ಮಧ್ಯಂತರ ಬಜೆಟ್ ಮಂಡನೆ ಕ್ಷಣಗಣನೆ – ಸರ್ಕಾರದ ಖಜಾನೆಗೆ ಹರಿದು ಬಂತು ಲಕ್ಷಾಂತರ ಕೋಟಿ ರೂಪಾಯಿ..!
ಮಧ್ಯಂತರ ಬಜೆಟ್ ಮಂಡನೆಗೆ ಕ್ಷಣಗಣನೆ ಆರಂಭವಾಗಿದೆ. ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡನೆ ಮಾಡಲಿದ್ದು, ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಗುರುವಾರ ಬೆಳಗ್ಗೆ 11 ಗಂಟೆಗೆ ಬಜೆಟ್ ಮಂಡನೆ ಆರಂಭವಾಗಲಿದ್ದು, ಬಜೆಟ್ ಮಂಡನೆಗೂ ಮೊದಲೇ ಕೇಂದ್ರ ಸರ್ಕಾರಕ್ಕೆ ಗುಡ್ನ್ಯೂಸ್ ಸಿಕ್ಕಿದೆ. ಸರ್ಕಾರದ ಖಜಾನೆಗೆ ನಿರೀಕ್ಷೆಗೂ ಮೀರಿ ಜಿಎಸ್ಟಿ ಹಣ ಹರಿದುಬಂದಿದೆ.
ಇದನ್ನೂ ಓದಿ: ನಮ್ಮ ಮೆಟ್ರೋದಲ್ಲಿ ಅಸಭ್ಯ ವರ್ತನೆ ತೋರಿದ್ರೆ ಹುಷಾರ್! – ಇನ್ನುಮುಂದೆ 500 ರೂ ಅಲ್ಲ, 10 ಸಾವಿರ ರೂಪಾಯಿ ದಂಡ!
ಹೌದು, ಕೇಂದ್ರ ಸರ್ಕಾರ ಜಿಎಸ್ಟಿ ಸಂಗ್ರಹದ ಅಂಕಿ-ಅಂಶಗಳು ಬಿಡುಗಡೆ ಮಾಡಿದೆ. ವರ್ಷದಿಂದ ವರ್ಷಕ್ಕೆ ಜಿಎಸ್ಟಿ ಹಣ ಪ್ರತಿಶತ 10 ರಷ್ಟು ಜಿಗಿತ ಕಂಡಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ಖಜಾನೆಗೆ ಕೋಟ್ಯಾಂತರ ರೂಪಾಯಿ ಹರಿದುಬಂದಿದೆ. ಸರಕು ಮತ್ತು ಸೇವಾ ತೆರಿಗೆ (GST) ಆದಾಯದಲ್ಲಿ ಶೇಕಡಾ 10 ರಷ್ಟು ಹೆಚ್ಚಳವಾಗಿದೆ. 2024 ಜನವರಿಯಲ್ಲಿ 1.72 ಲಕ್ಷ ಕೋಟಿ ಸಂಗ್ರಹವಾಗಿದೆ. ಇದು ಎರಡನೇ ಅತೀ ಹೆಚ್ಚು ಜಿಎಸ್ಟಿ ಸಂಗ್ರಹವಾಗಿದೆ.
2024ರ ಹಣಕಾಸು ವರ್ಷದ ಸಂದರ್ಭದಲ್ಲಿ ಮೂರನೇ ಬಾರಿಗೆ ಜಿಎಸ್ಟಿ ಅಂಕಿ-ಅಂಶವು 1.7 ಲಕ್ಷ ಕೋಟಿ ರೂಪಾಯಿಗಳನ್ನು ದಾಟಿದೆ. 2024ರ ಜನವರಿ ತಿಂಗಳಿನಲ್ಲಿ 1.72, 129 ಕೋಟಿ ರೂಪಾಯಿ ಜಿಎಸ್ಟಿ ಹಣ ಬಂದಿದೆ. ಇದು ಕಳೆದ ತಿಂಗಳಿನಿಂದ ಶೇಕಡಾ 10.4 ರಷ್ಟು ಹೆಚ್ಚಳವಾಗಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ. ಕಳೆದ ಜನವರಿಯಲ್ಲಿ 1,55,922 ಕೋಟಿ ರೂಪಾಯಿ ಸಂಗ್ರಹವಾಗಿತ್ತು.
ಒಟ್ಟು GST ಸಂಗ್ರಹ ಎಷ್ಟು..?
ಏಪ್ರಿಲ್ 2023, ಜನವರಿ 2024ರ ಅವಧಿಯಲ್ಲಿ ಒಟ್ಟು ಜಿಎಸ್ಟಿ ಸಂಗ್ರಹವು 16.69 ಲಕ್ಷ ಕೋಟಿ ರೂಪಾಯಿ ಆಗಿದೆ. 2022 ಅವಧಿಗೆ ಹೋಲಿಸಿದರೆ ಇದರ ಬೆಳವಣಿಗೆಯು ಶೇಕಡಾ 11.6 ರಷ್ಟಾಗಿದೆ. 2022-2023 ಅವಧಿಯಲ್ಲಿ 14.96 ಲಕ್ಷ ಕೋಟಿ ರೂಪಾಯಿ ಜಿಎಸ್ಟಿ ಸಂಗ್ರಹವಾಗಿತ್ತು.