ವಿದೇಶಿಯರಿಗೆ ಹಿಂದಿ ಕೋರ್ಸ್: ಐಸಿಸಿಆರ್ ನಿಂದ ಶೇ. 70 ರಷ್ಟು ಶುಲ್ಕ ವಿನಾಯಿತಿ

ವಿದೇಶಿಯರಿಗೆ ಹಿಂದಿ ಕೋರ್ಸ್: ಐಸಿಸಿಆರ್ ನಿಂದ ಶೇ. 70 ರಷ್ಟು ಶುಲ್ಕ ವಿನಾಯಿತಿ

ನವದೆಹಲಿ: ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಮಂಡಳಿ (ಐಸಿಸಿಆರ್), ಇಂದಿರಾ ಗಾಂಧಿ ರಾಷ್ಟ್ರೀಯ  ಮುಕ್ತ ವಿಶ್ವವಿದ್ಯಾಲಯ (ಐಜಿಎನ್ ಒಯು) ಮತ್ತು ಕೇಂದ್ರ ಹಿಂದಿ ನಿರ್ದೇಶನಾಲಯದ ಸಹಯೋಗದೊಂದಿಗೆ ವಿದೇಶಿ ಪ್ರಜೆಗಳಿಗಾಗಿ ಹಿಂದಿ ಕಲಿಸಲು ಇದೇ 16 ರಿಂದ ಆನ್ ಲೈನ್  ತರಗತಿಗಳು ಆರಂಭವಾಗಲಿದ್ದು, ತರಗತಿಯ ಶೇ, 70 ರಷ್ಟು ಶುಲ್ಕ ವಿನಾಯಿತಿ ಮಾಡಲಾಗಿದೆ ಐಸಿಸಿಆರ್ ತನ್ನ ಪ್ರಕಟನೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: ಸುಪ್ರೀಂಕೋರ್ಟ್ ನಲ್ಲಿ ಕೇಂದ್ರಕ್ಕೆ ಜಯ: ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಶೇ 10ರಷ್ಟು ಮೀಸಲಾತಿ

ವಿದೇಶಿಯರಿಗಾಗಿ ಹಿಂದಿ ಜಾಗೃತಿಯ ಬೇಸಿಕ್ ಕೋರ್ಸ್ ಅನ್ನು ಮೂರು ತಿಂಗಳು ಅನ್ ಲೈನ್ ಮೂಲಕ ನಡೆಸಲಾಗುತ್ತಿದ್ದು, ವಾರಕ್ಕೆ ಎರಡು ದಿನ ತರಗತಿಗಳು ನಡೆಯಲಿದೆ. ಈ ತರಗತಿಯ ಶೇ. 70 ರಷ್ಟು ಶುಲ್ಕ ಐಸಿಸಿಆರ್ ಭರಿಸುತ್ತದೆ. ಇನ್ನುಳಿದ ಶೇ. 30ರಷ್ಟು ಶುಲ್ಕವನ್ನು ನೊಂದಣಿ ಮಾಡಿಕೊಂಡ ವಿದೇಶಿ ವಿದ್ಯಾರ್ಥಿಗಲೇ ಭರಿಸಲಿದ್ದಾರೆ ಎಂದು ತಿಳಿಸಿದೆ.

ಅರ್ಹ ವಿದ್ಯಾರ್ಥಿಗಳನ್ನು ನೋಂದಾಯಿಸುವ, ದಾಖಲಿಸಿಕೊಳ್ಳುವ, ಮೌಲ್ಯಮಾಪನ ಮಾಡುವ, ಪ್ರಮಾಣಿಕರಿಸುವ ಕೆಲಸವನ್ನು ಐಜಿಎನ್ಒಯು ಮಾಡಲಿದೆ. ತರಗತಿಗೆ ಬೇಕಾದ ಸೌಕರ್ಯ ಒದಗಿಸುವ ಜವಾಬ್ದಾರಿ ಕೇಂದ್ರ ಹಿಂದಿ ನಿರ್ದೇಶನಾಲಯ ಹೊತ್ತುಕೊಂಡಿದೆ.

ಥೈಲ್ಯಾಂಡ್, ಚೀನಾ, ಮಾರಿಷನ್, ಇಂಡೋನೇಷ್ಯಾ, ವಿಯೆಟ್ನಾಂ, ಇರಾನ್, ತೈವಾನ್, ಫಿಲಿಪೈನ್ ಮತ್ತು ರೊಮೇನಿಯಾದ 226 ವಿದ್ಯಾರ್ಥಿಗಳು ಈಗಾಗಲೇ ತರಗತಿಗೆ ನೋಂದಣಿ ಮಾಡಿಕೊಂಡಿದ್ದಾರೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

suddiyaana