ದೇಗುಲ ನಿರ್ವಹಣೆಗೂ ಡಿಪ್ಲೊಮಾ ಕೋರ್ಸ್! – ಈ ವಿವಿಯಿಂದ ‘ಟೆಂಪಲ್ ಮ್ಯಾನೇಜ್ಮೆಂಟ್ ಕೋರ್ಸ್..!
ದೇಶದಲ್ಲಿರುವ ದೊಡ್ಡ ದೊಡ್ಡ ದೇವಾಲಯಗಳನ್ನು ನಿರ್ವಹಣೆ ಮಾಡೋದು ತುಂಬಾ ಕಷ್ಟ. ನಿತ್ಯ ಸಾವಿರಾರು ಭಕ್ತರು ಬರುತ್ತಿರುತ್ತಾರೆ. ಪ್ರಸಾದ ವಿತರಣೆ, ಕಾಣಿಕೆ, ಭದ್ರತೆ ಮುಂತಾದವುಗಳನ್ನು ನಿರ್ವಹಣೆ ಮಾಡೋದು ತುಂಬಾ ಕಷ್ಟ. ಇದೇ ಉದ್ದೇಶದಿಂದ ಮುಂಬೈ ವಿಶ್ವವಿದ್ಯಾಲಯ ಹೊಸ ಕೊರ್ಸ್ ಒಂದನ್ನು ಪ್ರಾರಂಭ ಮಾಡಲು ಚಿಂತನೆ ನಡೆಸಿದೆ.
ಹೌದು, ದೇಶದಲ್ಲಿರುವ ದೊಡ್ಡ ದೊಡ್ಡ ದೇವಾಲಯಗಳ ನಿರ್ವಹಣೆ ಮಾಡುವ ಉದ್ದೇಶದಿಂದ ಟೆಂಪಲ್ ಮ್ಯಾನೇಜ್ಮೆಂಟ್ ಡಿಪ್ಲೊಮಾ ಕೋರ್ಸ್ ಆರಂಭಿಸಲು ಮುಂಬೈ ವಿಶ್ವವಿದ್ಯಾಲಯ ನಿರ್ಧರಿಸಿದೆ.
ಇದನ್ನೂ ಓದಿ: ಕಣ್ಣಿಗೆ ಬಣ್ಣದ ಲೆನ್ಸ್ ಹಾಕುವವರೇ ಗಮನಿಸಿ! – ಎಂತಹ ಲೆನ್ಸ್ ತಗೊಂಡ್ರೆ ಒಳ್ಳೇದು ಗೊತ್ತಾ?
ವರದಿಗಳ ಪ್ರಕಾರ, ಆಕ್ಸ್ಫರ್ಡ್ ಸೆಂಟರ್ ಫಾರ್ ಹಿಂದೂ ಸ್ಟಡೀಸ್ ಸಹಯೋಗದಲ್ಲಿ ಮುಂಬೈ ವಿವಿ ನೂತನ ಡಿಪ್ಲೊಮಾ ಕೋರ್ಸ್ಗೆ ಮುಂದಾಗಿದೆ. ಈ ಸಂಬಂಧ ಒಪ್ಪಂದ ಕೂಡ ಏರ್ಪಟ್ಟಿದೆ ಎಂದು ತಿಳಿದುಬಂದಿದೆ. ಆನ್ಲೈನ್ ಹಾಗೂ ಆಫ್ಲೈನ್ ಮೂಲಕವೂ ಕೋರ್ಸ್ ತರಬೇತಿ ಪಡೆದುಕೊಳ್ಳಬಹುದು ಎಂದು ಹೇಳಲಾಗಿದೆ.
ಸದ್ಯ ಡಿಪ್ಲೋಮಾ ಮಾಡುವ ನಿರ್ಧಾರದಲ್ಲಿರುವ ವಿವಿಯು, ಮುಂದಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಬಂದರೆ ಅದೇ ವಿಷಯದ ಮೇಲೆ ಸ್ನಾತಕೋತ್ತರ ಪದವಿಯನ್ನೂ ಆರಂಭಿಸುವ ಚಿಂತನೆಯಲ್ಲಿ ವಿವಿ ಇದೆ. ಈ ಮೂಲಕ ವಿದ್ಯಾರ್ಥಿಗಳು ಹಿಂದೂ ತತ್ವಶಾಸ್ತ್ರ ಓದಲು ಸಾಧ್ಯವಾಗುತ್ತದೆ. ಜೊತೆಗೆ ದೇವಾಲಗಳ ನಿರ್ವಹಣೆ ಬಗ್ಗೆ ಆಳವಾದ ತಿಳುವಳಿಕೆ ಸಿಗಲಿದೆ ಅನ್ನೋದು ತಜ್ಞರ ಲೆಕ್ಕಾಚಾರವಾಗಿದೆ
ಮುಂಬೈ ವಿಶ್ವವಿದ್ಯಾಲಯವು ಆಕ್ಸ್ಫರ್ಡ್ ಕೇಂದ್ರದೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತದೆ. ಕಾರಣ ಹಿಂದೂ ಧರ್ಮಕ್ಕೆ ಸಂಬಂಧಿಸಿದ ಅಧ್ಯಯನಗಳನ್ನು ಆಕ್ಸ್ಫರ್ಡ್ ಹಿಂದೂ ಅಧ್ಯಯನ ಕೇಂದ್ರ ನಡೆಸುತ್ತದೆ. ಮುಂಬೈ ವಿಶ್ವವಿದ್ಯಾಲಯವು ಕಾಲೇಜು, ಸರ್ಕಾರಿ ಸ್ವಾಮ್ಯದ ಸಾರ್ವಜನಿಕ ಸಂಶೋಧನಾ ವಿಶ್ವವಿದ್ಯಾಲಯವಾಗಿದೆ. ವಿಶ್ವದ ಅತಿದೊಡ್ಡ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿದೆ. 711 ಸಂಯೋಜಿತ ಕಾಲೇಜುಗಳನ್ನು ಇದು ಹೊಂದಿದೆ.