ಅಂದು ಕ್ರೀಡಾಸ್ಫೂರ್ತಿ ಬಗ್ಗೆ ಮಾತನಾಡಿದ್ದ ಬೆನ್‌ಸ್ಟೋಕ್‌ ಈಗ ಮಾಡಿದ್ದೇನು?- ಜಸ್ಪ್ರಿತ್ ಬುಮ್ರಾರನ್ನ ಸ್ಟಂಪ್ ಮಾಡೋಕೆ ಯತ್ನಿಸಿದ್ದು ಯಾಕೆ?

ಅಂದು ಕ್ರೀಡಾಸ್ಫೂರ್ತಿ ಬಗ್ಗೆ ಮಾತನಾಡಿದ್ದ ಬೆನ್‌ಸ್ಟೋಕ್‌ ಈಗ ಮಾಡಿದ್ದೇನು?- ಜಸ್ಪ್ರಿತ್ ಬುಮ್ರಾರನ್ನ ಸ್ಟಂಪ್ ಮಾಡೋಕೆ ಯತ್ನಿಸಿದ್ದು ಯಾಕೆ?

ಫಸ್ಟ್​ ಟೆಸ್ಟ್​ ಮ್ಯಾಚ್​​ನಲ್ಲಿ ಸೆಕೆಂಡ್​​ ಇನ್ನಿಂಗ್ಸ್​ ವೇಳೆ ಇಂಗ್ಲೆಂಡ್​​ನ ವಿಕೆಟ್ ಕೀಪರ್ ಬೆನ್​ ಫೋಕ್ಸ್​ ಜಸ್ಪ್ರಿತ್ ಬುಮ್ರಾರನ್ನ ಸ್ಟಂಪ್ ಮಾಡೋಕೆ ಯತ್ನಿಸಿರೋದು ಭಾರಿ ಚರ್ಚೆಗೆ ಕಾರಣವಾಗಿದೆ. ಈ ಹಿಂದೆ ಸ್ಪಿರಿಟ್ ಆಫ್ ಕ್ರಿಕೆಟ್ ಬಗ್ಗೆ ಮಾತನಾಡಿದ್ದ ಇದೇ ಇಂಗ್ಲೆಂಡ್​ ಟೀಮ್​ ಬಗ್ಗೆಯೇ ಈಗ ನಾನಾ ರೀತಿಯಲ್ಲಿ ಪ್ರಶ್ನೆಗಳು ಎದುರಾಗಿವೆ.

ಇದನ್ನೂ ಓದಿ: ಮಯಾಂಕ್ ಅಗರ್ವಾಲ್ ವಿಮಾನದಲ್ಲಿ ಕುಡಿದಿರುವ ಡ್ರಿಂಕ್ಸ್ ಯಾವುದು ಗೊತ್ತಾ? – ಕನ್ನಡಿಗನ ಅದೃಷ್ಟ ಚೆನ್ನಾಗಿತ್ತು..!

