ಬ್ಯಾಗ್ ಬೆಲೆ ಬರೋಬ್ಬರಿ ₹53 ಕೋಟಿ! – ಚಿನ್ನ, ವಜ್ರದಲ್ಲೇ ತಯಾರಾದ ಬ್ಯಾಗ್ ಉದ್ದೇಶವೇನು?
ಹೆಣ್ಮಕ್ಕಳು ಮೊದಲೇ ಫ್ಯಾಷನ್ ಪ್ರಿಯರು. ಸ್ಯಾಂಡಲ್ಸ್, ಮೇಕಪ್, ಡ್ರೆಸ್, ಬ್ಯಾಗ್ಸ್ ಅಂತಾ ಸಿಕ್ಕಾಪಟ್ಟೆ ದುಡ್ಡು ಖರ್ಚು ಮಾಡ್ತಾರೆ. ಇನ್ನು ಸೆಲೆಬ್ರಿಟಿಗಳು ಯೂಸ್ ಮಾಡುವ ಬ್ರಾಂಡ್ಗಳಂತೂ ತುಂಬಾನೇ ಎಕ್ಸ್ಪೆನ್ಸಿವ್ ಆಗಿರ್ತಾವೆ. ಅದ್ರಲ್ಲೂ ಈ ಹ್ಯಾಂಡ್ ಬ್ಯಾಗ್ ಬೆಲೆ ಕೇಳಿದ್ರೆ ನೀವೇ ಶಾಕ್ ಆಗ್ತೀರಾ..
ಇದನ್ನೂ ಓದಿ: ಮಂಡ್ಯದಲ್ಲಿ ಹನುಮ ಧ್ವಜ ಸಂಘರ್ಷದ ಕಿಚ್ಚು! – ಕೈ ಶಾಸಕರ ಬ್ಯಾನರ್ಗೆ ಕಲ್ಲೆಸೆದು ಆಕ್ರೋಶ ಹೊರಹಾಕಿದ ಪ್ರತಿಭಟನಾಕಾರರು
ಸಾಮಾನ್ಯವಾಗಿ ಬ್ಯಾಗ್ಗಳನ್ನ ಖರೀದಿ ಮಾಡುವಾಗಿ ಅವರವರ ಅನುಕೂಲಕ್ಕೆ ತಕ್ಕಂತೆ ದುಡ್ಡು ಕೊಟ್ಟು ತಗೊಳ್ತಾರೆ. ಆದ್ರೆ ಇಟಲಿ ಮೂಲದ ಐಷಾರಾಮಿ ಉತ್ಪನ್ನಗಳ ತಯಾರಕ ಬೋರಿನಿ ಮಿಲನೇಸಿ ತಯಾರಿಸಿರುವ ಈ ಹ್ಯಾಂಡ್ ಬ್ಯಾಗ್ ಖರೀದಿಸಲು ಬಹುಶಃ ಕೋಟ್ಯಧಿಪತಿಗಳು ಸಹ ಹಿಂದೆ ಮುಂದೆ ನೋಡ್ತಾರೆ. ಯಾಕಂದ್ರೆ ಇದು ವಿಶ್ವದ ಅತ್ಯಂತ ದುಬಾರಿ ಬ್ಯಾಗ್. ಈ ಬ್ಯಾಗ್ನ ಬೆಲೆ ಬರೋಬ್ಬರಿ 6 ಮಿಲಿಯನ್ ಯುರೋ. ಅಂದ್ರೆ ಭಾರತೀಯ ಕರೆನ್ಸಿ ಪ್ರಕಾರ ಒಂದಲ್ಲ ಎರಡಲ್ಲ 53 ಕೋಟಿ ರೂಪಾಯಿ. ಅರೆ ಈ ಬ್ಯಾಗಿಗ್ಯಾಕೆ ಇಷ್ಟೊಂದು ರೇಟು ಅಂತಾ ನಿಮಗೆ ಅನ್ನಿಸಬಹುದು. ಅದಕ್ಕೆ ಕಾರಣವೂ ಇದೆ.
ಬ್ಯಾಗನ್ನು ಅರೆ-ಹೊಳೆಯುವ ಅಲಿಗೇಟರ್ ಚರ್ಮ, 10 ಚಿನ್ನದ ಚಿಟ್ಟೆ, ವಜ್ರಗಳು ಮತ್ತು ಅಪರೂಪದ ರತ್ನಗಳಿಂದ ಅಲಂಕರಿಸಲಾಗಿದೆ. ಒಟ್ಟಾರೆ 130 ಕ್ಯಾರೆಟ್ ವಜ್ರಗಳಿಂದ ಕೂಡಿರುವ ಈ ಬ್ಯಾಗ್ ಅನ್ನು, ಸಾಗರ ಮಾಲಿನ್ಯದ ಬಗ್ಗೆ ಜಾಗೃತಿ ಮೂಡಿಸಲು ತಯಾರು ಮಾಡಲಾಗಿದೆ. ಪ್ಲಾಸ್ಟಿಕ್ಗಳಿಂದ ಹೆಚ್ಚು ಅಪಾಯಕ್ಕೆ ಒಳಗಾಗುವ ಜಲಚರಗಳನ್ನು ರಕ್ಷಿಸಲು ವಿಶ್ವದ ‘ಅತ್ಯಂತ ದುಬಾರಿ’ ಬ್ಯಾಗ್ ಸಿದ್ಧಪಡಿಸಲಾಗಿದೆ.
ಅರೆ ಇಷ್ಟು ದುಬಾರಿ ಬ್ಯಾಗ್ನಿಂದ ಜಲಚರಗಳನ್ನ ಹೇಗೆ ರಕ್ಷಣೆ ಮಾಡ್ತಾರೆ ಅಂತಾ ನಿಮಗೆ ಅನ್ನಿಸಬಹುದು. ಆದ್ರೆ ಅಲ್ಲೇ ಇರೋದು ಲಾಜಿಕ್. ಈ ಬ್ಯಾಗ್ ಮಾರಾಟದಿಂದ ಬರುವ ಹಣದಲ್ಲಿ 7 ಕೋಟಿ ಹಣವನ್ನ ಸಮುದ್ರದ ಸ್ವಚ್ಛತೆಗೆ ದಾನ ಮಾಡಲಾಗುತ್ತದೆ. ಇದೇ ಉದ್ದೇಶದಿಂದಲೇ ಇಟಾಲಿಯನ್ ಮೂಲದ ಕಂಪನಿ ಈ ಬ್ಯಾಗ್ ಸಿದ್ಧಪಡಿಸಿದೆ.