ಮೊದಲ ದಿನ ಭಾರತದ ಬೌಲರ್ಸ್ ಮೋಡಿ – ಇಂಗ್ಲೆಂಡ್‌ನ ಒಂದು ರನ್ ಕಟ್ ಮಾಡಿದ್ದು ಯಾಕೆ?

ಮೊದಲ ದಿನ ಭಾರತದ ಬೌಲರ್ಸ್ ಮೋಡಿ – ಇಂಗ್ಲೆಂಡ್‌ನ ಒಂದು ರನ್ ಕಟ್ ಮಾಡಿದ್ದು ಯಾಕೆ?

ಇಂಡಿಯಾ VS ಇಂಗ್ಲೆಂಡ್ ನಡುವಿನ ಫಸ್ಟ್​ ಟೆಸ್ಟ್​ ಮ್ಯಾಚ್‌ನ ಮೊದಲ ದಿನದಾಟದಲ್ಲಿ ಟೀಂ ಇಂಡಿಯಾವೇ ಡಾಮಿನೇಟ್ ಮಾಡಿದೆ. ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡರಲ್ಲೂ ರೋಹಿತ್ ಪಡೆ ಟಾಪ್​​ ಕ್ಲಾಸ್ ಪರ್ಫಾಮೆನ್ಸ್ ನೀಡಿದೆ. ಫಸ್ಟ್ ಮ್ಯಾಚ್​ನ ಫಸ್ಟ್ ಡೇನೆ ಇಂಗ್ಲೆಂಡ್​ಗೆ ಅರ್ಥವಾಗಿರುತ್ತೆ. ಈ ಸೀರಿಸ್ ಗೆಲ್ಲೋದು ಈಸಿ ಇಲ್ಲ ಅನ್ನೋದು. ಭಾರತದ ಪಿಚ್​ಗಳಲ್ಲಿ ನಮ್ಮ ಟೀಮ್​ನ್ನ ಮಣಿಸೋದು ಅದು ಯಾವುದೇ ಟೀಮ್​ಗೇ ಆದ್ರೂ ಅತ್ಯಂತ ಟಫೆಸ್ಟ್ ಟಾಸ್ಕ್ ಆಗಿರುತ್ತೆ. ಈಗ ಇಂಗ್ಲೆಂಡ್​​ಗೆ ಮತ್ತೊಮ್ಮೆ ಇದ್ರ ಎಕ್ಸ್​ಪೀರಿಯನ್ಸ್ ಆಗ್ತಾ ಇದೆ. ಈ ಎಪಿಸೋಡ್​​ನಲ್ಲಿ ಇಂಡಿಯಾ-ಇಂಗ್ಲೆಂಡ್ ಮ್ಯಾಚ್​ನ ಡೇ-1 ಬಗ್ಗೆ ಕಂಪ್ಲೀಟ್ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಐಪಿಎಲ್ ಟೂರ್ನಿಯಲ್ಲಿ ಸ್ಟ್ರಾಂಗ್ ಟೀಮ್ ಯಾವುದು? – ಬೆಸ್ಟ್ ಪ್ಲೇಯರ್ಸ್ ಯಾವ ಟೀಮ್‌ನಲ್ಲಿದ್ದಾರೆ?

