ಕಣ್ಣಿಗೆ ಬಣ್ಣದ ಲೆನ್ಸ್ ಹಾಕುವವರೇ ಗಮನಿಸಿ! – ಎಂತಹ ಲೆನ್ಸ್ ತಗೊಂಡ್ರೆ ಒಳ್ಳೇದು ಗೊತ್ತಾ?
ಇದು ಮಾರ್ಡನ್ ಯುಗ.. ಚೆನ್ನಾಗಿ ಕಾಣಿಸ್ಬೇಕು.. ಸ್ಟೈಲಿಶ್ ಆಗಿರಬೇಕು ಅಂತಾ ನೀವು ಕಣ್ಣಿಗೆ ಕಲರ್ ಲೆನ್ಸ್ ಬಳಸ್ತಿದ್ದೀರಾ? ಹಾಗಾದ್ರೆ ನೀವು ಎಚ್ಚರಿಕೆ ವಹಿಸೋದು ಮುಖ್ಯ.. ಕಲರ್ ಲೆನ್ಸ್ ಬಳಸಿದ್ರೆ ಕಣ್ಣಿಗೆ ನಾನಾ ಸಮಸ್ಯೆ ಎದುರಾಗುತ್ತೆ. ಅದು ಹೇಗೆ ಅನ್ನೋ ಮಾಹಿತಿ ಇಲ್ಲಿದೆ..
ಇದನ್ನೂ ಓದಿ: ಅಯೋಧ್ಯೆಯ ಹೋಟೆಲ್ಗಳಿಗೆ ಹಣದ ಹೊಳೆ! – 3 ದಿನದ ಆದಾಯ ಇಷ್ಟೊಂದಾ?
ಈಗಿನ ಕಾಲದಲ್ಲಿ ಎನೇ ಆದ್ರೂ ಎಲ್ಲವು ಸ್ಟೈಲಿಶ್ ಆಗಿ ಇರ್ಬೇಕು..ಎಲ್ಲರಿಗಿಂತ ಅಂದವಾಗಿ ಕಾಣ್ಬೇಕು ಅಂತಾ ಬಯಸ್ತಾರೆ. ಹೀಗಾಗಿ ಫ್ಯಾಷನ್ ಅನ್ನೋ ಹೆಸರಿನಲ್ಲಿ ಅನೇಕರು ಕಣ್ಣಿಗೆ ಕಲರ್ ಲೆನ್ಸ್ ಬಳಸ್ತಾರೆ. ಹೀಗೆ ಕಲರ್ ಲೆನ್ಸ್ ಬಳಸುವಾಗ ಎಚ್ಚರಿಕೆ ವಹಿಸೋದು ಮುಖ್ಯ. ಅದರಲ್ಲೂ ಮಾರುಕಟ್ಟೆಯಲ್ಲಿ ಸಿಗುವ ಸಿಕ್ಕ ಸಿಕ್ಕ ಲೆನ್ಸ್ಗಳನ್ನು ಬಳೆಕೆ ಮಾಡೋದಿಕ್ಕೂ ಮೊದಲು ಎಚ್ಚರಿಕೆ ವಹಿಸಬೇಕು.
ಲೆನ್ಸ್ ಅನೇಕ ಗಾತ್ರಗಳಲ್ಲಿ ಬರುತ್ತವೆ. ಆದ್ದರಿಂದ ನೀವು ಲೆನ್ಸ್ ಖರೀದಿಸಿದಾಗಲೆಲ್ಲಾ, ನಿಮ್ಮ ಕಣ್ಣುಗಳ ಗಾತ್ರ ಮತ್ತು ಆಕಾರದ ಬಗ್ಗೆ ಕಾಳಜಿ ವಹಿಸಿ. ನೀವು ಸರಿಯಾದ ಗಾತ್ರದ ಲೆನ್ಸ್ ಖರೀದಿಸದಿದ್ದರೆ, ಕಣ್ಣುಗಳಲ್ಲಿ ಸೋಂಕಿನ ಸಮಸ್ಯೆಯೂ ಉಂಟಾಗಬಹುದು. ಇನ್ನು ಈಗಿನ ಕಾಲದಲ್ಲಿ ಎಲ್ಲವೂ ಆನ್ ಲೈನ್ ನಲ್ಲಿ ಕಡಿಮೆ ರೇಟ್ಗೆ ಸಿಗುತ್ತವೆ. ಆನ್ಲೈನ್ ಖರೀದಿಗೂ ಮೊದಲು ಕಣ್ಣಿಗೆ ಹಾಕುವ ಲೆನ್ಸ್ ವಿಚಾರದಲ್ಲೂ ಯೋಚನೆ ಮಾಡಲೇಬೇಕು.. ಯಾಕಂದ್ರೆ ನಿಮ್ಮ ಕಣ್ಣಿನ ಗಾತ್ರಕ್ಕೆ ಸರಿಹೊಂದುವ ಲೆನ್ಸ್ ಆಯ್ಕೆಯನ್ನು ಆನ್ಲೈನ್ನಲ್ಲಿ ಮಾಡೋದು ಕಷ್ಟ. ನಿಮ್ಮ ಕಣ್ಣಿನ ಗಾತ್ರಕ್ಕಿಂತ ದೊಡ್ಡ ಅಥವಾ ಸಣ್ಣ ಗಾತ್ರದ ಲೆನ್ಸ್ ಬಳಸಿದ್ರೆ ಕಣ್ಣಿಗೆ ಗಾಯವಾಗುವ ಸಾಧ್ಯತೆ ಇದೆ.
ಇನ್ನು ಅನೇಕ ಬ್ರಾಂಡ್ ಗಳ ಬಣ್ಣದ ಲೆನ್ಸ್ ಲಭ್ಯವಿವೆ. ಅವುಗಳಲ್ಲಿ ಕೆಲವು ತುಂಬಾ ಕಡಿಮೆ ರೇಟ್ಗೆ ಸಿಗುತ್ತವೆ. ಹಣ ಉಳಿಸೋ ಸಲುವಾಗಿ ಯಾವುದೇ ಸ್ಥಳೀಯ ಬ್ರಾಂಡ್ ನ ಲೆನ್ಸ್ ಖರೀದಿಸಬೇಡಿ. ಬದಲಾಗಿ, ಅಮೂಲ್ಯವಾದ ಕಣ್ಣುಗಳಿಗಾಗಿ ವಿಶ್ವಾಸಾರ್ಹ ಮತ್ತು ಉತ್ತಮ ಬ್ರಾಂಡ್ ಗಳ ಲೆನ್ಸ್ ಆರಿಸಿ. ನೀವು ಬಳಸಿದ ಲೆನ್ಸ್ ನ್ನು ಬೇರೆ ಯಾರೊಂದಿಗೂ ಹಂಚಿಕೊಳ್ಳಬೇಡಿ. ಇದು ಕಣ್ಣಿನ ಸೋಂಕಿಗೆ ಕಾರಣವಾಗಬಹುದು. ಬೇರೊಬ್ಬರು ಬಳಸಿದ ಲೆನ್ಸ್ ಅನ್ನು ನೀವು ಕಣ್ಣಿಗೆ ಹಾಕಿದ್ರೆ ಅವರ ಕಣ್ಣಿನ ಸೋಂಕು ನಿಮಗೂ ಹರಡಬಹುದು. ಹೀಗಾಗಿ ಅಂದ ಕಾಣಿಸಿಕೊಳ್ಳುವುದರ ಜೊತೆಗೆ ನಿಮ್ಮ ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಸಹ ಮುಖ್ಯವಾಗಿದೆ.