ಮೊಬೈಲ್ ಸ್ವಿಚ್ಡ್ ಆಫ್.. ಸಂಪರ್ಕಕ್ಕೆ ಸಿಕ್ಕಿಲ್ಲ.. – ಸಿಎಂ ನಾಪತ್ತೆ.. ಹುಡುಕಿ ಕೊಟ್ಟವರಿಗೆ ಬಂಪರ್ ಬಹುಮಾನ!
ಜಾರ್ಖಂಡ್ ಸಿಎಂ ಹೇಮಂತ್ ಸೊರೆನ್ ಅವರು ಈಗ ಭೂ-ಹಗರಣ, ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸಿಲುಕಿಕೊಂಡಿದ್ದಾರೆ. ಈ ಪ್ರಕ ರಣದ ಸಂಬಂಧಿಸಿದಂತೆ ತನಿಖೆ ನಡೆಸಲು ಇ.ಡಿ ಅಧಿಕಾರಿಗಳು ಸಿಎಂ ಹೇಮಂತ್ ಸೊರೆನ್ಗಾಗಿ ಬೆನ್ನುಬಿದ್ದಿದ್ದಾರೆ. ಇ.ಡಿ ಭಯದಿಂದ ಸೋರೆನ್ ನಾಪತ್ತೆಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಹೇಮಂತ್ ಎಲ್ಲಿದ್ದಾರೆ ಎಂದು ಪತ್ತೆಹಚ್ಚಲು ಬಲೆಬೀಸಿದ್ದಾರೆ.
ಇದನ್ನೂ ಓದಿ: ಬಾವಿಗೆ ಹಾರಿದ ತಂಗಿ, ಕಾಪಾಡಲು ಹೋದ ಅಣ್ಣನೂ ಬದುಕಲಿಲ್ಲ – ಹೇ ವಿಧಿಯೇ ನಿನಗಿದು ಸರಿಯೇ..?
ಹೌದು, ಜಾರ್ಖಂಡ್ ಮುಖ್ಯಂತ್ರಿ ಹೇಮಂತ್ ಸೊರೇನ್ ಎಲ್ಲಿದ್ದಾರೆಂದು ಪತ್ತೆ ಹಚ್ಚಲು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತೀವ್ರ ಟ್ರ್ಯಾಕ್ ಮಾಡ್ತಿದ್ದಾರೆ. ಕಳೆದ 28 ಗಂಟೆಯಿಂದ ಯಾರ ಸಂಪರ್ಕಕ್ಕೂ ಸಿಗದೇ ನಿಗೂಢವಾಗಿರುವ ಸೊರೇನ್ ಅವರನ್ನು ಪತ್ತೆ ಹಚ್ಚಲು ಎಲ್ಲಾ ರೀತಿಯ ಸರ್ಕಸ್ ಮಾಡಲಾಗ್ತಿದೆ. ಈ ಪ್ರಕರಣವು ಇದೀಗ ಜಾರ್ಖಂಡ್ನಲ್ಲಿ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಇದೀಗ ಜಾರ್ಖಂಡ್ ಬಿಜೆಪಿ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಬಬುಲಾಲ್ ಮರಂಡಿ ಅವರು ʼಮುಖ್ಯಮಂತ್ರಿಗಳು ಕಾಣೆಯಾಗಿದ್ದಾರೆ’ಎಂಬ ಪೋಸ್ಟರ್ ವೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ, ಬಬುಲಾಲ್ ಮರಂಡಿ ಸೋಶಿಯಲ್ ಮೀಡಿಯಾದಲ್ಲಿ ‘ಮುಖ್ಯಮಂತ್ರಿಗಳು ಕಾಣೆಯಾಗಿದ್ದಾರೆ’ ಎಂಬ ಪೋಸ್ಟ್ ಒಂದನ್ನು ಶೇರ್ ಮಾಡಿಕೊಂಡಿದ್ದಾರೆ. ನಾಪತ್ತೆಯಾಗಿರುವ ಜಾರ್ಖಂಡ್ ಮುಖ್ಯಮಂತ್ರಿಗಾಗಿ ಹುಡುಕಾಟ ನಡೆಯುತ್ತಿದೆ. ಯಾರಾದರೂ ನೋಡಿದ್ದಲ್ಲಿ, ಈ ವಿಳಾಸಕ್ಕೆ ತಿಳಿಸಿ. ಸರಿಯಾದ ಮಾಹಿತಿ ನೀಡಿದರೆ 11 ಸಾವಿರ ರೂಪಾಯಿ ಬಹುಮಾನ ನೀಡುವುದಾಗಿ ಘೋಷಣೆ ಮಾಡಿ ಗೇಲಿ ಮಾಡಿದೆ.
ಅಂದ್ಹಾಗೆ ಜಾರ್ಖಂಡ್ ಮುಖ್ಯಮಂತ್ರಿ ಕಳೆದ 28 ಗಂಟೆಗಳಿಂದ ನಾಪತ್ತೆಯಾಗಿದ್ದಾರೆ. ದೆಹಲಿಯ ನಿವಾಸದಿಂದ ನಾಪತ್ತೆಯಾಗಿರುವ ಸಿಎಂ ಹೇಮಂತ್ ಸೊರೇನ್ ಎಲ್ಲಿದ್ದಾರೆಂದು ಗೊತ್ತಿಲ್ಲ. ಇತ್ತ ದೆಹಲಿ ನಿವಾಸದ ಮೇಲೆ ದಾಳಿ ಮಾಡಿರುವ ಇಡಿ ಅಧಿಕಾರಿಗಳು 36 ಲಕ್ಷ ರೂಪಾಯಿ ಹಣ ಹಾಗೂ ಅವರ ಕಾರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.