ಹೈದರಾಬಾದ್​ ಗ್ರೌಂಡ್​​ನಲ್ಲಿ ಫಸ್ಟ್ ಮ್ಯಾಚ್​ನಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಬ್ಯಾಟಿಂಗ್​ ಚೂಸ್ ಮಾಡಿಕೊಳ್ತು. ಇಂಗ್ಲೆಂಡ್ ಓಪನರ್ಸ್​ಗಳಾದ ಜ್ಯಾಕ್ ಕ್ರೌವ್ಲೆ ಮತ್ತು ಬೆನ್ ಡಕೆಟ್ ಚೆನ್ನಾಗಿಯೇ ಆಡ್ತಿದ್ರು. ಈ ವೇಳೆ ಕ್ಯಾಪ್ಟನ್ ರೋಹಿತ್ ಶರ್ಮಾ ಸ್ಮಾರ್ಟ್ ಡಿಸೀಶನ್ ತಗೊಳ್ತಾರೆ. ಟೀಂ ಇಂಡಿಯಾದ ಪ್ರಮುಖ ಅಸ್ತ್ರ ಸ್ಪಿನ್ನರ್ಸ್​ಗಳನ್ನ ಅಖಾಡಕ್ಕಿಳಿಸ್ತಾರೆ. ಆರ್​.ಅಶ್ವಿನ್ ಮತ್ತು ರವೀಂದ್ರ ಜಡೇಜಾಗೆ ಬೌಲಿಂಗ್ ನೀಡ್ತಾರೆ. ಆರ್​​.ಅಶ್ವಿನ್​​ರಿಂದ ಭಾರತಕ್ಕೆ ಫಸ್ಟ್ ಬ್ರೇಕ್​ ಥ್ರೂ ಸಿಗುತ್ತೆ. ಇಂಗ್ಲೆಂಡ್​ ಸ್ಕೋರ್​ 55 ರನ್​ಗಳಾಗಿದ್ದ ಡಕೆಟ್​ರನ್ನ ಅಶ್ವಿನ್​​ LBW ಬಲೆಗೆ ಕೆಡವುತ್ತಾರೆ. ಬಳಿಕ ಶುರುವಾಯ್ತು ನೋಡಿ. ಇಂಗ್ಲೆಂಡ್​ನ ಫಾಲ್​ ಆಫ್ ವಿಕೆಟ್ಸ್. 58 ರನ್​ಗೆ ಮತ್ತೊಂದು ವಿಕೆಟ್ ಬೀಳುತ್ತೆ. ರವೀಂದ್ರ ಜಡೇಜಾ 2ನೇ ವಿಕೆಟ್ ತೆಗೀತಾರೆ. ನಂತರ ಬಂದ ಬ್ಯಾಟ್ಸ್​ಮನ್​ಗಳೆಲ್ಲಿ ಯಾರೂ ಕೂಡ ಕ್ರೀಸ್​​ನಲ್ಲಿ ಗಟ್ಟಿಯಾಗಿ ನಿಂತು ಆಡೋ ಪ್ರಯತ್ನವೇ ಮಾಡೋದಿಲ್ಲ. ಬ್ರಿಟೀಷರ ಪರೇಡ್ ಕಂಟಿನ್ಯೂ ಆಗುತ್ತೆ. 155 ರನ್​ಗಳಾಗುವಷ್ಟರ ವೇಳೆಗೆ ಇಂಗ್ಲೆಂಡ್​ನ 7 ವಿಕೆಟ್​ಗಳು ಪತನವಾಗುತ್ತೆ. ಈ ವೇಳೆ ಇಂಗ್ಲೆಂಡ್​ನ ಆಧಾರವಾಗಿ ನಿಂತಿರೋದು ಕ್ಯಾಪ್ಟನ್ ಬೆನ್​ ಸ್ಟೋಕ್ಸ್. 