ಸಾಕಾನೆ ಕ್ಯಾಂಪ್‌ ಮೇಲೆ ಬೀಟಮ್ಮ ಗ್ಯಾಂಗ್‌ನಿಂದ ರಾತ್ರೋರಾತ್ರಿ ದಾಳಿ! – ಅಭಿಮನ್ಯು ನೇತೃತ್ವದ ತಂಡ ಶಿಫ್ಟ್​​​​!

ಸಾಕಾನೆ ಕ್ಯಾಂಪ್‌ ಮೇಲೆ ಬೀಟಮ್ಮ ಗ್ಯಾಂಗ್‌ನಿಂದ ರಾತ್ರೋರಾತ್ರಿ ದಾಳಿ! – ಅಭಿಮನ್ಯು ನೇತೃತ್ವದ ತಂಡ ಶಿಫ್ಟ್​​​​!

ಚಿಕ್ಕಮಗಳೂರಿನಲ್ಲಿ ಕಾಡಾನೆ ಉಪಟಳ ಹೆಚ್ಚಾಗಿದೆ. ಕಳೆದ ಕೆಲವು ದಿನಗಳಿಂದ ಭೀಮ ಆನೆ ಸೇರಿದಂತೆ 30 ( ಭೀಟಮ್ಮ) ಆನೆಗಳ ಕಾಟಕ್ಕೆ ಸುತ್ತಮುತ್ತಲಿನ ಗ್ರಾಮಸ್ಥರು, ಅರಣ್ಯ ಅಧಿಕಾರಿಗಳು ಬೇಸತ್ತು ಹೋಗಿದ್ದಾರೆ. ಇದೀಗ ಕಾಡಾನೆ ಸೆರೆ ಕಾರ್ಯಾಚರಣೆ ಬಂದಿದ್ದ ಆನೆಗಳ ಕ್ಯಾಂಪ್‌ ಮೇಲೆ ಬೀಟಮ್ಮ ಗ್ಯಾಂಗ್‌ ರಾತ್ರೋ ರಾತ್ರಿ ಅಟ್ಯಾಕ್‌ ಮಾಡಲು ಯತ್ನಿಸಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಬಂಡೀಪುರದಲ್ಲಿ ರೈಲ್ವೇ ಯೋಜನೆಗೆ ವಿರೋಧ – ಸೋಶಿಯಲ್‌ ಮೀಡಿಯಾದಲ್ಲಿ ಶುರುವಾಯ್ತು #SaveBandipur ಅಭಿಯಾನ

ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಂಪೌಂಡ್ ಮುರಿದು ವಸತಿ ಶಾಲಾ ಆವರಣಕ್ಕೆ ಆನೆಗಳ ಹಿಂಡು ಎಂಟ್ರಿಕೊಟ್ಟಿದ್ದವು. ಶಾಲಾ ಆವರಣದಲ್ಲೇ 27 ಕ್ಕೂ ಅಧಿಕ ಆನೆಗಳು ಬೀಡುಬಿಟ್ಟಿದ್ದವು. ಇದು ಈಗ ಸುತ್ತಮುತ್ತಲಿನ ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಬೀಟಮ್ಮ ಗ್ಯಾಂಗ್ ಉಪಟಳಕ್ಕೆ ಬ್ರೇಕ್ ಹಾಕಲು ಸಾಕಾನೆ ಅಭಿಮನ್ಯು ನೇತೃತ್ವದ ತಂಡವನ್ನು ಕರೆಸಿಕೊಳ್ಳಲಾಗಿತ್ತು. ಅಭಿಮನ್ಯು  ಮತ್ತು ಆತನ ತಂಡ (ಕುಮ್ಕಿ) ಚಿಕ್ಕಮಗಳೂರು ತಾಲೂಕಿನ ಮತ್ತಾವರ ಗ್ರಾಮದಲ್ಲಿರುವ ಅರಣ್ಯ ಇಲಾಖೆಯ  ವಸತಿ ಗೃಹದ ಬಳಿ ಕ್ಯಾಂಪ್ ಹಾಕಲಾಗಿದೆ. ಆದ್ರೆ ಈ ಕ್ಯಾಂಪ್​​​ಗೆ ಬೀಟಮ್ಮ ಗ್ಯಾಂಗ್ ರಾತ್ರೋರಾತ್ರಿ​ ದಾಳಿ ಮಾಡಲು ಯತ್ನಿಸುತ್ತಿದೆ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ರಾತ್ರೋರಾತ್ರಿ ಕುಮ್ಕಿ ಆನೆಗಳ ಕ್ಯಾಂಪ್ ಶಿಫ್ಟ್ ಮಾಡಿದ್ದಾರೆ. ಬೀಟಮ್ಮ ಗ್ಯಾಂಗ್ ಆಲದಗುಡ್ಡೆ ಗ್ರಾಮದಿಂದ ಮತ್ತಾವರ ಗ್ರಮಾಕ್ಕೆ ಬಂದು ಬಂದು ನೆಲಸಿದೆ.

ಮತ್ತಾವರ ಗ್ರಾಮ ಸಮೀಪದ ಅರಣ್ಯದಲ್ಲಿ ಬೀಟಮ್ಮ ಗ್ಯಾಂಗ್ ಬೀಡುಬಿಟ್ಟಿದೆ. ಕುಮ್ಕಿ ಕ್ಯಾಂಪ್​​ನಲ್ಲಿ ಅಭಿಮನ್ಯು, ಮಹೇಂದ್ರ, ಭೀಮ ಧನಂಜಯ, ಸುಗ್ರೀವ, ಹರ್ಷ ಅಶ್ವತ್ಥಾಮ ಪ್ರಶಾಂತ ಎಂಬ ಹೆಸರಿನ ಆನೆಗಳಿವೆ. ಅಭಿಮನ್ಯು ಟೀಮ್ ಕಾರ್ಯಚರಣೆಗಾಗಿ ನಾಗರಹೊಳೆಯಿಂದ ಮತ್ತಾವರ ಗ್ರಾಮಕ್ಕೆ ಬಂದಿವೆ.

Shwetha M