ಮುಂದಿನ ಟೆಸ್ಟ್ ಪಂದ್ಯಗಳಲ್ಲಿ ಟೀಂ ಇಂಡಿಯಾದಲ್ಲಿ ಬದಲಾವಣೆಗಳೇನು?- ಯಾರು ಔಟ್? ಯಾರು ಇನ್?

ಮುಂದಿನ ಟೆಸ್ಟ್ ಪಂದ್ಯಗಳಲ್ಲಿ ಟೀಂ ಇಂಡಿಯಾದಲ್ಲಿ ಬದಲಾವಣೆಗಳೇನು?- ಯಾರು ಔಟ್? ಯಾರು ಇನ್?

ಇಂಗ್ಲೆಂಡ್ ವಿರುದ್ಧದ ಫಸ್ಟ್ ಟೆಸ್ಟ್​ ಮ್ಯಾಚ್​​ನ್ನ ಟೀಂ ಇಂಡಿಯಾ ಸೋತಾಗಿದೆ. ಫಸ್ಟ್​ ಟೆಸ್ಟ್​​ನಲ್ಲಿ ವಿರಾಟ್ ಕೊಹ್ಲಿ ಆಡಿರಲಿಲ್ಲ. ಸೆಕೆಂಡ್ ಟೆಸ್ಟ್​​ನಲ್ಲೂ ಕೊಹ್ಲಿ ಆಡ್ತಾ ಇಲ್ಲ. ಇದ್ರ ಬೆನ್ನಲ್ಲೇ ನೆಕ್ಸ್ಟ್ ಮ್ಯಾಚ್​ಗೆ ಕೆಎಲ್ ರಾಹುಲ್ ಮತ್ತು ರವೀಂದ್ರ ಜಡೇಜ ಕೂಡ ಟೀಮ್​ನಲ್ಲಿ ಇರೋದಿಲ್ಲ. ಫಸ್ಟ್​​ ಟೆಸ್ಟ್​ನ ಫಸ್ಟ್​ ಇನ್ನಿಂಗ್ಸ್​ನಲ್ಲಿ ಟೀಂ ಇಂಡಿಯಾ ಪರ ಆಡಿರೋದೆ ಇವರಿಬ್ಬರು. ರಾಹುಲ್ ಮತ್ತು ಜಡೇಜ ಇಬ್ರೂ ಸೆಂಚೂರಿ ಹತ್ತಿರ ಬಂದಿದ್ರು. ಅದ್ರಲ್ಲೂ ಆಲ್ರೌಂಡರ್ ರವೀಂದ್ರ ಜಡೇಜ ಟೀಮ್​ಗೆ ಎಷ್ಟು ಇಂಪಾರ್ಟೆಂಟ್ ಅನ್ನೋದು ನಿಮಗೆ ಗೊತ್ತೇ ಇದೆ. ಆದ್ರೆ ಇಂಜ್ಯೂರಿಯಿಂದಾಗಿ ಇಬ್ರೂ ಸೆಕೆಂಡ್ ಟೆಸ್ಟ್​​ಗೆ ಟೀಮ್​ನಿಂದ ಹೊರಗುಳಿದಿದ್ದಾರೆ. ಟೀಮ್​ಗೆ ಯಂಗ್​ಸ್ಟರ್ ಸರ್ಫರಾಜ್ ಖಾನ್ ಎಂಟ್ರಿಯಾಗಿದೆ. ಇವತ್ತಿನ ಎಪಿಸೋಡ್​ನಲ್ಲಿ ಮುಂದಿನ ಟೆಸ್ಟ್​ ಮ್ಯಾಚ್​ಗಳಿಗೆ ಟೀಂ ಇಂಡಿಯಾದಲ್ಲಿ ಏನೆಲ್ಲಾ ಚೇಂಜೆಸ್​​ಗಳಾಗಬಹುದು? ಎಂಬ ವಿವರ ಇಲ್ಲಿದೆ.

ಇದನ್ನೂ ಓದಿ: ಮೂರನೇ ಮದುವೆ ಬೆನ್ನಲ್ಲೆ ತಗ್ಲಾಕ್ಕೊಂಡ ಶೋಯೆಬ್ ಮಲಿಕ್ – ಪಾಕ್ ಕ್ರಿಕೆಟಿಗನ ವಿರುದ್ಧ ಕೇಳಿ ಬಂದಿರೋ ಆರೋಪ ಏನು?  

