ಭಾರತ ಮತ್ತು ಇಂಗ್ಲೆಂಡ್ ನಡುವೆ ಮೊದಲ ಟೆಸ್ಟ್ ಪಂದ್ಯಕ್ಕೆ ಕ್ಷಣಗಣನೆ – ಹೇಗಿದೆ ಹೈದರಾಬಾದ್ ಗ್ರೌಂಡ್‌ನ ಟ್ರ್ಯಾಕ್ ರೆಕಾರ್ಡ್?

ಭಾರತ ಮತ್ತು ಇಂಗ್ಲೆಂಡ್ ನಡುವೆ ಮೊದಲ ಟೆಸ್ಟ್ ಪಂದ್ಯಕ್ಕೆ ಕ್ಷಣಗಣನೆ – ಹೇಗಿದೆ ಹೈದರಾಬಾದ್ ಗ್ರೌಂಡ್‌ನ ಟ್ರ್ಯಾಕ್ ರೆಕಾರ್ಡ್?

ಭಾರತ ಮತ್ತು ಇಂಗ್ಲೆಂಡ್ ನಡುವಣ ಮೊದಲ ಟೆಸ್ಟ್ ಪಂದ್ಯವು ಹೈದಾರಾಬಾದ್​ನಲ್ಲಿ ನಡೆಯಲಿದೆ. ರಾಜೀವ್ ಗಾಂಧಿ ಇಂಟರ್​ನ್ಯಾಷನಲ್ ಸ್ಟೇಡಿಯಂನಲ್ಲಿ ಜರುಗಲಿರುವ ಈ ಪಂದ್ಯವು ಜನವರಿ 25ರಂದು ಬೆಳಿಗ್ಗೆ 9.30 ರಿಂದ ಶುರುವಾಗಲಿದೆ. ಫಸ್ಟ್​ ಟೆಸ್ಟ್ ಮ್ಯಾಚ್ ನಡೀತಾ ಇರೋ ಹೈದರಾಬಾದ್​​ ಗ್ರೌಂಡ್​​ನ ಪಿಚ್ ಹೇಗಿದೆ? ಎಂಬ ಬಗ್ಗೆ ವಿವರಣೆ ಇಲ್ಲಿದೆ.

ಇದನ್ನೂ ಓದಿ: 2 ಟೆಸ್ಟ್ ಪಂದ್ಯಗಳಲ್ಲಿ ಆಡುತ್ತಿಲ್ಲ ವಿರಾಟ್ ಕೊಹ್ಲಿ – ಕಿಂಗ್ ಕೊಹ್ಲಿಯ ಬದಲಿಗೆ ಆಡುವ ಆಟಗಾರ ಯಾರು?

