ಬಾಂಗ್ಲಾದೇಶದಲ್ಲಿ ಭಾರತ ವಿರೋಧಿ ಕಿಚ್ಚು ಹೊತ್ತಿಕೊಂಡಿರೋದ್ಯಾಕೆ? – ಈ ಷಡ್ಯಂತ್ರದ ಹಿಂದಿರುವ ಕೈ ಯಾರದ್ದು?

ಬಾಂಗ್ಲಾದೇಶದಲ್ಲಿ ಭಾರತ ವಿರೋಧಿ ಕಿಚ್ಚು ಹೊತ್ತಿಕೊಂಡಿರೋದ್ಯಾಕೆ? – ಈ ಷಡ್ಯಂತ್ರದ ಹಿಂದಿರುವ ಕೈ ಯಾರದ್ದು?

ಇಂಡಿಯಾ ಬಾಯ್ಕಾಟ್ ಕ್ಯಾಂಪೇನ್​ ಮಾಡಿ, ಭಾರತದ ವಿರುದ್ಧ ನಿಂತಿರೋ ಮಾಲ್ಡೀವ್ಸ್​​ ಅಧ್ಯಕ್ಷ ಮೊಹಮ್ಮದ್ ಮುಯಿಜು ಅದ್ಯಾವಾಗ ಕುರ್ಚಿಯಿಂದ ಕೆಳಕ್ಕೆ ಬೀಳ್ತಾರೋ ಗೊತ್ತಿಲ್ಲ. ಮಾಲ್ಡೀವ್ಸ್​ ಅಧ್ಯಕ್ಷನ ಪಟ್ಟ ಈಗಾಗಲೇ ಅಲುಗಾಡ್ತಾ ಇದೆ. ಭಾರತವನ್ನ ಎದುರು ಹಾಕ್ಕೊಂಡಿದ್ದಕ್ಕೆ ಅಲ್ಲಿನ ವಿಪಕ್ಷಗಳೆಲ್ಲಾ ಮುಯಿಜು ವಿರುದ್ಧ ರೊಚ್ಚಿಗೆದ್ದಿವೆ. ಭಾರತ ಮತ್ತು ಮಾಲ್ಡೀವ್ಸ್​ ನಡುವಿನ ಸಂಬಂಧ ಸಂಪೂರ್ಣವಾಗಿ ಹಳ್ಳ ಹಿಡಿದಿದೆ. ಇತ್ತ ಭಾರತೀಯರು ಯಾರು ಕೂಡ ಮಾಲ್ಡೀವ್ಸ್ ಪ್ರವಾಸ ಕೈಗೊಳ್ತಾ ಇಲ್ಲ. ಟೂರಿಸಂ ವಿಚಾರದಲ್ಲಿ ಮಾಲ್ಡೀವ್ಸ್​ನ್ನ ಕಂಪ್ಲೀಟ್ ಆಗಿ ಬಾಯ್ಕಾಟ್ ಮಾಡಲಾಗಿದೆ. ಈ ಎಲ್ಲಾ ಬೆಳವಣಿಗೆಗಳ ಬೆನ್ನಲ್ಲೇ ಭಾರತದ ಮತ್ತೊಂದು ನೆರೆಯ ದೇಶ ಬಾಂಗ್ಲಾದೇಶದಲ್ಲೂ ಮಾಲ್ಡೀವ್ಸ್ ಮಾದರಿಯ ಹೋರಾಟಗಳು ಶುರುವಾಗಿವೆ. ಬಾಂಗ್ಲಾದಲ್ಲೂ ಭಾರತ ವಿರೋಧಿ ಬೆಳವಣಿಗೆಗಳು ನಿಧಾನಕ್ಕೆ ತೀವ್ರಸ್ವರೂಪ ಪಡೆದುಕೊಳ್ತಿದೆ. ಅಷ್ಟಕ್ಕೂ ಬಾಂಗ್ಲಾದೇಶದಲ್ಲಿ ಇದ್ದಕ್ಕಿದ್ದಂತೆ ಭಾರತ ವಿರೋಧಿ ಕಿಚ್ಚು ಹೊತ್ತಿಕೊಂಡಿರೋದ್ಯಾಕೆ? ಇದ್ರ ಪರಿಣಾಮ ಏನು? ಎಂಬ ಬಗ್ಗೆ ವಿವರವಾದ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ‘ಮಾಲ್ಡೀವ್ಸ್ ಬಹಿಷ್ಕಾರ’ ಎಫೆಕ್ಟ್ – ಮಾಲ್ಡೀವ್ಸ್‌ ಪ್ರವಾಸ ರ‍್ಯಾಂಕಿಂಗ್‌ನಲ್ಲಿ ನಂ.1 ರಿಂದ 5ನೇ ಸ್ಥಾನಕ್ಕೆ ಕುಸಿದ ಭಾರತ