2023ರಲ್ಲಿ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ನಡುವೆ ನಡೆದ ಆ್ಯಶಸ್ ಸರಣಿಯ 2ನೇ ಟೆಸ್ಟ್​ ಮ್ಯಾಚ್ ವೇಳೆ ಒಂದು ದೊಡ್ಡ ಹೈಡ್ರಾಮವೇ ನಡೆದಿತ್ತು. ಇಂಗ್ಲೆಂಡ್​ಗೆ ಗೆಲ್ಲೋಕೆ 371 ರನ್​​ಗಳ ಅವಶ್ಯಕತೆ ಇತ್ತು. ಐದು ವಿಕೆಟ್ ಕಳೆದುಕೊಂಡು ಇಂಗ್ಲೆಂಡ್ ತಂಡ ಸಂಕಷ್ಟದಲ್ಲಿತ್ತು. ಆಗ ಕ್ಯಾಪ್ಟನ್​​ ಬೆನ್​ಸ್ಟೋಕ್​ ಜೊತೆಗೂಡಿದ್ದು ಇಂಗ್ಲೆಂಡ್ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ಜಾನಿ ಬೇರ್​ಸ್ಟೋ. ಇಂಗ್ಲೆಂಡಿಗರ ಗೆಲುವಿನ ನಿರೀಕ್ಷೆಯ ಭಾರ ಈ ಇಬ್ಬರು ಆಟಗಾರರ ಮೇಲೆಯೇ ಇತ್ತು. ಬೇರ್​ಸ್ಟೋ 10 ರನ್​ ಗಳಿಸಿ ಆಡುತ್ತಿದ್ದಾಗ ಕ್ಯಾಮರೂನ್ ಗ್ರೀನ್ ಬೌನ್ಸರ್​ ಎಸೆಯುತ್ತಾರೆ. ಕೂಡಲೇ ಬೇರ್​​ಸ್ಟೋ ಹಾನಿಕಾರಕ ಬೌನ್ಸರ್​​ನಿಂದ ತಪ್ಪಿಸಿಕೊಳ್ತಾರೆ. ಬಾಲ್ ನೇರವಾಗಿ ಆಸ್ಟ್ರೇಲಿಯಾ ವಿಕೇಟ್ ಕೀಪರ್ ಅಲೆಕ್ಸ್ ಕ್ಯಾರಿ ಕೈ ಸೇರುತ್ತೆ. ಹೀಗಾಗಿ ಬೇರ್​​ಸ್ಟೋ ಕ್ರೀಸ್​ನ್ನ ಸ್ಕ್ರಾಚ್ ಮಾಡಿ ನಾನ್​​ಸ್ಟ್ರೈಕರ್ ಎಂಡ್​ನಲ್ಲಿದ್ದ ಬೆನ್​ಸ್ಟೋಕ್ ಬಳಿ ತೆರಳುತ್ತಾರೆ. ಆಗ ಆಸ್ಟ್ರೇಲಿಯಾ ಕೀಪರ್ ಅಲೆಕ್ಸ್​ ತಮ್ಮ ಕೈಯಲ್ಲಿದ್ದ ಬಾಲ್​ನ್ನ ನೇರವಾಗಿ ಸ್ಟಂಪ್​ಗೆ ಎಸೆಯುತ್ತಾರೆ. ಇಡೀ ಆಸ್ಟ್ರೇಲಿಯಾ ತಂಡ ಔಟ್​ಗಾಗಿ ಅಪೀಲ್ ಮಾಡುತ್ತೆ. ಫೈನಲ್​ ಡಿಸೀಶನ್​ನನ್ನ ಥರ್ಡ್​ ಅಂಪೈರ್​ಗೆ ರವಾನಿಸಲಾಗುತ್ತೆ. ಥರ್ಡ್ ಅಂಪೈರ್ ಒಂದಷ್ಟು ಸಮಯ ಪರಿಶೀಲನೆ ನಡೆಸಿ ಕೊನೆ ಔಟ್ ಕೊಟ್ಟು ಬಿಡ್ತಾರೆ. ಇತ್ತ ಜಾನಿ ಬೇರ್​ ಸ್ಟೋ ಮತ್ತು ಬೆನ್​ಸ್ಟೋಕ್ ಇಬ್ಬರೂ ಶಾಕ್​ಗೊಳಗಾಗಿದ್ರು. ಬೆನ್​ಸ್ಟೋಕ್ ನೇರವಾಗಿ ಆಸ್ಟ್ರೇಲಿಯಾ ನಾಯಕ ಪ್ಯಾಟ್​ ಕಮಿನ್ಸ್ ಜೊತೆ ಮಾತಿಗಿಳಿಯುತ್ತಾರೆ. ಆದ್ರೆ ಥರ್ಡ್​ ಅಂಪೈಟ್ ಸ್ಟಂಪ್ ಔಟ್ ಕೊಟ್ಟಿದ್ರಿಂದ ಬೇರ್​ಸ್ಟೋ ಅನಿವಾರ್ಯವಾಗಿ ಪೆವಿಲಿಯನ್​ನತ್ತ ತೆರಳಬೇಕಾಯ್ತು. ಅಸಲಿಗೆ ಜಾನ್ ಬೇರ್​ಸ್ಟೋ ಬಾಲ್​ ವಿಕೆಟ್ ಕೀಪರ್​​ ಕೈ ಸೇರುತ್ತಲೇ ಕ್ರೀಸ್ ಬಿಟ್ಟಿದ್ರು. ಆದ್ರೆ ಕ್ರೀಸ್ ಬಿಡುವ ಮುನ್ನ ಕಾಲಿನಿಂದ ಸ್ಕ್ರಾಚ್ ಮಾಡಿ ಸ್ಟಂಪ್ ಮಾರ್ಕ್ ಮಾಡಿ ಬಳಿಕ ಕ್ರೀಸ್ ಬಿಟ್ಟಿದ್ರು. ಅಷ್ಟರಲ್ಲೇ ಆಸ್ಟ್ರೇಲಿಯಾ ಕೀಪರ್ ಸ್ಟಂಪ್​​ಗೆ ಬಾಲ್ ಎಸೆದಿದ್ರು. ಆಸ್ಟ್ರೇಲಿಯಾ ಆಟಗಾರರ ಈ ನಡೆ ಬಗ್ಗೆ ಈಗ ಸಾಕಷ್ಟು ಟೀಕೆಗಳು ಕೇಳಿ ಬರ್ತಿದೆ. ಸ್ಪಿರಿಟ್ ಆಫ್ ದಿ ಗೇಮ್​​ನ್ನ ತೆಗೆದುಕೊಂಡ್ರೆ ಇಲ್ಲಿ ಆಸ್ಟ್ರೇಲಿಯನ್ನರು ಮಾಡಿರೋದು ತಪ್ಪು. ಜಂಟಲ್​ಮನ್ ಗೇಮ್​​ನ್ನ ಜಂಟಲ್​ಮನ್​​ಗಳಂತೆಯೇ ಆಡಬೇಕು ಅನ್ನೋ ಅಭಿಪ್ರಾಯ ಕೇಳಿ ಬಂದಿತ್ತು. ಈ ಒಂದು ಘಟನೆ, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವೆ ಕಿಚ್ಚು ಹಚ್ಚಿಬಿಡುತ್ತೆ. ಜಾನಿ ಬ್ಯಾರ್​ಸ್ಟೋ ಔಟಾಗಿದ್ರ ಬಗ್ಗೆ ಮಾತನಾಡಿದ್ದ ಇಂಗ್ಲೆಂಡ್ ಕ್ಯಾಪ್ಟನ್ ಬೆನ್​ ಸ್ಟೋಕ್ಸ್, ನಾನಾಗಿರುತ್ತಿದ್ರೆ ಆ ಪಂದ್ಯವನ್ನ ಗೆಲ್ಲೋಕೆ ಬಯಸ್ತಾ ಇರಲಿಲ್ಲ. ಮ್ಯಾಚ್ ಗೆಲ್ಲೋದಕ್ಕಿಂತಲೂ ಕ್ರೀಡಾಸ್ಪೂರ್ತಿ ಮೆರೆಯಬೇಕಾಗಿರೋದು ಮುಖ್ಯ ಅಂತಾ ಆಸ್ಟ್ರೇಲಿಯಾ ಟೀಮ್​ಗೆ ಟಾಂಗ್ ಕೊಟ್ಟಿದ್ರು.

