ಇಡಿ ಭಯದಿಂದ ಜಾರ್ಖಂಡ್ ಸಿಎಂ ಹೇಮಂತ್ ಸೊರೆನ್ ನಾಪತ್ತೆ! – ಬಿಎಂಡಬ್ಲ್ಯೂ ಕಾರು ವಶಪಡಿಸಿಕೊಂಡ ಅಧಿಕಾರಿಗಳು
ಜಾರ್ಖಂಡ್ ಸಿಎಂ ಹೇಮಂತ್ ಸೊರೆನ್ ಅವರು ಈಗ ಭೂ-ಹಗರಣ, ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸಿಲುಕಿಕೊಂಡಿದ್ದಾರೆ. ಈ ಪ್ರಕರಣದ ಸಂಬಂಧಿಸಿದಂತೆ ತನಿಖೆ ನಡೆಸಲು ಇ.ಡಿ ಅಧಿಕಾರಿಗಳು ಸಿಎಂ ಹೇಮಂತ್ ಸೊರೆನ್ಗಾಗಿ ಬೆನ್ನುಬಿದ್ದಿದ್ದಾರೆ.
ಇದನ್ನೂ ಓದಿ: ಗೊಸುಂಬೆ ಉರುಫ್ ಊಸರವಳ್ಳಿ ಕಾಂಗ್ರೆಸ್ ಪಕ್ಷಕ್ಕೆ ಒಳಗೊಂದು ಹೊರಗೊಂದು ವೇಷ – ಜೆಡಿಎಸ್ ವಾಗ್ದಾಳಿ
ಹೌದು, ಭೂ-ಹಗರಣದಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ 9 ಬಾರಿ ಸಮನ್ಸ್ ನೀಡಿದರೂ ಜಾರ್ಖಂಡ್ ಸಿಎಂ ಹೇಮಂತ್ ಸೊರೆನ್ ವಿಚಾರಣೆ ಹಾಜರಾಗಿಲ್ಲ. ಇದೀಗ ಸೊರೇನ್ ಅವರ ದೆಹಲಿಯ ಖಾಸಗಿ ನಿವಾಸಕ್ಕೆ ತೆರಳಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಆದರೆ ಇಡಿ ಭಯದಿಂದ ಸೋರೆನ್ ನಾಪತ್ತೆ ಆಗಿದ್ದಾರೆ ಎನ್ನಲಾಗ್ತಿದೆ. ಈ ಹಿನ್ನೆಲೆಯಲ್ಲಿ ಸೋರೆನ್ಗೆ ಸೇರಿದ ಬಿಎಂಡಬ್ಲ್ಯೂ ಕಾರನ್ನು ಇಡಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.
ಇಡಿ ಶೋಧ ಕಾರ್ಯದ ಬೆನ್ನಲ್ಲೇ ಜಾರ್ಖಂಡ್ ಸಿಎಂ ತಮ್ಮ ಲಭ್ಯತೆಯ ಬಗ್ಗೆ ಮಾಹಿತಿ ನೀಡಿದ್ದು, ಜನವರಿ 31ರಂದು ವಿಚಾರಣೆಗೆ ಹಾಜರಾಗುವುದಾಗಿ ತಿಳಿಸಿದ್ದಾರೆ ಎಂದು ಹೇಳಲಾಗ್ತಿದೆ.