ಕಳ್ಳಾಟ ಆಡೋದ್ರಲ್ಲಿ ಪಾಕಿಸ್ತಾನಿ ಕ್ರಿಕೆಟರ್ಸ್ ಎತ್ತಿದ ಕೈ – ತಮ್ಮ ಕೆರಿಯರ್ ಹಾಳು ಮಾಡಿಕೊಂಡಿರುವ ಆಟಗಾರರು ಇವರೇ..!

ಕಳ್ಳಾಟ ಆಡೋದ್ರಲ್ಲಿ ಪಾಕಿಸ್ತಾನಿ ಕ್ರಿಕೆಟರ್ಸ್ ಎತ್ತಿದ ಕೈ – ತಮ್ಮ ಕೆರಿಯರ್ ಹಾಳು ಮಾಡಿಕೊಂಡಿರುವ ಆಟಗಾರರು ಇವರೇ..!

ಪಾಕಿಸ್ತಾನಿ ಕ್ರಿಕೆಟರ್ಸ್ ಮತ್ತು ಮ್ಯಾಚ್​​ ಫಿಕ್ಸಿಂಗ್​ಗೆ ಒಂದು ದೊಡ್ಡ ಇತಿಹಾಸವೇ ಇದೆ. ಈ ಹಿಂದೆ ಪಾಕಿಸ್ತಾನದ ಹಲವು ಕ್ರಿಕೆಟರ್ಸ್​ಗಳು ಮ್ಯಾಚ್​​ ಫಿಕ್ಸಿಂಗ್ ಮಾಡಿ ತಮ್ಮ ಕೆರಿಯರ್​​​ನ್ನ ಹಾಳು ಮಾಡಿಕೊಂಡಿದ್ದಾರೆ.

ಇದನ್ನೂ ಓದಿ:  ಶೊಯಿಬ್ ಮಲಿಕ್ ವಿರುದ್ಧ ಮ್ಯಾಚ್ ಫಿಕ್ಸಿಂಗ್ ಆರೋಪ – ಬಿಪಿಎಲ್‌ನಿಂದ ಶೋಯೆಬ್ ಕಿಕ್ ಔಟ್

ಪಾಕಿಸ್ತಾನದ ವಿಕೆಟ್ ಕೀಪರ್ ಬ್ಯಾಟ್ಸ್​ಮನ್​ ಆಗಿದ್ದ ಉಮರ್​ ಅಕ್ಮಲ್ ವಿರುದ್ಧವೂ ಮ್ಯಾಚ್​ ಫಿಕ್ಸಿಂಗ್ ಆರೋಪ ಕೇಳಿ ಬಂದಿತ್ತು. ಇದಾದ ಬಳಿಕ ಅಕ್ಮಲ್​ ಅಂತಾರಾಷ್ಟ್ರೀಯ ಕ್ರಿಕೆಟ್ ಕೂಡ ಆಡಿಲ್ಲ. 2000ನೇ ಇಸವಿಯಲ್ಲಿ ಪಾಕಿಸ್ತಾನದ ಮಾಜಿ ನಾಯಕ ಸಲೀಮ್ ಮಲಿಕ್ ಕೂಡ ಮ್ಯಾಚ್​​ ಫಿಕ್ಸಿಂಗ್​​ನಲ್ಲಿ ಇನ್ವಾಲ್ ಆಗಿದ್ರು. ಕೆಲ ವರ್ಷಗಳ ಹಿಂದೆಯಷ್ಟೇ ಇದನ್ನ ಒಪ್ಪಿಕೊಂಡಿದ್ದ ಸಲೀಮ್​ ಮಲಿಕ್ ಪಾಕ್ ಜನತೆ ಮುಂದೆ ಕ್ಷಮೆಯಾಚಿಸಿದ್ರು. ಮ್ಯಾಚ್​ ಫಿಕ್ಸಿಂಗ್​​ನಲ್ಲಿ ತಗ್ಲಾಕ್ಕೊಂಡ ಬಳಿಕ ಸಮೀಮ್ ಮಲಿಕ್ ಪಾಕ್ ಪರ ಯಾವುದೇ ಮ್ಯಾಚ್​ ಕೂಡ ಆಡಿಲ್ಲ. ನಂತರ 2010ರಲ್ಲಿ ಪಾಕಿಸ್ತಾನದ ಮೂವರು ಮೇನ್ ಪ್ಲೇಯರ್ಸ್​​ಗಳು ಏಕಕಾಲಕ್ಕೆ ಮ್ಯಾಚ್​​ಫಿಕ್ಸಿಂಗ್​​ನಲ್ಲಿ ಲಾಕ್ ಆಗ್ತಾರೆ. ಸಲ್ಮಾನ್ ಬಟ್, ಮೊಹಮ್ಮದ್ ಆಸಿಫ್ ಮತ್ತು ಮೊಹಮ್ಮದ್ ಅಮೀರ್. ಈ ಪೈಕಿ ಸಲ್ಮಾನ್ ಬಟ್ ಇಂಗ್ಲೆಂಡ್​ ವಿರುದ್ಧದ ಟೆಸ್ಟ್​ ಸೀರಿಸ್​ ವೇಳೆ ಪಾಕ್​ ಟೀಮ್​​ನ ಕ್ಯಾಪ್ಟನ್ ಆಗಿದ್ರು. ಈ ವೇಳೆ ತಮ್ಮ ಕೀ ಬೌಲರ್ಸ್​ಗಳಾದ ಮೊಹಮ್ಮದ್ ಆಸಿಫ್ ಮತ್ತು ಮೊಹಮ್ಮದ್ ಅಮೀರ್​ಗೆ ಓವರ್​​ಸ್ಟೆಪ್​ ಮೂಲಕ ನೋ ಬಾಲ್​ಗಳನ್ನ ಎಸೆಯುವಂತೆ ಕ್ಯಾಪ್ಟನ್ ಸಲ್ಮಾನ್ ಬಟ್ ಫೋರ್ಸ್ ಮಾಡ್ತಾರೆ. ಹಾಗೆಯೇ ಸಲ್ಮಾನ್ ಬಟ್ ಕೆಲ ಕ್ಯಾಚ್​​ಗಳನ್ನ ಕೂಡ ಡ್ರಾಪ್ ಮಾಡ್ತಾರೆ. ಸ್ಪಾಟ್​ ಫಿಕ್ಸಿಂಗ್ ಮಾಡಿದ್ದ ಸಲ್ಮಾನ್ ಬಟ್​ರನ್ನ ಇಂಗ್ಲೆಂಡ್​​ನಲ್ಲೇ ಅರೆಸ್ಟ್ ಮಾಡಲಾಗುತ್ತೆ. ಕ್ರಿಕೆಟ್​​ನಿಂದ ಬ್ಯಾನ್ ಆಗಿದ್ದಷ್ಟೇ ಅಲ್ಲ, ಜೈಲು ಶಿಕ್ಷೆಗೂ ಒಳಗಾಗ್ತಾರೆ.