ಹೇಳಿಕೇಳಿ ಬಾಂಗ್ಲಾದೇಶ ಭಾರತದ ಪ್ರಾದೇಶಿಕ ಪಾರ್ಟ್ನರ್​​. ಕಳೆದ ಹಲವು ವರ್ಷಗಳಿಂದ ಬಾಂಗ್ಲಾ ಪ್ರಧಾನಿಯಾಗಿರೋ ಶೇಖ್ ಹಸೀನಾ ಭಾರತದ ಜೊತೆಗೆ ಉತ್ತಮ ಸಂಬಂಧ ಹೊಂದಿದ್ದಾರೆ. ಪ್ರಧಾನಿ ಮೋದಿ ಜೊತೆಗೆ ಒಳ್ಳೆಯ ಸ್ನೇಹ ಕೂಡ ಇಟ್ಕೊಂಡಿದ್ದಾರೆ. ಕಳೆದ ಬಾರಿಯ ಬಾಂಗ್ಲಾದೇಶ ಸಾರ್ವತ್ರಿಕ ಚುನಾವಣೆ ವೇಳೆ ಕೆಲ ವಿದೇಶಿ ರಾಷ್ಟ್ರಗಳು ಬಾಂಗ್ಲಾ ಚುನಾವಣೆಯಲ್ಲಿ ಹಸ್ತಕ್ಷೇಪ ಮಾಡೋಕೆ ಯತ್ನಿಸಿದಾಗ ಬಾಂಗ್ಲಾದೇಶಕ್ಕೆ ನೆರವು ನೀಡಿದ್ದೇ ಭಾರತ ಸರ್ಕಾರ. ಸಾಲದ್ದಕ್ಕೆ ಈ ಹಿಂದೆ ಪ್ರಧಾನಿ ಶೇಖ್ ಹಸೀನಾರನ್ನ ಹತ್ಯೆಗೈಯ್ಯೋ ಯತ್ನವನ್ನ ಕೂಡ ನಮ್ಮ ಇಂಟೆಲಿಜೆನ್ಸ್ ಏಜೆನ್ಸಿಯೇ ತಪ್ಪಿಸಿತ್ತು. ಕೆಲ ದಿನಗಳ ಹಿಂದೆಯಷ್ಟೇ ಶೇಖ್ ಹಸೀನಾ ಭಾರತ ನಮ್ಮ ಗ್ರೇಟ್ ಫ್ರೆಂಡ್ ಅಂದಿದ್ರು. ಇಷ್ಟಾದ್ರೂ ಮಾಲ್ಡೀವ್ಸ್ ಬಳಿಕ ಬಾಂಗ್ಲಾದೇಶದಲ್ಲಿ ಇಂಡಿಯಾ ಔಟ್.. ಬಾಯ್ಕಾಟ್ ಇಂಡಿಯನ್ ಪ್ರಾಡಕ್ಟ್ ಅನ್ನೋ ಹ್ಯಾಶ್​ಟ್ಯಾಗ್​​ಗಳು ಸ್ಪ್ರೆಡ್ ಆಗ್ತಿದೆ. ಭಾರತದ ವಿರುದ್ಧ ಕ್ಯಾಂಪೇನ್​​ಗಳು ಫುಲ್ ಟ್ರೆಂಡಿಂಗ್​ನಲ್ಲಿದೆ. ಸ್ನೇಹಿತರೇ, ದಿಢೀರ್ ಅಂತಾ ಬಾಂಗ್ಲಾದೇಶದಲ್ಲಿ ಭಾರತ ವಿರೋಧಿ ನಡೆಗಳು ಶುರುವಾಗಿರೋದ್ರ ಹಿಂದೆ ದೊಡ್ಡ ಷಡ್ಯಂತ್ರವೇ ಅಡಗಿದೆ.

8 ಜನವರಿ 2024ರಂದು ಬಾಂಗ್ಲಾದೇಶದ ರಿವೋಲ್ಟ್ ಅನ್ನೋ ಫೇಮಸ್ ಸೋಷಿಯಲ್ ಮೀಡಿಯಾ​ ಅಕೌಂಟ್​​ನಲ್ಲಿ ಒಂದು ಟ್ವೀಟ್ ಮಾಡಲಾಗುತ್ತೆ. ಭಾರತ ಯಾವುದೇ ಕಾರಣಕ್ಕೂ ಬಾಂಗ್ಲಾದೇಶದ ದೋಸ್ತಿ ಅಲ್ಲ. ಭಾರತವನ್ನ ಹೊರಗೆ ಓಡಿಸಿ ಅನ್ನೋದಾಗಿ. ಈ ಪೋಸ್ಟ್ ಬಳಿಕ ರಿವೋಲ್ಟ್​ ಹೆಸರಿನ ಅಕೌಂಟ್​​ನಲ್ಲಿ ನಿರಂತರವಾಗಿ ಆ್ಯಂಟಿ ಇಂಡಿಯಾ ಪೋಸ್ಟ್​​ಗಳು ಪಬ್ಲಿಶ್ ಆಗ್ತಾನೆ ಇರುತ್ತೆ. ಜನವರಿ 18ರಂದು ಬಾಯ್ಕಾಟ್ ಇಂಡಿಯನ್ ಪ್ರಾಡಕ್ಟ್ಸ್ ಅನ್ನೋ ಕ್ಯಾಂಪೇನ್ ಕೂಡ ಈ ಸೋಷಿಯಲ್ ಮೀಡಿಯಾದ ಅಕೌಂಟ್​​ನಿಂದಲೇ ಶುರುವಾಗುತ್ತೆ. ಕೂಡಲೇ ಬಾಂಗ್ಲಾದೇಶ ಸೇನೆಯ ಕರ್ನಲ್​​ಗಳಿಂದ ಹಿಡಿದು, ಆ್ಯಕ್ಟಿವಿಸ್ಟ್​ಗಳು ಸೇರಿದಂತೆ ಹಲವು ಫೇಮಸ್ ವ್ಯಕ್ತಿಗಳು ಕೂಡ ಈ ಆ್ಯಂಟಿ ಇಂಡಿಯಾ ಕ್ಯಾಂಪೇನ್​ನನ್ನ ಸೋಷಿಯಲ್ ಮೀಡಿಯಾದ ಮೂಲಕವೇ ಜಾಯಿನ್ ಆಗ್ತಾರೆ. ಇದ್ರಿಂದ ಇನ್​ಫ್ಲುಯೆನ್ಸ್ ಆಗಿ ಬಾಂಗ್ಲಾದೇಶದ ಸಾಮಾನ್ಯ ಜನರು ಕೂಡ ಇಂಡಿಯಾ ಔಟ್ ಅಂತಾ ಪೋಸ್ಟ್​ಗಳನ್ನ ಹಾಕೋಕೆ ಆರಂಭಿಸ್ತಾರೆ. ಆದ್ರೆ ಇಲ್ಲೊಂದು ಕನ್​ಫ್ಯೂಶನ್ ಇದೆ. ಈ ಆ್ಯಂಟಿ ಇಂಡಿಯಾ ಕ್ಯಾಂಪೇನ್ ಆರಂಭವಾಗೋಕೆ 8-10 ದಿನಗಳ ಹಿಂದೆ ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಭಾರತ ನಮ್ಮ ಗ್ರೇಟ್ ಫ್ರೆಂಡ್ ಅಂದಿದ್ರು. ಅವರ ವಿದೇಶಾಂಗ ಸಚಿವರು ಕೂಡ ಮಾಲ್ಡೀವ್ಸ್ ನಡೆಯನ್ನ ಖಂಡಿಸಿ ಭಾರತದ ಪರ ಬ್ಯಾಟ್ ಬೀಸಿದ್ರು. ಹಾಗಿದ್ರೆ ಯಾಕೆ ಬಾಂಗ್ಲಾದಲ್ಲಿ ಈ ಆ್ಯಂಟಿ ಇಂಡಿಯಾ ಈ ಕ್ಯಾಂಪೇನ್ ಶುರುವಾಯ್ತು ಅನ್ನೋದೆ ಭಾರತೀಯರ ಪ್ರಶ್ನೆ.

8 ಜನವರಿ 2024ರಂದೇ ಶೇಖ್ ಹಸೀನಾ ಅವರು ಚುನಾವಣೆ ಗೆದ್ದು 4ನೇ ಅವಧಿಗೆ ಬಾಂಗ್ಲಾದೇಶದ ಪ್ರಧಾನಿ ಪಟ್ಟಕ್ಕೇರ್ತಾರೆ. ಆಗ ಅಲ್ಲಿನ ವಿಪಕ್ಷಗಳು ಒಂದಷ್ಟು ಗಂಭೀರ ಆರೋಪಗಳನ್ನ ಮಾಡ್ತಾವೆ. ಭಾರತದ ಸಹಾಯದಿಂದ ಶೇಖ್ ಹಸೀನಾ ಚುನಾವಣೆ ಗೆದ್ದಿದ್ದಾರೆ. ಚುನಾವಣಾ ಫಲಿತಾಂಶವನ್ನ ತಿರುಚಿದ್ದಾರೆ. ಬಾಂಗ್ಲಾ ಚುನಾವಣೆಯಲ್ಲಿ ದೊಡ್ಡ ಸ್ಕ್ಯಾಮ್ ಅಗಿದೆ. ಭಾರತ ಸರ್ಕಾರದ ನೆರವಿನಿಂದಾಗಿಯೇ ಶೇಖ್ ಹಸೀನಾ ಮತ್ತೊಮ್ಮೆ ಪ್ರಧಾನಿಯಾಗಿದ್ದಾರೆ ಅಂತೆಲ್ಲಾ ವಿಪಕ್ಷ ನಾಯಕರು ಆರೋಪಿಸ್ತಾರೆ. ಅಷ್ಟೇ ಅಲ್ಲ, ಅಲ್ಲಿನ ಮೇನ್ ಒಪೋಸಿಶನ್ ಪಾರ್ಟಿ, ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ ಹ್ಯಾಶ್​​ಟ್ಯಾಗ್ ಇಂಡಿಯಾ ಔಟ್ ಕ್ಯಾಂಪೇನ್​​ಗೆ ಚಾಲನೆ ನೀಡುತ್ತೆ. ಈ ಹ್ಯಾಶ್​​ಟ್ಯಾಗ್ ಬಾಂಗ್ಲಾದಲ್ಲಿ ಫುಲ್ ವೈರಲ್ ಆಗಿ ಬಿಡುತ್ತೆ. ಬಾಂಗ್ಲಾದೇಶದಲ್ಲಿ ನಡೀತಾ ಇರೋ ಈ ಎಲ್ಲಾ ಬೆಳವಣಿಗೆಗಳ ಹಿಂದೆ ಅತ್ಯಂತ ಪವರ್​​ಫುಲ್​​ ಭಾರತ ವಿರೋಧಿ ಗುಂಪುಗಳ ದೊಡ್ಡ ಕೈವಾಡವೇ ಇದೆ. ಯಾಕಂದ್ರೆ ಅಸಲಿಗೆ ಈ ಇಂಡಿಯಾ ಔಟ್ ಕ್ಯಾಂಪೇನ್ ಬಾಂಗ್ಲಾದೇಶದಿಂದ ಶುರುವಾಗಿಯೇ ಇಲ್ಲ. ಇಂಗ್ಲೆಂಡ್​ನ ಲಂಡನ್​ನಿಂದ ಆಪರೇಟ್ ಆಗ್ತಾ ಇರೋದು. ಬಟ್ ಬಾಂಗ್ಲಾದಲ್ಲಿ ವಿಪಕ್ಷ ನಾಯಕ ತಾರಿಕ್ ರೆಹ್ಮಾನ್ ಎಂಬಾತ ಎಲ್ಲವನ್ನೂ ಹ್ಯಾಂಡಲ್ ಮಾಡ್ತಾ ಇದ್ದಾನೆ. ಯುರೇಷಿಯನ್ ಟೈಮ್ಸ್​ ಅನ್ನೋ ಅಂತಾರಾಷ್ಟ್ರೀಯ ಮಾಧ್ಯಮದ ಇನ್​ವೆಸ್ಟಿಗೇಶನ್ ರಿಪೋರ್ಟ್ ಪ್ರಕಾರ, 2024ರ ಜನವರಿ 8 ರಂದು ಶೇಖ್ ಹಸೀನಾ ಮತ್ತೊಮ್ಮೆ ಬಾಂಗ್ಲಾದೇಶದ ಪ್ರಧಾನಿಯಾಗುತ್ತಲೇ ವಿಪಕ್ಷ ನಾಯಕ ತಾರಿಕ್ ರೆಹ್ಮಾನ್ ತನ್ನ ಪಾರ್ಟಿ ಮೆಂಬರ್ಸ್​​ಗಳಿಗೆ ಮಾಲ್ಡೀವ್ಸ್​ ರೀತಿಯಲ್ಲೇ ಇಂಡಿಯಾ ಔಟ್ ಕ್ಯಾಂಪೇನ್​ನಲ್ಲಿ ತೊಡಗಿಕೊಳ್ಳುವಂತೆ ಸೂಚಿಸ್ತಾನೆ. ಕೂಡಲೇ ಸೈಬರ್ ವಿಂಗ್ ಫುಲ್ ಆ್ಯಕ್ಟಿವ್ ಆಗಿಬಿಡುತ್ತೆ. ಭಾರತ ವಿರೋಧಿ ಪೋಸ್ಟ್​ಗಳನ್ನ ಪಬ್ಲಿಶ್ ಮಾಡೋಕೆ ಶುರು ಮಾಡ್ತಾರೆ. ಆರಂಭಲ್ಲೇ ನಿಮಗೆ ರಿವೋಲ್ಟ್ ಅನ್ನೋ ಸೋಷಿಯಲ್ ಮೀಡಿಯಾ ಅಕೌಂಟ್ ಬಗ್ಗೆ ಹೇಳಿದ್ನಲ್ಲಾ. ಈಗ ಈ ಅಕೌಂಟ್​ ಬಗ್ಗೆಯೇ ಇನ್ನೊಂದಷ್ಟು ವಿಚಾರಗಳನ್ನ ನೀವು ತಿಳಿದುಕೊಳ್ಳಲೇಬೇಕು. ರಷ್ಯಾದ ಮಾಧ್ಯಮ ಸ್ಪುಟ್ನಿಕ್​​ನ ವರದಿ ಪ್ರಕಾರ, ರಿವೋಲ್ಟ್ ಹೆಸರಿನ ಈ ಸೋಷಿಯಲ್ ಮೀಡಿಯಾ ಅಕೌಂಟ್ ಬಾಂಗ್ಲಾದ ಪ್ರತಿಪಕ್ಷ ನ್ಯಾಷನಲಿಸ್ಟ್ ಪಾರ್ಟಿಗೇ ಸೇರಿದ್ದಾಗಿದೆ. ತಾರಿಕ್ ರೆಹ್ಮಾನ್ ಸೂಚನೆಯಂತೆಯೇ ಈ ಸೋಷಿಯಲ್ ಮೀಡಿಯಾ ಅಕೌಂಟ್​​​ನಲ್ಲಿ ಇಂಡಿಯಾ ಔಟ್, ಬಾಯ್ಕಾಟ್ ಇಂಡಿಯನ್ ಪ್ರಾಡಕ್ಸ್ಟ್ ಕ್ಯಾಂಪೇನ್​​ ಸ್ಪ್ರೆಡ್ ಆಗೋಕೆ ಶುರುವಾಗುತ್ತೆ. ಅಷ್ಟಕ್ಕೂ ಈ ತಾರಿಕ್ ಅಹ್ಮದ್​ಗೆ ಭಾರತದ ಮೇಲೆ ಅಷ್ಟೊಂದು ದ್ವೇಷ ಯಾಕೆ ಅನ್ನೋ ಪ್ರಶ್ನೆ ಕೂಡ ನಿಮಗೆ ಬರಬಹುದು. ಇದೇ ನೋಡಿ ಇಂಟ್ರೆಸ್ಟಿಂಗ್​ ಆಗಿರೋದು. ತಾರಿಕ್ ಅಹ್ಮದ್​ನ ತಂದೆ ಜಿಯಾವುರ್ ರೆಹ್ಮಾನ್ ಪಾಕಿಸ್ತಾನ ಸೇನೆಯಲ್ಲಿ ಟಾಪ್​ ಪೊಸೀಶನ್​ನಲ್ಲಿದ್ರು. ಹಾಗೆಯೇ ಬಾಂಗ್ಲಾದೇಶದ ಮೊದಲ ಮಿಲಿಟರಿ ಸರ್ವಾಧಿಕಾರಿ ಕೂಡ ಆಗಿದ್ರು. ಪಾಕಿಸ್ತಾನದಲ್ಲಿ ಜಿಯಾ ಉಲ್ ಹಕ್, ಪರ್ವೇಜ್ ಮುಷರಫ್ ಎಲ್ಲಾ ಇದ್ರಲ್ಲಾ. ಅದೇ ರೀತಿ.. 