ನಾಯಿ ಬಾಲ ಡೊಂಕು ಯಾಕೆ? – ಶ್ವಾನಗಳ ಬಾಲ ನೇರವಾಗಿದ್ರೆ ಇಷ್ಟೆಲ್ಲಾ ಸಮಸ್ಯೆನಾ?
ನಮ್ಮಲ್ಲಿ ಹಿಂದಿನಿಂದ್ಲೂ ಅನೇಕ ಗಾದೆ ಮಾತುಗಳಿವೆ. ಅವುಗಳಲ್ಲಿ ನಾಯಿ ಬಾಲ ಡೊಂಕು ಅನ್ನೋದು ಕೂಡ ಒಂದು. ಆದ್ರೆ ನಾಯಿ ಬಾಲ ಯಾಕೆ ಡೊಂಕಾಗಿರುತ್ತೆ ಅನ್ನೋದನ್ನ ಯಾವತ್ತಾದ್ರೂ ಯೋಚನೆ ಮಾಡಿದ್ದೀರಾ..?
ನಾಯಿಗಳ ಬಾಲ ಯಾವಾಗ್ಲೂ ಡೊಂಕಾಗೇ ಇರುತ್ತದೆ. ಎಷ್ಟೇ ನೆಟ್ಟಗೆ ಮಾಡಲು ಪ್ರಯತ್ನಿಸಿದರೂ ಅದು ಸರಿ ಹೋಗಲ್ಲ. ಇದೇ ಕಾರಣಕ್ಕೆ ಕೆಲವೊಮ್ಮೆ ಬೈಯುವಾಗಲೂ ನಾಯಿ ಬಾಲ ಡೊಂಕು ಎಂಬ ನುಡಿಗಟ್ಟನ್ನು ಬಳಸುತ್ತಾರೆ. ಅಸಲಿಗೆ ಶ್ವಾನಗಳ ಬಾಲ ಡೊಂಕಾಗಿರುತ್ತದೆಯೋ, ಇಲ್ಲವೋ ಎಂಬುದು ಅದರ ತಳಿ ಮತ್ತು ಅದರ ವಂಶವಾಹಿಗಳ ಮೇಲೆ ಅವಲಂಬಿತವಾಗಿರುತ್ತದೆ. ಆದರೆ ವಿಜ್ಞಾನಿಗಳು ನಾಯಿಗಳಿಗೆ ಡೊಂಕು ಬಾಲ ಬೇಕು ಎಂದು ಹೇಳುತ್ತಾರೆ.
ಇದನ್ನೂ ಓದಿ: ಹಣ ಹಿಂದಿರುಗಿಸದೆ ಸತಾಯಿಸುತ್ತಿದ್ದ ಎಸಿಪಿ ಪುತ್ರನ ಭೀಕರ ಹತ್ಯೆ – ಲಾಯರ್ ಮರ್ಡರ್ ರಹಸ್ಯ ಬಿಚ್ಚಿಟ್ಟ ದೆಹಲಿ ಪೊಲೀಸರು
ಯಾಕಂದ್ರೆ ಶೀತ ಪ್ರದೇಶಗಳಲ್ಲಿ ವಾಸಿಸುವ ನಾಯಿಗಳು ಚಳಿಯಿಂದ ತಮ್ಮನ್ನು ರಕ್ಷಿಸಿಕೊಳ್ಳಲು ತಮ್ಮ ಬಾಲವನ್ನು ಸುತ್ತಿಕೊಳುತ್ತವೆ. ವಿಶ್ರಾಂತಿ ಪಡೆಯುವಾಗ ತಮ್ಮ ಬಾಲವನ್ನು ಮೂಗಿನ ಬಳಿ ಇಟ್ಟುಕೊಳ್ಳುತ್ತವೆ. ಈ ಕಾರಣದಿಂದಾಗಿ ಅವುಗಳು ಬೆಚ್ಚಗಾಗುತ್ತವೆಯಂತೆ. ಹಾಗಾದ್ರೆ ನಾಯಿಯ ಬಾಲವನ್ನು ಸರಿಪಡಿಸಲು ಸಾಧ್ಯವೇ ಇಲ್ವಾ ಅಂತಾ ನಿಮಗೆ ಅನ್ನಿಸಬಹುದು. ನಾಯಿಯ ಬಾಲವನ್ನು ಶಸ್ತ್ರಚಿಕಿತ್ಸಾ ವಿಧಾನದ ಮೂಲಕ ನೇರಗೊಳಿಸಬಹುದು. ಆದರೆ ನಾಯಿಯ ಬಾಲವನ್ನು ಈ ರೀತಿ ನೇರಗೊಳಿಸುವುದು ಶ್ವಾನದ ಆರೋಗ್ಯಕ್ಕೆ ಒಳ್ಳೆಯದಲ್ಲ. ಶಸ್ತ್ರಚಿಕಿತ್ಸೆಯಲ್ಲಿ, ವೈದ್ಯರು ನಾಯಿಯ ಮೂಳೆಗಳನ್ನು ಮುರಿದು ಅವುಗಳನ್ನು ಮತ್ತೆ ಜೋಡಿಸುತ್ತಾರೆ. ಇದು ಸಾಕಷ್ಟು ನೋವು ಉಂಟುಮಾಡುತ್ತದೆ. ಶ್ವಾನಗಳ ಆರೋಗ್ಯದ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ. ಹಾಗಂತ ಬಾಲ ನೆಟ್ಟಗೆ ಇಲ್ಲದ ಶ್ವಾನಗಳು ಇಲ್ವೇ ಇಲ್ಲ ಅಂತೇನಿಲ್ಲ.
ಬಸೆಂಜಿ ಮತ್ತು ಫರೋ ಹೌಂಡ್ ಜಾತಿಯ ಶ್ವಾನಗಳ ಬಾಲಗಳು ನೇರವಾಗಿರುತ್ತವೆ. ಅಂತಹ ನಾಯಿಗಳಲ್ಲಿ ನೇರವಾದ ಬಾಲವು ಸಹಜ. ಇದು ಯಾವುದೇ ಅಸ್ವಸ್ಥತೆಯ ಲಕ್ಷಣ ಕೂಡ ಅಲ್ಲ. ಇನ್ನೂ ಒಂದು ವಿಷ್ಯ ಅಂದ್ರೆ ಜಗತ್ತಿನಲ್ಲಿ ಬಾಲವಿಲ್ಲದ ನಾಯಿಗಳೂ ಇವೆ. ಕೆಲ ಮಾಲೀಕರು ತಮ್ಮ ಶ್ವಾನಗಳ ಬಾಲವನ್ನು ಕತ್ತರಿಸುತ್ತಾರೆ. ಸಾಕು ನಾಯಿಗಳ ಬಾಲವನ್ನು ಕಡಿಯುವುದು ಪಶ್ಚಿಮದಲ್ಲಿ ಸಾಮಾನ್ಯವಾಗಿದೆ. ಆದ್ರೆ ನೈಸರ್ಗಿಕವಾಗಿ ನೋಡೋದಾದ್ರೆ ಶ್ವಾನಗಳು ಡೊಂಕು ಬಾಲವನ್ನ ಹೊಂದಿರುತ್ತವೆ. ಇದ್ರಿಂದ ತಮ್ಮನ್ನ ತಾವು ರಕ್ಷಣೆ ಮಾಡಿಕೊಳ್ಳುತ್ತವೆ.