ಉಪಕಾರ ಮಾಡಲು ಹೋಗಿ ಸಾಲದ ಶೂಲಕ್ಕೆ ಸಿಲುಕಿದ ದಂಪತಿ – ಸಾಯುವ ಮುನ್ನ ವಿಡಿಯೋದಲ್ಲಿ ಸೆರೆಯಾಯ್ತು ಕರುಣಾಜನಕ ಕಥೆ

ಉಪಕಾರ ಮಾಡಲು ಹೋಗಿ ಸಾಲದ ಶೂಲಕ್ಕೆ ಸಿಲುಕಿದ ದಂಪತಿ – ಸಾಯುವ ಮುನ್ನ ವಿಡಿಯೋದಲ್ಲಿ ಸೆರೆಯಾಯ್ತು ಕರುಣಾಜನಕ ಕಥೆ

ಬಾಳಿ ಬದುಕಬೇಕಿದ್ದ ಜೋಡಿ ಜೀವಗಳು. 5 ಲಕ್ಷ ರೂಪಾಯಿ ಸಾಲ ಮಾಡಿದ್ದೇ ಶೂಲವಾಗಿ ಹೋಗಿದೆ. ಪ್ರೀತಿಯಿಂದ ಸಂಸಾರ ಮಾಡಬೇಕಿದ್ದ ದಂಪತಿ ಚಿಕ್ಕ ವಯಸಿನಲ್ಲಿಯೇ ಇಹಲೋಕದ ಪಯಣ ಮುಗಿಸಿದ್ದಾರೆ. ಸಾಲದ ಸುಳಿಯಲ್ಲಿ ಸಿಲುಕಿ ಜೊತೆಯಲ್ಲೇ ಸಾವಿನ ಮನೆ ಸೇರಿದ್ದಾರೆ. ಸಾಯುವ ಮೊದಲು ದಂಪತಿ ಮಾಡಿರುವ ವಿಡಿಯೋ ನೋಡಿದರೆ ಹೃದಯ ಹಿಂಡುವಂತಿದೆ.

ಇದನ್ನೂ ಓದಿ: ಬಾವಿಗೆ ಹಾರಿದ ತಂಗಿ, ಕಾಪಾಡಲು ಹೋದ ಅಣ್ಣನೂ ಬದುಕಲಿಲ್ಲ – ಹೇ ವಿಧಿಯೇ ನಿನಗಿದು ಸರಿಯೇ..?

ಮೈಸೂರಿನ ಆಲನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ದಂಪತಿ ಜೊತೆಯಲ್ಲೇ ಸಾವಿಗೆ ಶರಣಾಗಿದ್ದಾರೆ. ಯರಗನಹಳ್ಳಿ ದಂಪತಿ ವಿಶ್ವ(34), ಸುಶ್ಮಾ(28) ಆತ್ಮಹತ್ಯೆ ಮಾಡಿಕೊಂಡವರು. ತರಕಾರಿ ವ್ಯಾಪಾರ ಮಾಡಿಕೊಂಡಿದ್ದ ಮೃತ ವಿಶ್ವ ಅವರು ತಮಗೆ ಪರಿಚಯಸ್ಥನಾಗಿದ್ದ ಶಿವು ಎಂಬುವವನಿಗೆ 5 ಲಕ್ಷ ರೂ. ಸಾಲ ಕೊಡಿಸಿದ್ದರು. ಚೋರನಹಳ್ಳಿ ರಾಜಣ್ಣ ಎಂಬುವವರ ಬಳಿ ತಮ್ಮ ಚಿನ್ನಾಭರಣ ಅಡವಿಟ್ಟು, ಕೆಲವರ ಬಳಿ ಸಾಲಕ್ಕೆ ಹಣ ಪಡೆದು ಶಿವುಗೆ ಸಾಲ ಕೊಡಿಸಿ ಸಹಾಯ ಮಾಡಿದ್ದರು. ಆದರೆ ಶಿವು ಸಾಲ ವಾಪಸ್ ನೀಡದೆ ತಕರಾರು ಮಾಡಿದ್ದ. ಇದರಿಂದಾಗಿ ಸಾಲಗಾರರ ಕಿರುಕುಳ ಹೆಚ್ಚಾಗಿತ್ತು. ಸಾಲ ತೀರಿಸದೆ ಚೋರನಹಳ್ಳಿ ರಾಜಣ್ಣ, ವಿಶ್ವ ಅವರ ಚಿನ್ನಾಭರಣ ಹಿಂದಿರುಗಿಸಲು ನಿರಾಕರಿಸಿದ್ದರು. ಇದರಿಂದ ನೊಂದ ವಿಶ್ವ ಸಾಲ ನೀಡಿದ್ದ ರಾಜಣ್ಣನ ವಿರುದ್ಧ ಕಿರುಕುಳ ಆರೋಪ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಆತ್ಮಹತ್ಯೆಗೂ ಮುನ್ನ ವಿಡಿಯೋ ಮಾಡಿ ಸಾಮಾಜಿಕ ಜಲತಾಣದಲ್ಲಿ ವಿಡಿಯೋ ಅಪ್ಲೋಡ್ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದಂಪತಿಗೆ ಮೂರು ವರ್ಷದ ಮಗಳಿದ್ದಾಳೆ. ಈ ಘಟನೆ ಸಂಬಂಧ ಮೈಸೂರಿನ ಆಲನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Sulekha