​ಕೆಎಲ್ ರಾಹುಲ್ ಮತ್ತು ರವೀಂದ್ರ ಜಡೇಜ.. ಇಬ್ಬರೂ ಆಗಾಗ ಇಂಜ್ಯೂರಿ ಸಮಸ್ಯೆಗೆ ಒಳಗಾಗ್ತಾನೆ ಇದ್ದಾರೆ. ವಂಡೇ ವರ್ಲ್ಡ್​​ಕಪ್​​ಗೂ ಮೊದಲು ಇಬ್ಬರೂ ಇಂಜ್ಯೂರಿಗೊಳಗಾಗಿದ್ರು. ಬಳಿಕ ರೈಟ್​​ಟೈಮ್​ನಲ್ಲಿ ಟೀಮ್​​ಗೆ ಕಮ್​ಬ್ಯಾಕ್ ಮಾಡಿದ್ರು. ಇದೀಗ ಟಿ20 ವರ್ಲ್ಡ್​​ಕಪ್​​ಗೂ ಮುನ್ನ ಮತ್ತೊಮ್ಮೆ ಇಂಜ್ಯೂರಿಗೊಳಗಾಗಿದ್ದಾರೆ. ಕೆಎಲ್​ ರಾಹುಲ್​ಗೆ ಭುಜದಲ್ಲಿ ನೋವು ಕಾಣಿಸಿಕೊಂಡಿದೆ. ರವೀಂದ್ರ ಜಡೇಜಾಗೆ ಕಾಲಿನ ಮಂಡಿಯಲ್ಲಿ ಸಮಸ್ಯೆ ಎದುರಾಗಿದೆ. ಹೀಗಾಗಿ ಇಬ್ಬರೂ ಮುಂದಿನ ಟೆಸ್ಟ್​ ಮ್ಯಾಚ್​​ನಲ್ಲಿ ಆಡೋದಿಲ್ಲ. ಹೀಗಾಗಿ ಮುಂಬೈ ಮೂಲದ ಸರ್ಫರಾಜ್ ಖಾನ್, ಆಲ್ರೌಂಡರ್​ಗಳಾದ ಸೌರಬ್ ಕುಮಾರ್ ಮತ್ತು ವಾಷಿಂಗ್ಟನ್ ಸುಂದರ್​ರನ್ನ 2ನೇ ಟೆಸ್ಟ್​​ಗಾಗಿ ಸ್ಕ್ವಾಡ್​​ಗೆ ಪಿಕ್ ಮಾಡಲಾಗಿದೆ. ಈ ಪೈಕಿ ಸರ್ಫರಾಜ್ ಖಾನ್, ಆಲ್ರೌಂಡರ್​ ಸೌರಬ್ ಕುಮಾರ್ ಬಗ್ಗೆ ಒಂದಷ್ಟು ಇನ್​​ಫಾರ್ಮೇಶನ್ ಕೊಡ್ತೀನಿ. ಅದಕ್ಕೂ ಮುನ್ನ ಪದೇ ಪದೆ ಇಂಜ್ಯೂರಿಗೊಳಗಾಗ್ತಿರೋ ನಮ್ಮ ಕೆಲ ಕ್ರಿಕೆಟಿಗರು ವಿರಾಟ್ ಕೊಹ್ಲಿಯನ್ನ ನೋಡಿ ಕಲಿಯಬೇಕಾಗಿರೋದು ಸಾಕಷ್ಟಿದೆ. ಯಾಕಂದ್ರೆ ಕ್ಯಾಪ್ಟನ್ ರೋಹಿತ್ ಶರ್ಮಾ ರನ್​ ಮಷಿನ್ ಕೊಹ್ಲಿಯ ಫಿಟ್ನೆಸ್ ಮತ್ತು ಟೀಮ್​ಗೆ ನೀಡಿರೋ ಕಾಂಟ್ರಿಬ್ಯೂಷನ್ ಬಗ್ಗೆ ಮಾತನಾಡಿದ್ದಾರೆ. ಇದುವರೆಗೂ ವಿರಾಟ್ ಕೊಹ್ಲಿ ಒಂದೇ ಒಂದು ಬಾರಿ ಬೆಂಗಳೂರಿನಲ್ಲಿರೋ ನ್ಯಾಷನಲ್​ ಕ್ರಿಕೆಟ್ ಅಕಾಡೆಮಿಗೆ ಹೋಗಿಲ್ವಂತೆ. ಎನ್​ಸಿಎ ಅನ್ನೋದು ಒಂಥರಾ ಪುನರ್ವಸತಿ ಕೇಂದ್ರ ಇದ್ದಂತೆ. ಇಂಜ್ಯೂರಿಗೆ ಒಳಗಾದವರು, ಫಾರ್ಮ್​ ಕಳೆದುಕೊಂಡವರು ಎನ್​​ಸಿಎನಲ್ಲಿ ಟ್ರೈನಿಂಗ್​ ಪಡೆದು, ಫಿಟ್​ ಆಗಿ ಟೀಮ್​ಗೆ ಕಮ್​ಬ್ಯಾಕ್ ಮಾಡ್ತಾರೆ. ಆದ್ರೆ ವಿರಾಟ್ ಕೊಹ್ಲಿ ಮಾತ್ರ ತಮ್ಮ ಕೆರಿಯರ್​ನಲ್ಲಿ ಇದುವರೆಗೂ ಒಂದೇ ಒಂದು ಬಾರಿ ಎನ್​​ಸಿಎಗೆ ಹೋಗಿಲ್ಲ. ಯಾಕಂದ್ರೆ ಇಂಜ್ಯೂರಿಗೊಳಗಾಗಿ ಕೊಹ್ಲಿ ಟೀಮ್​​ನಿಂದ ಔಟಾಗಿರೋ ಉದಾಹರಣೆಗಳೇ ಇಲ್ಲ. ಎನ್​​ಸಿಎಗೆ ಹೋಗುವಂತಾ ಪ್ರಮೇಯವೇ ಕೊಹ್ಲಿಗೆ ಬಂದಿಲ್ಲ. ಆ ರೇಂಜಿಗೆ ತಮ್ಮ ಫಿಟ್ನೆಸ್​​ನ್ನ ವಿರಾಟ್ ಕೊಹ್ಲಿ ಮೇಂಟೇನ್ ಮಾಡಿದ್ದಾರೆ. ಈ ಬಗ್ಗೆ ಮಾತನಾಡಿರೋ ರೋಹಿತ್​ ಶರ್ಮಾ ಎಲ್ಲಾ ಯಂಗ್​ಸ್ಟರ್ಸ್​ಗಳು ಕೂಡ ಈ ವಿಚಾರದಲ್ಲಿ ಕೊಹ್ಲಿಯನ್ನ ನೋಡಿ ಕಲಿಯಬೇಕಿದೆ. ಕೊಹ್ಲಿ ಯಾವ ರೀತಿ ಬ್ಯಾಟಿಂಗ್ ಮಾಡ್ತಾರೆ ಅನ್ನೋದನ್ನ ಬಿಟ್ಟು ಬಿಡಿ. ಆದ್ರೆ ಒಬ್ಬ ಪ್ಲೇಯರ್​ ಆಗಿ ಕೊಹ್ಲಿ ಎಷ್ಟು ಕ್ವಾಲಿಟಿ ಮೇಂಟೇನ್​​ ಮಾಡಿಕೊಂಡಿದ್ದಾರೆ. ಅಷ್ಟೊಂದು ಅಚೀವ್​ ಮಾಡಿರೋ ಕೊಹ್ಲಿಗೆ ಎಲ್ಲಾ ಮ್ಯಾಚ್​​ಗಳನ್ನ ಕೂಡ ಆಡಬೇಕು ಅಂತೇನಿಲ್ಲ. ತಮಗೆ ಬೇಕಾದಾಗಲೆಲ್ಲಾ ರೆಸ್ಟ್ ತೆಗೆದುಕೊಳ್ಳಬಹುದು. ಆದ್ರೆ ಕೊಹ್ಲಿ ಯಾವತ್ತಿಗೂ ಟೀಮ್​ಗೆ ಎವೈಲೇಬಲ್ ಇರ್ತಾರೆ. ಕ್ರಿಕೆಟ್​ ಬಗ್ಗೆ ಅಷ್ಟೊಂದು ಪ್ಯಾಶನೇಟ್ ಆಗಿದ್ರಿಂದಲೇ ಕೊಹ್ಲಿಗೆ ಇಷ್ಟೆಲ್ಲಾ ಸಾಧಿಸೋಕೆ ಸಾಧ್ಯವಾಯ್ತು ಅಂತಾ ರೋಹಿತ್ ಶರ್ಮಾ ಹೇಳಿದ್ದಾರೆ. ನಿಜಕ್ಕೂ ಫಿಟ್ನೆಸ್ ಮತ್ತು ಪ್ಯಾಶನ್ ವಿಚಾರಕ್ಕೆ ಬಂದ್ರೆ ಕೊಹ್ಲಿಗಿಂತ ಬೆಸ್ಟ್​ ರೋಲ್​ ಮಾಡೆಲ್ ಮತ್ತೊಬ್ಬರಿಲ್ಲ ಅಂತಾನೆ ಹೇಳಬಹುದು.

Sulekha