6 ನೇ ಆರ್ಡರ್​​ನಲ್ಲಿ ಬ್ಯಾಟಿಂಗ್​ಗೆ ಇಳಿದ ಬೆನ್​ಸ್ಟೋಕ್ಸ್ ತಮ್ಮ ಬೇಸ್​ಬಾಲ್​​ ಸ್ಟೈಲ್​ನಲ್ಲಿ ಬ್ಯಾಟ್​ ಬೀಸೋಕೆ ಶುರು ಮಾಡ್ತಾರೆ. ಯಾಕಂದ್ರೆ ಬೆನ್​ಸ್ಟೋಕ್ಸ್ ಬಳಿ ಬೇರೆ ಆಪ್ಷನೇ ಇರಲಿಲ್ಲ. ಫುಲ್​ ಫ್ಲೆಡ್ಜ್ ಬ್ಯಾಟ್ಸ್​​ಮನ್​ಗಳು ಅಂತಾ ನಾನ್​​ಸ್ಟ್ರೈಕ್ ಎಂಡ್​ನಲ್ಲಿ ಯಾರೂ ಇರಲಿಲ್ಲ. ಸೋ ಸ್ಟೋಕ್ಸ್​ ಅಗ್ರೆಸ್ಸಿವ್​​ ಆಗಿಯೇ ಸ್ಕೋರ್ ಮಾಡೋಕೆ ಶುರು ಮಾಡ್ತಾರೆ. ಕೇವಲ 80 ಬಾಲ್​ಗಳಲ್ಲಿ 70 ರನ್​​ ಗಳಿಸಿದ್ರು. 6 ಬೌಂಡರಿ, 3 ಸಿಕ್ಸರ್. ಫೈನಲಿ 64.3 ಓವರ್​ಗಳಲ್ಲಿ ಇಂಗ್ಲೆಂಡ್​ 246 ರನ್​​ಗಳಿಗೆ ಆಲೌಟ್ ಆಯ್ತು. ಬಟ್ ಇಲ್ಲೊಂದು ಇಂಟ್ರೆಸ್ಟಿಂಗ್ ಡೆವಲಪ್​ಮೆಂಟ್ ಆಗಿದೆ. ಇಂಗ್ಲೆಂಡ್​​ನ ಟೋಟಲ್ ಸ್ಕೋರ್​ನಿಂದ ಒಂದು ರನ್​​ನನ್ನ ಮೈನಸ್ ಮಾಡಲಾಗಿತ್ತು. 1 ರನ್ ಮೈನಸ್ ಆಗಿದ್ರಿಂದ ಇಂಗ್ಲೆಂಡ್​ ಸ್ಕೋರ್​ 246 ರನ್ ಆಗಿದೆ. ಇಲ್ಲಾಂದ್ರೆ 247 ರನ್​ ಆಗ್ತಿತ್ತಷ್ಟೇ.. ಬಟ್ ಕ್ರಿಕೆಟ್​ನಲ್ಲಿ ಒಂದೊಂದು ರನ್ ಕೂಡ ಇಂಪಾರ್ಟೆಂಟ್. ಇಂಗ್ಲೆಂಡ್​ ಸ್ಕೋರ್​ನಿಂದ ಆ ಒಂದು ರನ್​ನನ್ನ ಮೈನಸ್ ಮಾಡಿದ್ಯಾಕೆ?

ಆಗಿದ್ದಿಷ್ಟೇ, ಬೆನ್​ಸ್ಟೋಕ್ಸ್ ಮತ್ತು ರೆಹಾನ್ ಅಹ್ಮದ್ ಬ್ಯಾಟಿಂಗ್​ ಮಾಡ್ತಿದ್ರು.. ಈ ವೇಳೆ ಜಸ್ಪ್ರಿತ್ ಬುಮ್ರಾ ಕ್ರೀಸ್​ನಲ್ಲಿದ್ದ ರೆಹಾನ್​​ಗೆ ಫುಲ್ಟಾಸ್ ಬಾಲ್​ ಎಸೀತಾರೆ. ಅದನ್ನ ರೆಹಾನ್ ಆನ್​ಸೈಡ್ ಬಿಹೈಂಡ್ ದಿ ಸ್ಕ್ವಾರ್​ಗೆ ಫ್ಲಿಕ್ ಮಾಡ್ತಾರೆ. ಫೀಲ್ಡರ್ ಮೊಹಮ್ಮದ್ ಸಿರಾಜ್​​​​ ಬಾಲ್​ ಕಲೆಕ್ಟ್ ಮಾಡಿ ಸೀದಾ ಥ್ರೋ ಮಾಡ್ತಾರೆ, ಬಟ್ ಆ ಥ್ರೋ ವಿಕೆಟ್ ಬಳಿ ಬರೋದಿಲ್ಲ. ತುಂಬಾ ವೈಡ್ ಥ್ರೋ ಆಗಿದ್ರಿಂದ ಯಾರಿಗೂ ಬಾಲ್​ನ್ನ ಕಲೆಕ್ಟ್ ಮಾಡೋಕೆ ಆಗೋದಿಲ್ಲ. ಬಾಲ್​​ ಸೀದಾ ಬೌಂಡರಿ ಲೈನ್​ ದಾಟುತ್ತೆ. ಓವರ್​​ ಥ್ರೋಗೆ ಬೌಂಡರಿ ಹೋಗುತ್ತೆ. ಫಸ್ಟ್​ಗೆ ಇಂಗ್ಲೆಂಡ್​ ಟೀಮ್ ಮತ್ತು ರೆಹಾನ್​​ಗೆ ಒಟ್ಟು 6 ರನ್​ ನೀಡಲಾಗುತ್ತೆ. ಎರಡು ರನ್ ಓಡಿದ್ದಕ್ಕೆ ಮತ್ತು ಓವರ್​ಥ್ರೋ ಬೌಂಡರಿ. ಟೋಟಲ್ 6 ರನ್ಸ್. ಬಟ್ ಕೆಲ ಕ್ಷಣಗಳಲ್ಲೇ ಅಂಪೈರ್ ತಮ್ಮ ಡಿಸೀಶನ್​ನನ್ನ ರಿವರ್ಸ್​ ಮಾಡಿ 5 ರನ್​ಗಳನ್ನಷ್ಟೇ ನೀಡ್ತಾರೆ. ಯಾಕಂದ್ರೆ ಫೀಲ್ಡರ್​​ ಬಾಲ್​​ ಥ್ರೋ ಮಾಡೋ ಮುನ್ನವೇ ಇಬ್ಬರೂ ಬ್ಯಾಟ್ಸ್​​ಮನ್​ಗಳು ಎರಡನೇ ರನ್​ಗೆ ಓಡೋ ವೇಳೆ ಪರಸ್ಪರ ಪಾಸ್ ಆಗಿರಲಿಲ್ಲ. ಅಂದ್ರೆ ಫಸ್ಟ್​​ ಪುಲ್ಟಾಸ್​ ಬಾಲ್​ಗೆ ಫ್ಲಿಕ್ ಮಾಡಿ ಒಂದು ರನ್ ಓಡ್ತಾರೆ. ಬಟ್ 2ನೇ ರನ್​​ನನ್ನ ಫಿಲ್ಡರ್ ಬಾಲ್​​ ಕಲೆಕ್ಟ್ ಮಾಡಿ ಥ್ರೋ ಮಾಡೋ ವೇಳೆಗೆ ಇಬ್ಬರೂ ಬ್ಯಾಟ್ಸ್​​ಮನ್​​ಗಳು ಪಾಸ್ ಆಗಬೇಕಿತ್ತು. ಹೀಗಾಗಿ 2ನೇ ರನ್​ ಇಲ್ಲಿ ಕೌಂಟ್ ಆಗಿಲ್ಲ.

ಇದನ್ನ ಇನ್ನಷ್ಟು ಅರ್ಥ ಮಾಡಿಕೊಳ್ಳೋಕೆ ಈಗ ಎಂಸಿಸಿ ರೂಲ್ಸ್​​ನಲ್ಲಿ ಏನಿದೆ ಅನ್ನೋದರ ವಿವರಣೆ ಇಲ್ಲಿದೆ. ಓವರ್​​ಥ್ರೋಗೆ ಎಂಸಿಸಿ ರೂಲ್ ನಂಬರ್ 19.8 ಅಪ್ಲೈ ಆಗುತ್ತೆ. ರೂಲ್ ನಂಬರ್ 19.8 ಪ್ರಕಾರ ಓವರ್​ಥ್ರೋನಿಂದ ಬೌಂಡರಿ ಹೋಯ್ತು ಅಂದ್ರೆ ಅದಕ್ಕೂ ಮುನ್ನ ಬ್ಯಾಟ್ಸ್​​ಮನ್​ಗಳು ಫೀಲ್ಡರ್ ಬಾಲ್ ಥ್ರೋ ಮಾಡೋ ಮುನ್ನವೇ, ಅಥವಾ ಬಾಲ್​ ಥ್ರೋ ಮಾಡೋ ವೇಳೆಗಾಗಲೇ ಸೆಕೆಂಡ್​ ರನ್​ಗೆ ಪರಸ್ಪರ ಕ್ರಾಸ್ ಆಗಿರಬೇಕು. ಇಲ್ಲಿ ಸ್ಟ್ರೈಕ್​​ನಲ್ಲಿದ್ದ ರೆಹಾನ್ ಒಂದು ರನ್​ ಓಡಿ ಎರಡನೇ ರನ್​​ ತೆಗೆಯೋ ವೇಳೆಗೆ ಇನ್ನೊಂದು ಎಂಡ್​​ನಿಂದ ಓಡಿ ಬರ್ತಿದ್ದ ಬೆನ್​ಸ್ಟೋಕ್​​ರನ್ನ  ಕ್ರಾಸ್​ ಮಾಡಿಯಾಗಬೇಕಿತ್ತು. ಬಟ್ ಇಬ್ಬರೂ ಕ್ರಾಸ್ ಆಗಿಲ್ಲ. ಅಷ್ಟೊತ್ತಿಗಾಗಲೇ ಫೀಲ್ಡರ್​ ಸಿರಾಜ್ ಬಾಲ್ ಥ್ರೋ ಮಾಡಿಯಾಗಿತ್ತು. ಹೀಗಾಗಿ ರೆಹಾನ್ ಮತ್ತು ಬೆನ್​ಸ್ಟೋಕ್ಸ್ ಸೆಕೆಂಡ್ ರನ್ ಕೌಂಟ್ ಆಗಿಲ್ಲ. ಈ ಸಂದರ್ಭದಲ್ಲಿ ಕಾಮೆಂಟ್ರೇಟರ್ ಹರ್ಷ ಭೋಗ್ಲೆ 2019ರ ವರ್ಲ್ಡ್​​ಕಪ್​​ ಫೈನಲ್​​ನಲ್ಲಾದ ಇನ್ಸಿಡೆಂಟ್​ನ್ನ ನೆನಪಿಸಿಕೊಂಡಿದ್ದಾರೆ. ಆಗ ಇಂಗ್ಲೆಂಡ್​ನ ಬ್ಯಾಟ್ಸ್​ಮನ್​ಗಳು ಸೆಕೆಂಡ್​ ರನ್​ಗೆ ಪರಸ್ಪರ ಕ್ರಾಸ್ ಆಗದಿದ್ರೂ ಓವರ್​ಥ್ರೋನಲ್ಲಿ ಬಾಲ್​ ಬೌಂಡರಿ ಹೋಗುತ್ತಲೇ ಅಂಪೈರ್ 6 ರನ್ ಕೊಟ್ಟಿದ್ರು. ಮ್ಯಾಚ್​ ಮುಗಿದ ಬಳಿಕ ಈ ಬಗ್ಗೆ ಭಾರಿ ಚರ್ಚೆ ಕೂಡ ಆಗಿತ್ತು. ಯಾಕಂದ್ರೆ ಅಂದು ಎಸಿಸಿ ರೂಲ್​ ನಂಬರ್ 19.8ನ್ನ ಅಂಪೈರ್​​ಗಳು ಫಾಲೋನೆ ಮಾಡಿರಲಿಲ್ಲ. ಆದ್ರೆ ಈ ಬಾರಿ ಅಂಪೈರ್​ ಇಂಗ್ಲೆಂಡ್​ ಟೀಮ್​ನ ಒಂದು ರನ್​ ಕಟ್ ಮಾಡಿದ್ದಾರೆ.