1965ರಲ್ಲಿ ತಾರಿಕ್ ಅಹ್ಮದ್​ನ ತಂದೆ ಭಾರತದ ವಿರುದ್ಧದ ಯುದ್ಧದಲ್ಲಿ ಕೂಡ ಭಾಗಿಯಾಗಿದ್ರು. ಹೀಗಾಗಿ ಪಾಕಿಸ್ತಾನ ಸರ್ಕಾರ ಜಿಯಾವುರ್ ರೆಹ್ಮಾನ್​ಗೆ ಮಿಲಿಟರಿ ಮೆಡಲ್ ಗೌರವಿಸಿತ್ತು. ಭಾರತದ ಮೇಲೆ ತಂದೆಗೆ ಇದ್ದ ದ್ವೇಷದ ರಕ್ತವೇ ಮಗ ತಾರಿಕ್ ರೆಹ್ಮಾನ್ ದೇಹದಲ್ಲಿ ಹರೀತಾ ಇರೋದು. 1978ರಲ್ಲಿ ತಾರಿಕ್ ಅಹ್ಮದ್ ತಂದೆ ಜಿಯಾವುರ್ ಬಾಂಗ್ಲಾದೇಶಿ ನ್ಯಾಷನಲಿಸ್ಟ್ ಪಾರ್ಟಿಯನ್ನ ಕಟ್ತಾರೆ. ಅಂದಿನಿಂದಲೇ ಅಧಿಕಾರಕ್ಕೆ ಏರೋದಕ್ಕಾಗಿ ಎದುರಾಳಿ ಪಕ್ಷಗಳ ನಾಯಕರನ್ನ ಹತ್ಯೆಗೈಯ್ಯುತ್ತಲೇ ಬಂದಿದೆ. ಎಷ್ಟರ ಮಟ್ಟಿಗೆ ಅಂದ್ರೆ ಬಾಂಗ್ಲಾದೇಶದ ಜನಕ ಅಂತಾನೆ ಕರೆಸಿಕೊಂಡಿರೋ ಶೇಖ್ ಮುಜಿಬುರ್​ ರೆಹ್ಮಾನ್​ರನ್ನ ಹತ್ಯೆಗೈದಿರೋದು ಇದೇ ಜಿಯಾವುರ್ ರೆಹ್ಮಾನ್​ನ ನ್ಯಾಷನಲಿಸ್ಟ್ ಪಾರ್ಟಿ. ಶೇಖ್ ಮುಜಿಬುರ್ ಭಾರತವನ್ನ ಅತ್ಯಾಪ್ತ ರಾಷ್ಟ್ರ ಅಂತಾ ಪರಿಗಣಿಸಿದ್ದೇ ಜಿಯಾವುರ್ ರೆಹ್ಮಾನ್ ಸಿಟ್ಟಿಗೆ ಕಾರಣವಾಗಿತ್ತು. ಬಾಂಗ್ಲಾ ಜನಕನ ಹತ್ಯೆ ಬಳಿಕ ಜಿಯಾವುರ್ ರೆಹ್ಮಾನ್​ ಬಾಂಗ್ಲಾದೇಶದ ಸೇನಾ ಸರ್ವಾಧಿಕಾರಿಯಾಗ್ತಾನೆ. ಅಲ್ಲಿಂದಲೇ ಭಾರತ ವಿರೋಧಿ ನಿರ್ಧಾರಗಳನ್ನ ಕೈಗೊಳ್ತಾನೆ. ಬಾಂಗ್ಲಾ ಜನರಲ್ಲಿ ಇಸ್ಲಾಮಿಕ್ ಮೂಲಭೂತವಾದದ ಬೀಜ ಬಿತ್ತೋಕೆ ಶುರು ಮಾಡ್ತಾನೆ. ಇದಕ್ಕಾಗಿ ಸಂವಿಧಾನದಲ್ಲೂ ತಿದ್ದುಪಡಿ ತರ್ತಾನೆ. ಈ ಹಿಂದೆ ಬಾಂಗ್ಲಾದೇಶದ ಜನರನ್ನ ಕೂಡ ಬೆಂಗಾಲಿಗಳು ಅಂತಾನೆ ಕರೀತಾ ಇದ್ರು. ಆದ್ರೆ ಅದನ್ನ ಬದಲಾಯಿಸಿಬಿಡ್ತಾನೆ. ಸೆಕ್ಯುಲರ್​ ದೇಶವಾಗಿದ್ದ ಬಾಂಗ್ಲಾದೇಶ ಇಸ್ಲಾಮಿಕ್​ ರಿಪಬ್ಲಿಕ್ ಆಗಿ ಬದಲಾಗಿಬಿಡುತ್ತೆ. ಇದಾದ್ಮೇಲೆ ಬಾಂಗ್ಲಾದೇಶದಲ್ಲಿರೋ ಹಿಂದೂಗಳ ಮೇಲೆ ದೌರ್ಜನ್ಯ ಶುರುವಾಗಿ ಬಿಡುತ್ತೆ. ಇಲ್ಲೊಂದು ಶಾಕಿಂಗ್​ ಸಂಗತಿಯನ್ನ ಕೂಡ ಹೇಳ್ತೀನಿ. ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ ಇದುವರೆಗೆ ಮೂರು ಬಾರಿ ಅಧಿಕಾರಕ್ಕೇರಿದೆ. 