ಇನ್ನು ಮೊಹಮ್ಮದ್ ಆಸಿಫ್ ಅಂತೂ ಆ ಕಾಲದಲ್ಲಿ ವನ್​ ಆಫ್ ದಿ ಫೈನೆಸ್ಟ್ ಪೇಸ್ ಬೌಲರ್ ಆಗಿದ್ರು. ಸ್ವಿಂಗ್​ ಬೌಲಿಂಗ್​​ನಲ್ಲಂತೂ ಆಸಿಫ್ ಮಾಸ್ಟರ್ ಆಗಿದ್ರು. ಪಿಚ್ ಅಗೋ ಮುನ್ನವೇ ಗಾಳಿಯಲ್ಲೇ ಆಸಿಫ್ ಎಸೆದ ಬಾಲ್ ಮೂವ್​ಮೆಂಟ್ ಪಡೆದುಕೊಳ್ತಿತ್ತು. ಯಾರ್ಕರ್​​​ಗಳಂತೂ ಜಸ್ಟ್ ಅನ್​ಪ್ಲೇಯಬಲ್. ಆಗಿನ ಲೆಜೆಂಡ್ ಆಸ್ಟ್ರೇಲಿಯಾದ ಗ್ಲೇನ್ ಮೆಗ್ರಾಥ್ ಜೊತೆಗೆ ಮೊಹಮ್ಮದ್ ಆಸಿಫ್​​ರನ್ನ ಕಂಪೇರ್​​ ಮಾಡ್ತಾ ಇದ್ರು. ಈ ಎಪಿಸೋಡ್ ಮುಗಿದ್ಮೇಲೆ ಸುಮ್ನೆ ಯೂಟ್ಯೂಬ್ಯೂನಲ್ಲಿ ಮೊಹಮ್ಮದ್ ಆಸಿಫ್ ಬೌಲಿಂಗ್ ಅಂತಾ ಸರ್ಚ್ ಮಾಡಿ ನೋಡಿ..ಅವರ ಟಾಪ್ ಕ್ಲಾಸ್ ಬೌಲಿಂಗ್​​ ವಿಡಿಯೋಗಳು ಸಿಗುತ್ತೆ. ಅಂಥಾ ಬೌಲರ್​ ಕ್ಯಾಪ್ಟನ್ ಆಗಿದ್ದ ಸಲ್ಮಾನ್ ಬಟ್ ಜೊತೆ ಸೇರಿ ಸ್ಪಾಟ್ ಫಿಕ್ಸಿನಲ್ಲಿ ಭಾಗಿಯಾಗ್ತಾರೆ. ಓವರ್​ ಸ್ಟೆಪ್​ ನೋ ಬಾಲ್​ಗಳನ್ನ ಹಾಕಿ ಒಂದು ವರ್ಷ ಬ್ಯಾನ್​​ಗೊಳಗಾಗ್ತಾರೆ. ಜೈಲಿಗೂ ಹೋಗ್ತಾರೆ. ಅಲ್ಲಿಗೆ ಕೆರಿಯರೇ ಖತಂ ಆಗಿಬಿಡುತ್ತೆ.