ಇನ್ನು ಫಸ್ಟ್ ಟೆಸ್ಟ್ ಮ್ಯಾಚ್ನ ಫಸ್ಟ್​ ಇನ್ನಿಂಗ್ಸ್​ನಲ್ಲಿ ಟೀಂ ಇಂಡಿಯಾದ ಬೌಲರ್ಸ್​ಗಳು ಬಗ್ಗೆಯೂ ಒಂದಷ್ಟು ಹೇಳಲೇಬೇಕು. ಇಲ್ಲಿ ಆಟ ಆಡಿರೋದೆ ನಮ್ಮ ಸ್ಪಿನ್ನರ್ಸ್​ಗಳು. ರವೀಂದ್ರ ಜಡೇಜ ಮತ್ತು ರವಿಚಂದ್ರನ್ ಅಶ್ವಿನ್ ತಲಾ 3 ವಿಕೆಟ್​ಗಳನ್ನ ಪಡೆದಿದ್ದಾರೆ. ಅಶ್ವಿನ್ ಅಂತೂ 21 ಓವರ್​ ಬೌಲ್​ ಮಾಡಿ ಕೇವಲ 68 ರನ್ ಕೊಟ್ಟಿದ್ದಾರಷ್ಟೇ. ಮತ್ತೊಬ್ಬ ಸ್ಪಿನ್ನರ್ ಅಕ್ಸರ್ ಪಟೇಲ್ ಕೂಡ 2 ವಿಕೆಟ್ ಪಡೆದ್ರು. ಜಸ್ಪ್ರಿತ್ ಬುಮ್ರಾ ಕೂಡ 2 ವಿಕೆಟ್ ಕಬಳಿಸಿದ್ದಾರೆ. ಟೋಟಲಿ ನಮ್ಮ ಸ್ಪಿನ್ನರ್ಸ್​ಗಳು ಈ ಸೀರಿಸ್​ನಲ್ಲಿ ಡಾಮಿನೇಟ್ ಮಾಡುವ ಎಲ್ಲಾ ಮುನ್ಸೂಚನೆಯನ್ನೂ ಕೊಟ್ಟಿದ್ದಾರೆ. ಸೆಕೆಂಡ್​ ಇನ್ನಿಂಗ್ಸ್​​ ವೇಳೆಗಂತೂ ಬಾಲ್ ಇನ್ನಷ್ಟು ಟರ್ನ್ ಆಗುತ್ತೆ. ​​  ಇಂಗ್ಲೆಂಡ್​ ಬ್ಯಾಟ್ಸ್​​ಮನ್​ಗಳು ಸ್ಪಿನ್ನರ್ಸ್​​ಗಳ ಎದುರಿಸೋಕೆ ಇನ್ನಷ್ಟು ವರ್ಕೌಟ್ ಮಾಡಬೇಕಿದೆ.

ಇಂಗ್ಲೆಂಡ್ ಆಲೌಟ್ ಆದ ಬಳಿಕ ಫಸ್ಟ್ ಡೇನೇ ಟೀಂ ಇಂಡಿಯಾದ ಬ್ಯಾಟಿಂಗ್​ ಕೂಡ ಶುರುವಾಗಿತ್ತು. ಎಲ್ಲರೂ ರೋಹಿತ್​ ಶರ್ಮಾ ಬ್ಯಾಟಿಂಗ್ ನೋಡ್ಬೇಕು ಅಂತಾನೆ ಸ್ಟೇಡಿಯಂಗೆ ಬಂದಿದ್ರು. ರೋಹಿತ್​​ ಕ್ರೀಸ್​​ಗೆ ಬಂದು ನಿಲ್ಲುತ್ತಲೇ ಅಭಿಮಾನಿಯೊಬ್ಬ ಸೆಕ್ಯೂರಿಟಿ ಬ್ರೀಚ್ ಮಾಡಿ, ಗ್ರೌಂಡ್​​ಗೆ ಓಡಿಕೊಂಡು ಬಂದು ರೋಹಿತ್​ ಶರ್ಮಾ ಕಾಲಿಗೆ ನಮಸ್ಕರಿಸಿದ್ದಾನೆ. ಆ್ಯಕ್ಚುವಲಿ ಹೈದರಾಬಾದ್​​ನಲ್ಲಿ ರೋಹಿತ್​ ಹೆಚ್ಚು ಫ್ಯಾನ್ಸ್​ ಇದ್ದಾರೆ. ರೋಹಿತ್ ಮೂಲತ: ತೆಲುಗಿನವರೇ ಆಗಿದ್ದಾರೆ. ಬಟ್ ರೋಹಿತ್​​ ಶರ್ಮಾರ ಬಿಗ್​ ಇನ್ನಿಂಗ್ಸ್​ ನೋಡೋಕೆ ಫ್ಯಾನ್ಸ್​ಗೆ ಅವಕಾಶ ಸಿಕ್ಕಿಲ್ಲ. ಆರಂಭದಲ್ಲಿ ಕೆಲ ಹೊತ್ತು ಯಶಸ್ವಿ ಜೈಸ್ವಾಲ್​ರದ್ದೇ ಅಬ್ಬರ ಇತ್ತು. ಜೈಸ್ವಾಲ್ ಅಂತೂ ಫಸ್ಟ್​ ಬಾಲ್​ಗೆ ಬೌಂಡರಿ ಹೊಡೆದ್ರು. ಸ್ಟಾರ್ಟಿಂಗ್​ನಿಂದಲೇ ಅಟ್ಯಾಕಿಂಗ್ ಬ್ಯಾಟಿಂಗ್​ ಮಾಡಿದ್ರು. ಇಂಗ್ಲೆಂಡ್ ಬ್ಯಾಟಿಂಗ್ ವೇಳೆ ರೋಹಿತ್ ಬೇಗನೆ ಸ್ಪಿನ್ನರ್ಸ್​ಗಳನ್ನ ಇಳಿಸಿದಂತೆ, ಬೆನ್​ಸ್ಟೋಕ್ಸ್ ಕೂಡ ತಮ್ಮ ಸ್ಪಿನ್ನರ್​​ ಕೈಗೆ ಆರಂಭದಲ್ಲೇ ಬೌಲಿಂಗ್ ಕೊಟ್ರು. ಬಟ್ ಜೈಸ್ವಾಲ್​ ಸ್ಪಿನ್ನರ್​​ನ್ನ ಕೂಡ ಬಿಟ್ಟಿಲ್ಲ. ಅವರಿಗೂ ಸರಿಯಾಗಿಯೇ ಚಚ್ಚಿದ್ರು. ಬಳಿಕ ರೋಹಿತ್ ಶರ್ಮಾ ಕೂಡ 3 ಬೌಂಡರಿ ಹೊಡೆದ್ರು. ಬಟ್ ಹೆಚ್ಚು ಹೊತ್ತು ನಿಲ್ಲಲಿಲ್ಲ. ಕ್ಯಾಚ್ ಕೊಟ್ಟು ಔಟಾದ್ರು. ಬಟ್ ಯಶಸ್ವಿ ಜೈಸ್ವಾಲ್ ಕೇವಲ 70 ಬಾಲ್​ಗಳಲ್ಲಿ 9 ಬೌಂಡರಿ 3 ಸಿಕ್ಸರ್​ನೊಂದಿಗೆ 76 ರನ್​ಗಳಿಸಿ ನಾಟ್​ಔಟ್ ಆಗಿದ್ರು. ಶುಬ್ಮನ್ ಗಿಲ್​ ಕೂಡ 14 ರನ್​ ಗಳಿಸಿ ಫಸ್ಟ್ ಡೇ ಮ್ಯಾಚ್​ ಅಂತ್ಯವಾಗೋ ವೇಳೆಗೆ ಕ್ರೀಸ್​ನಲ್ಲಿದ್ರು. ಬಟ್ ಬೆನ್​ಸ್ಟೋಕ್ಸ್​ ಕ್ಯಾಪ್ಟನ್ಸಿ ಮಾತ್ರ ತುಂಬಾನೆ ಖರಾಬ್ ಆಗಿತ್ತು. ಯಾಕಂದ್ರೆ ಈಗಾಗ್ಲೇ ಮೂರು ರಿವ್ಯೂಗಳನ್ನ ಕಳೆದುಕೊಂಡಿದ್ದಾರೆ. ಅವರ ಕೈಯಲ್ಲಿ ಇನ್ಯಾವ ರಿವ್ಯೂ ಕೂಡ ಉಳಿದಿಲ್ಲ. LBW ಅಲ್ಲದಿದ್ರೂ ರಿವ್ಯೂ ತಗೊಂಡ್ರು. ಬ್ಯಾಟ್​ಗೆ ಬಾಲ್​ ಟಿಪ್​ ಆಗಿದೇ ಇದ್ರೂ ರಿವ್ಯೂ ತಗೊಂಡ್ರು. ಅಂತೂ ಟೀಂ ಇಂಡಿಯಾದ ಬೆನ್​ ಸ್ಟೋಕ್ಸ್​​ ದೊಡ್ಡ ಗಿಫ್ಟೇ ಕೊಟ್ಟಿದ್ದಾರೆ.

Sulekha