ಬಾಲರಾಮನ ಮತ್ತೊಂದು ವಿಗ್ರಹದ ಫೋಟೋ ರಿಲೀಸ್! – ರಾಜಸ್ಥಾನದ ಶಿಲ್ಪಿ ಕೆತ್ತಿರುವ ವಿಗ್ರಹವನ್ನು ಎಲ್ಲಿ ಪ್ರತಿಷ್ಠಾಪಿಸ್ತಾರೆ?

ಬಾಲರಾಮನ ಮತ್ತೊಂದು ವಿಗ್ರಹದ ಫೋಟೋ ರಿಲೀಸ್! – ರಾಜಸ್ಥಾನದ ಶಿಲ್ಪಿ ಕೆತ್ತಿರುವ  ವಿಗ್ರಹವನ್ನು ಎಲ್ಲಿ ಪ್ರತಿಷ್ಠಾಪಿಸ್ತಾರೆ?

ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಆಗಿದೆ. ಮೂರು ವಿಗ್ರಹಗಳ ಪೈಕಿ ಕರ್ನಾಟಕ ಮೈಸೂರಿನ ಶಿಲ್ಪಿ ಅರುಣ್‌ ಯೋಗಿರಾಜ್ ಅವರು ಕೆತ್ತಿರುವ ಮೂರ್ತಿ ರಾಮಮಂದಿರದ ಗರ್ಭಗುಡಿಯಲ್ಲಿ ವಿರಾಜಮಾನವಾಗಿದೆ. ಇನ್ನೆರಡು ರಾಮಲಲ್ಲಾನ ವಿಗ್ರಹಗಳ ಪೈಕಿ ರಾಜಸ್ಥಾನದ ಶಿಲ್ಪಿ ಸತ್ಯ ನಾರಾಯಣ ಪಾಂಡೆ ಕೆತ್ತಿದ ರಾಮಲಲ್ಲಾ ಮೂರ್ತಿ ಫೋಟೋ ಬಹಿರಂಗಗೊಂಡಿದೆ.

ಇದನ್ನೂ ಓದಿ: ಬಾಲರಾಮನ ಕಾಣಲು ಜನವೋ ಜನ! – ದೇಗುಲಕ್ಕೆ ಭೇಟಿ ಮಾಡುವ ಮುನ್ನ ಈ ಮಾಹಿತಿ ನಿಮಗೆ ಗೊತ್ತಿರಲಿ

ಹೌದು ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತಿರುವ ಕಪ್ಪು ಶಿಲೆಯ ರಾಮಲಲ್ಲಾ ವಿಗ್ರಹಕ್ಕೆ ಪ್ರಾಣಪ್ರತಿಷ್ಠೆ ಮಾಡಲಾಗಿದೆ. ಇನ್ನೆರಡು ರಾಮಲಲ್ಲಾನ ವಿಗ್ರಹಗಳು ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸುಪರ್ದಿಯಲ್ಲಿದ್ದು, ಅದರಲ್ಲಿ ರಾಜಸ್ಥಾನದ ಶಿಲ್ಪಿ ಸತ್ಯ ನಾರಾಯಣ ಪಾಂಡೆ ಕೆತ್ತಿದ ರಾಮಲಲ್ಲಾ ಮೂರ್ತಿ ಫೋಟೋ ಬಹಿರಂಗಗೊಂಡಿದೆ. ಬಿಳಿ ಅಮೃತಶಿಲೆಯಲ್ಲಿ ಕೆತ್ತಿರುವ ಬಾಲರಾಮನ ಫೋಟೋಗಳು ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ.

ಸತ್ಯ ನಾರಾಯಣ್ ಪಾಂಡೆ ಬಿಳಿ ಮಾರ್ಬಲ್​ನಿಂದ ರಾಮಲಲ್ಲಾ ಮೂರ್ತಿ ಕೆತ್ತಿದ್ದು, ಕೈಯಲ್ಲಿ ಚಿನ್ನದ ಬಿಲ್ಲು, ಬಾಣದಿಂದ ಅಲಂಕರಿಸಲಾಗಿದೆ. ದೇವತೆಯ ಹಿಂದೆ ಕಾಮಾನಿನಂತೆ ಕಾಣುವ ರಚನೆಯಲ್ಲಿ ವಿಷ್ಣುವಿನ ವಿವಿಧ ಅವತಾರಗಳನ್ನು ಒಳಗೊಂಡಿದೆ. ದೇವತೆಯನ್ನು ಅಲಂಕರಿಸಿರುವ ಆಭರಣಗಳು ಮತ್ತು ಬಟ್ಟೆಗಳು ಅಮೃತ ಶಿಲೆಯಿಂದ ಕೆತ್ತಲಾಗಿದ್ದು, ವಿಗ್ರಹದಲ್ಲಿ ಕರಕುಶಲತೆ ಎದ್ದು ಕಾಣುತ್ತಿದೆ.

ಇದನ್ನು ರಾಮ ಮಂದಿರದ ಆವರಣದಲ್ಲಿ ಪ್ರತಿಷ್ಠಾಪಿಸಲು ನಿರ್ಧರಿಸಲಾಗಿದೆ. ಗೌರವ ಪೂರ್ವಕವಾಗಿ, ಸನ್ಮಾನ ಪೂರ್ವಕವಾಗಿ ಮಂದಿರದ ಆವರಣದಲ್ಲಿ ಪ್ರತಿಷ್ಠಾಪನೆ ಮಾಡಲು ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನಿರ್ಧರಿಸಿದೆ. ರಾಮ ಮಂದರಿದ ಗರ್ಭಗುಡಿಯಲ್ಲಿ ಇಟ್ಟಿರುವ ಬಾಲರಾಮನ ವಿಗ್ರಹದ ಕೃಷ್ಣ ಶಿಲೆಯು ಸುಮಾರು 2.5 ಬಿಲಿಯನ್ ವರ್ಷಗಳ ಹಳೆಯದು ಎಂದು ಎನ್​ಆರ್​ಐಎಂ (National Institute of Rock Mechanics)ನ ಹೆಚ್​​.ಎಸ್​. ವೆಂಕಟೇಶ್ ತಿಳಿಸಿದ್ದಾರೆ.

Shwetha M