ಇರಾಕ್  ಮೇಲೆ ಪ್ರತಿಕಾರ ತೀರಿಸಿಕೊಂಡ ಅಮೆರಿಕ –  ಏರ್​ಸ್ಟ್ರೈಕ್ ನಡೆಸಿ 85 ಟಾರ್ಗೆಟ್ಸ್​ ಧ್ವಂಸ, 18 ಮಂದಿಯ ಹತ್ಯೆ..!

ಇರಾಕ್  ಮೇಲೆ ಪ್ರತಿಕಾರ ತೀರಿಸಿಕೊಂಡ ಅಮೆರಿಕ –  ಏರ್​ಸ್ಟ್ರೈಕ್ ನಡೆಸಿ 85 ಟಾರ್ಗೆಟ್ಸ್​ ಧ್ವಂಸ, 18 ಮಂದಿಯ ಹತ್ಯೆ..!

ಜೋರ್ಡಾನ್‌ನಲ್ಲಿರುವ ಅಮೆರಿಕನ್ ಪೋಸ್ಟ್ ಮೇಲಿನ ದಾಳಿಗೆ ಅಮೆರಿಕ ಸಿರಿಯಾ ಮತ್ತು ಇರಾಕ್ ಮೇಲೆ ಪ್ರತಿಕಾರ ತೀರಿಸಿಕೊಂಡಿದೆ. ಇರಾಕ್, ಸಿರಿಯಾದಲ್ಲಿ ಅಮೆರಿಕ ಮಿಲಿಟರಿ ಕಾರ್ಯಾಚರಣೆ ನಡೆಸಿದೆ. ಈ ವೈಮಾನಿಕ ದಾಳಿ ನಡೆಸಿ 18 ಪ್ರೊ-ಇರಾನ್ ಫೈಟರ್​ಗಳನ್ನು ಹೊಡೆದು ಹಾಕಲಾಗಿದೆ ಎಂದು ಅಮೆರಿಕ ಸೇನೆ ಹೇಳಿದೆ.

ಇದನ್ನೂ ಓದಿ:ರಾಜಸ್ಥಾನ ಮಾಜಿ ಸಿಎಂ ಅಶೋಕ್‌ ಗೆಹ್ಲೋಟ್‌ಗೆ ಹಂದಿ ಜ್ವರ & ಕೋವಿಡ್‌ ಪಾಸಿಟಿವ್‌ – ಆಸ್ಪತ್ರೆಗೆ ದಾಖಲು 

ಕಳೆದ ಭಾನುವಾರ ಜೋರ್ಡಾನ್‌ನಲ್ಲಿರುವ ಅಮೆರಿಕನ್ ಪೋಸ್ಟ್ ಮೇಲೆ ದಾಳಿ ನಡೆದಿತ್ತು. ಸಿರಿಯಾ ಗಡಿಯಲ್ಲಿ ನಿರ್ಮಿಸಲಾಗಿದ್ದ ಈ ಪೋಸ್ಟ್ ಮೇಲೆ ಡ್ರೋನ್ ದಾಳಿಯಾಗಿತ್ತು. ಪರಿಣಾಮ ಮೂವರು ಅಮೆರಿಕ ಯೋಧರು ಸಾವನ್ನಪ್ಪಿದ್ದರು. 41 ಸೈನಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ದಾಳಿಗೆ ಇರಾಕ್ ಬೆಂಬಲಿತ ಸೇನೆಯೇ ಕಾರಣ ಎಂದು ಅಮೆರಿಕ ಆರೋಪಿಸಿತ್ತು. ಈ ಬೆನ್ನಲ್ಲೇ ಅಮೆರಿಕ ಇರಾಕ್, ಸಿರಿಯಾದಲ್ಲಿ ಇರಾನ್ ನೆಲೆಗಳ ಮೇಲೆ ಅಮೆರಿಕ ಏರ್​ಸ್ಟ್ರೈಕ್ ನಡೆಸಿದೆ.

ಈ ಏರ್‌ಸ್ಟ್ರೈಕ್‌ ನಲ್ಲಿ ಒಟ್ಟು 85ಕ್ಕೂ ಹೆಚ್ಚು ಇರಾಕ್ ನ ರೆವಲ್ಯೂಷನರಿ ಗಾರ್ಡ್ಸ್​ (IRGC) ಘಟಕಗಳ ಮೇಲೆ ದಾಳಿಯಾಗಿದೆ. ವಿಶೇಷವಾಗಿ ಇರಾಕ್ ​ ಕುಡ್ಸ್ ಫೋರ್ಸ್​ ಗುರಿಯಾಗಿಸಿಕೊಂಡು ದಾಳಿ ಮಾಡಲಾಗಿದೆ. ಅಮೆರಿಕ ಸೇನೆ ನೀಡಿರುವ ಮಾಹಿತಿ ಪ್ರಕಾರ, ಕಮಾಂಡ್, ಕಂಟ್ರೋಲ್ ಸೆಂಟರ್, ರಾಕೆಟ್, ಕ್ಷಿಪಣಿ ಮತ್ತು ಡ್ರೋಣ್ ಸಂಗ್ರಹಣಾ ಕೇಂದ್ರ, ಲಾಜಿಸ್ಟಿಕ್ಸ್, ಸ್ಫೋಟಕ ವಸ್ತುಗಳನ್ನು ಸಂಗ್ರಹಿಸಿಟ್ಟಿದ್ದ ಒಟ್ಟು 7 ಸ್ಥಳಗಳಲ್ಲಿ ದಾಳಿಯಾಗಿದೆ. ಸಿರಿಯಾದಲ್ಲಿ ನಾಲ್ಕು, ಇರಾಕ್​​ನಲ್ಲಿ ಮೂರು ಸ್ಥಳಗಳ ಮೇಲೆ ದಾಳಿ ಮಾಡಲಾಗಿದೆ ಎಂದು ಅಮೆರಿಕ ಹೇಳಿದೆ.

Shwetha M