1991, 1996 ಮತ್ತು 2001ರಲ್ಲಿ. ಈ ಮೂರೂ ಚುನಾವಣೆಗಳ ಗೆಲುವಿನ ಹಿಂದೆ ಒಂದು ಕಾಮನ್ ಫ್ಯಾಕ್ಟರ್ ಇದೆ. ಸಾರ್ವತ್ರಿಕ ಚುನಾವಣೆಗೂ ಒಂದು ವರ್ಷ ಮುನ್ನ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ ಹಿಂದೂ ವಿರೋಧಿ ಪ್ರತಿಭಟನೆಗಳನ್ನ ಮಾಡುತ್ತೆ. ಈ ಮೂಲಕವೇ ಮೂರು ಬಾರಿ ಎಲೆಕ್ಷನ್ ಗೆದ್ದಿದ್ದಾರೆ. ಈ ಪೈಕಿ 2001ರ ಗೆಲುವಿಗೂ ಮುನ್ನ ಬಾಂಗ್ಲಾದೇಶದಲ್ಲಿ ಹಿಂದೂಗಳ ಮಾರಣಹೋಮವೇ ನಡೆದಿತ್ತು. ಸಂಡೇ ಗಾರ್ಡಿಯನ್​​ನ ವರದಿ ಪ್ರಕಾರ, 2001ರಲ್ಲಿ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ ನಾಯಕ ಜಿಯಾವುರ್ ರೆಹ್ಮಾನ್​ನ ಪತ್ನಿ ಖಾಲಿದಾ ಬೇಗಂ ಆದೇಶದಂತೆ ಪಕ್ಷದ ಕಾರ್ಯಕರ್ತರು ಹಲವು ದಿನಗಳ ಕಾಲ ನಿರಂತರವಾಗಿ ಹಿಂದೂಗಳ ಹತ್ಯೆ ಮಾಡಿಸಿದ್ರಂತೆ. ಚುನಾವಣೆಗೂ ಮುನ್ನ ಒಟ್ಟು 18 ಸಾವಿರ ಹಿಂದೂ ವಿರೋಧಿ ಘಟನೆಗಳು ಬಾಂಗ್ಲಾದಲ್ಲಿ ನಡೆದಿದ್ವು. ಸಾವಿರಕ್ಕೂ ಅಧಿಕ ಮಹಿಳೆಯರು ಅತ್ಯಾಚಾರಕ್ಕೊಳಗಾಗಿದ್ರು. 50,000ಕ್ಕೂ ಅಧಿಕ ಹಿಂದೂಗಳು ಬಾಂಗ್ಲಾದೇಶವನ್ನ ಬಿಟ್ಟು ಭಾರತದತ್ತ ಓಡಿ ಬಂದಿದ್ರು. ಇಂಥಾ ಆ್ಯಂಟಿ ಇಂಡಿಯಾ, ಆ್ಯಂಟಿ ಹಿಂದೂ ಸೆಂಟಿಮೆಂಟ್​​ಗಳನ್ನ ಇಟ್ಟುಕೊಂಡೇ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ ಅಲ್ಲಿನ ಮುಸ್ಲಿಮರ ಬ್ರೈನ್​​ವಾಶ್ ಮಾಡಿ ಜನರ ವೋಟ್​​ನ್ನ ತನ್ನಡೆಗೆ ಸೆಳೆಯೋಕೆ ಪ್ರಯತ್ನ ಮಾಡ್ತಾನೆ ಇದೆ.

ಇಲ್ಲಿ ಇನ್ನೊಂದು ಇಂಟ್ರೆಸ್ಟಿಂಗ್ ಸಂಗತಿ ಇದೆ. ತನ್ನ ತಂದೆಯ ಭಾರತ ವಿರೋಧಿ ಕೃತ್ಯಗಳನ್ನ ಕಂಟಿನ್ಯೂ ಮಾಡ್ತಾ ಬಾಂಗ್ಲಾ ನ್ಯಾಷನಲಿಸ್ಟ್ ಪಾರ್ಟಿಯ ತಾರಿಕ್ ರೆಹ್ಮಾನ್ ವಾಸ ಮಾಡ್ತಾ ಇರೊದು ಮಾತ್ರ ಲಂಡನ್​​ನಲ್ಲಿ. ಅಲ್ಲಿಂದಲೇ ಪಕ್ಷವನ್ನ ನಡೆಸ್ತಾ ಇದ್ದಾನೆ. ಇದಕ್ಕೆ ಕಾರಣ ಕೂಡ ಇದೆ. 