ಸಿರಿಯಾದಲ್ಲಿ ಅಮೆರಿಕ ಸೇನೆ ಮೇಲೆ ಡ್ರೋನ್ ದಾಳಿ! – ಇರಾನ್ ಬೆಂಬಲಿತ ಉಗ್ರಗಾಮಿಗಳದ್ದೇ ಕೈವಾಡ ಎಂದು ಜೋ ಬೈಡೆನ್ ಆರೋಪ!
ಸಿರಿಯಾ ಗಡಿ ಸಮೀಪದಲ್ಲಿರುವ ಈಶಾನ್ಯ ಜೋರ್ಡಾನ್ನಲ್ಲಿ ಅಮೆರಿಕ ಸೇನೆಯ ಮೇಲೆ ಡ್ರೋನ್ ದಾಳಿ ನಡೆದಿದೆ. ಭಾನುವಾರ ತಡರಾತ್ರಿ ಡ್ರೋನ್ ದಾಳಿ ನಡೆಸಲಾಗಿದೆ. ಈ ದಾಳಿ ಹಿಂದೆ ಇದು ಇರಾನ್ ಬೆಂಬಲಿತ ಉಗ್ರಗಾಮಿಗಳದ್ದೇ ಕೈವಾಡ ಇದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಆರೋಪಿಸಿದ್ದಾರೆ.
ಇದನ್ನೂ ಓದಿ: ಶಾಲಾ ಬಸ್ ಹಾಗೂ ಟ್ಯಾಕ್ಟರ್ ನಡುವೆ ಭೀಕರ ಅಪಘಾತ – ನಾಲ್ವರು ವಿದ್ಯಾರ್ಥಿಗಳ ದುರ್ಮರಣ
ಭಾನುವಾರ ರಾತ್ರಿ ಸಿರಿಯಾ ಗಡಿ ಸಮೀಪವಿರುವ ಈಶಾನ್ಯ ಜೋರ್ಡಾನ್ನಲ್ಲಿ ನಮ್ಮ ಪಡೆಗಳ ಮೇಲೆ ದಾಳಿ ನಡೆದಿದೆ. ಮೂವರು ಸಾವನ್ನಪ್ಪಿದ್ದು ಹಲವರು ಗಾಯಗೊಂಡಿದ್ದಾರೆ. ದಾಳಿ ಹಿಂದೆ ಇರಾನ್ ಬೆಂಬಲಿತ ಉಗ್ರಗಾಮಿಗಳದ್ದೇ ಕೈವಾಡ ಇದೆ. ಈ ದಾಳಿಗೆ ತಕ್ಕ ಉತ್ತರ ಅಮೆರಿಕ ನೀಡಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ. ಬೈಡನ್ ಹೇಳಿಕೆಗೆ ಇರಾನ್ ಬೆಂಬಲಿತ ರಾಷ್ಟ್ರಗಳ ಗುಂಪು ಆಕ್ಷೇಪ ವ್ಯಕ್ತಪಡಿಸಿದೆ.
ಹಮಾಸ್ನೊಂದಿಗೆ ಇಸ್ರೇಲ್ನಲ್ಲಿ ಯುದ್ಧ ಪ್ರಾರಂಭವಾದ ಬಳಿಕ ಇದೇ ಮೊದಲ ಬಾರಿಗೆ ಮಧ್ಯಪ್ರಾಚ್ಯದಲ್ಲಿ ಯುಎಸ್ ಮಿಲಿಟರಿ ಸಿಬ್ಬಂದಿಯನ್ನು ನೇರವಾಗಿ ಗುರಿಯಾಗಿಸಲಾಗಿದೆ. ಹಮಾಸ್ ವಕ್ತಾರ ಸಮಿ ಅಬು ಝಹ್ರಿ ಮಾತನಾಡಿ, ಈ ದಾಳಿಯು ಅಮೆರಿಕದ ಆಡಳಿತಕ್ಕೆ ನೀಡಿರುವ ಎಚ್ಚರಿಕೆಯ ಸಂದೇಶವಾಗಿದೆ ಎಂದಿದ್ದಾರೆ.