ಇನ್ನು ಮೊಹಮ್ಮದ್ ಅಮೀರ್​.. ಈ ಪುಣ್ಯಾತ್ಮನಿಗೆ ಆಗ 18 ವರ್ಷವಷ್ಟೇ ಆಗಿತ್ತು. ಭಯಾನಕ ಬೌಲಿಂಗ್ ಮಾಡ್ತಾ ಇದ್ದ ಮೊಹಮ್ಮದ್ ಅಮೀರ್​​ನನ್ನ ಎಲ್ಲರೂ ಫ್ಯೂಚರ್ ಸೂಪರ್​ ಸ್ಟಾರ್ ಅಂತಾನೆ ಬಣ್ಣಿಸ್ತಿದ್ರು. ಹೆವೇ ಟ್ಯಾಲೆಂಟೆಡ್ ಬೌಲರ್​ ಆಗಿದ್ದ ಮೊಹಮ್ಮದ್ ಅಮೀರ್ ಕ್ಯಾಪ್ಟನ್ ಸಲ್ಮಾನ್ ಬಟ್​ ಜೊತೆಗೆ ಹಣದಾಸೆಗೆ ಬಿದ್ದು ಇಂಗ್ಲೆಂಡ್​ ವಿರುದ್ಧದ ಮ್ಯಾಚ್​​ನಲ್ಲಿ ನೋ ಬಾಲ್​ಗಳನ್ನ ಎಸೆದು ಸ್ಪಾಟ್ ಫಿಕ್ಸಿಂಗ್ ಮಾಡಿ ಸಿಕ್ಕಿಬೀಳ್ತಾರೆ. ಐದು ವರ್ಷಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್​​ನಿಂದ ಬ್ಯಾನ್​ ಆಗ್ತಾನೆ. ಆಗ ಮೊಹಮ್ಮದ್ ಅಮೀರ್​ಗೆ 18 ವರ್ಷ. ಬ್ಯಾನ್​ ಲಿಫ್ಟ್ ಆಗೋ ವೇಳೆಗಾಗಲೇ 23 ವರ್ಷ ಕಳೆದಿತ್ತು. ಆಮೇಲೆ ಕಮ್​ಬ್ಯಾಕ್ ಮಾಡಿದ್ರೂ ಮೊಹಮ್ಮದ್ ಅಮೀರ್​ ಕ್ಲಿಕ್​​ ಆಗೋದಿಲ್ಲ.

ಹಾಗೆಯೇ ಪಾಕಿಸ್ತಾನದ ಸ್ಪಿನ್ನರ್ ಆಗಿದ್ದ ದ್ಯಾನಿಶ್ ಕನೇರಿಯಾ ಕೂಡ 2009ರಲ್ಲಿ ಸ್ಪಾಟ್​ ಫಿಕ್ಸಿಂಗ್​ನಲ್ಲಿ ಭಾಗಿಯಾಗಿದ್ರು. 2018ರಲ್ಲಿ ಈ ವಿಚಾರವನ್ನ ಕನೇರಿಯಾ ಒಪ್ಪಿಕೊಳ್ತಾರೆ. ಬಳಿಕ ಜೈಲಿಗೂ ಹೋಗ್ತಾರೆ. ಹಾಗೆಯೇ ಕ್ರಿಕೆಟ್​​ನಿಂದ ಲೈಫ್​ಟೈಮ್ ಬ್ಯಾನ್​ಗೊಳಗಾಗ್ತಾರೆ. ಇವಿಷ್ಟು ಮ್ಯಾಚ್​ ಫಿಕ್ಸಿಂಗ್​ ಮಾಡಿದ ಪಾಕಿಸ್ತಾನದ ಟಾಪ್ ಕ್ರಿಕೆಟರ್ಸ್​ಗಳು. ಇನ್ನುಳಿದಂತೆ ಸಣ್ಣ ಪುಟ್ಟ ಕಿಲಾಡಿಗಳು ಪಾಕಿಸ್ತಾನದಲ್ಲಿ ಬೇಜಾನ್ ಜನ ಇದ್ದಾರೆ. ಹೀಗಾಗಿ ಶೋಯೆಬ್ ಮಲಿಕ್ ಈಗ ಓವರ್​ ದಿ ಸ್ಟೆಪ್ ನೋ ಬಾಲ್ ಎಸೆದು ಮ್ಯಾಚ್​ ಫಿಕ್ಸಿಂಗ್​ ಆರೋಪಕ್ಕೆ ಒಳಗಾಗಿರೋದ್ರಲ್ಲಿ ಯಾವುದೇ ಅಶ್ಚರ್ಯ ಇಲ್ಲ. ಅಂತಾರಾಷ್ಟ್ರೀಯ ಮ್ಯಾಚ್​ಗಳಲ್ಲೇ ಸ್ಪಾಟ್ ಫಿಕ್ಸಿಂಗ್ ಮಾಡಿದವರು ಇನ್ನು ಸಣ್ಣ ಪುಟ್ಟ ಲೀಗ್ ಕ್ರಿಕೆಟ್ ಟೂರ್ನಿಗಳಲ್ಲಿ ಬಿಡ್ತಾರಾ?

 

Sulekha