2001ರ ಬಳಿಕ ಇದುವರೆಗೆ ತಾರಿಕ್ ರೆಹ್ಮಾನ್ ಪಾರ್ಟಿ ಚುನಾವಣೆ ಗೆದ್ದಿಲ್ಲ. ನಿರಂತರವಾಗಿ ಶೇಖ್ ಹಸೀನಾರೆ ಪ್ರಧಾನಿಯಾಗ್ತಾ ಇದ್ದಾರೆ. ಶೇಖ್ ಹಸೀನಾ ಪ್ರಧಾನಿಯಾದಾಗಿನಿಂದಲೂ ಮೂಲಭೂತವಾದಿ ದೇಶವಾಗಿದ್ದ ಬಾಂಗ್ಲಾದೇಶವನ್ನ ಅಭಿವೃದ್ಧಿಯ ಹಾದಿಯಲ್ಲಿ ಸಾಗಿಸ್ತಾ ಇದ್ದಾರೆ. ಆರ್ಥಿಕವಾಗಿ ಬಾಂಗ್ಲಾದೇಶ ಪಾಕಿಸ್ತಾನವನ್ನೇ ಹಿಂದಿಕ್ಕಿದೆ. ಶೇಖ್ ಹಸೀನಾರಾ ಅಭಿವೃದ್ಧಿಪರ ಆಡಳಿತದಿಂದ ತಾರಿಕ್ ರೆಹ್ಮಾನ್ ಪಾರ್ಟಿ ಪಾಪ್ಯುಲಾರಿಟಿ ಡೌನ್ ಆಗ್ತಾನೆ ಇದೆ. ಹೀಗಾಗಿ 2004ರಲ್ಲೇ ತಾರಿಕ್ ರೆಹ್ಮಾನ್ ಪ್ರಧಾನಿ ಶೇಖ್ ಹಸೀನಾರನ್ನ ಹತ್ಯೆಗೈಯ್ಯೋಕೆ ಪ್ಲ್ಯಾನ್ ಮಾಡಿದ್ದಾರೆ. ಕೊಲ್ಲೋಕೆ ಅಟೆಂಪ್ಟ್ ಕೂಡ ನಡೆದಿತ್ತು. 2004 ಆಗಸ್ಟ್ 21ರಂದು ಬಾಂಗ್ಲಾದೇಶದಲ್ಲಿ ಭಯೋತ್ಪಾದನೆ ವಿರುದ್ಧ ಭಾಷಣ ಮಾಡ್ತಾ ಇದ್ರು. ಈ ವೇಳೆ ತಾರಿಕ್ ರೆಹ್ಮಾನ್ ಮತ್ತು ಆತನ 19 ಮಂದಿ ಸಹಚರರು ಶೇಖ್ ಹಸೀನಾರತ್ತ ಹ್ಯಾಂಡ್ ಗ್ರೆನೇಟ್ ಎಸೀತಾರೆ. ಶೇಖ್ ಹಸೀನಾಗೆ ಇಂಜ್ಯೂರಿಯಾಗುತ್ತೆ. ಹರ್ಕತ್ ಉಲ್ ಜಿಹಾದ್ ಅನ್ನೋ ಉಗ್ರ ಸಂಘಟನೆ ಜೊತೆಗೂಡಿ ತಾರಿಕ್ ರೆಹ್ಮಾನ್ ಈ ದಾಳಿ ಮಾಡಿಸಿದ್ದ. ಆರೋಪ​ ಕೋರ್ಟ್​ನಲ್ಲಿ ಸಾಬೀತಾಗಿ ತಾರಿಕ್ ರೆಹ್ಮಾನ್​ಗೆ ಜೀವಾವಧಿ ಶಿಕ್ಷೆ ನಿಡಲಾಗುತ್ತೆ. ಕೋರ್ಟ್​​ನಿಂದ ಶಿಕ್ಷೆಯ ಆದೇಶ ಹೊರ ಬರುತ್ತಲೇ ತಾರಿಕ್ ಲಂಡನ್​ಗೆ ಹಾರಿದ್ದ. ಅಷ್ಟೇ ಅಲ್ಲ, ಅಮೆರಿಕ ಕೂಡ ಬಾಂಗ್ಲಾ ನ್ಯಾಷನಲಿಸ್ಟ್ ಪಾರ್ಟಿಯನ್ನ ಒಂದು ಉಗ್ರ ಸಂಘಟನೆ ಅಂತಾ ಘೋಷಿಸುತ್ತೆ. ಆದ್ರೆ ಅಲ್ಲಿಂದ ಇಲ್ಲಿವರೆಗೂ ತಾರಿಕ್ ರೆಹ್ಮಾನ್ ಲಂಡನ್​​ನಲ್ಲಿದ್ದುಕೊಂಡೇ ಪಕ್ಷವನ್ನ ಮುನ್ನಡೆಸ್ತಾ ಇದ್ದಾನೆ. ಚುನಾವಣೆ ಗೆಲ್ಲೋಕೆ ಈಗ ಮತ್ತೆ ಭಾರತ ವಿರೋಧಿ ಕೃತ್ಯಗಳಿಗೆ ಕೈ ಹಾಕಿದ್ದ. ಇನ್ನು ಈ ತಾರಿಕ್ ರೆಹ್ಮಾನ್​ ಬೆನ್ನಿಗೆ ಪಾಕಿಸ್ತಾನ ಸರ್ಕಾರವೂ ನಿಂತಿದೆ. ಆತನ ಹಿಂದೆ ನಿಂತು ಆ್ಯಂಟಿ ಇಂಡಿಯಾ ಕ್ಯಾಂಪೇನ್​​ಗೆ ಸಪೋರ್ಟ್ ಮಾಡ್ತಾ ಇದೆ. ಪಾಕ್ ಇಂಟಲಿಜೆನ್ಸ್ ಐಎಸ್​ಐ ಸಲಹೆಯಂತೆಯೇ ತಾರಿಕ್ ತನ್ನ ಪಕ್ಷವನ್ನ ಬಾಂಗ್ಲಾದಲ್ಲಿ ನಡೆಸ್ತಾ ಇದ್ದಾನೆ. ಪಕ್ಷದಲ್ಲಿ ಏನೇ ನಿರ್ಧಾರ ಕೈಗೊಳ್ತಿದ್ರೂ ಐಎಸ್​​ಐನಿಂದ ಸಲಹೆ ಪಡೀತಾನೆ. ಈ ಬಾರಿಯ ಚುನಾವಣೆಯಲ್ಲಿ ಐಎಸ್​ಐ ಸೂಚಿಸಿದ್ದ 300 ಮಂದಿಗೆ ಚುನಾವಣೆತಲ್ಲಿ ಬಾಂಗ್ಲಾ ನ್ಯಾಷನಲ್​ ಪಾರ್ಟಿಯಿಂದ ಟಿಕೆಟ್ ನೀಡಲಾಗಿತ್ತು. ಒಂದೇ ಮಾತಲ್ಲಿ ಹೇಳೋದಾದ್ರೆ ತಾರಿಕ್ ರೆಹ್ಮಾನ್ ಮೂಲಕ ಬಾಂಗ್ಲಾದೇಶದಲ್ಲಿ ತನ್ನ ಕೈಗೊಂಬೆ ಸರ್ಕಾರವನ್ನ ಅಧಿಕಾರಕ್ಕೆ ತರೋಕೆ ಪಾಕಿಸ್ತಾನ ಇನ್ನಿಲ್ಲದ ಸರ್ಕಸ್ ಮಾಡ್ತಾ ಇದೆ. ಈ ಮೂಲಕ ಭಾರತದ ವಿರುದ್ಧದ ಯುದ್ಧದಲ್ಲಿ ತಾನು ಕಳೆದುಕೊಂಡ ಪ್ರಾಂತ್ಯವನ್ನ ಪುನ: ಕಂಟ್ರೋಲ್​ಗೆ ಪಡೆಯೋದು ಪಾಕಿಸ್ತಾನದ ಗುರಿ. ಜೊತೆಗೆ ಬಾಂಗ್ಲಾ ಗಡಿ ಮೂಲಕವೂ ಭಾರತದೊಳಕ್ಕೆ ಉಗ್ರರನ್ನ ಛೂ ಬಿಡೋಕೆ ಪಾಕಿಸ್ತಾನದ ಸ್ಕೆಚ್. 2001ರಲ್ಲಿ ತಾರಿಕ್ ರೆಹ್ಮಾನ್​ನ ಪಕ್ಷ ಅಧಿಕಾರಕ್ಕೆ ಬಂದಿದ್ದಾಗ ಅಸ್ಸಾಂನಲ್ಲಿ ಬಂಡೋಕೋರರಿಗೆ ಬಾಂಗ್ಲಾ ಸರ್ಕಾರ ಶಸ್ತ್ರಾಸ್ತ್ರ ರವಾನಿಸಿತ್ತು. ಹೀಗಾಗಿ ಸದ್ಯಕ್ಕೆ ಬಾಂಗ್ಲಾದೇಶದಲ್ಲಿ ಶೇಕ್ ಹಸೀನಾ ಹೊರತಾಗಿ ಯಾರೇ ಅಧಿಕಾರಕ್ಕೆ ಬಂದ್ರೂ ಭಾರತಕ್ಕೆ ಅಪಾಯ ತಪ್ಪಿದ್ದಲ್ಲ. ಅದ್ರಲ್ಲೂ ಈ ಕುತಂತ್ರಿ ತಾರಿಕ್ ರೆಹ್ಮಾನ್​ನ ಬಾಂಗ್ಲಾ ನ್ಯಾಷನಲಿಸ್ಟ್ ಪಾರ್ಟಿ ಅಧಿಕಾರಕ್ಕೆ ಬಂದ್ರೆ ಭಾರತದ ಬುಡಕ್ಕೆ ಬೆಂಕಿ ಬಿತ್ತು ಅಂತಾನೆ ಅರ್ಥ. ಹೀಗಾಗಿಯೇ ಬಾಂಗ್ಲಾದೇಶ ವಿಚಾರದಲ್ಲಿ ಭಾರತ ಸರ್ಕಾರ ಅತ್ಯಂತ ಎಚ್ಚರಿಕೆ ಹೆಜ್ಜೆ ಇಡ್ತಾ ಇದೆ. ಶೇಖ್ ಹಸೀನಾ ಭದ್ರತೆಯಲ್ಲಿ ಭಾರತದ ಇಂಟೆಲಿಜೆನ್ಸ್ ಕೂಡ ಶಾಮೀಲಾಗಿದೆ. ಈ ಎಲ್ಲಾ ಬೆಳವಣಿಗೆಗಳ ಮಧ್ಯೆಯೇ ಚೀನಾ ಅಧ್ಯಕ್ಷ ಕ್ಸಿ ಜಿನ್​ಪಿಂಗ್​​ ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾಗೆ ಚೀನಾಗೆ ಭೇಟಿ ನೀಡುವಂತೆ ಆಹ್ವಾನ ನೀಡಿದ್ದಾರೆ. ಮಾಲ್ಡೀವ್ಸ್ ಅಧ್ಯಕ್ಷ ಮುಯಿಜು ಚೀನಾಗೆ ಹೋಗಿ ಬಂದ್ಮೇಲೆ ಏನೆಲ್ಲಾ ಬೆಳವಣಿಗೆ ಆಯ್ತು ಅನ್ನೋದು ನಿಮಗೆ ಗೊತ್ತೇ ಇದೆ. ಈಗ ಹಸೀನಕ್ಕ ಕೂಡ ಚೀನಾಗೆ ಹೋಗಿ ಬಂದ್ರೆ ಮುಂದೆ ಏನೆಲ್ಲಾ ಡೆವಲಪ್​ಮೆಂಟ್​​ಗಳಾಗಬಹುದು ಅನ್ನೋದು ತುಂಬಾನೆ ಇಂಟ್ರೆಸ್ಟಿಂಗ್ ವಿಚಾರ..

 

Sulekha