ಭಾರತದಲ್ಲಿ ಟೆಸ್ಟ್ ಮ್ಯಾಚ್​ ನಡೆಯುತ್ತೆ ಅಂದ್ರೆ ​ ಎಲ್ಲಾ ಪಿಚ್​​ಗಳೂ ಸ್ಪಿನ್ನರ್ಸ್​ಗಳಿಗೆ ಫೇವರ್ ಆಗಿರುತ್ತೆ. ಇಂಗ್ಲೆಂಡ್, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್, ಸೌತ್​ ಆಫ್ರಿಕಾಗೆ ಹೋದ್ರೆ ಅಲ್ಲಿ ಬರೀ ಫಾಸ್ಟ್ ಮತ್ತು ಬೌನ್ಸಿ ಪಿಚ್​​ಗಳೇ ಇರುತ್ತೆ. ಆದ್ರೆ ಭಾರತದ ಪಿಚ್​​ಗಳು ಸ್ಪಿನ್ನರ್ಸ್​​ಗಳ ಪಾಲಿನ ಸ್ವರ್ಗ. ಇಂಗ್ಲೆಂಡ್, ಆಸ್ಟ್ರೇಲಿಯಾದಂಥಾ ಟೀಮ್​ಗಳ ಬ್ಯಾಟ್ಸ್​ಮನ್​ಗಳು ಸ್ಪಿನ್ನರ್ಸ್​ಗಳ ಎದುರಿಸೋಕೆ ಒದ್ದಾಡ್ತಾರೆ. ಈಗ ಫಸ್ಟ್​ ಮ್ಯಾಚ್​​ಗೆ ಹೈದರಬಾದ್​​ನ ಪಿಚ್​ ಕೂಡ ಸ್ಪಿನ್ನರ್ಸ್​ಗಳಿಗೂ ಫೇವರ್ ಆಗಿರೋದ್ರಲ್ಲಿ ಡೌಟೇ ಇಲ್ಲ. ಆರಂಭದಲ್ಲಿ ಬ್ಯಾಟ್ಸ್​ಮನ್​ಗಳಿಗೆ ಮತ್ತು ಪೇಸ್ ಬೌಲರ್ಸ್​ಗಳಿಗೆ ಈ ಪಿಚ್ ಅಡ್ವಾಂಟೇಜ್ ಆಗಬಹುದು. ಆದ್ರೆ, ಮ್ಯಾಚ್ ಕಂಟಿನ್ಯೂ ಆದಂತೆ ನಿಧಾನಕ್ಕೆ ಬಾಲ್​ ಹೆಚ್ಚು ಟರ್ನ್ ಪಡೆಯಲಿದೆ. ಅಂದ್ರೆ ಸ್ಪಿನ್ನರ್ಸ್​​ಗಳಿಗೆ ಹೆಚ್ಚು ಅಸಿಸ್ಟೆಂಟ್ ಸಿಗಲಿದೆ. ಇಲ್ಲಿ ಟಾಸ್ ಹೇಳಿಕೊಳ್ಳುವಷ್ಟು ಇಂಪಾರ್ಟೆಂಟ್​ ಆಗೋದಿಲ್ಲ. ಯಾಕಂದ್ರೆ ಫಸ್ಟ್​ ಬ್ಯಾಟಿಂಗ್ ಮಾಡಿದ ಟೀಂ ಮತ್ತು ಸೆಕೆಂಡ್ ಬ್ಯಾಟಿಂಗ್​ ಮಾಡಿದ ತಂಡ ಸೇಮ್​ ನಂಬರ್​ ಆಫ್ ಮ್ಯಾಚ್​​ಗಳನ್ನ ಗೆದ್ದುಕೊಂಡಿವೆ. ಇನ್ನು ಟೆಸ್ಟ್​ನಲ್ಲಿ ಹೈದರಾಬಾದ್​ ಗ್ರೌಂಡ್​ನ ಟ್ರ್ಯಾಕ್​ ರೆಕಾರ್ಡ್ ಹೇಗಿದೆ ಅನ್ನೋದನ್ನ ಕೂಡ ನೋಡೋಣ.

ಹೈದರಾಬಾದ್ ಟ್ರ್ಯಾಕ್​​ ರೆಕಾರ್ಡ್

  • ಹೈದರಾಬಾದ್​ನಲ್ಲಿ ಒಟ್ಟು 5 ಟೆಸ್ಟ್ ಮ್ಯಾಚ್​ಗಳಾಗಿವೆ
  • ಟೀಂ ಇಂಡಿಯಾ ಒಟ್ಟು 4 ಮ್ಯಾಚ್​​ಗಳನ್ನ ಗೆದ್ದಿದೆ
  • ಟೀಂ ಇಂಡಿಯಾ ಹೈಯೆಸ್ಟ್ ಸ್ಕೋರ್ 687/6
  • ಎವರೇಜ್ ಫಸ್ಟ್ ಇನ್ನಿಂಗ್ಸ್ ಸ್ಕೋರ್ 404 ರನ್
  • 2012ರಲ್ಲಿ ಅರ್.ಅಶ್ವಿನ್ 12 ವಿಕೆಟ್ ಪಡೆದಿದ್ರು

ಇನ್ನು ಕಳೆದ 10 ವರ್ಷಗಳಲ್ಲಿ ಇಂಡಿಯಾ ಮತ್ತು ಇಂಗ್ಲೆಂಡ್ ಮಧ್ಯೆ ಒಟ್ಟು 24 ಟೆಸ್ಟ್​ ಮ್ಯಾಚ್​ಗಳಾಗಿವೆ. ಈ ಪೈಕಿ 11 ಮ್ಯಾಚ್​​ಗಳನ್ನ ಭಾರತ ಗೆದ್ದಿದೆ. 10 ಮ್ಯಾಚ್​ಗಳನ್ನ​ ಇಂಗ್ಲೆಂಡ್ ಗೆದ್ದಿದೆ. 3 ಮ್ಯಾಚ್​ಗಳು ಡ್ರಾ ಆಗಿದೆ. ಹೀಗಾಗಿ ಆಲ್​ಮೋಸ್ಟ್​ ನೆಕ್​ ಟು ನೆಕ್ ಫೈಟ್ ಇದೆ. ಬಟ್ ಈ ಬಾರಿ ಸೀರಿಸ್ ನಡೀತಾ ಇರೋದು ಭಾರತದಲ್ಲೇ ಆಗಿರೋದ್ರಿಂದ ಇದು ಟೀಂ ಇಂಡಿಯಾಗೆ ದೊಡ್ಡ ಪ್ಲಸ್ ಪಾಯಿಂಟ್.

Sulekha