ಶ್ರೇಯಸ್ ಅಯ್ಯರ್ ಫ್ಲಾಪ್ ಶೋ – ಟೆಸ್ಟ್ ಕ್ರಿಕೆಟ್‌ಗೆ ಫಿಟ್ ಅಲ್ವಾ ಈ ಆಟಗಾರ?
ಶುಬ್ಮನ್ ಗಿಲ್ ಟೆಸ್ಟ್ ಮ್ಯಾಚ್‌ನಲ್ಲಿ ಫ್ಲಾಪ್ ಕ್ರಿಕೆಟರ್ ಎಂದು ಕರೆಸಿಕೊಳ್ಳುತ್ತಿದ್ದಾರೆ. ಶ್ರೇಯಸ್ ಅಯ್ಯರ್ ಕಥೆ ಕೂಡ ಇದೇ ಆಗ್ತಿದೆ. ಕಳಪೆ ಪ್ರದರ್ಶನದ ಹೊರತಾಗಿಯೂ ಶ್ರೇಯಸ್ ಅಯ್ಯರ್ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಅಯ್ಯರ್ ಗೆ ನಿರಂತರವಾಗಿ ಅವಕಾಶಗಳನ್ನು ನೀಡಲಾಗುತ್ತಿದೆ. ಆದರೆ ನೀಡಿರುವ ದೊಡ್ಡ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ಶ್ರೇಯಸ್ ಅಯ್ಯರ್ ವಿಫಲರಾಗಿದ್ದಾರೆ. ಇದರಿಂದಾಗಿ ಟೆಸ್ಟ್ ತಂಡದಲ್ಲಿ ಇನ್ನು ಮುಂದೆ ಅವರಿಗೆ ಸ್ಥಾನ ನೀಡಬೇಕೆ ಎನ್ನುವ ಪ್ರಶ್ನೆಗಳು ಎದ್ದಿವೆ.
ಇದನ್ನೂ ಓದಿ: 69 ವರ್ಷಗಳ ಹಳೆಯ ದಾಖಲೆ ಮುರಿದು ಇತಿಹಾಸ ನಿರ್ಮಿಸಿದ ಇಂಗ್ಲೆಂಡ್ – ಮೊದಲ ಟೆಸ್ಟ್‌ನಲ್ಲಿ ಭಾರತಕ್ಕೆ ಮುಖಭಂಗ
ಇಂಗ್ಲೆಂಡ್ ವಿರುದ್ಧದ ಫಸ್ಟ್ ಟೆಸ್ಟ್ನ ಫಸ್ಟ್ ಇನ್ನಿಂಗ್ಸ್ನಲ್ಲಿ 35 ರನ್ ಹೊಡೆದ್ರು. ಸೆಕೆಂಡ್ ಇನ್ನಿಂಗ್ಸ್ನಲ್ಲಿ 13 ರನ್ಗೆ ಔಟ್. ಶ್ರೇಯಸ್ ಅಯ್ಯರ್ ಕೂಡ ಟೆಸ್ಟ್ ಕ್ರಿಕೆಟ್‌ಗೆ ಫಿಟ್ ಆದಂತೆ ಕಾಣ್ತಿಲ್ಲ. 13 ಮ್ಯಾಚ್ ಅಂದ್ರೆ 22 ಇನ್ನಿಂಗ್ಸ್ಗಳಲ್ಲಿ ಶ್ರೇಯಸ್ 755 ರನ್ ಹೊಡೆದಿದ್ದಾರೆ ಬ್ಯಾಟಿಂಗ್ ಎವರೇಜ್ 37.75. ಸ್ಪಿನ್ನರ್ಸ್ಗಳನ್ನ ಎದುರಿಸೋಕಂತೂ ಶ್ರೇಯಸ್ ಅಯ್ಯರ್ ಪರದಾಡ್ತಾ ಇದ್ದಾರೆ. ಇಂಗ್ಲೆಂಡ್ ವಿರುದ್ಧ ಎರಡೂ ಇನ್ನಿಂಗ್ಸ್ಗಳಲ್ಲೂ ಸ್ಪಿನ್ ಬೌಲಿಂಗ್ನ್ನ ಸಮರ್ಥವಾಗಿ ಫೇಸ್ ಮಾಡೋಕೆ ಶ್ರೇಯಸ್ ಅಯ್ಯರ್ಗೆ ಸಾಧ್ಯವಾಗಿಲ್ಲ. ಹೀಗಾಗಿ ಶ್ರೇಯಸ್ ಕೂಡ ಅಷ್ಟೇ ಟೆಸ್ಟ್ ಕ್ರಿಕೆಟ್‌ಗೆ ಎಷ್ಟು ಫಿಟ್ ಅನ್ನೋ ಪ್ರಶ್ನೆ ಬಂದೇ ಬರುತ್ತೆ. ನಿಮಗೆ ಗೊತ್ತಿರಲಿ, ಟೆಸ್ಟ್ ಕ್ರಿಕೆಟ್ನ ಕಳೆದ 10 ಇನ್ನಿಂಗ್ಸ್ಗಳಲ್ಲಿ ಟೀಂ ಇಂಡಿಯಾ ಪರ 35 ವರ್ಷದ ವಿರಾಟ್ ಕೊಹ್ಲಿಯೇ ಟಾಪ್ ಸ್ಕೋರರ್ ಆಗಿರೋದು. 10 ಇನ್ನಿಂಗ್ಸ್ಗಳಲ್ಲಿ ಕೊಹ್ಲಿ 631 ರನ್ ಹೊಡೆದಿದ್ದಾರೆ. ರೋಹಿತ್ ಶರ್ಮಾ 406 ರನ್ ಮಾಡಿದ್ದಾರೆ. ಆದ್ರೆ 10 ಇನ್ನಿಂಗ್ಸ್ಗಳಲ್ಲಿ ಶುಬ್ಮನ್ ಗಿಲ್ ಗಳಿಸಿರೋದು ಕೇವಲ 160 ರನ್. ಶ್ರೇಯಸ್ ಅಯ್ಯರ್ ಹೊಡೆದಿರೋದು 131 ರನ್. ಕೊಹ್ಲಿ ಟಾಪ್ನಲ್ಲಿದ್ರೆ, ಗಿಲ್ ಮತ್ತು ಶ್ರೇಯಸ್ ಕೆಳಗಿನಿಂದ ಟಾಪ್ನಲ್ಲಿದ್ದಾರೆ.