಠದ ಕ್ಯಾನ್ಸರ್ ಇತ್ತು ಅಂದಾದರೆ ಇಷ್ಟು ಬೇಗ ಸಾಯಲು ಸಾಧ್ಯವೇ ಇಲ್ಲ ಎಂದು ಅಭಿಮಾನಿಗಳು ಅನುಮಾನ ವ್ಯಕ್ತಪಡಿಸಿದ್ದರು. ಇದೀಗ ಅಭಿಮಾನಿಗಳ ಊಹೆ ನಿಜವಾಗಿದೆ. ಆದರೆ, ಈ ಸಾವು, ಸತ್ಯ, ಸುಳ್ಳುಗಳ ಬಗ್ಗೆ ಸ್ಪಷ್ಟ ಚಿತ್ರಣ ಸಿಗಬೇಕಾದರೆ, ಪೂನಂ ಪಾಂಡೆಯೇ ಪ್ರತ್ಯಕ್ಷವಾಗಿ ಹೇಳಬೇಕಷ್ಟೇ. ನಟಿಯ ಬಗ್ಗೆ ಕುಟುಂಬದವರು ಇಷ್ಟೊಂದು ಸೀಕ್ರೆಟ್ ಮೆಂಟೇನ್ ಮಾಡ್ತಿರೋದು ಯಾಕೆ ಎಂಬ ಬಗ್ಗೆಯೂ ನಟಿಯೇ ಉತ್ತರ ಕೊಡಬೇಕಷ್ಟೇ.