ಆದರೆ, ಅಂದು ಕ್ರೀಡಾಸ್ಫೂರ್ತಿ ಬಗ್ಗೆ ಮಾತನಾಡಿದ್ದ ಅದೇ ಬೆನ್​​ಸ್ಟೋಕ್ಸ್ ಈಗ ಸೈಲೆಂಟ್ ಆಗಿದ್ದಾರೆ. ಯಾಕಂದ್ರೆ ಭಾರತ ವಿರುದ್ಧದ ಫಸ್ಟ್​ ಟೆಸ್ಟ್ ಮ್ಯಾಚ್​​ನಲ್ಲಿ ಜಸ್ಪ್ರಿತ್ ಬುಮ್ರಾ ಕ್ರೀಸ್​​ನಲ್ಲಿದ್ದಾಗ ಇಂಗ್ಲೆಂಡ್ ವಿಕೆಟ್​ ಕೀಪರ್ ಬೆನ್ ಫೋಕ್ಸ್ ಒಂದು ಕಂತ್ರಿ ಕೆಲಸ ಮಾಡಿದ್ರು. ಟಾಮ್ ಹಾರ್ಟ್ಲಿ ಎಸೆದ ಬಾಲ್​ಗೆ ಬುಮ್ರಾ ಹೊಡೆಯೋಕೆ ಮುಂದಾಗಿದ್ರು. ಆದ್ರೆ ಬಾಲ್​ ಬ್ಯಾಟ್​​ಗೆ ಕನೆಕ್ಟೇ ಆಗಿರಲಿಲ್ಲ. ಬೀಟ್ ಆಗಿ ಸೀದಾ ವಿಕೆಟ್ ಕೀಪರ್ ಕೈ ಸೇರುತ್ತೆ. ಆ ಬಾಲ್​ಗೆ ಹೊಡೆಯೋಕೆ ಆಗಿಲ್ವಲ್ಲಾ ಅಂತಾ ಜಸ್ಪ್ರಿತ್ ಫ್ರಸ್ಟ್ರೇಶನ್​​ನಲ್ಲಿ ನಿಂತಲ್ಲೇ ಜಂಪ್​ ಮಾಡ್ತಾರೆ. ಆಲ್​​ರೆಡಿ ಕ್ರೀಸ್​ನಲ್ಲೇ ಇದ್ರು, ಬಟ್ ಜಂಪ್ ಮಾಡ್ತಾರೆ ಅಷ್ಟೇ. ಜಂಪ್​ ಮಾಡಿದ ಕೂಡಲೇ ಇಂಗ್ಲೆಂಡ್ ವಿಕೆಟ್ ಕೀಪರ್ ಬೆನ್ ಫೋಕ್ಸ್ ಸ್ಟಂಪ್ ಮಾಡಿ, ಅಂಪೈರ್​​ಗೆ ಅಪೀಲ್ ಮಾಡ್ತಾರೆ. ಥರ್ಡ್​​ ಅಂಪೈರ್ ಚೆಕ್ ಮಾಡಿ. ನಾಟ್​ಔಟ್ ಕೊಡ್ತಾರೆ. ಯಾಕಂದ್ರೆ ಜಸ್ಪ್ರಿತ್ ಬುಮ್ರಾ ಅದಾಗ್ಲೇ ಕ್ರೀಸ್​​ನೊಳಗೇ ಇದ್ರು. ಬಟ್, ಇಂಗ್ಲೆಂಡ್ ಕೀಪರ್​​ನ ನಡೆಯಿಂದ ಬೆನ್​ಸ್ಟೋಕ್ಸ್​ ಹೇಳ್ತಿದ್ದ ಕ್ರೀಡಾ ಸ್ಫೂರ್ತಿ ಅಂದ್ರೆ ಇದೇನಾ ಅಂತಾ ಹಲವು ಪ್ರಶ್ನಿಸಿದ್ದಾರೆ.

 

Sulekha