ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ಗೆ ಆರ್ಬಿಐ ನಿರ್ಬಂಧ! – ಕಾರಣವೇನು ಗೊತ್ತಾ?
ಪೇಡಿಎಂ ಗೆ ಆರ್ಬಿಐ ಬಿಗ್ ಶಾಕ್ ನೀಡಿದೆ. ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ಗೆ ಆರ್ಬಿಐ ನಿರ್ಬಂಧ ಹೇರಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಮಧ್ಯಂತರ ಬಜೆಟ್ ಮಂಡನೆ ಕ್ಷಣಗಣನೆ – ಸರ್ಕಾರದ ಖಜಾನೆಗೆ ಹರಿದು ಬಂತು ಲಕ್ಷಾಂತರ ಕೋಟಿ ರೂಪಾಯಿ..!
ಬ್ಯಾಂಕಿಂಗ್ ನಿಯಮಗಳ ಉಲ್ಲಂಘನೆ ಮಾಡಿದ ಹಿನ್ನೆಲೆ ಪೇಟಿಎಂಗೆ ಆರ್ಬಿಐ ನೋಟಿಸ್ ನೀಡಿದೆ. ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಯಾವುದೇ ಹೊಸ ಖಾತೆ ರಚಿಸುವಂತಿಲ್ಲ ಹಾಗೂ ಹೊಸ ಡೆಪಾಸಿಟ್ ಪಡೆಯುವಂತಿಲ್ಲ. ವಿವಿಧ ನಿಯಮಗಳನ್ನು ಉಲ್ಲಂಘಿಸಿರುವುದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ಗೆ ನೋಟಿಸ್ ನೀಡಲಾಗಿದೆ.
ಇನ್ನು ಫೆಬ್ರವರಿ 29ರ ನಂತರ ಪೇಮೆಂಟ್ಸ್ ಬ್ಯಾಂಕ್ ಖಾತೆಗೆ ವ್ಯಾಲಟ್, ಫಾಸ್ಟ್ಟ್ಯಾಗ್ ಇತ್ಯಾದಿ ಪ್ರೀಪೇಯ್ಡ್ ಯಂತ್ರಗಳಿಗೆ ಟಾಪ್ಅಪ್ ಹಾಕಿಸುವಂತಿಲ್ಲ ಎಂದು ಆರ್ಬಿಐ ನಿರ್ಬಂಧ ವಿಧಿಸಿ ಆದೇಶ ಹೊರಡಿಸಿದೆ.